Washing Tips : ಕಲೆ ಮಂಗಮಾಯ, ಜಿಡ್ಡಿಗೆ ಗುಡ್ ಬೈ ಹೇಳಲು ಬಳಸಿ ಈ ಲಿಕ್ವಿಡ್

By Suvarna News  |  First Published Mar 9, 2022, 4:46 PM IST

ಬಟ್ಟೆ ಒಗೆಯೋ ತಾಪತ್ರಯ ಈಗಿಲ್ಲ. ಬಹುತೇಕರ ಮನೆಗೆ ವಾಷಿಂಗ್ ಮೆಷಿನ್ ಬಂದಿದೆ. ಆದ್ರೆ ಕೈನಲ್ಲಿ ಒಗೆದಷ್ಟು ಬಟ್ಟೆ ಹೊಳೆಯೋದಿಲ್ಲ. ಎರಡು ವಾಶ್ ಗೆ ಬಟ್ಟೆ ಬಣ್ಣ ಹೋಗುತ್ತೆ ಎನ್ನುವವರಿಗೆ ಇಲ್ಲಿದೆ ಟಿಪ್ಸ್.
 


ವಾಷಿಂಗ್ ಮೆಷಿನ್ (Washing machine) ಬಂದಿದೆ, ಬಟ್ಟೆ (Clothes) ಒಗೆಯೋದು ಸುಲಭ ಅಂತಾ ನಾವು ಹೇಳ್ತೇವೆ. ಆದ್ರೆ ಅನೇಕ ಬಾರಿ ವಾಷಿಂಗ್ ಮೆಷಿನ್ ಗೆ ಹಾಕಿದ ಬಟ್ಟೆ ಕ್ಲೀನ್ (Clean) ಆಗಿರೋದಿಲ್ಲ. ಇಲ್ಲವೆ ಬಟ್ಟೆಗೆ ಸೋಪಿನ ಪುಡಿ ಅಂಟಿಕೊಂಡಿರುತ್ತೆ. ಮತ್ತೆ ಕೆಲವು ಬಟ್ಟೆ ಮೆಷಿನ್ ಗೆ ಹಾಕಿದ ನಂತ್ರ ಹಾಳಾಗುತ್ತದೆ. ಬಟ್ಟೆ ತೊಳೆಯೋಕೆ ವಾಷಿಂಗ್ ಮೆಷಿನ್ ತಂದು,ಅದಕ್ಕೆ ಬಟ್ಟೆ ಹಾಕಿ,ಬಟನ್ ಒತ್ತಿದ್ರೆ ಸಾಲೋದಿಲ್ಲ. ಬಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸಲು ಯಾವ ಸೋಪಿನ ಪುಡಿ ಬಳಸಬೇಕು ಎಂಬುದೂ ತಿಳಿದಿರಬೇಕು. ಅನೇಕ ಬಾರಿ ಬಟ್ಟೆ ಹಾಳಾಗಲು ನಾವು ಮಾಡುವ ನಿರ್ಲಕ್ಷ್ಯ ಕಾರಣವಾಗಿರುತ್ತದೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು ಸರಿಯಾದ ಡಿಟರ್ಜೆಂಟ್  ಆಯ್ಕೆ ಮಾಡುವುದು ಸುಲಭವಲ್ಲ. ತುಂಬಾ ಕಠಿಣವಾದ ಸೋಪು ಬಟ್ಟೆಯನ್ನು ಹಾಳು ಮಾಡುತ್ತದೆ. ಮಾರುಕಟ್ಟೆಗೆ ನಾನಾ ಬಗೆಯ ಬಟ್ಟೆ ವಾಶಿಂಗ್ ಪೌಡರ್ ಬಂದಿದೆ. ಪೌಡರ್ ಮಾತ್ರವಲ್ಲ ಲಿಕ್ವಿಡ್, ಸೋಪು ಹೀಗೆ ಬಗೆ ಬಗೆಯ ಉತ್ಪನ್ನಗಳು ಲಗ್ಗೆಯಿಟ್ಟಿವೆ. ಬರೀ ಜಾಹಿರಾತು ನೋಡಿ ಬಟ್ಟೆ ಡಿಟರ್ಜೆಂಟ್ ಖರೀದಿ ಮಾಡಿದ್ರೆ ಏನೂ ಪ್ರಯೋಜನವಿಲ್ಲ. ಉತ್ಪನ್ನದಲ್ಲಿ ಏನೆಲ್ಲ ರಾಸಾಯನಿಕವಿದೆ ಎಂಬುದನ್ನು ತಿಳಿಯುವ ಅಗತ್ಯವಿದೆ. ಇಂದು ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ತೊಳೆಯಲು ಯಾವ ಲಿಕ್ವಿಟ್  ಬೆಸ್ಟ್ ಎಂಬುದನ್ನು ನಾವು ಹೇಳ್ತೇವೆ. 

