Inspirational Story: ಮಗುವಿಗಾಗಿ ಇಂಥದ್ದೊಂದು ಕಾರ್ಯಕ್ಕೆ ಕೈ ಹಾಕಿದ ಸಾಧಕಿ

Published : Mar 07, 2023, 03:02 PM ISTUpdated : Mar 07, 2023, 04:42 PM IST
Inspirational Story: ಮಗುವಿಗಾಗಿ ಇಂಥದ್ದೊಂದು ಕಾರ್ಯಕ್ಕೆ ಕೈ ಹಾಕಿದ ಸಾಧಕಿ

ಸಾರಾಂಶ

ಅನೇಕ ಬಾರಿ ನಮ್ಮ ಅನಿವಾರ್ಯತೆ, ನಮ್ಮ ಅಸಹಾಯಕತೆ, ನಮ್ಮ ದೌರ್ಬಲ್ಯವೇ ನಮ್ಮನ್ನು ಸಾಧನೆಯತ್ತ ಕೊಂಡೊಯ್ಯುತ್ತದೆ. ಮಗು ಕಳೆದಾಗ ಆಕಾಶ ಬಿದ್ದಷ್ಟು ಶಾಕ್ ಗೆ ಒಳಗಾಗಿದ್ದ ಮಹಿಳೆ ಮಕ್ಕಳ ರಕ್ಷಣೆಗಾಗಿ ಚಿಂತಿಸಿ, ಯೋಚಿಸಿ, ಸತತ ಪ್ರಯತ್ನದ ನಂತ್ರ ಸಾಧಿಸಿ ತೋರಿಸಿದ್ದಾಳೆ.   

ಇಂದು ಮಹಿಳೆಯರು ಸೌಂದರ್ಯ ಮತ್ತು ಮೇಕಪ್ ಕ್ಷೇತ್ರದಲ್ಲಿ ಮಾತ್ರ ತಮ್ಮ ಛಾಪು ಮೂಡಿಸಿಲ್ಲ. ಒಂದು ಕಾಲದಲ್ಲಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದ, ಪುರುಷ ಪ್ರಾಬಲ್ಯ ಹೊಂದಿದ್ದ ಕ್ಷೇತ್ರದಲ್ಲೂ ಮಹಿಳೆಯರು ಮುನ್ನಡೆ ಸಾಧಿಸಿದ್ದಾರೆ. ಮಹಿಳೆಯರು ಪುರುಷರ ಸಮಾನ ನಿಂತು ಯಶಸ್ವಿಯಾಗ್ತಿದ್ದಾರೆ. ಮಹಿಳೆಯರು ಮಿಂಚುತ್ತಿರುವ ಅಪರೂಪದ ಕ್ಷೇತ್ರಗಳಲ್ಲಿ ತಂತ್ರಜ್ಞಾನವೂ ಒಂದಾಗಿದೆ. ತಂತ್ರಜ್ಞಾನದ ವಿಷ್ಯ ಬಂದಾಗ ಮಹಿಳೆಯರನ್ನು ದೂರವಿಡಲಾಗ್ತಿತ್ತು. ಆದ್ರೀಗ ಆ ಕ್ಷೇತ್ರವನ್ನೂ ಕಬಳಿಸಿರುವ ಮಹಿಳೆಯರು ಅಲ್ಲಿಯೂ ತಮ್ಮ ಪತಾಕೆ ಹಾರಿಸ್ತಿದ್ದಾರೆ. ಅದ್ರಲ್ಲಿ ಸಮೃದ್ಧಿ ಗೋಯಲ್ ಕೂಡ ಒಬ್ಬರು. ಸಮೃದ್ಧಿ ಗೋಯಲ್ ಬಗ್ಗೆ ಒಂದಿಷ್ಟು ಮಾಹಿತಿ ನಿಮ್ಮ ಮುಂದೆ.

