ಪಿವಿಆರ್‌ನಲ್ಲಿ ಸ್ಯಾನಿಟರಿ ಪ್ಯಾಡ್​ ಸಿಗದೆ ಮಹಿಳೆಯ ಪರದಾಟ, ಟ್ವೀಟ್ ವೈರಲ್

By Vinutha PerlaFirst Published Feb 2, 2023, 10:29 AM IST
Highlights

ದೇಶದಲ್ಲಿ ಎಲ್ಲಾ ವಿಷಯಗಳು ಅಭಿವೃದ್ಧಿಯಾಗುತ್ತಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯಸೇವೆಗಳ ಲಭ್ಯತೆ ಇನ್ನೂ ಜನರಿಗೆ ಲಭಿಸುತ್ತಿಲ್ಲ. ಅದರಲ್ಲೂ ಭಾರತದಲ್ಲಿ ಮಹಿಳೆಯರ  ಋತುಚಕ್ರದ ಆರೋಗ್ಯದ ವಿಚಾರ ಇನ್ನು ಗುಪ್ತ್‌ ಗುಪ್ತ್ ಆಗಿ ಮಾತನಾಡುವ ವಿಷಯವಾಗಿಯೇ ಉಳಿದಿದೆ. ಈ ಬಗ್ಗೆ ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ. 

ಭಾರತದ ಜನಸಂಖ್ಯೆಯ ಸುಮಾರು 50 ಪ್ರತಿಶತ ಮಹಿಳೆಯರನ್ನು ಒಳಗೊಂಡಿದೆ. ಈ ಮಹಿಳೆಯರಲ್ಲಿ ಹೆಚ್ಚಿನವರು ಋತುಚಕ್ರವನ್ನು ಹೊಂದಿದ್ದು, ಇದು ಸರಾಸರಿ 13 ವರ್ಷ ವಯಸ್ಸಿನ ಗುಂಪಿನಿಂದ 48 ವರ್ಷದವರನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಅನೇಕರಿಗೆ ಋತುಚಕ್ರವು ಅಕಾಲಿಕ ಮತ್ತು ಅನಿರೀಕ್ಷಿತವಾಗಿರುತ್ತದೆ. ಹೀಗಾಗಿ ಇಂಥಾ ಸಂದರ್ಭದಲ್ಲಿ ಸ್ಯಾನಿಟಿರಿ ಪ್ಯಾಡ್ ಯಾವಾಗಲೂ ಜೊತೆಯಲ್ಲಿಯೇ ಇರಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್ ಅಳವಡಿಸಬೇಕು ಎಂದು ಹಲವರು ಸೂಚಿಸುತ್ತಾರೆ. ಇದೀಗ, ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವೆಂಡಿಂಗ್ ಮೆಷಿನ್‌ಗಳ ಕೊರತೆಯನ್ನು ಸೂಚಿಸುವ ಟ್ವಿಟರ್ ಫುಲ್ ವೈರಲ್ ಆಗುತ್ತಿದೆ.

PVRನಲ್ಲಿ ಸ್ಯಾನಿಟರಿ ಪ್ಯಾಡ್ ಸಿಗದೆ ತೊಂದರೆ ಅನುಭವಿಸಿದ ಮಹಿಳೆ
@krispycrabb ಎಂಬ ಟ್ವಿಟ್ಟರ್ ಬಳಕೆದಾರರು PVR ಚಲನಚಿತ್ರ ಥಿಯೇಟರ್‌ನಲ್ಲಿ ಸ್ಯಾನಿಟರಿ ಪ್ಯಾಡ್ ಸಿಗದೆ ತೊಂದರೆ ಆಗಿದ್ದನ್ನು ಹೇಳಿಕೊಂಡಿದ್ದಾರೆ. ಅನಿರೀಕ್ಷಿತವಾಗಿ ಮುಟ್ಟಿನ ಸಮಯದಲ್ಲಿ (Menstruation) ಯಾವುದೇ ಸ್ಯಾನಿಟರಿ ಪ್ಯಾಡ್‌ಗಳು ಸಿಗಲ್ಲಿಲ್ಲ. ಥಿಯೇಟರ್‌ನಲ್ಲಿದ್ದ ಸಿಬ್ಬಂದಿಯನ್ನು ಕೇಳಿದರೂ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಸಿಗಲಿಲ್ಲ ಎಂದು ಮಹಿಳೆ (Woman) ಹೇಳಿದರು. ಸಾರ್ವಜನಿಕ ಸ್ಥಳಗಳು ಅವಧಿಗಳನ್ನು ಪೂರೈಸುವ ಸೌಲಭ್ಯಗಳನ್ನು ಹೊಂದಿರಬೇಕು ಎಂದು ಮಹಿಳೆ ಸೂಚಿಸಿದರು. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇತರ ಮಹಿಳೆಯರು ಸಹ ವಿಮಾನ ನಿಲ್ದಾಣಗಳು (Airports), ಕಚೇರಿಗಳು ಮತ್ತು ಮಾರುಕಟ್ಟೆಗಳಲ್ಲಿ ಅವರು ಎದುರಿಸಿದ ರೀತಿಯ ಅನುಭವ (Experience)ಗಳನ್ನು ಹಂಚಿಕೊಂಡರು.

ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ, ವಿಶ್ವವಿದ್ಯಾಲಯದಿಂದ ಐತಿಹಾಸಿಕ ನಿರ್ಧಾರ

ಇದೀಗ ವೈರಲ್ ಆಗುತ್ತಿರುವ ಟ್ವೀಟ್‌ನಲ್ಲಿ. 'ಪಿವಿಆರ್​ನಲ್ಲಿ ಸಿನೆಮಾ ನೋಡಲು ಹೋದಾಗ ನನ್ನ ಗೆಳತಿಗೆ ಅಕಸ್ಮಾತ್ ಆಗಿ ಮುಟ್ಟಾಯಿತು. ಆದರೆ ಪಿವಿಆರ್​ನಲ್ಲಿ ಸ್ಯಾನಿಟರಿ ಪ್ಯಾಡ್ ಸಿಗಲಿಲ್ಲ.' ಎಂದು ಮಹಿಳೆಯೊಬ್ಬರು ಟ್ವೀಟ್​ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಸೌಲಭ್ಯ (Facilities) ಕುರಿತು ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಪಿವಿಆರ್​ನ ಶೌಚಾಲಯ ಸಿಬ್ಬಂದಿಗೆ ಈ ವಿಷಯವಾಗಿ ಸಹಾಯ ಮಾಡಬಹುದೇ ಎಂದು ಕೇಳಿದೆವು. ಆದರೆ ಅವರು ಸಹಕರಿಸಲಿಲ್ಲ. ಆರೋಗ್ಯಸೇವೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಂಭೀರವಾಗಿ ಪರಿಗಣಿಸಬೇಕಲ್ಲವೆ ನಾವು ಇನ್ನೂ ಯಾಕೆ ಈ ವಿಷಯದಲ್ಲಿ ಇಷ್ಟು ಹಿಂದುಳಿದಿದ್ದೇವೆ. ಬದಲಾವಣೆ ಮತ್ತು ಅಭಿವೃದ್ಧಿ ಎನ್ನುವುದು ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಯಾಕೆ ಇನ್ನೂ ಮುಕ್ತವಾಗಿ ತೆರೆದುಕೊಂಡಿಲ್ಲ ಎಂದು ಆಕೆ ಪ್ರಶ್ನಿಸಿದ್ದಾರೆ. ಈ ಟ್ವೀಟ್​ ಅನ್ನು ಪಿವಿಆರ್​, ಆರೋಗ್ಯ ಸಚಿವಾಲಯ ಮತ್ತ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

ನೆಟ್ಟಿಗರನ್ನು ಈ ಪೋಸ್ಟ್​ ಬಹುವಾಗಿ ಗಮನ ಸೆಳೆದಿದೆ. ನೂರಾರು ಜನರು ಇದಕ್ಕೆ ಸಂಬಂಧಿಸಿ ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ಸೇವೆಗಳ ವ್ಯವಸ್ಥೆಯೇ ಇಲ್ಲ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ಪಿವಿಆರ್​ನಲ್ಲಿ ಸೇಬು ಕತ್ತರಿಸಲು ಚಾಕು ಕೂಡಾ ಸಿಗಲಿಲ್ಲ ಎಂದಿದ್ದಾರೆ.

ಪಿರಿಯಡ್ಸ್ ಅಂದ್ರೆ ಬ್ಲೀಡಿಂಗ್ ನಾರ್ಮಲ್ ಆಗಬೇಕು, ಕಡಿಮೆ ಆದ್ರೂ ಇಗ್ನೋರ್ ಮಾಡಬೇಡಿ

ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು, 'ಭಾರತದ ದೊಡ್ಡ ಕಾರ್ಪೊರೇಟ್ ಕಚೇರಿಗಳು ಸಹ ಸ್ಯಾನಿಟರಿ ಪ್ತಾಡ್ ಒದಗಿಸುವ ಕೆಲಸ ಮಾಡುವುದಿಲ್ಲ. ಪ್ರತಿಯೊಬ್ಬರೂ ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಮೂಲಭೂತ ನೈರ್ಮಲ್ಯವನ್ನು ಬೆಂಬಲಿಸಲು ಏನನ್ನೂ ಮಾಡದಿರುವುದು ತುಂಬಾ ದುಃಖಕರವಾಗಿದೆ' ಎಂದಿದ್ದಾರೆ. 

ಇನ್ನೊಬ್ಬ ಮಹಿಳೆ ತನಗಾದ ಅನುಭವವನ್ನು ಹೇಳಿಕೊಂಡಿದ್ದು, 'ಮುಟ್ಟಿನ ಸಮಯದಲ್ಲಿ ಪ್ಯಾಡ್ ಸಿಗದ ಕಾರಣ ನಾನು ಒಮ್ಮೆ ವಿಮಾನ ನಿಲ್ದಾಣದಿಂದ 30 ಕಿಲೋಮೀಟರ್ ವಾಪಾಸ್ ಹೋಗಬೇಕಾಯಿತು. ಏಕೆಂದರೆ ವಿಮಾನ ನಿಲ್ದಾಣದಲ್ಲಿ ಪ್ಯಾಡ್ ವಿತರಣಾ ಯಂತ್ರವು ಲಾಕ್ ಆಗಿತ್ತು' ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು 'ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಆರೋಗ್ಯ ಸಂಬಂಧಿ ವಿಷಯಗಳು ಯಾವಾಗಲೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ. ಇವತ್ತಿಗೂ ಅದೆಷ್ಟೋ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಆರೋಗ್ಯಕ್ಕೆ ಅಗತ್ಯವಾದ ವಸ್ತುಗಳು ಲಭ್ಯವಿಲ್ಲ' ಎಂದಿದ್ದಾರೆ.

This is just a random story but it made me think ? I was at PVR this morning for a movie with a friend. She got her period randomly and couldn’t find any sanitary pads or products at PVR.

— peanut🥰👌 (@krispycrabb)
click me!