ಬಟ್ಟೆ ತೊಳೆಯಲು ಬೆಸ್ಟ್ ಈ ಲಿಕ್ವಿಡ್ 

Tap to resize

Latest Videos

ಸರ್ಫ್ ಎಕ್ಸೆಲ್ ಮ್ಯಾಟಿಕ್ ಟಾಪ್ ಲೋಡ್ ಲಿಕ್ವಿಡ್ ಡಿಟರ್ಜೆಂಟ್ 
ಇದು ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ ಗೆ ಬಳಸುವ ಲಿಕ್ವಿಡ್ ಆಗಿದೆ. ಕಠಿಣವಾದ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಲಿಕ್ವಿಡ್ ಆಗಿರುವ ಕಾರಣ  ನೀರಿನಲ್ಲಿ ತಕ್ಷಣವೇ ಬೆರೆಯುತ್ತದೆ. ಈ ವಾಷಿಂಗ್ ಮೆಷಿನ್ ಲಿಕ್ವಿಡ್ ಬಳಸುವುದರಿಂದ ಬಟ್ಟೆಯ ಬಣ್ಣ  ಹೋಗುವುದಿಲ್ಲ. ಇದು ಬಟ್ಟೆಯನ್ನು ಮೃದುಗೊಳಿಸುತ್ತದೆ. 

ಏರಿಯಲ್ ಮ್ಯಾಟಿಕ್ ಲಿಕ್ವಿಡ್ ಡಿಟರ್ಜೆಂಟ್ ಪೌಚ್: ಇದು ಲಿಕ್ವಿಡ್ ಡಿಟರ್ಜೆಂಟ್  ಆಗಿದ್ದು, ಬಳಕೆದಾರರು ಇದಕ್ಕೆ 4.5 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಈ ಲಿಕ್ವಿಡ್ ರಾಸಾಯನಿಕ ಮುಕ್ತವಾಗಿದೆ ಮತ್ತು ನಿಮ್ಮ ಬಟ್ಟೆಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ಇದು ಯಾವುದೇ ಅಲರ್ಜಿಯುಂಟು ಮಾಡುವುದಿಲ್ಲ. ಕಠಿಣ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ಜೊತೆಗೆ ಬಟ್ಟೆಗಳ ಬಣ್ಣ ಹಾಳಾಗದಂತೆ ನೋಡಿಕೊಳ್ಳುತ್ತದೆ. 