ಸಮೃದ್ಧಿ ಗೋಯಲ್ (Samridhi Goyal) ಯಾರು? : ಸ್ಮಾರ್ಟ್ ವಾಚ್ (watch) ಕಂಪನಿ ಸೆಕ್ಯೊ (Sekyo) ಇನ್ನೋವೇಶನ್ಸ್ ನ ಮಾಲೀಕೆ ಸಮೃದ್ಧಿ ಗೋಯಲ್. ಅವಶ್ಯಕತೆಯೇ ಆವಿಷ್ಕಾರ (Invention) ದ ತಾಯಿ ಎಂದು ಸಮೃದ್ಧಿ ನಂಬುತ್ತಾರೆ. ಈ ಮಾತಿನ ಹಿಂದೆ ತಾಯಿಯ ಹೃದಯವಿದೆ ಎನ್ನುವುದು ಸ್ಪಷ್ಟ. ಮಗುವನ್ನು ಸ್ವಲ್ಪಕಾಲ ಬಿಟ್ಟಿದ್ದ ಸಮೃದ್ಧಿಗೆ ಅದನ್ನು ಸಹಿಸೋದು ತುಂಬಾ ಕಷ್ಟವಾಗಿತ್ತು. ತಾಯಿ – ಮಗುವಿನ ಸಂಪರ್ಕ ದುರ್ಬಲವಾಗಬಾರದು ಎನ್ನುವ ಕಾರಣಕ್ಕೆ ಸಮೃದ್ಧಿ ದಿಟ್ಟ ಹೆಜ್ಜೆಯೊಂದನ್ನಿಟ್ಟರು.

WOMEN'S DAY SPECIAL : ಸೋಲಾರ್ ಪ್ಯಾನಲ್ ಮೂಲಕ ಮಹಿಳೆಯರಿಗೆ ಆಸರೆಯಾದ ಲಕ್ಷ್ಮಿ

ಸಮೃದ್ಧಿ ಡಿಸೈನಿಂಗ್ (Designing) ಹಿನ್ನೆಲೆ ಹೊಂದಿದ್ದಾರೆ. ಅವರು ಯುಕೆಯ ಲಂಡನ್ ಕಾಲೇಜ್ ಆಫ್ ಫ್ಯಾಶನ್ (Fashion) ನಲ್ಲಿ ಅಧ್ಯಯನ ಮಾಡಿದ್ದಾರೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ವಿನ್ಯಾಸ ಮತ್ತು ಗ್ರಾಹಕರು ಎದುರಿಸುತ್ತಿರುವ ಚಿಲ್ಲರೆ ಕಾರ್ಯಾಚರಣೆ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಅವರು ಸೆಕ್ಯೂ ಇನ್ನೋವೇಶನ್‌ನ ಸಹ-ಸ್ಥಾಪಕಿ ಮತ್ತು ಸಿಇಒ (CEO) ಆಗಿದ್ದಾರೆ. ಸೆಕ್ಯೂದಲ್ಲಿ ಅವರು ಒಂದಲ್ಲ ಹಲವಾರು ಕೆಲಸದ ಜವಾಬ್ದಾರಿ ಹೊತ್ತಿದ್ದಾರೆ. 

ತಾಯಿಯಾಗಿ ಅವರು ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಅದಕ್ಕಾಗಿ ಏನಾದರೂ ಮಾಡಬೇಕೆಂದು ಬಯಸಿದ್ದರು. ಈ ಸಮಯದಲ್ಲಿ ಜಿಪಿಎಸ್ (GPS) ಟ್ರ್ಯಾಕಿಂಗ್‌ನೊಂದಿಗೆ ಸ್ಮಾರ್ಟ್ ಗಡಿಯಾರವನ್ನು ತಯಾರಿಸುವ ಆಲೋಚನೆ ಅವರ ಮನಸ್ಸಿಗೆ ಬಂದಿತು. ಇದಕ್ಕಾಗಿ ಸೆಕ್ಯೂ ಇನ್ನೋವೇಶನ್ ಪ್ರಾರಂಭವಾಯಿತು.

