'ನಾನು ಹುಡುಗನಾಗಿದ್ರೆ ರಸ್ತೆ ಬದೀಲಿ ನಿಂತು ಸುಸ್ಸು ಮಾಡ್ಬಹುದಿತ್ತು!'
ನಾನು ಅವನಾಗಿದ್ರೆ, ನಾನು ಅವಳಾಗಿದ್ದರೆ ಎನ್ನುವ ಪ್ರಶ್ನೆ ನಮ್ಮಲ್ಲಿ ಅನೇಕ ಬಾರಿ ಬಂದು ಹೋಗಿರುತ್ತದೆ. ನಾವು ಬೆಳೆದ ಸಮಾಜದಲ್ಲಿ ಪುರುಷ ಹಾಗೂ ಮಹಿಳೆ ಮಧ್ಯೆ ಸಾಕಷ್ಟು ಅಂತರವಿದೆ ಎಂಬುದನ್ನು ಹಿರಿಯರು ಕಲಿಸಿದ್ದಾರೆ. ಹಿರಿಯರ ದಾರಿಯಲ್ಲಿಯೇ ನಡೆಯುತ್ತಿರುವ ನಾವು, ಬೇರೆಯವರ ಸ್ಥಾನದಲ್ಲಿ ನಿಂತು ನೋಡಲು ಬಯಸ್ತೇವೆ. ಸಾಧ್ಯವಾಗದೆ ಹೋದಾಗ ಕಲ್ಪನೆ ಮಾಡಿಕೊಳ್ತೇವೆ.
ದೂರದ ಬೆಟ್ಟ ನುಣ್ಣಗೆ ಎನ್ನುವ ಮಾತೊಂದಿದೆ. ಪ್ರತಿಯೊಬ್ಬರೂ ಇನ್ನೊಬ್ಬ ವ್ಯಕ್ತಿಯ ಜೀವನ ನೋಡಿ ಆತ ಸುಖಿ ಎಂದುಕೊಳ್ತಾನೆ. ಆತನ ಹತ್ತಿರ ಹೋದಾಗ, ಆತನ ಸಮಸ್ಯೆ ಅರಿತಾಗ್ಲೇ ನಮ್ಮ ಜೀವನ ಎಷ್ಟೋ ಉತ್ತಮವಾಗಿದೆ ಎನ್ನುವ ಅರಿವಾಗುತ್ತದೆ. ಕೆಲವೊಮ್ಮೆ ಇದ್ರ ಅರಿವಿದ್ರೂ ಬೇರೆಯವರ ಜೀವನ ನಮಗೆ ಸಿಗ್ಬೇಕಿತ್ತು ಎನ್ನುವ ಬಯಕೆ ಮಾತ್ರ ಕಡಿಮೆಯಾಗೋದಿಲ್ಲ. ಮಹಿಳೆ ಮತ್ತು ಪುರುಷ ಈ ವಿಷ್ಯದಲ್ಲೂ ಈ ಭಾವನೆ ಬರೋದು ಸುಳ್ಳಲ್ಲ. ಹಿಂದಿನ ಕಾಲದಲ್ಲಿ ಗಂಡು ಮಕ್ಕಳನ್ನು ಪಡೆಯಲು ಅದೆಷ್ಟೋ ಹೆಣ್ಣು ಭ್ರೂಣವನ್ನು ಹತ್ಯೆ ಮಾಡಿದವರಿದ್ದಾರೆ. ಹೆಣ್ಣಾದ್ರೆ ಕೀಳಾಗಿ ನೋಡ್ತಿದ್ದ ಜನರಿದ್ದರು. ನಿಧಾನವಾಗಿ ಸಮಾಜ ಬದಲಾಗ್ತಾ ಬಂತು. ಈಗ ಹೆಣ್ಣಾಗ್ಲಿ, ಗಂಡಾಗಿ, ಆರೋಗ್ಯವಂತ ಮಗು ಜನಿಸಿದ್ರೆ ಸಾಕು ಎನ್ನುವವರು ಬಹಳಷ್ಟು ಮಂದಿ. ಮನೆಗೆ ಹೆಣ್ಣು ಮಗಳ ಆಗಮನವಾದ್ರೆ ಲಕ್ಷ್ಮಿ ಬಂದಿದ್ದಾಳೆಂದು ಭಾವಿಸಿ ಅದ್ಧೂರಿ ಸ್ವಾಗತ ಕೋರುವವರನ್ನು ನಾವು ನೋಡಿದ್ದೇವೆ.
