ಹಬ್ಬದ ಸಂದರ್ಭದಲ್ಲಿ ಪಿರಿಯಡ್ಸ್ ಆದ್ರೆ ಮಹಿಳೆಯರ ಮೂಡ್ ಹಾಳಾಗುತ್ತೆ. ಅದ್ರಲ್ಲೂ ಹೋಳಿಯಂತಹ ಹಬ್ಬದಲ್ಲಿ ಮುಟ್ಟು ಕಾಣಿಸಿಕೊಂಡ್ರೆ ಮುಗೀತು. ಪಿರಿಯಡ್ಸ್ ಆಗಿದೆ ಅಂತಾ ಬೇಸರಪಟ್ಟುಕೊಳ್ಬೇಡಿ. ಆಗ್ಲೂ ನೀವು ಹೋಳಿಯಾಡ್ಬುದು. ಕೆಲ ಟಿಪ್ಸ್ ಫಾಲೋ ಮಾಡ್ಬೇಕು ಅಷ್ಟೆ.
ಹೋಳಿಯಾಟ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.. ಚಿಕ್ಕವರು ದೊಡ್ಡವರೆನ್ನದೇ ಎಲ್ಲರೂ ರಂಗಿನಾಟದಲ್ಲಿ ಭಾಗಿಯಾಗಲು ಇಷ್ಟಪಡುತ್ತಾರೆ. ವರ್ಷಕ್ಕೊಮ್ಮೆ ಬರುವ ಈ ಹಬ್ಬದಲ್ಲಿ ಸಿಗುವ ಆನಂದ ಮತ್ಯಾವ ಹಬ್ಬದಲ್ಲೂ ಸಿಗಲಿಕ್ಕಿಲ್ಲ. ಆದರೆ ಹೆಣ್ಣುಮಕ್ಕಳಿಗೆ ತಿಂಗಳಿಗೊಮ್ಮೆ ಬರುವ ಮುಟ್ಟಿನ ತೊಂದರೆ ಕೆಲವೊಮ್ಮೆ ಇಂತಹ ಹಬ್ಬಗಳಿಗೆ ಅಡ್ಡಿಯಾಗುತ್ತದೆ. ಕೆಲವರು ಹಬ್ಬದ ಸಮಯದಲ್ಲಿ ಮುಟ್ಟಿನ ಸಮಯವನ್ನು ಮುಂದೂಡಲು ಅನೇಕ ಪ್ರಯತ್ನಗಳನ್ನು ಕೂಡ ಮಾಡುತ್ತಾರೆ.
ಎಷ್ಟೋ ದಿನಗಳಿಂದ ಹೋಳಿ (Holi) ಹಬ್ಬವನ್ನು ಆಚರಿಸಬೇಕು ಎನ್ನುವ ಹಂಬಲಕ್ಕೆ ಪಿರಿಯಡ್ಸ್ (Periods) ತೆರೆ ಎಳೆಯುತ್ತದೆ. ಕೆಲವರು ಈ ಸಮಸ್ಯೆಯನ್ನು ಕಡೆಗಣಿಸಿ ಹೋಲಿ ಹಬ್ಬದಲ್ಲಿ ಪಾಲ್ಗೊಳ್ಳುತ್ತರಾದರೂ ಎಲ್ಲರೂ ಹಾಗೆ ಮಾಡುವುದಿಲ್ಲ. ಹಬ್ಬದ ದಿನ ಪಿರಿಯಡ್ಸ್ ಆದರೆ ಮೂಡ್ ಆಫ್ ಆಗಿ ಕೆಲವರು ಯಾವ ಕಾರ್ಯಕ್ರಮದಲ್ಲೂ ಭಾಗವಹಿಸಲು ಇಷ್ಟಪಡುವುದಿಲ್ಲ. ಅದರಲ್ಲೂ ಹೋಳಿ ಹಬ್ಬದಲ್ಲಿ ನೀರಿನಾಟ ಇರುವುದರಿಂದ ಹೆಣ್ಣುಮಕ್ಕಳಿಗೆ ಲೀಕೇಜ್ (Leakage ) ಸಮಸ್ಯೆ ಇದ್ದೇ ಇರುತ್ತೆ. ಪೀರಿಯಡ್ಸ್ ಆದರೂ ತಾನು ಹೋಳಿ ಹಬ್ಬದಲ್ಲಿ ಭಾಗವಹಿಸುತ್ತೇನೆ ಎನ್ನುವ ಇಚ್ಛೆ ಹೊಂದಿರುವವರಿಗೆ ಈ ಕೆಳಗಿನ ಟಿಪ್ಸ್ ಬಹಳ ಪ್ರಯೋಜನವಾಗಲಿದೆ.
