ದಿನಕ್ಕೆ 20 ಸಾವಿರ ಖರ್ಚು ಮಾಡ್ತಾಳೆ ಈ ಜಪಾನ್ ಹುಡುಗಿ!

Published : Apr 23, 2025, 07:45 PM ISTUpdated : Apr 24, 2025, 10:09 AM IST
 ದಿನಕ್ಕೆ 20 ಸಾವಿರ ಖರ್ಚು ಮಾಡ್ತಾಳೆ ಈ ಜಪಾನ್ ಹುಡುಗಿ!

ಸಾರಾಂಶ

ಜಪಾನಿನ22ರ ಯುಜುಕಿ, ಟೋಕಿಯೋದಿಂದ 1000 ಕಿ.ಮೀ. ದೂರದ ಫುಕುವೋಕಾ ವಿಶ್ವವಿದ್ಯಾಲಯಕ್ಕೆ ಪ್ರತಿದಿನ ವಿಮಾನದಲ್ಲಿ ಓಡಾಡುತ್ತಾಳೆ. ಪಾಪ್ ಗಾಯಕಿಯೂ ಆಗಿರುವ ಈಕೆ, ವೃತ್ತಿ ಮತ್ತು ವಿದ್ಯೆ ಎರಡನ್ನೂ ಸಮತೋಲನದಲ್ಲಿ ಇರಿಸಿಕೊಳ್ಳಲು ಈ ದುಬಾರಿ ಮಾರ್ಗ ಅನುಸರಿಸುತ್ತಿದ್ದಾಳೆ. ಪ್ರತಿದಿನದ ವಿಮಾನ ಪ್ರಯಾಣಕ್ಕೆ ಸುಮಾರು 20 ಸಾವಿರ ರೂ. ಖರ್ಚು ಮಾಡುತ್ತಾಳೆ.

ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಸಾಮಾನ್ಯವಾಗಿ ಬಸ್, ಮೆಟ್ರೋ ಇಲ್ಲ ವ್ಯಾನ್ ನಲ್ಲಿ ಹೋಗ್ತಾರೆ. ಇದ್ರ ಸಹವಾಸವೇ ಬೇಡ, ಓದಿಗೆ ತೊಂದ್ರೆ ಆಗುತ್ತೆ ಅಂತ ಮತ್ತೆ ಕೆಲವರು, ಶಾಲೆ ಹತ್ತಿರವೇ ರೂಮ್ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಹುಡುಗಿ ತನ್ನ ಭಿನ್ನ ಜೀವನ ಶೈಲಿಯಿಂದ ಸುದ್ಧಿಯಲ್ಲಿದ್ದಾಳೆ. ಆಕೆ ಬಸ್, ಕಾರಿನಲ್ಲ ಅಲ್ಲ ವಿಮಾನದಲ್ಲಿ ಕಾಲೇಜಿಗೆ ಓಡಾಡ್ತಾಳೆ.  ಹೌದು, ಅಚ್ಚರಿ ಅನ್ನಿಸಿದ್ರೂ ಅದು ಸತ್ಯ. ಜಪಾನಿ (Japan)ನ 22 ವರ್ಷದ ಯುಜುಕಿ ನಕಾಶಿಮಾ  ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದ್ದಾಳೆ. ಯುಜುಕಿ (Yuzuki) ಪ್ರತಿದಿನ ವಿಮಾನದಲ್ಲಿ ಕಾಲೇಜಿಗೆ ಹೋಗಿ ಬರ್ತಾಳೆ. ಇದಕ್ಕೆ ಪ್ರತಿ ದಿನ ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡ್ತಾಳೆ.  

ಯುಜುಕಿ ಓದುತ್ತಿರುವ ವಿಶ್ವವಿದ್ಯಾಲಯ (University)  ಫುಕುವೋಕಾದಲ್ಲಿದೆ.  ಇದು ಟೋಕಿಯೊದಲ್ಲಿರುವ ಅವರ ಮನೆಯಿಂದ ಸುಮಾರು 1000 ಕಿಲೋಮೀಟರ್ ದೂರದಲ್ಲಿದೆ. ಇಷ್ಟು ದೂರ ಇದ್ರೂ ಯುಜುಕಿ ಒಂದೇ ಒಂದು ಕ್ಲಾಸ್ ಮಿಸ್ ಮಾಡಿಕೊಳ್ಳೋದಿಲ್ಲ. ಪ್ರತಿ ದಿನ ಕಾಲೇಜಿಗೆ ಹೋಗ್ತಾಳೆ. ಕಾಲೇಜಿಗೆ ಹೋಗಲು ಯುಜುಕಿಗೆ ನಾಲ್ಕು ಗಂಟೆ ಬೇಕು. ಬೆಳಿಗ್ಗೆ 5 ಗಂಟೆಗೆ ಎದ್ದು ನಿತ್ಯ ಕೆಲಸ ಪೂರ್ಣಗೊಳಿಸಿ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಹನೇಡಾ ವಿಮಾನ ನಿಲ್ದಾಣದಿಂದ ಹೊರಡುವ ಮೊದಲ ವಿಮಾನದಲ್ಲಿ ಯುಜುಕಿ ಪ್ರಯಾಣ ಬೆಳೆಸ್ತಾಳೆ.  ಬೆಳಿಗ್ಗೆ 9. 30 ರ ಸುಮಾರಿಗೆ ಈ ವಿಮಾನ ಕಿಟಾಕ್ಯುಶು ವಿಮಾನ ನಿಲ್ದಾಣದಲ್ಲಿ ಇಳಿಯುತ್ತದೆ. ಈ ಸಮಯವನ್ನು ಯುಜುಕಿ ವ್ಯರ್ಥ ಮಾಡೋದಿಲ್ಲ. ಓದು ಹಾಗೂ ಇತರೆ ಕೆಲಸಗಳನ್ನು ವಿಮಾನದಲ್ಲಿಯೇ ಪೂರ್ಣಗೊಳಿಸುತ್ತಾಳೆ.

