ಮೈಸೂರು ಮಹಾರಾಣಿ ತ್ರಿಶಿಕಾ ಕುಮಾರಿ ಒತ್ತಡದ ಬದುಕಿನ ನಡುವೆ ಸ್ವಂತ ಉದ್ಯಮ, ಅಡುಗೆಯಲ್ಲಿ ಅಭಿರುಚಿ, ಸಂಸಾರದ ಮೇಲೆ ಪ್ರೀತಿ, ನೃತ್ಯದಲ್ಲಿ ಹಿಡಿತ ಎಲ್ಲವನ್ನೂ ಕಾಯ್ದುಕೊಂಡವರು.
ಮೈಸೂರು ಮಹಾರಾಣಿ (Mysore Queen), ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಅವರ ಧರ್ಮಪತ್ನಿ ತ್ರಿಶಿಕಾಕುಮಾರಿ (Trishikha Kumari) ಅವರ ನಾರ್ಮಲ್ ಡೇ ಸಾಮಾನ್ಯರಾದ ನಮ್ಮನಿಮ್ಮಂತೇ ಇರುತ್ತದಂತೆ. ಅಂದರೆ ಬೆಳಗ್ಗೆ ಬೇಗನೇ ಏಳುತ್ತಾರೆ, ಯೋಗ (Yoga) ಮಾಡುತ್ತಾರೆ, ಮಗನನ್ನು ಎಬ್ಬಿಸಿ ತಯಾರು ಮಾಡಿ ಶಾಲೆಗೆ ಬಿಡುತ್ತಾರೆ. ನಂತ್ರ ಯಾರಾದರೂ ಅವರನ್ನು ಮೀಟ್ ಮಾಡಲು ಬಂದರೆ ಅವರನ್ನು ಭೇಟಿ ಆಗೋದು, ತಾನೇ ಆರಂಭಿಸಿದ ಆನ್‌ಲೈನ್ (Online) ವ್ಯವಹಾರ ನೋಡಿಕೊಳ್ಳೂವುದು. ಅಷ್ಟರಲ್ಲಿ ಮಧ್ಯಾಹ್ನವಾಗಿರುತ್ತದೆ, ಮಗ ಶಾಲೆಯಿಂದ ಬರುತ್ತಾನೆ. ಅವನಿಗೆ ಊಟ ಮಾಡಿಸಿ ನಿದ್ದೆ ಮಾಡಿಸಿ, ಸ್ವಲ್ಪ ಬಿಡುವು ದೊರೆತರೆ ಸಂಜೆ ಮತ್ತೆ ಗಣ್ಯರ ಜೊತೆ ಭೇಟಿ, ಔದ್ಯಮಿಕ ವ್ಯವಹಾರ ಇತ್ಯಾದಿ. ಸಂಜೆ ಮಗ ಅಥವಾ ಗಂಡನ ಜತೆ ವಾಕಿಂಗ್, ಕೆಲವೊಮ್ಮೆ ಸ್ಟ್ರೆಸ್ ಬಸ್ಟರ್ ಅಂತ ಸುತ್ತಮುತ್ತಲಿನ ಬಂಡಿಪುರ, ನಾಗರಹೊಳೆ ಇತ್ಯಾದಿ ಕಾಡಿನ ಕಡೆ ತಿರುಗಾಟಕ್ಕೆ ಹೋಗುವುದುಂಟು.
ಆಗೆಲ್ಲ ಅವರನ್ನು ಮೈಸೂರು ಮಹಾರಾಣಿ ಎಂಬ ಕಿರೀಟ ಕಾಡುವುದಿಲ್ವಾ?
undefined
Womens day: ಹೆಣ್ಣುಮಗುವನ್ನು ಬೆಳೆಸುವ ಖುಷಿಯೇ ಬೇರೆ, ನೀವಿದನ್ನು ಗಮನಿಸಿದ್ದೀರಾ?
ಒತ್ತಡ ಇರುತ್ತದೆ. ಜನ ಗುರುತಿಸುತ್ತಾರೆ. ಮೈಸೂರು ಅರಮನೆಯ (Mysore Palace) ರಾಜಮನೆತನದವರಿಂದ ಜನ ಹೆಚ್ಚಿನ ಉನ್ನತ ಮಾದರಿಯ ನಡವಳಿಕೆಯನ್ನು ನಿರೀಕ್ಷಿಸುತ್ತಾರೆ. ಹಾಗಾಗಿ ಎಲ್ಲರ ಥರ ಇರುವುದಕ್ಕಾಗುವುದಿಲ್ಲ. ರಾಜ್ಯದಿಂದ ಹೊರಗೆ ಹೋದರೆ ಪರವಾಗಿಲ್ಲ. ಮುಕ್ತವಾಗಿ ಇರುವುದಕ್ಕೆ ಆಗುತ್ತದೆ. ಆದರೆ ಮೈಸೂರಿನ ಸಾಂಪ್ರದಾಯಿಕ ಹಳೆಯ ತಲೆಮಾರಿನ ಜನತೆ ರಾಜಮನೆತನದವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ನಗರದ ಜನತೆ ಪ್ರೀತಿಯನ್ನೂ ಅಷ್ಟೇ ಬಗೆಯಲ್ಲಿ ನೀಡುವುದರಿಂದ, ಇದು ಒಂದು ಹೊರೆ ಎಂದು ಎಂದೂ ಅನಿಸಿಲ್ಲವಂತೆ. ಹಾಗಂತ ರಾಜಮನೆತನದ ರೀತಿರಿವಾಜು ನಡಾವಳಿಗಳನ್ನೆಲ್ಲ ಎತ್ತಿ ಹಿಡಿಯುವ ಸೂಕ್ಷ್ಮ ಹೊರೆಯೂ ಅವರ ಮೇಲೆ ಇದೆ.
