ಪಂಚತಾರಾ ಹೊಟೇಲ್‌ ತರ ಟಾಯ್ಲೆಟ್ ಇರ್ಬೇಕು ಅಂದ್ರೆ ಹೀಗ್ ಕ್ಲೀನ್ ಮಾಡಿ!

Published : Jan 17, 2024, 02:15 PM IST
ಪಂಚತಾರಾ ಹೊಟೇಲ್‌ ತರ ಟಾಯ್ಲೆಟ್ ಇರ್ಬೇಕು ಅಂದ್ರೆ ಹೀಗ್ ಕ್ಲೀನ್ ಮಾಡಿ!

ಸಾರಾಂಶ

ಟಾಯ್ಲೆಟ್ ಕ್ಲೀನಿಂಗ್ ಅಂದ್ರೆ ಮೂಗು ಮುರಿಯೋರೆ ಹೆಚ್ಚು. ಎಷ್ಟೇ ಮಾಡಿದ್ರು ಹಳದಿ ಕಲೆ ಹೋಗೋದಿಲ್ಲ. ಕಪ್ಪು ಕಲೆ ಮೇಲೆ ಉಜ್ಜಿದ್ರೆ ಟಾಯ್ಲೆಟ್ ಸೋರೋದು ಗ್ಯಾರಂಟಿ. ಹೀಗಿರೋವಾಗ ಈ ಟಿಪ್ಸ್ ಫಾಲೋ ಮಾಡಿ.   

ಮನೆ ಅಚ್ಚುಕಟ್ಟಾಗಿರಬೇಕು. ಮನೆಯ ಪ್ರತಿಯೊಂದು ಜಾಗವೂ ಸ್ವಚ್ಛವಾಗಿದ್ದರೆ ಇದು ಮನೆ ಅಂದವನ್ನು ಹೆಚ್ಚಿಸುವ ಜೊತೆಗೆ ಮನೆಯಲ್ಲಿ ವಾಸಿಸುವ ಜನರಿಗೆ ಹಿತವೆನ್ನಿಸುತ್ತದೆ. ಮನೆಯ ಮುಖ್ಯ ಭಾಗಗಳಲ್ಲಿ ಶೌಚಾಲಯ ಕೂಡ ಒಂದು. ಪ್ರತಿ ದಿನ ನಾವು ಬಳಸುವ ಜಾಗಗಳಲ್ಲಿ ಇದು ಒಂದಾಗಿದೆ. ಶೌಚಾಲಯದ ಕ್ಲೀನಿಂಗ್ ಬಹಳ ಮುಖ್ಯ. ಅಲ್ಲಿನ ಕೊಳಕು ತನ್ನ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಯಿರುತ್ತದೆ. ಕೊಳಕಾದ ಶೌಚಾಲಯಕ್ಕೆ ಹೋಗಲು ಮನಸ್ಸು ಬರೋದಿಲ್ಲ. 