ಭಾರತದಲ್ಲಿ ಮಹಿಳೆಯರ ಕೆಲಸ, ವಾಸಕ್ಕೆ ಬೆಂಗಳೂರು ಅತ್ಯುತ್ತಮ

ಇಷ್ಟು ದೂರ ಪ್ರಯಾಣ ಏಕೆ? : ಯುಜುಕಿ, ವಿಶ್ವವಿದ್ಯಾನಿಲಯದ ಹತ್ತಿರವೇ ಮನೆ ಅಥವಾ ರೂಮ್ ಮಾಡ್ಬಹುದಿತ್ತು. ಆದ್ರೆ ಯಾಕೆ ಮಾಡಿಲ್ಲ ಎನ್ನುವ ಪ್ರಶ್ನೆಗೆ ಎಲ್ಲರನ್ನು ಕಾಡುತ್ತದೆ.  ಆದ್ರೆ ಯುಜುಕಿಗೆ ಹೀಗೆ ಓಡಾಟ ನಡೆಸೋದು ಅನಿವಾರ್ಯ.  ಯುಜುಕಿ ವೃತ್ತಿಯಲ್ಲಿ ಪಾಪ್ ಗಾಯಕಿ ಮತ್ತು ಜನಪ್ರಿಯ ಜಪಾನಿನ ಗರ್ಲ್ ಗ್ರೂಪ್ ಸಕುರಾಜಕ 46 ನ ಭಾಗವಾಗಿದ್ದಾಳೆ. ಮನರಂಜನಾ ಉದ್ಯಮದಲ್ಲಿ ಇನ್ನಷ್ಟು ಹೆಸರು ಮಾಡಲು ಬಯಸಿರುವ ಕಾರಣ ಆಕೆ  ಟೋಕಿಯೊದಲ್ಲಿ ವಾಸವಾಗೋದು ಅನಿವಾರ್ಯವಾಗಿದೆ. ವೃತ್ತಿ ತನ್ನ ಶಿಕ್ಷಣಕ್ಕೆ ಅಡ್ಡಿಯಾಗ್ಬಾರದು ಅಂತ ಯುಜುಕಿ ಬಯಸ್ತಾಳೆ. ಇದೇ ಕಾರಣಕ್ಕೆ ವೃತ್ತಿ ಜೊತೆ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದಾಳೆ.

ಯುಜುಕಿ ದುಬಾರಿ ಜೀವನ : ಈಗಿನ ಸ್ಥಿತಿಯಲ್ಲಿ ಕಾಲೇಜು ಅಥವಾ ಶಾಲೆ ಶುಲ್ಕ ನೀಡೋದೇ ಕಷ್ಟ. ಹಾಗಿರುವಾಗ ಕಾಲೇಜಿನ ಶುಲ್ಕದ ಜೊತೆ ಪ್ರತಿ ದಿನ ಯುಜುಕಿ 20 ಸಾವಿರ ಖರ್ಚು ಮಾಡ್ತಾಳೆ ಅಂದ್ರೆ ಆಕೆ ಅಗ್ಗದ ಜೀವನ ನಡೆಸ್ತಿಲ್ಲ. ಯುಜುಕಿಗೆ ಏಕ ಮುಖ ಪ್ರಯಾಣಕ್ಕೆ  15,000 ಯೆನ್ಗಳಿಗಿಂತ ಹೆಚ್ಚು ಅಂದ್ರೆ ಸುಮಾರು 9,000 ರೂಪಾಯಿಗಳ ವೆಚ್ಚವಾಗುತ್ತದೆ.  

ಪಾಕ್ ಟಿವಿ ನಿರೂಪಕಿ ಸಾಜಲ್ ಮಲಿಕ್ ಖಾಸಗಿ ವಿಡಿಯೋ ವೈರಲ್!

ಯುಜುಕಿ ಓದು ಮುಗಿಸಿ ಮನೆಗೆ ಬಂದ್ಮೇಲೆ ವಿಶ್ರಾಂತಿ ಪಡೆಯೋದಿಲ್ಲ. ಆಕೆ ಸದಾ ಆಕ್ಟಿವ್ ಆಗಿರ್ತಾಳೆ. ಸಂಜೆ  ಡಾನ್ಸ್ ಮತ್ತು ಓದಿನ ಬಗ್ಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾಳೆ. ಕಳೆದ ನಾಲ್ಕು ವರ್ಷಗಳಿಂದ ಇದು ಯುಜುಕಿಯ ದಿನಚರಿಯಾಗಿದೆ. ಇದಲ್ಲದೆ ಯುಜುಕಿ ಯುಟ್ಯೂಬ್ ಚಾನೆಲ್ ಕೂಡ ನಡೆಸ್ತಿದ್ದಾಳೆ. ಅದ್ರಲ್ಲಿ ಆಕೆ  ಅಧ್ಯಯನ ಮತ್ತು ಗಾಯನ ವೃತ್ತಿಯನ್ನು ಸಮತೋಲನಗೊಳಿಸಲು ಒಂದು ಮಾರ್ಗವನ್ನು ಕಂಡುಕೊಂಡಿದ್ದೇನೆ ಎನ್ನುವ ಮೂಲಕ ತನ್ನ ಜೀವನ ಶೈಲಿಯನ್ನು ಹೇಳಿದ್ದಾಳೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!