ಹೆಣ್ಣು – ಗಂಡನ್ನು ಎಷ್ಟು ಸಮಾನವಾಗಿ ನೋಡ್ತೇವೆ ಎಂದ್ರೂ ಹಿಂದಿನಿಂದ ನಡೆದುಬಂದ ಕೆಲವು ನಂಬಿಕೆಯನ್ನು ಜನರಿಗೆ ಈಗ್ಲೂ ಬಿಡಲು ಸಾಧ್ಯವಾಗ್ತಿಲ್ಲ. ಲಿಂಗ (Gender) ತಾರತಮ್ಯ ಅನೇಕ ಕಡೆ ಜಾರಿಯಲ್ಲಿದೆ. ಹಾಗೆಯೇ ಮಹಿಳೆಗೆ ಇದೇ ಕೆಲಸ, ಪುರುಷನಿಗೆ ಇದೇ ಕೆಲಸವೆಂದೂ ಈಗ್ಲೂ ಅನೇಕರು ಬೇರ್ಪಡಿಸಿಟ್ಟಿದ್ದಾರೆ. ಮಹಿಳೆಯ ಜೀವನ (Life) ಎಷ್ಟೇ ಚೆನ್ನಾಗಿರಲಿ, ಆಕೆ ನಾನು ಪುರುಷನಾಗಿದ್ರೆ ಎಂದು ಜೀವನದಲ್ಲಿ ಒಮ್ಮೆಯಾದ್ರೂ ಆಲೋಚನೆ ಮಾಡ್ತಾಳೆ. ಪುರುಷನಾಗಿದ್ರೆ ಆಕೆ ಏನು ಮಾಡ್ತಿದ್ದಳು ಎನ್ನುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿವೆ. ಕೆಲ ಮಹಿಳೆ (Woman) ಯರ ಉತ್ತರ ಇಲ್ಲಿದೆ.
ಜೀವವಿದ್ದಾಗಲೇ ಹೂಳಲ್ಪಟ್ಟು ಜೀವಂತ ದಂತಕಥೆಯಾಗಿ ಎದ್ದುಬಂದು ಪದ್ಮಶ್ರೀ ಪಡೆದ ಸಾಧಕಿ
ಮಹಿಳೆಯಾಗೋದೇ ಉತ್ತಮ : ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಮಹಿಳೆಯೊಬ್ಬಳು, ನಾನು ಈ ಬಗ್ಗೆ ಆಲೋಚನೆ ಮಾಡಿದ್ದೇನೆ ಎಂದಿದ್ದಾಳೆ. ನಾನು ಹುಡುಗನಾಗಿದ್ರೆ ಎಷ್ಟು ಚೆನ್ನಾಗಿತ್ತು ಅಂತಾ ಕೆಲವು ಬಾರಿ ಯೋಚಿಸಿದ್ದೇನೆ. ಆದ್ರೆ ನನಗೆ ಮಹಿಳೆಯಾಗಿರೋದೆ ಉತ್ತಮ ಎನ್ನಿಸಿದೆ. ನಾವು ಪುರುಷ ಪ್ರಧಾನ ಸಮಾಜದಲ್ಲಿದ್ದೇವೆ. ಬಾಲ್ಯದಲ್ಲಿಯೇ ನಮಗೆ ಲಿಂಗ ತಾರತಮ್ಯದ ಪಾಠ ಶುರುವಾಗಿರುತ್ತದೆ. ಪುರುಷರಿಗೆ ಅನೇಕ ಸೌಲಭ್ಯ, ಅಧಿಕಾರ ಸಿಗುತ್ತದೆ. ಇದೇ ಕಾರಣಕ್ಕೆ ನಾವು ಕೆಲ ಕೆಲಸಗಳನ್ನು ಮಾಡಲು ಹಿಂದೇಟು ಹಾಕ್ತೇವೆ. ನಮ್ಮಿಂದ ಇದು ಸಾಧ್ಯವಾ ಎಂಬ ಪ್ರಶ್ನೆ ನಮ್ಮ ಮನದಲ್ಲಿ ಮೂಡುತ್ತದೆ. ಪುರುಷರಿಗೆ ಎಷ್ಟೇ ಸೌಲಭ್ಯ ಸಿಕ್ಕಿದ್ರೂ ಮಹಿಳೆಯ ಜಾಗ ಉತ್ತಮ ಎನ್ನುತ್ತಾರೆ ಈಕೆ.