ಶೌಚಾಲಯ (Toilet) ಸ್ವಚ್ಛಗೊಳಿಸೋದು ಅನೇಕರಿಗೆ ಬೇಸರದ ಸಂಗತಿ. ವಿಶೇಷವಾಗಿ ಶೌಚಾಲಯದಲ್ಲಿ ಇರುವ ಹಳದಿ ಹಾಗೂ ಕಪ್ಪು ಕಲೆಗಳಿಂದ ಬೇಸರ ಮತ್ತಷ್ಟು ಹೆಚ್ಚಾಗುತ್ತದೆ. ದೀರ್ಘಕಾಲ ಬಳಸಿದ ಶೌಚಾಲಯಗಳು ಹೀಗೆ ಬಣ್ಣ (Color) ಬದಲಿಸುತ್ತವೆ. ಅವುಗಳನ್ನು ತೆಗೆದು ಶೌಚಾಲಯ ಹೊಳೆಯುವಂತೆ ಮಾಡೋದು ಸವಾಲಿನ ಕೆಲಸ. ನೀವು ಅವುಗಳನ್ನು ಗಟ್ಟಿಯಾಗಿ ಉಜ್ಜಿದ್ರೆ ಸಿಲಿಕೋನ್‌ (Silicone) ಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದ್ರಿಂದ ಸೋರುವಿಕೆಯುಂಟಾಗಬಹುದು. ನೀವು ಇದನ್ನು ತಪ್ಪಿಸಬೇಕು ಎಂದ್ರೆ ನಿಧಾನವಾಗಿ ನಿಮ್ಮ ಟಾಯ್ಲೆಟ್ ಕ್ಲೀನ್ ಮಾಡಬೇಕು. ಪಂಚತಾರಾ ಹೊಟೇಲ್ ಗಳಿಗೆ ಪ್ರತಿ ದಿನ ನೂರಾರು ಮಂದಿ ಬರುತ್ತಿರುತ್ತಾರೆ. ಆದ್ರೂ ಅಲ್ಲಿನ ಶೌಚಾಲಯಗಳು ಹೊಳೆಯುತ್ತಿರುತ್ತವೆ. ಅದಕ್ಕೆ ಕಾರಣ ಅವರ ಕ್ಲೀನಿಂಗ್ ಟ್ರಿಕ್ಸ್. ಪಂಚತಾರಾ ಹೊಟೇಲ್ ನಲ್ಲಿ ಬಳಸುವ ಕ್ಲೀನಿಂಗ್ ಟ್ರಿಕ್ಸ್ ನೀವೂ ಫಾಲೋ ಮಾಡಿದ್ರೆ ನಿಮ್ಮ ಮನೆ ಶೌಚಾಲಯವನ್ನು ಕೂಡ ನೀವು ಹೊಳೆಯುವಂತೆ ಮಾಡಬಹುದು.

ಕೇವಲ1.6ಲಕ್ಷ ರೂ. ಹೂಡಿಕೆಯೊಂದಿಗೆ ಅಮೆರಿಕದಲ್ಲಿ ಉದ್ಯಮ ಪ್ರಾರಂಭಿಸಿದ ಭಾರತೀಯ ಮಹಿಳೆ ಈಗ ಬಿಲಿಯನೇರ್

ಟಾಯ್ಲೆಟ್ ಕ್ಲೀನಿಂಗ್ ಗೆ ಬೇಕಾಗುವ ಪದಾರ್ಥ : ಟಾಯ್ಲೆಟ್ ಬ್ರಷ್, ಟಾಯ್ಲೆಟ್ ಕ್ಲೀನರ್, ವಿನೆಗರ್ ತುಂಬಿದ ಸ್ಪ್ರೇ ಬಾಟಲ್, ಮೈಕ್ರೋಫೈಬರ್ ಬಟ್ಟೆ ಮತ್ತು ಟಾಯ್ಲೆಟ್ ಬೌಲ್ ಕ್ಲೀನರ್ ಅಗತ್ಯವಿರುತ್ತದೆ.

ಟಾಯ್ಲೆಟ್ ಕ್ಲೀನ್ ಮಾಡೋದು ಹೇಗೆ? : ಟಾಯ್ಲೆಟ್ ಬೌಲ್‌ನ ಒಳಭಾಗಕ್ಕೆ ಟಾಯ್ಲೆಟ್ ಕ್ಲೀನರ್ ಅನ್ನು ಅನ್ವಯಿಸಿ. ಇದು ರಿಮ್ ಅಡಿಯಲ್ಲಿ ಮತ್ತು ವಾಟರ್‌ಲೈನ್ ಸುತ್ತಲೂ ಸೇರಿದಂತೆ ಎಲ್ಲಾ ಪ್ರದೇಶಗಳನ್ನು ಒಳಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಟಾಯ್ಲೆಟ್ ಕ್ಲೀನರ್ ಕೆಲವೇ ಸಮಯದಲ್ಲಿ ತನ್ನ ಮ್ಯಾಜಿಕ್ ಶುರು ಮಾಡುತ್ತದೆ. 

