
ಮಗು ಹೆತ್ತ ನಂತರ ಹೊಟ್ಟೆ ಕರಗಿಸಿಕೊಂಡು ಮತ್ತೆ ಮುಂದಿನಂತಾಗುವುದು ಬಹಳ ಕಷ್ಟದ ಸಾಹಸ. ಅನೇಕರಿಗೆ ಮತ್ತೆ ತಮ್ಮ ಸಹಜತೆ ಬರಲು ಸಾಧ್ಯವಾಗುವುದೇ ಇಲ್ಲ. ಕೆಲವರು ಈ ಮಗುವಿನ ಹೊಟ್ಟೆಯನ್ನು ಕರಗಿಸಲು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಜಾಗಿಂಗ್, ವಾಕಿಂಗ್, ಜಿಮ್, ಡಯಟ್ ಫುಡ್ ಅಂತ ಏನೂ ಮಾಡಲು ಸಾಧ್ಯವೋ ಅದೆಲ್ಲವನ್ನು ಮಾಡುತ್ತಾರೆ ಆದರೂ ಈ ಹೊಟ್ಟೆ ಕರಗುವುದೇ ಇಲ್ಲ. ಆದರೆ ಸಂಪ್ರದಾಯಿಕವಾದ ಈ ವಿಧಾನವೊಂದರಿಂದ ನೀವು ಸುಲಭವಾಗಿ ಗರ್ಭಾವಸ್ಥೆಯ ನಂತರದ ಹೊಟ್ಟೆಯನ್ನು ಕರಗಿಸಬಹುದು ಎಂಬ ವಿಚಾರ ನಿಮಗೆ ಗೊತ್ತಾ? ಇದು ಸಂಪ್ರದಾಯಿಕ ವಿಧಾನವೂ ಆಗಿರುವುದರಿಂದ ಬಹುತೇಕ ಮನೆಯ ಹಿರಿಯರಗೆ ಇದರ ಅರಿವಿರುತ್ತದೆ. ಹಾಗೂ ಮನೆಯಲ್ಲಿ ಅಜ್ಜಿ ಮುತ್ತಜ್ಜಿಯವರಿದ್ದರೆ ಅವರೇ ತಮ್ಮ ನಂತರದ ತಲೆಮಾರಿಗೆ ಈ ಬಾಣಂತನದ ವೇಳೆ ಈ ಹೊಟ್ಟೆ ಕರಗಿಸುವ ತಂತ್ರವನ್ನು ಹೇಳಿಕೊಡುತ್ತಾರೆ.
ಹಾಗೆಯೇ ಇಲ್ಲೊಂದು ಗರ್ಭಾವಸ್ಥೆಯ ನಂತರದ ಹೊಟ್ಟೆಯನ್ನು ಕರಗಿಸುವ ಸುಲಭ ಸಂಪ್ರದಾಯಿಕ ವಿಧಾನದ ವೀಡಿಯೋವೊಂದು ವೈರಲ್ ಆಗಿದೆ. ಇದು ಬಹುತೇಕ ಎಲ್ಲರಿಗೂ ತಿಳಿದಿರುವಂತಹ ಉಪಾಯವೇ ಆಗಿದ್ದರು. ಇದೂ ಎಲ್ಲರಿಗೂ ಗೊತ್ತಿಲ್ಲ. ಜೀಯಾ ಜಾಫರ್(zeeyajaffer)ಎನ್ನುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಇವರ ಇನ್ಸ್ಟಾ ಖಾತೆಯ ಪೂರ್ತಿ ಇಂತಹದೇ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಮಾರ್ಗದರ್ಶಿ ವೀಡಿಯೋಗಳಿವೆ. ತಾಯಿಯ ಚೇತರಿಕೆ ಮತ್ತು ಕ್ಷೇಮಕ್ಕಾಗಿ 40 ದಿನಗಳ ಆಯುರ್ವೇದ ಪ್ರಸವಾನಂತರದ ಆಚರಣೆಗಳು, ಇಲ್ಲಿ ಹೊಟ್ಟೆ ಕಟ್ಟಲು ಇನ್ನೊಂದು ಮಾರ್ಗವಿದೆ ಅತ್ಯಂತ ಸಾಂಪ್ರದಾಯಿಕ ವಿಧಾನ ಮತ್ತು ನನ್ನ ಅಭಿಪ್ರಾಯದಲ್ಲಿ ಅತ್ಯಂತ ಪರಿಣಾಮಕಾರಿ. ನೀವು ಅದನ್ನು ಪ್ರಯತ್ನಿಸುತ್ತೀರಾ? ಎಂದು ಪ್ರಶ್ನಿಸಿ ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಬಿಳಿ ಬಣ್ಣದ ಹತ್ತಿಯ ಆದರೆ ತೆಳುವಾದ ವೇಸ್ಟಿಯಂತೆ ಉದ್ದವಾಗಿರುವ ಬಟ್ಟೆಯನ್ನು (ಅಂದಾಜು 15ರಿಂದ 20 ಇಂಚು ಅಗಲವಾಗಿರುವ ಬಟ್ಟೆ) ಹೊಟ್ಟೆಯ ಭಾಗದಲ್ಲಿ ತುಂಬಾ ಗಟ್ಟಿಯಾಗಿ ಬಿಗಿದು ಒಂದೊಂದೇ ಸುತ್ತು ತಂದು ಗಂಟು ಹಾಕುತ್ತಾ ಕಟ್ಟುವ ವಿಧಾನವಾಗಿದೆ.
'ಹೊಟ್ಟೆಯನ್ನು ಕಟ್ಟುವ ಸಂಪ್ರದಾಯಿಕ ವಿಧಾನವನ್ನು ನಾನಿಲ್ಲಿ ತೋರಿಸುತ್ತಿದ್ದೇನೆ. ಈ ಹೊಟ್ಟೆ ಕಟ್ಟುವ ವಿಧಾನವನ್ನು ಎಷ್ಟೋ ವರ್ಷಗಳ ಹಿಂದಿನಿಂದ ನಡೆಸಿಕೊಂಡು ಬರಲಾಗಿದೆ. ಇದನ್ನು ಪಾಲಿಸುವುದರಿಂದ ಹೊಟ್ಟೆ ಸಹಜ ಸ್ಥಿತಿಗೆ ಬರುವುದು. ಇದೊಂದು ಅತ್ಯಂತ ಪರಿಣಾಮಕಾರಿಯಾದ ವಿಧಾನವಾಗಿದೆ. ಏಕೆಂದರೆ ಇಂದು ಸಂಪೂರ್ಣ ಹೊಕ್ಕಳು ಹಾಗೂ ಗರ್ಭ, ಸೊಂಟದ ಭಾಗವನ್ನು ಚೆನ್ನಾಗಿ ಹಿಡಿತದಲ್ಲಿಡುತ್ತದೆ. ಹಳೆಯ ಒಂದು ಬೆಡ್ ಕವರ್‌ನಿಂದ ಈ ಹೊಟ್ಟೆಗೆ ಕಟ್ಟುವ ಬಟ್ಟೆಯನ್ನು ಮಾಡಿದ್ದೇನೆ. ಇದರಿಂದ ನಿಮ್ಮ ಗರ್ಭಾಶಯಕ್ಕೂ ಆಧಾರ ಸಿಕ್ಕಂತಾಗುತ್ತದೆ ಹಾಗೂ ನಿಮ್ಮ ಹೊಟ್ಟೆಯೂ ಸಣ್ಣಗಾಗಿ ಮೊದಲಿನ ಆಕಾರಕ್ಕೆ ಬರುತ್ತದೆ' ಎಂದು ಅವರು ವೀಡಿಯೋ ಮೇಲೆ ಬರೆದುಕೊಂಡಿದ್ದಾರೆ.
ಈ ವೀಡಿಯೋಗೆ ಅನೇಕ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೀಡಿಯೋ ನೋಡಿದ ಅನೇಕರು ಈ ವಿಧಾನವನ್ನು ತಾವು ಪಾಲಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇದರಿಂದ ತಮ್ಮ ಹೊಟ್ಟೆ ಸಹಜ ಸ್ಥಿತಿಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಧಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.