ಮನೆಯಲ್ಲಿ ಫ್ರಿಜ್ ಇರ್ಲೇಬೇಕು. ಒಂದಿಷ್ಟು ಹಣ ಕೂಡಿಹಾಕಿ ಫ್ರಿಜ್ ಖರೀದಿ ಮಾಡಿರ್ತೇವೆ. ಎಷ್ಟೇ ಹಳೆಯದಾದ್ರೂ ಅದನ್ನೇ ಬಳಸ್ತಿರುತ್ತೇವೆ. ಕೆಲವೊಂದು ಸಮಸ್ಯೆ ಕಂಡು ಬಂದ್ರೂ ಅದನ್ನು ನಿರ್ಲಕ್ಷ್ಯಿಸುತ್ತೇವೆ. ಆ ಲಕ್ಷಣಗಳೇ ಫ್ರಿಜ್ ಹಾಳಾಗಿರುವ ಸಂಕೇತ ಎಂಬುದು ನಮಗೆ ತಿಳಿಯೋದೆ ಇಲ್ಲ.
ಅಡುಗೆ ಮನೆಯಲ್ಲಿ (Kitchen) ಆರೋಗ್ಯ ಅಡಗಿದೆ. ಅಡುಗೆ ಮನೆಯಲ್ಲಿ ಬಳಸುವ ಚಿಕ್ಕ ವಸ್ತು ಕೂಡ ಬಹಳ ಮುಖ್ಯ. ಸ್ಪೂನ್ (Spoon) ನಿಂದ ಹಿಡಿದು ಫ್ರಿಜ್ (Fridge) ವರೆಗೆ ಎಲ್ಲವೂ ನಮ್ಮ ಆರೋಗ್ಯ (Health) ದ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಅಡುಗೆ ಮನೆಯನ್ನೂ ಫ್ರಿಜ್ ಆವರಿಸಿದೆ. ಅದ್ರಲ್ಲೂ ಬೇಸಿಗೆಯಲ್ಲಿ ಎಲ್ಲರೂ ಫ್ರಿಜ್ ನೀರು ಸೇವಿಸಲು ಬಯಸ್ತಾರೆ. ಆಹಾರ ಹಾಳಾಗದಂತೆ ತಡೆಯಲು ಹಾಗೂ ತಣ್ಣನೆಯ ಪಾನೀಯ ಸೇವನೆ ಮಾಡಲು ನಾವು ಫ್ರಿಜ್ ಬಳಸ್ತೇವೆ. ಫ್ರಿಜ್ ದುಬಾರಿ ವಸ್ತು. ಹಾಗಾಗಿ ಅದನ್ನು ಪದೇ ಪದೇ ಬದಲಿಸಲು ಸಾಧ್ಯವಿಲ್ಲ. ಅನೇಕ ವರ್ಷಗಳ ಕಾಲ ನಾವು ಒಂದೇ ಫ್ರಿಜ್ ಬಳಸ್ತೇವೆ. ಆದ್ರೆ ದೀರ್ಘಕಾಲ ಬಳಕೆ ಮಾಡಿರುವ ಫ್ರಿಜ್ ಹಾಳಾಗುತ್ತೆ. ಹಳೆಯ ಫ್ರಿಜ್ ಬಳಸುತ್ತಿದ್ದರೆ ಅಥವಾ ಹೊಸ ಫ್ರಿಜ್ ನಲ್ಲಿಯೂ ಕೆಲ ಚಿಹ್ನೆ ಕಂಡರೆ ಫ್ರಿಜ್ ಹಾಳಾಗಿದೆ ಎಂದರ್ಥ. ತಕ್ಷಣ ಫ್ರಿಜ್ ಬದಲಾಯಿಸಿ. ಇಂದು ನಾವು ಫ್ರಿಜ್ ಹಾಳಾಗಿದೆ ಎಂಬುದನ್ನು ಹೇಗೆ ಪತ್ತೆ ಮಾಡಬಹುದು ಎಂಬುದನ್ನು ಹೇಳ್ತೇವೆ.
ಫ್ರಿಜ್ ಸೌಂಡ್ : ಹಳೆಯದಾದ ಫ್ರಿಜ್ ಸರಿಯಾಗಿದೆ ಎಂಬ ಕಾರಣಕ್ಕೆ ನಾವು ಅದರ ಬಳಕೆ ಮುಂದುವರೆಸಿರುತ್ತೇವೆ. ಅನೇಕ ವರ್ಷಗಳಿಂದ ಬಳಸ್ತಿರುವ ಫ್ರಿಜ್ ನ ಸೌಂಡ್ ನಿಧಾನವಾಗಿ ಬದಲಾಗಿರುತ್ತದೆ. ಒಂದು ವೇಳೆ ನಿಮ್ಮ ಮನೆಯ ಫ್ರಿಜ್ ಸೌಂಡ್ ಕೂಡ ಸ್ವಲ್ಪ ಭಿನ್ನವಾಗಿದ್ದರೆ ಫ್ರಿಜ್ ಹಾಳಾಗಿದೆ ಎಂಬ ಸೂಚನೆ. ಅದನ್ನು ಪರೀಕ್ಷಿಸಿ ಇಲ್ಲವೆ ಹೊಸ ಫ್ರಿಜ್ ಖರೀದಿ ಮಾಡಿ.
