ಗರ್ಭದಲ್ಲಿರುವಾಗಲೇ ಮಗು ವಿಶೇಷ ಚೈತನ್ಯ ಎನ್ನುವುದನ್ನು ಗುರುತಿಸೋದು ಹೇಗೆ? ವೈದ್ಯರು ಹೇಳಿದ್ದಾರೆ ಕೇಳಿ...

By Suchethana D  |  First Published Dec 25, 2024, 7:21 PM IST

 ಗರ್ಭದಲ್ಲಿರುವಾಗಲೇ ಮಗು ವಿಶೇಷ ಚೈತನ್ಯ ಎನ್ನುವುದನ್ನು ಗುರುತಿಸೋದು ಹೇಗೆ? ವೈದ್ಯರು ಹೇಳಿದ್ದಾರೆ ಕೇಳಿ...
 


ವಿಶೇಷ ಚೈತನ್ಯವುಳ್ಳ ಮಕ್ಕಳು ಹುಟ್ಟುವುದಕ್ಕೆ ಹಲವಾರು ರೀತಿಯ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ರಕ್ತ ಸಂಬಂಧದಲ್ಲಿಯೇ ಆಗುವ ಮದುವೆಗಳು ಎನ್ನುತ್ತಾರೆ ವೈದ್ಯರು. ಇದನ್ನು ಬಿಟ್ಟರೆ, ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಮಹಿಳೆ ಮಾಡಿಕೊಳ್ಳುವ ಎಡವಟ್ಟುಗಳು, ತಿಳಿದೋ- ತಿಳಿಯದೆಯೋ ಇಡುವ ಕೆಲವೊಂದು ಹೆಜ್ಜೆಗಳು, ಗರ್ಭಪಾತ ಮಾಡಿಸಿಕೊಳ್ಳಲು ಮಾತ್ರೆಗಳನ್ನು ನುಂಗಿ ವಿಫಲವಾಗುವುದು... ಹೀಗೆ ಹಲವಾರು ಕಾರಣಗಳ ಪಟ್ಟಿಯನ್ನು ವೈದ್ಯರು ನೀಡುತ್ತಾರೆ. ಮದುವೆಯಾದ ಬಳಿಕ ಫ್ಯಾಮಿಲಿ ಪ್ಲ್ಯಾನಿಂಗ್​ ಎಂದು ಸುದೀರ್ಘ ಅವಧಿಯವರೆಗೆ ವಿಭಿನ್ನ ರೀತಿಯ ಮಾತ್ರೆಗಳನ್ನು ನುಂಗುವುದು ಕೂಡ ಒಂದು ಕಾರಣ ಎನ್ನಲಾಗಿದೆ. ಕಾರಣ ಏನೇ ಇದ್ದರೂ, ಇಂಥ ಮಗು ಹುಟ್ಟಿದಾಗ ಅದರ ಆರೈಕೆ ಮಾಡುವುದು ಪಾಲಕರಿಗೆ ಎಷ್ಟು ಕಷ್ಟವೋ, ತನ್ನದಲ್ಲದ ತಪ್ಪಿಗೆ ಆ ಮಗು ಅನುಭವಿಸುವ ನೋವು ಕೂಡ ಹೇಳಿಕೊಳ್ಳಲಾಗದಂಥದ್ದು.

ಇದೇ ಕಾರಣಕ್ಕೆ  ಮಗು ಗರ್ಭದಲ್ಲಿ ಇರುವಾಗಲೇ ಅದು ಅಂಗವೈಕಲ್ಯವೋ, ಬುದ್ಧಿಮಾಂದ್ಯವೋ ಎಂದು ತಿಳಿದುಕೊಳ್ಳಬಹುದಾ ಎನ್ನುವ ಪ್ರಶ್ನೆಗೆ ಖ್ಯಾತ ವೈದ್ಯರಾಗಿರುವ ಡಾ.ನೃತ್ಯಾ ಅವರು ವಿವರಿಸಿದ್ದಾರೆ. ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.  ಮಹಿಳೆ ಗರ್ಭ ಧರಿಸಿದ 11 ರಿಂದ 14ನೇ ವಾರದಲ್ಲಿ ಮಗು ಬುದ್ಧಿಮಾಂದ್ಯನೋ ಎನ್ನುವುದನ್ನು ಕಂಡುಹಿಡಿಯಲು ಕೆಲವು ಟೆಸ್ಟ್​ಗಳನ್ನು ಮಾಡಬಹುದಾಗಿದೆ ಎಂದಿದ್ದಾರೆ ವೈದ್ಯರು. NT ಸ್ಕ್ಯಾನ್, ಡಬಲ್ ಮಾರ್ಕರ್ ಪರೀಕ್ಷೆ ಮತ್ತು ಅನೋಮಲಿ ಸ್ಕ್ಯಾನ್​ಗಳ ಮೂಲಕ NT ಸ್ಕ್ಯಾನ್, ಡಬಲ್ ಮಾರ್ಕರ್ ಪರೀಕ್ಷೆ ಮತ್ತು ಅನೋಮಲಿ ಸ್ಕ್ಯಾನ್ ಮೂಲಕ ಮಗುವಿನ ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯತೆಯನ್ನು ತಿಳಿಯಬಹುದಾಗಿದೆ. ಶೇಕಡಾ 100 ರಷ್ಟು ಅಲ್ಲದಿದ್ದರೂ ಶೇಕಡಾ 90ರಷ್ಟು ಈ ಸ್ಕ್ಯಾನ್​ಗಳು ಮಗುವಿನ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಈ ಎಲ್ಲಾ ಪ್ರಸವಪೂರ್ವ ಪರೀಕ್ಷೆಗಳು ಭ್ರೂಣದಲ್ಲಿ ಕ್ರೋಮೋಸೋಮಲ್ ಅಸಹಜತೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ ಎಂದಿದ್ದಾರೆ.