ಹುಡುಗನಾಗ್ಬೇಕಿತ್ತು ಎಂದು ನಾನು ಬಯಸಿಲ್ಲ : ಪುರುಷ ಮತ್ತು ಮಹಿಳೆಯರನ್ನು ನೋಡಿದಾಗ ಪ್ರತಿಯೊಬ್ಬರೂ ವಿಶೇಷತೆಯನ್ನು ಹೊಂದಿರುತ್ತಾರೆ. ಅದು ದೇವರ ಸೃಷ್ಟಿಯಾಗಿದೆ. ನಾವೆಲ್ಲರೂ ಜನ್ಮಪಡೆದಿರುವುದ್ರ ಹಿಂದೆ ಗುರಿಯೊಂದಿದೆ. ಅದನ್ನು ಪೂರೈಸುವ ಕೆಲಸ ಮಾಡ್ಬೇಕು. ಅರ್ಥಪೂರ್ಣ ಜೀವನವನ್ನು ನಡೆಸಬೇಕು. ನನ್ನ ಕುಟುಂಬದಲ್ಲಿ ಎಂದೂ ನನಗೆ ಲಿಂಗ ತಾರತಮ್ಯ ತೋರಿಸಿಲ್ಲ. ಹಾಗಾಗಿ ನನಗೆ ಹುಡುಗನಾಗಿದ್ರೆ ಎಂಬ ಆಲೋಚನೆ ಬಂದಿಲ್ಲ ಎನ್ನುತ್ತಾಳೆ ಇನ್ನೊಬ್ಬ ಮಹಿಳೆ.
ಹುಡುಗನಾಗೋದೆ ತುಂಬಾ ಒಳ್ಳೆಯದು : ಈ ಮಹಿಳೆ ಮನಸ್ಸಿನಲ್ಲಿ ಅನೇಕ ಬಾರಿ ನಾನು ಹುಡುನಾಗಿದ್ರೆ ಎಷ್ಟು ಚೆನ್ನಾಗಿತ್ತು ಎಂಬ ಭಾವನೆ ಬಂದಿದೆಯಂತೆ. ಹುಡುಗರಿಗೆ ಸ್ವಾತಂತ್ರ್ಯವಿರುತ್ತದೆ. ಅವರು ಕೆಲ ಕೆಲಸಗಳನ್ನು ಆರಾಮವಾಗಿ ಮಾಡಬಹುದು. ಆದ್ರೆ ಹುಡುಗಿಯರಿಗೆ ರಾತ್ರಿ ವೇಳೆ ಹೊರಗೆ ಹೋಗೋದು, ಹ್ಯಾಂಟ್ ಔಟ್ ಮಾಡೋದು ಸೇರಿದಂತೆ ಕೆಲ ಕೆಲಸ ಮಾಡಲು ನಿರ್ಬಂಧವಿದೆ ಎನ್ನುತ್ತಾಳೆ ಈಕೆ.
ದುಡಿಯೋಕೂ ಸೈ ಹೂಡಿಕೆಗೂ ರೆಡಿ; ದೇಶದಲ್ಲಿ ಮಹಿಳಾ ಹೂಡಿಕೆದಾರರ ಪ್ರಮಾಣದಲ್ಲಿ ಏರಿಕೆ
ನಾನು ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡ್ಬಹುದಿತ್ತು : ಇನ್ನೊಬ್ಬ ಮಹಿಳೆ ವಿಚಿತ್ರ ಉತ್ತರ ನೀಡಿದ್ದಾಳೆ. ಒಂದ್ವೇಳೆ ನಾನು ಹುಡುಗನಾಗಿದ್ರೆ ಎಂಬ ಪ್ರಶ್ನೆ ಅನೇಕ ಬಾರಿ ನನ್ನ ಮನಸ್ಸಿನಲ್ಲಿ ಬಂದು ಹೋಗಿದೆ. ನಾನು ಪುರುಷನಾಗಿದ್ರೆ ಈಗಿನ ಹುಡುಗ್ರು ಮಾಡುವಂತೆ ರಸ್ತೆ ಬದಿಯಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡ್ಬಹುದಿತ್ತು. ಹಾಗೆಯೇ ಮೀಟಿಂಗ್ ನಲ್ಲಿ ಎದ್ದು ನಿಂತು ನಾನು ಆಲ್ಫಾ ಮೇಲ್ ಎಂದು ಹೇಳಿಕೊಳ್ಳಬಹುದಿತ್ತು ಎನ್ನುತ್ತಾಳೆ ಮಹಿಳೆ. ಅಲ್ಫಾ ಮೇಲ್ ಅಂದ್ರೆ ಗುಂಪಿನಲ್ಲಿ ಅತ್ಯಂತ ಯಶಸ್ವಿ ಮತ್ತು ಶಕ್ತಿಯುತ ಪುರುಷ ಎಂದರ್ಥ.