undefined
DIPIKA KAKAR: ಧರ್ಮ ಬದಲಿಸಿದ ಖ್ಯಾತ ನಟಿಯೀಗ ಗರ್ಭಿಣಿ- ಕಾಲೆಳೆಯುತ್ತಿದ್ದಾರೆ ನೆಟ್ಟಿಗರು
ಬಟ್ಟೆಯ ಆಯ್ಕೆ ಮಾಡುವಾಗ ಬುದ್ಧಿವಂತಿಕೆ ಉಪಯೋಗಿಸಿ : ಸಾಮಾನ್ಯವಾಗಿ ಹೋಳಿ ಆಡುವಾಗ ಹೆಚ್ಚು ಆರಾಮವೆನಿಸುವ, ಸಡಿಲವಾದ ಬಟ್ಟೆಯನ್ನು ಹಾಕಬೇಕು. ಪಿರಿಯಡ್ಸ್ ಸಮಯದಲ್ಲಿ ಸಡಿಲವಾದ ಬಟ್ಟೆಯ ಜೊತೆ ಬಟ್ಟೆಯ ಕಲರ್ ಕೂಡ ಮುಖ್ಯವಾಗಿರುತ್ತೆ. ಮುಟ್ಟಿನ ಸಮಯದಲ್ಲಿ ಹೋಳಿ ಆಡುವಾಗ ತಿಳಿ ಬಣ್ಣದ ಬಟ್ಟೆಯನ್ನು ಧರಿಸಿದರೆ, ಎಲ್ಲಿ ಬಟ್ಟೆ ಕಲೆಯಾಗುವುದೋ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಹೋಳಿ ಆಡುತ್ತೀರಿ ಎಂದಾದರೆ ಗಾಢ ಬಣ್ಣದ ಬಟ್ಟೆಯನ್ನೇ ಧರಿಸುವುದು ಉತ್ತಮ.
ನಿಮ್ಮ ಆಯ್ಕೆ ಸರಿಯಾಗಿರಲಿ : ಮುಟ್ಟಿನ ಸಮಯದಲ್ಲಿ ಲೀಕೇಜ್ ಟೆನ್ಶನ್ ಅಥವಾ ಕಲೆಗಳಿಂದ ದೂರವಿರಲು ನೀವು ಪ್ಯಾಡ್, ಕಪ್ ಅಥವಾ ಪಿರಿಯಡ್ಸ್ ಪ್ಯಾಂಟ್ ಮುಂತಾದವುಗಳ ಆಯ್ಕೆ ಮಾಡಿಕೊಳ್ಳಬಹುದು. ನೀವು ಯಾವಾಗಲೂ ಯಾವ ಪ್ರೊಡಕ್ಟ್ ಬಳಸುತ್ತೀರೋ ಅದನ್ನೇ ಮುಂದುವರೆಸುವುದು ಉತ್ತಮ. ಏಕೆಂದರೆ ಯಾವುದೋ ಹೊಸ ಬಗೆಯ ವಸ್ತುವನ್ನು ಬಳಸಿದರೆ ಅದರಿಂದ ನಿಮಗೆ ಕಂಫರ್ಟ್ ಆಗದೆ ತೊಂದರೆ ಎನಿಸಬಹುದು.