ನೀರು ಸೋರುತ್ತಿದ್ದರೆ : ಬೇಸಿಗೆಯಲ್ಲಿ, ಕೆಲವೊಮ್ಮೆ ನೀರು ಫ್ರಿಜ್ನಿಂದ ಹೊರಬರುತ್ತದೆ. ಆದರೆ ನಿಮ್ಮ ಫ್ರಿಜ್ ನಿಂದ ಹೆಚ್ಚು ನೀರು ಬರುತ್ತಿದ್ದರೆ ಗಮನ ಹರಿಸಬೇಕು. ನಿಮ್ಮ ಫ್ರಿಜ್ ಹಾಳಾಗಿದೆ ಎಂದೇ ಅರ್ಥ. ತಕ್ಷಣ ಅದನ್ನು ಬದಲಾಯಿಸುವುದು ಒಳ್ಳೆಯದು.
ಫ್ರಿಜ್‌ನಲ್ಲಿದ್ದರೂ ಹಾಲು ಹಾಳಾಗ್ತಾ ಇದೆಯಾ?
ಆಹಾರ ಹಾಳಾಗುವುದು : ಆಹಾರ ಹಾಳಾಗದಿರಲಿ ಎನ್ನುವ ಕಾರಣಕ್ಕೆ ನಾವು ಫ್ರಿಜ್ ಬಳಸ್ತಿರುತ್ತೇವೆ. ಆದ್ರೆ ಫ್ರಿಜ್ ನಲ್ಲಿಟ್ಟ ಆಹಾರವೇ ಹಾಳಾಗಲು ಪ್ರಾರಂಭಿಸಿದ್ರೆ? ಹಾಳಾದ ಆಹಾರ ಸೇವನೆ ಒಳ್ಳೆಯದಲ್ಲ. ಇದು ಅನೇಕ ರೋಗಕ್ಕೆ ಕಾರಣವಾಗುತ್ತದೆ. ಒಂದ್ವೇಲೆ ಫ್ರಿಜ್ ನಲ್ಲಿಟ್ಟ ಆಹಾರ ಹಾಳಾಗ್ತಿದ್ದರೆ ಅಥವಾ ಹೆಚ್ಚು ಐಸ್ ಹೆಪ್ಪುಗಟ್ಟುತ್ತಿದ್ದರೆ ಆಗ ನೀವು ಫ್ರಿಜ್ ಬದಲಿಸಿ. ಯಾವುದೇ ಕಾರಣಕ್ಕೂ ಅದೇ ಫ್ರಿಜ್ ಬಳಕೆ ಮಾಡ್ಬೇಡಿ.
ಅತಿ ಬಿಸಿಯಾಗುವುದು : ಕೆಲವೊಮ್ಮೆ ಫ್ರಿಜ್ ತುಂಬಾ ಬಿಸಿಯಾಗಲು ಪ್ರಾರಂಭಿಸುತ್ತದೆ. ಫ್ರಿಜ್ ಮೇಲೆ ಕೈ ಇಟ್ಟರೆ ಕೈ ಸುಡುವಷ್ಟು ಫ್ರಿಜ್ ಬಿಸಿಯಾಗುತ್ತದೆ. ಆಗ ನಿಮ್ಮ ಫ್ರಿಜ್ ಹಾಳಾಗಿದೆ ಎಂದು ಅರ್ಥೈಸಿಕೊಳ್ಳಿ. ಫ್ರಿಜ್ ಬದಲಿಸಲು ಪ್ಲಾನ್ ಮಾಡಲು ಇದು ಸೂಕ್ತ ಸಮಯ.
ಹೆಚ್ಚಿನ ವಿದ್ಯುತ್ ಬಳಕೆ : ಕೆಟ್ಟ ಫ್ರಿಜ್ ನಿಮ್ಮ ವಿದ್ಯುತ್ ಬಿಲ್ ಅನ್ನು ಸಹ ಹೆಚ್ಚಿಸಬಹುದು. 5 ಸ್ಟಾರ್ ಫ್ರಿಜ್ ಕಡಿಮೆ ವಿದ್ಯುತ್ ಬಳಸುತ್ತದೆ. ಮತ್ತೊಂದೆಡೆ, 1 ಸ್ಟಾರ್ ಫ್ರಿಜ್ ನಿಮ್ಮ ವಿದ್ಯುತ್ ಅನ್ನು ಹೆಚ್ಚಿಸಬಹುದು. 5 ಸ್ಟಾರ್ ಫ್ರಿಜ್ ಹೆಚ್ಚು ದುಬಾರಿ ಆದರೆ 1 ಸ್ಟಾರ್ ಫ್ರಿಜ್ ಅಗ್ಗವಾಗಿದೆ. ಹಾಗೆಯೇ ಹಳೆಯ ಫ್ರಿಜ್ ಬಳಕೆ ಮಾಡಿದ್ರೆ ವಿದ್ಯುತ್ ಬಿಲ್ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ನಿಮ್ಮ ಮನೆಯ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದ್ದರೆ ಫ್ರಿಡ್ಜ್ ಹೆಚ್ಚು ವಿದ್ಯುತ್ ಬಳಸುತ್ತಿದೆ ಎಂದರ್ಥ. ಈ ಸಂದರ್ಭದಲ್ಲಿ, ನೀವು ಫ್ರಿಜ್ ಅನ್ನು ಬದಲಾಯಿಸಬೇಕು. ಇಲ್ಲದೆ ಹೋದ್ರೆ ಫಿಜ್ ಸಂಪೂರ್ಣ ಹಾಳಾಗುವುದಲ್ಲದೆ ವಿನಃ ನೀವು ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ.
ಬೆಳ್ಳುಳ್ಳಿ ಸಿಪ್ಪೆ ಸುಲಿಯಲು ಇಲ್ಲಿವೆ ಈಸಿ ಟಿಪ್ಸ್