Tap to resize

Latest Videos

undefined

ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿ ಹೌದೋ, ಅಲ್ವೋ ತಿಳಿದುಕೊಳ್ಳೋ 9 ಲಕ್ಷಣಗಳಿವು: ವೈದ್ಯೆಯಿಂದ ಮಾಹಿತಿ

NT ಸ್ಕ್ಯಾನ್: ಮಗುವಿನ ಕತ್ತಿನ ಹಿಂಭಾಗದಲ್ಲಿರುವ ಸ್ಪಷ್ಟ ಅಂಗಾಂಶದ ದಪ್ಪವನ್ನು ಅಳೆಯುವ ಅಲ್ಟ್ರಾಸೌಂಡ್. ಈ ಸ್ಕ್ಯಾನ್ ಶೇಕಡಾ 70ರಷ್ಟು ಪ್ರಸವಪೂರ್ವ ಡೌನ್ ಸಿಂಡ್ರೋಮ್ ಪ್ರಕರಣಗಳನ್ನು ಪತ್ತೆ ಮಾಡುತ್ತದೆ.
ಡಬಲ್ ಮಾರ್ಕರ್ ಪರೀಕ್ಷೆ: ತಾಯಿಯ ರಕ್ತದಲ್ಲಿ ಎರಡು ಗರ್ಭಧಾರಣೆಯ ಸಂಬಂಧಿತ ಹಾರ್ಮೋನ್‌ಗಳ ಮಟ್ಟವನ್ನು ಅಳೆಯುವ ರಕ್ತ ಪರೀಕ್ಷೆ ಇದಾಗಿದೆ. ಬೀಟಾ-ಎಚ್‌ಸಿಜಿ ಮತ್ತು ಪಿಎಪಿಪಿ-ಎ ಪರೀಕ್ಷೆ ಇದಾಗಿದ್ದು,  ಈ ಪರೀಕ್ಷೆಯು ಆನುವಂಶಿಕತೆಯಿಂದ ಬಂದಿರುವ ಅನಾರೋಗ್ಯದ ಲಕ್ಷಣಗಳನ್ನು ಶಿಶುಗಳಲ್ಲಿ ಶೇಕಡಾ 90ರಷ್ಟು ಪತ್ತೆ ಮಾಡಲು ಸಹಕಾರಿಯಾಗಿದೆ.  
ಅನೋಮಲಿ ಸ್ಕ್ಯಾನ್​: ಭ್ರೂಣದಲ್ಲಿನ ಅಸಹಜತೆಯನ್ನು ಗುರುತಿಸಲು ಸಹಾಯ ಮಾಡುವ ಸ್ಕ್ಯಾನ್ ಇದಾಗಿದೆ. 
ಹೆಚ್ಚು ನಿಖರವಾದ ಫಲಿತಾಂಶಗಳನ್ನು ಒದಗಿಸಲು ಡಬಲ್ ಮಾರ್ಕರ್ ಪರೀಕ್ಷೆ ಮತ್ತು NT ಸ್ಕ್ಯಾನ್ ಅನ್ನು ಹೆಚ್ಚಾಗಿ ಒಟ್ಟಿಗೆ ನಡೆಸಲಾಗುತ್ತದೆ. ನೀವು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಕೆಲವು ಪರಿಸ್ಥಿತಿಗಳ ಕುಟುಂಬದ ಇತಿಹಾಸವನ್ನು ಹೊಂದಿದ್ದರೆ ಅಥವಾ ಕ್ರೋಮೋಸೋಮಲ್ ಸಮಸ್ಯೆಗಳ ಹೆಚ್ಚಿನ ಅಪಾಯವನ್ನು ಹೊಂದಿದ್ದರೆ ಡಬಲ್ ಮಾರ್ಕರ್ ಪರೀಕ್ಷೆಯನ್ನು ಶಿಫಾರಸು ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಅದರ ಸಂಪೂರ್ಣ ವಿಡಿಯೋ ಈ ಕೆಳಗಿದೆ...

click me!