ಕ್ಲೀನರ್ ತನ್ನ ಕೆಲಸವನ್ನು ಮಾಡುತ್ತಿರುವಾಗ, ವಿನೆಗರ್ ತುಂಬಿದ ಸ್ಪ್ರೇ ಬಾಟಲಿಯನ್ನು ತೆಗೆದುಕೊಂಡು ಅದನ್ನು ಟಾಯ್ಲೆಟ್ ನ ಹೊರಭಾಗದಲ್ಲಿ ಸಿಂಪಡಿಸಿ. ಕಲೆಗಳು ಇರಬಹುದಾದ ಪ್ರದೇಶಗಳಿಗೆ ವಿಶೇಷ ಗಮನ ಕೊಡಿ. ವಿನೆಗರ್ ಅತ್ಯುತ್ತಮ ನೈಸರ್ಗಿಕ ಕ್ಲೀನರ್ ಆಗಿದ್ದು, ಅದು ಕಲೆಗಳನ್ನು ತೆಗೆದುಹಾಕಲು ಮತ್ತು ಶೌಚಾಲಯವನ್ನು ಸೋಂಕುರಹಿತಗೊಳಿಸಲು ಸಹಾಯ ಮಾಡುತ್ತದೆ.

ವಿನೆಗರ್ ಸಿಂಪಡಿಸಿದ ನಂತ್ರ ಕೆಲ ಕಾಲ ಹಾಗೆಯೇ ಬಿಡಿ. ನಂತ್ರ ಟಾಯ್ಲೆಟ್ ನ ಮೇಲ್ಭಾಗವನ್ನು ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ. ಮೈಕೋಫೈಬರ್ ಕೊಳಕು ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಟಾಯ್ಲೆಟ್ ಬೌಲ್ ಒಳ ಭಾಗವನ್ನು ಈಗ ನೀವು ಸ್ವಚ್ಛಗೊಳಿಸಬೇಕು. ಟಾಯ್ಲೆಟ್ ಬ್ರೆಷ್ ತೆಗೆದುಕೊಂಡು ಅದನ್ನು ನಿಧಾನವಾಗಿ ಉಜ್ಜಬೇಕು. ಕಲೆ ಇರುವ ಜಾಗವನ್ನು ಗಮನಿಸಿ ಅದನ್ನು ಸರಿಯಾಗಿ ಉಜ್ಜಿ. ರಿಮ್ ಅಡಿಯಲ್ಲಿ ಮತ್ತು ನೀರಿನ ಸುತ್ತಲೂ ಸ್ಕ್ರಬ್ ಮಾಡಲು ಮರೆಯದಿರಿ. ಸ್ಕ್ರಬ್ ಮಾಡಿದ ನಂತ್ರ ಕೊಳಕು ಹೋಗಲು ಶೌಚಾಲಯವನ್ನು ಫ್ಲಶ್ ಮಾಡಿ. 

ವಾಶಿಂಗ್ ಮಶಿನ್ ವಿಪರೀತ ಸದ್ದು ಮಾಡ್ತಿದ್ರೆ ಹೀಗ್ ಮಾಡಿ

ಟಾಯ್ಲೆಟ್ ಕ್ಲೀನ್ ಆದ್ಮೇಲೆ ಟಾಯ್ಲೆಟ್ ಬೌಲ್ ಕ್ಲೀನರ್ ತೆಗೆದುಕೊಂಡು ಅದನ್ನು ಬೌಲ್ ಒಳಗೆ ಹಾಕಿ. ಮುಂದಿನ ಕ್ಲೀನಿಂಗ್ ವರೆಗೆ  ನಿಮ್ಮ ಶೌಚಾಲಯದ ಸ್ವಚ್ಛತೆ ಮತ್ತು ತಾಜಾತನವನ್ನು ಕಾಪಾಡಿಕೊಳ್ಳಲು ಟಾಯ್ಲೆಟ್ ಬೌಲ್ ಕ್ಲೀನರ್ ಸಹಾಯ ಮಾಡುತ್ತದೆ. ನೀವು ಒಮ್ಮೆ ಈ ಕ್ಲೀನಿಂಗ್ ವಿಧಾನ ಪಾಲಿಸಿದ್ರೆ ಸಾಲದು. ಪ್ರತಿ ಬಾರಿ ಟಾಯ್ಲೆಟ್ ಕ್ಲೀನಿಂಗನ್ನು ಹೀಗೆ ಮಾಡಿದ್ರೆ ನಿಮ್ಮ ಟಾಯ್ಲೆಟ್ ಸದಾ ಹೊಳಪಿನಿಂದ ಕೂಡಿರುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