ಆಹಾರದ ಕಡೆಗೂ ಇರಲಿ ಲಕ್ಷ್ಯ: ಮುಟ್ಟಿನ ತೊಂದರೆಯಲ್ಲಿ ಮಾನಸಿಕ ಸ್ಥಿತಿಯಲ್ಲಿ ಕೂಡ ಏರುಪೇರಾಗುವುದು ಸಹಜ. ಅಂತಹ ಸಮಯದಲ್ಲಿ ಹಲವರು ಹೊಟ್ಟೆನೋವು, ತಲೆನೋವು, ನಿಶ್ಶಕ್ತಿಯ ತೊಂದರೆಯನ್ನು ಎದುರಿಸುತ್ತಾರೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಹೋಳಿ ಆಡುವವರು ತಮ್ಮನ್ನು ತಾವು ಹೈಡ್ರೇಟ್ ಆಗಿರಿಸಿಕೊಳ್ಳಲು ಮಧ್ಯೆ ಮಧ್ಯೆ ಏನನ್ನಾದರೂ ಸೇವಿಸುತ್ತಲೇ ಇರಬೇಕು.
ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚೋದು ಕಾಮನ್, ಸಿಕ್ಕಾಪಟ್ಟೆ ಹೆಚ್ಚಿದರೆ ಅಪಾಯ
ವಿರಾಮ ಕೊಡಿ : ಪಿರಿಯೆಡ್ಸ್ ಸಮಸ್ಯೆಯಿಂದ ಬಳಲುತ್ತಿರುವವರು ರಂಗಿನಾಟದ ಮಧ್ಯೆ ವಿರಾಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಆಟದ ಮಧ್ಯೆ ಸುಸ್ತಾಗಿ ತಲೆ ಸುತ್ತುಬರುವುದು, ಕಾಲುಗಳು ನೋಯುವುದು ಮುಂತಾದ ಸಮಸ್ಯೆ ಎದುರಾಗಬಹುದು.
ಹೈಜಿನ್ ಬಗ್ಗೆ ಕಾಳಜಿ ಇರಲಿ : ಮುಟ್ಟಿನ ತೊಂದರೆ ಇರುವವರು ಹೋಳಿ ಆಡುವಾಗ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಏಕೆಂದರೆ ಹೋಳಿಯ ರಂಗಿನಲ್ಲಿ ಕೆಮಿಕಲ್ ಗಳ ಮಿಶ್ರಣ ಇರುವುದರಿಂದ ಇನ್ಫೆಕ್ಷನ್ ಆಗುವ ಸಾಧ್ಯತೆ ತೀವ್ರವಾಗಿರುತ್ತದೆ. ಇದರ ಜೊತೆಗೆ ನಿಮ್ಮ ಕೈಗಳನ್ನು ಕೂಡ ಪದೇ ಪದೇ ತೊಳೆದುಕೊಳ್ಳುವುದು ಒಳ್ಳೆಯದು.
ಸಣ್ಣ ಬ್ಯಾಗ್ ನಿಮ್ಮ ಜೊತೆಗಿರಲಿ : ಪಿರಿಯೆಡ್ಸ್ ಸಮಯದಲ್ಲಿ ನಿಮ್ಮ ಜೊತೆ ಚಿಕ್ಕ ಬ್ಯಾಗ್ ಇಟ್ಟುಕೊಳ್ಳಿ. ಬ್ಯಾಗ್ ನಲ್ಲಿ ನಿಮ್ಮ ಮುಟ್ಟಿನ ತೊಂದರೆಗೆ ಬೇಕಾಗುವಂತಹ ಪ್ಯಾಡ್ಸ್ , ಟಿಶ್ಶೂಸ್ ಮುಂತಾದ ವಸ್ತುಗಳನ್ನು ಇಟ್ಟುಕೊಳ್ಳಿ. ಅವುಗಳ ಜೊತೆಗೆ ಪೇನ್ ಕಿಲ್ಲರ್, ನೀರಿನ ಬಾಟಲ್ ಕೂಡ ಇರಲಿ.
ಈ ಮೇಲಿನ ಸಣ್ಣ ಸಣ್ಣ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಋತುಚಕ್ರದ ಸಮಯದಲ್ಲೂ ಕೂಡ ಯಾವುದೇ ಹಿಂಜರಿಕೆ ಇಲ್ಲದೇ, ಮುಜುಗರ ತಂದುಕೊಳ್ಳದೇ ಹೋಳಿ ಹಬ್ಬವನ್ನು ಎಲ್ಲರೊಂದಿಗೆ ಆಚರಿಸಬಹುದು.