Postpartum Mood Swings : ಹೆರಿಗೆ ನಂತರ ಮಹಿಳೆ ಅನುಭವಿಸುವ ಮಾನಸಿಕ ಸಮಸ್ಯೆ

ಸೆಕ್ಯೂ ಇನ್ನೋವೇಶನ್ ಕೆಲಸವೇನು? : ಸೆಕ್ಯೂ ಜಿಪಿಎಸ್ ಟ್ರ್ಯಾಕರ್ ಸ್ಮಾರ್ಟ್ ವಾಚ್ ಆಗಿದೆ. ಇದರ ಮೂಲಕ ಪೋಷಕರು ತಮ್ಮ ಮಕ್ಕಳ  ಮೇಲ್ವಿಚಾರಣೆ ಮಾಡಬಹುದು. ಇದು ಪ್ರಮುಖ ಚಿಹ್ನೆಗಳನ್ನು ಪ್ರದರ್ಶಿಸಬಹುದು. SOS ಎಚ್ಚರಿಕೆಯನ್ನು ಹೊಂದಿಸಬಹುದು ಮತ್ತು ದ್ವಿಮುಖ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು. ಇದರ ಬೆಲೆ  2400 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು ಕ್ಲಾಸ್ ರೂಂ ಮೋಡ್ ನಂತಹ ಪೋಷಕರ ನಿಯಂತ್ರಣ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ತರಗತಿಯ ಸಮಯದಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ತಡೆಯುತ್ತದೆ. ಇದು ಲೈವ್ ಮಾನಿಟರಿಂಗ್ ಮತ್ತು ಟ್ರ್ಯಾಕಿಂಗ್ ಸಾಮರ್ಥ್ಯಗಳು ಮತ್ತು ಜಿಯೋ-ಫೆನ್ಸಿಂಗ್ ಅನ್ನು ಸಹ ಹೊಂದಿದೆ.

ಸೆಕ್ಯೂ ಇನ್ನೋವೇಶನ್‌ ಶುರುವಾಗಲು ಕಾರಣವೇನು? : ಸಮೃದ್ಧಿ ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. ಅವರು ಮಗುವಿನ ಜೊತೆ ಕಾರ್ನೀವಲ್‌ಗೆ ಹೋಗಿದ್ದರಂತೆ. ಅಲ್ಲಿ ಅವರು ಮಗು ಕಳೆದುಹೋಯಿತಂತೆ. ಆ ಕೆಲವೇ ನಿಮಿಷ ಇಡೀ ಜಗತ್ತು ಕುಸಿದ ಅನುಭವವಾಗಿತ್ತಂತೆ. ಅದೃಷ್ಟವಶಾತ್  ಸ್ವಲ್ಪ ಸಮಯದ ನಂತರ ಸಮೃದ್ಧಿಗೆ ಮಗು ಸಿಕ್ಕಿತ್ತಂತೆ. ಆಗ ಈ ಸಮಸ್ಯೆಯನ್ನು ಗಂಭೀರವಾಗಿ ಆಲೋಚಿಸಿದೆ ಎನ್ನುತ್ತಾರೆ ಸಮೃದ್ಧಿ. ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೋಷಕರಿಗೆ ಸಹಾಯವಾಗುವ ವಸ್ತು ತಯಾರಿಸುವ ಬಗ್ಗೆ ನಾನು ಪತಿ ಜೊತೆ ಚರ್ಚೆ ನಡೆಸಿದ್ದೆ. ನಾವಿಬ್ಬರೂ ಇದ್ರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಭಾರತೀಯ ಮಾರುಕಟ್ಟೆಗೆ ಸುರಕ್ಷಿತ ಉತ್ಪನ್ನವಾದ ಸೆಕ್ಯೂ ನೀಡಿದ್ದೇವೆ ಎನ್ನುತ್ತಾರೆ ಸಮೃದ್ಧಿ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?