ರಾಜಸ್ಥಾನದ ದುಂಗರ್‌ಪುರ್ (Dungarpur) ಅರಮನೆಯಲ್ಲಿ ಹುಟ್ಟಿ ಬೆಳೆದ ತ್ರಿಶಿಕಾ, ಅರಮನೆಗೆ ಹೊಸಬರಲ್ಲ. ಅವರ ಬಾಲ್ಯ ತುಂಬಾ ಚೆನ್ನಾಗಿತ್ತು. ಖುಷಿಖುಷಿಯಾಗಿತ್ತು. ಬಾಸ್ಕೆಟ್‌ಬಾಲ್ ಮತ್ತು ಟೆನ್ನಿಸ್ ಆಡೋದನ್ನು ಅವರು ತುಂಬಾ ಎಂಜಾಯ್ ಮಾಡ್ತಿದ್ದರು. ಸ್ಕೂಲ್ ಕಾಲೇಜು ಟೀಮುಗಳಲ್ಲಿ ಆಡ್ತಿದ್ದರಂತೆ. ತ್ರಿಶಿಕಾಕುಮಾರಿಗೆ ಡ್ಯಾನ್ಸ್ ಕೂಡ ಗೊತ್ತಿದೆ. ಭರತನಾಟ್ಯ ಮತ್ತು ಹೊಸಬಗೆಯ ಜಾಝ್ (Jaz) ಡ್ಯಾನ್ಸ್ (Dance) ಎರಡನ್ನು ಚೆನ್ನಾಗಿ ಕಲಿತಿದ್ದಾರೆ. ಇದಲ್ಲದೇ ಇನ್ನೊಂಧು ಅವರ ಪ್ರೀತಿಯ ಹವ್ಯಾಸ ಅಂದ್ರೆ ಕುಕಿಂಗ್ (Cooking). ಸಂಜೆ ಅಥವಾ ರಾತ್ರಿ ಬಿಡುವಾಗಿದ್ದರೆ ಕುಟುಂಬಕ್ಕೆ ತಾವೇ ಅಡುಗೆ ತಯಾರಿಸುವುದೂ ಉಂಟು. ಇದು ಅವರಿಗೆ ಸ್ಟ್ರೆಸ್ ಬಸ್ಟರ್ ಆಂತೆ.
Women's day: ಮಹಿಳಾ ದಿನದ ಸಂದೇಶವನ್ನು ಹಗುರ ಮಾಡ್ತಿದೇವಾ ನಾವು?
ಅರಮನೆಯಲ್ಲಿ ತ್ರಿಶಿಕಾಕುಮಾರಿಗೆ ಅತ್ಯಂತ ಪ್ರೀತಿಯ ಜಾಗ ಎಂದರೆ ದರ್ಬಾರ್ ಹಾಲ್ (Durbar Hall) ಅಥವಾ ಸಜ್ಜೆ. ಇಲ್ಲಿ ಸಾಮಾನ್ಯ ದಿನಗಳಲ್ಲಿ ಏನೂ ಇರೊಲ್ಲ. ಆದರೆ ಹಬ್ಬದ ದಿನಗಳಲ್ಲಿ ಜೀವಂತವಾಗಿ ಲಕಲಕಿಸುತ್ತಿರುತ್ತದೆ. ದಸರಾ (Dussera) ದಲ್ಲಿ ವಿಶೇಷ ಕಳೆ. ಹಾಗೇ ಶ್ವೇತವರಾಹಸ್ವಾಮಿ ದೇವಸ್ಥಾನ, ಪ್ರಸನ್ನಕೃಷ್ಣಸ್ವಾಮಿ ದೇವಸ್ಥಾನಗಳೆಂದರೆ ಆಕೆಗೆ ಇಷ್ಟ, ಅಲ್ಲಿನ ಗೋಡೆಗಳಲ್ಲಿರುವ ಅರಮನೆಯ ಹಿಂದಿನ ಪೇಂಟಿಂಗ್‌ಗಳು ಆಕೆಗೆ ಇಷ್ಟ. ಅದು ಅರಮನೆಯ ಸಂಸ್ಕೃತಿಯ ಜೀವಂತ ಭಾಗ ಅನ್ನುತ್ತಾರೆ.