ಮಕ್ಕಳ ಭವಿಷ್ಯ ಹಾಳ್ಮಾಡ್ಬಹುದು ಸ್ನೇಹಿತರು.. ಅಸಲಿ-ನಕಲಿ ಪತ್ತೆ ಹೀಗೆ ಮಾಡಿ

ಡಯೋಲ್ಟಿ ಲಿಕ್ವಿಡ್ ಡಿಟರ್ಜೆಂಟ್ : ಇದು 5 ಲೀಟರ್ ಲಿಕ್ವಿಡ್ ಡಿಟರ್ಜೆಂಟ್ ಪ್ಯಾಕ್ ಆಗಿದ್ದು,  ಇದು ಪರಿಸರ ಸ್ನೇಹಿಯಾಗಿದೆ. ಎಲ್ಲಾ ರೀತಿಯ ಬಟ್ಟೆಗಳಿಗೆ  ಇದು ಒಳ್ಳೆಯದು. ಇದರಲ್ಲಿ ಯಾವುದೇ ರಾಸಾಯನಿಕವಿಲ್ಲ. ಇದ್ರಲ್ಲಿ ಬಟ್ಟೆ ಸ್ವಚ್ಛವಾಗುವ ಜೊತೆಗೆ ಸೌಮ್ಯವಾದ ಸುವಾಸನೆ ಬಟ್ಟೆಯ ಮೇಲಿರುತ್ತದೆ. 

ಐಎಪ್ ಬಿ (IFB) ಮಲ್ಟಿ ಫ್ರಾಗ್ರೆನ್ಸ್ ಲಿಕ್ವಿಡ್ ಡಿಟರ್ಜೆಂಟ್:
ಇದು ನಿಮಗೆ 2 ಲೀಟರ್ ಪ್ಯಾಕ್ ನಲ್ಲಿ ಸಿಗಲಿದೆ. ಇದು ಬಹು ಸುಗಂಧ ಲಿಕ್ವಿಡ್ ಆಗಿದೆ. ಇದರಲ್ಲಿ ವಿವಿಧ ಪರಿಮಳ ನಿಮಗೆ ಸಿಗಲಿದೆ. ಫ್ರಂಟ್ ಡೋರ್ ವಾಷಿಂಗ್ ಮೆಷಿನ್ ಗೆ ಇದನ್ನು ವಿಶೇಷವಾಗಿ ಬಳಸಲಾಗುತ್ತದೆ. ಈ ಲಿಕ್ವಿಡ್ ಡಿಟರ್ಜೆಂಟ್ ಕೊಳಕು,ಜಿಡ್ಡು,ಕಲೆಯನ್ನು ತೆಗೆಯುತ್ತದೆ. ಬಟ್ಟೆಯನ್ನು ರಕ್ಷಿಸುವ ಜೊತೆಗೆ ಬಣ್ಣವನ್ನು ಬದಲಿಸುವುದಿಲ್ಲ. 

Walking Health Benefits: ನಡೆದಷ್ಟೂ ಆಯಸ್ಸು ಹೆಚ್ಚುತ್ತೆ

ಸೇಫ್ವಾಶ್ ಮ್ಯಾಟಿಕ್ ಲಿಕ್ವಿಡ್ ಡಿಟರ್ಜೆಂಟ್:
ಇದು 2 ಲೀಟರ್ ಮತ್ತು 500 ಮಿಲಿ ಪ್ಯಾಕ್‌ನಲ್ಲಿ ಲಭ್ಯವಿದೆ. ಇದಕ್ಕೆ ಬಳಕೆದಾರರು 4.5 ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ. ಎಲ್ಲಾ ರೀತಿಯ ಬಟ್ಟೆಯನ್ನು ತೊಳೆಯಲು ನೀವು ಇದನ್ನು ಬಳಸಬಹುದು. ಇದು ಆಸಿಡ್ ಮುಕ್ತ ಲಿಕ್ವಿಡ್ ಆಗಿದೆ. ಹಾಗಾಗಿ ಇದರ ಬಳಕೆಯಿಂದ ಬಟ್ಟೆ ಮೃದುವಾಗುವ ಜೊತೆಗೆ ಶುಭ್ರವಾಗುತ್ತದೆ. ಬಟ್ಟೆಗೆ ವಿಶೇಷ ಪರಿಮಳವನ್ನು ಇದು ನೀಡುತ್ತದೆ.
 

click me!