ನಿಮಗೆ ಗೊತ್ತಿದೆಯೋ ಇಲ್ಲವೋ, ತ್ರಿಶಿಕಾಕುಮಾರಿ ಉದ್ಯಮಿ ಮಹಿಳೆ ಕೂಡ. ಅವರು 'ದಿ ಲಿಟಲ್ ಬಂಟಿಂಗ್ಸ್' (The Little Buntings) ಎಂಬ ಸ್ಟಾರ್ಟಪ್‌ನ (Startup) ಒಡತಿ. ಇದು ಪುಟ್ಟ ಮಕ್ಕಳ ಬಳಕೆಗಾಗಿ ಇರುವ ಎಕೋ ಫ್ರೆಂಡ್ಲಿ (Eco Friendly) ಉತ್ಪನ್ನಗಳ ಆನ್‌ಲೈನ್ ವ್ಯವಹಾರ ಮಳಿಗೆ. ತಮ್ಮ ಪುಟ್ಟ ಮಗನನ್ನು ಬೆಳೆಸುವ ಹೊತ್ತಿಗೆ ಇಂಥ ಪ್ರಾಡಕ್ಟುಗಳ ಅಗತ್ಯದ ಅರಿವು ಅವರಿಗೆ ಆಯ್ತಂತೆ. ಅಂದರೆ ಮಕ್ಕಳು ಬಳಸುವ ಎಷ್ಟೊಂದು ವಸ್ತುಗಳು ಹಾನಿಕರ ವಿಷ, ರಾಸಾಯನಿಕಗಳು ಇವೆ. ಇವುಗಳಿಲ್ಲದ ವಸ್ತು, ಆಟಿಕೆಗಳಿಗೆ ತುಂಬ ಬೇಡಿಕೆಯಿದೆ. ಇವುಗಳ ಆನ್‌ಲೈನ್ ಮಾರಾಟ ವ್ಯವಸ್ಥೆ ಲಿಟಲ್ ಬಂಟಿಂಗ್ಸ್‌ನಲ್ಲಿದೆ. ಇದರಿಂದಾಗಿ ಅವರಿಗೆ ಸುತ್ತಮುತ್ತಲಿನ ಎಷ್ಟೊಂದು ಸ್ಥಳೀಯ ಕರಕುಶಲ ವಸ್ತುಗಳ ತಯಾರಿಕೆ, ಜವಳಿ ತಯಾರಿಯ ಪರಿಚಯ ಅವರಿಗೆ ಆಗಿದೆ. ಜೊತೆಗೆ ಚನ್ನಪಟ್ಟಣದ ಕರಕುಶಲ ಗೊಂಬೆಗಳ ತಯಾರಿಕೆ ಕೂಡ. ಅವುಗಳಿಗೂ ಬೇಡಿಕೆಯಿದೆ. ಚನ್ನಪಟ್ಟಣದ ಗೊಂಬೆಗಳಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಅದು ಚೀನಾದ ಅಗ್ಗದ ಪ್ಲಾಸ್ಟಿಕ್ ಗೊಂಬೆಗಳಿಗೆ ಸಡ್ಡು ಹೊಡೆಯುತ್ತೆ. ಆದರೆ ಅದನ್ನು ಪೂರೈಸುವ, ಮಾರ್ಕೆಂಟಿಂಗ್ ಮಾಡುವ ಸರಿಯಾದ ವ್ಯವಸ್ಥೆಯಿಲ್ಲ ಅಂತಾರೆ ತ್ರಿಶಿಕಾ, ಆ ಕಡೆ ಗಮನ ಹರಿಸಿದ್ದಾರೆ.
Womens day: ಹೆಣ್ಣುಮಗುವನ್ನು ಬೆಳೆಸುವ ಖುಷಿಯೇ ಬೇರೆ, ನೀವಿದನ್ನು ಗಮನಿಸಿದ್ದೀರಾ?
ಅರಮನೆಯ ಮುದ್ದಿನ ರಾಣಿಯಾಗಿರುವಂತೆಯೇ ಅವರು ಕೋವಿಡ್ ಟೈಮ್‌ನಲ್ಲಿ ಸಂತ್ರಸ್ತ ಜನತೆಗೆ ನಾನಾ ಬಗೆಯಲ್ಲಿ ಸಹಾಯ ಮಾಡಿದವರೂ ಹೌದು. ಅವರ ಒಳಗೆ ಒಂದು ಜನಪ್ರೀತಿಯ ಒರತೆ ಸದಾ ಇದೆ. ಜೊತೆಗೆ ಗಂಡ ಯದುವೀರ್ ನೆರವು ಸಹ.
ಅವರ ಪ್ರಕಾರ ಸಶಕ್ತ ಮಹಿಳೆ ಆಗಿರೋದು ಅಂದ್ರೆ ಸ್ವತಃ ತನ್ನತನವನ್ನು ಕಂಡುಕೊಳ್ಳುವುದು. ನಮ್ಮ ಅಸ್ಮಿತೆಯಲ್ಲೇ ನಮ್ಮ ಬದುಕಿನ ಸಾರ್ಥಕತೆ ಅನ್ನುವುದು.