ಗಂಡಸರಿಗೂ ಬೇಡವಾಯ್ತು ಈ ಸುಂದರಿ: ಯುವತಿ ಬಿಟ್ಟು ಅಜ್ಜನ ಕೈಗೆ ಕೀಲಿ ಕೊಟ್ಟ ಶೇ.97ರಷ್ಟು ಮಂದಿ!

Published : Mar 07, 2025, 01:17 PM ISTUpdated : Mar 07, 2025, 02:34 PM IST
ಗಂಡಸರಿಗೂ ಬೇಡವಾಯ್ತು ಈ ಸುಂದರಿ: ಯುವತಿ ಬಿಟ್ಟು ಅಜ್ಜನ ಕೈಗೆ ಕೀಲಿ ಕೊಟ್ಟ ಶೇ.97ರಷ್ಟು ಮಂದಿ!

ಸಾರಾಂಶ

ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. Cars24india ನಡೆಸಿದ ಪ್ರಯೋಗದಲ್ಲಿ, ಕಾರು ನಿಲುಗಡೆಗೆ ಬಂದಾಗ ಶೇಕಡಾ 97 ರಷ್ಟು ಜನರು ಪುರುಷರಿಗೆ ಕೀಲಿ ನೀಡಿದ್ದಾರೆ. ಮಹಿಳೆಯರು ಮತ್ತು ವೃದ್ಧರನ್ನು ಪರೀಕ್ಷಿಸಿದಾಗಲೂ ಇದೇ ಫಲಿತಾಂಶ ಬಂದಿದೆ. ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆಯರ ಸಾಮರ್ಥ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ನಾಳೆ (ಮಾರ್ಚ್​ 8) ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (International Women's day). ಎಲ್ಲೆಲ್ಲೂ ಮಹಿಳಾ ಸಬಲೀಕರಣದ ಮಾತು ಜೋರಾಗಿಯೇ ನಡೆಯುತ್ತಿದೆ. ಮಹಿಳೆಯರ ಸಾಧನೆ, ಪುರುಷರಿಗೆ ಸೀಮಿತವಾಗಿದ್ದ ಕ್ಷೇತ್ರಗಳಲ್ಲಿಯೂ ಮಹಿಳೆ ಹೆಜ್ಜೆ ಇಟ್ಟಿರುವುದು, ಮನೆಯ ಕೆಲಸದ ಜವಾಬ್ದಾರಿಗಳ ಜೊತೆ ಉದ್ಯೋಗವನ್ನೂ ನಿಭಾಯಿಸುವ ಪರಿ, ಗಂಡ-ಮಕ್ಕಳು, ಅತ್ತೆ-ಮಾವ ಎಲ್ಲರ ಜವಾಬ್ದಾರಿಯನ್ನೂ ಹೊತ್ತು ದೊಡ್ಡ ದೊಡ್ಡ ಹುದ್ದೆಗಳಲ್ಲಿಯೂ ಯಶಸ್ಸು ಗಳಿಸುತ್ತಿರುವ ಪರಿ... ಅಬ್ಬಾ... ಒಂದೇ ಎರಡೇ... ಮಹಿಳೆಯರ ಹೊಗಳಿಕೆಗೆ ಇದೊಂದು ದಿನ ದೊಡ್ಡ ವೇದಿಕೆಯಾಗುತ್ತದೆ. ಇಂದು ಮಹಿಳೆ ಕಾಲಿಡದ ಕ್ಷೇತ್ರವೇ ಇಲ್ಲಾ ಎಂದು ಆರಂಭವಾಗುವ ಭಾಷಣ,  ಆಕೆಯ ಹೊಗಳಿಕೆಯಿಂದಲೇ ಮುಕ್ತಾಯಗೊಳ್ಳುತ್ತದೆ. ಆದರೆ ವಾಸ್ತವದಲ್ಲಿ ನಿಜಕ್ಕೂ ಮಹಿಳೆಯರಿಗೆ ಪುರುಷರಂತೆಯೇ ಸ್ಥಾನಮಾನ ಸಿಗುತ್ತಿದೆಯೆ? ಆಕೆ ಎಲ್ಲಾ ರೀತಿಯ ಅರ್ಹತೆ ಪಡೆದಿದ್ದರೂ ಉನ್ನತ ಸ್ಥಾನದಲ್ಲಿ ಆಕೆಯನ್ನು ಇಡಲಾಗುತ್ತಿದೆಯೆ? ಉದ್ಯೋಗ ಸ್ಥಳವೇ ಆಗಿರಬಹುದು ಅಥವಾ ಸಾಮಾನ್ಯ ಕೆಲಸವೇ ಆಗಿರಬಹುದು... ಪುರುಷರಿಗೆ ಹೋಲಿಸಿದರೆ ಎಷ್ಟು ಕ್ಷೇತ್ರಗಳಲ್ಲಿ ಮಹಿಳೆ ಟಾಪ್​ಮೋಸ್ಟ್​ ಸ್ಥಾನದಲ್ಲಿ ಇದ್ದಾಳೆ ಎನ್ನುವ ಚರ್ಚೆಯೂ ಇದೇ ವೇಳೆ ನಡೆಯುತ್ತದೆ.
 
ಸೌಂದರ್ಯ ಕ್ಷೇತ್ರ ಸೇರಿದಂತೆ ಇಂಥದ್ದೇ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೆ ಮಹಿಳೆ ಮತ್ತು ಪುರುಷ ಇಬ್ಬರ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಬಂದಾಗ, ಯಾರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ? ಹೀಗೊಂದು ಪರೀಕ್ಷೆ ನಡೆಸಿದಾಗ ಶಾಕಿಂಗ್​ ವಿಷ್ಯ ರಿವೀಲ್​ ಆಗಿದೆ. cars24india ನಡೆಸಿದ ಪ್ರಯೋಗದಲ್ಲಿ ಜನರು ಮಹಿಳೆಯರಿಗಿಂತಲೂ ಪುರುಷನನ್ನೇ ಆಯ್ಕೆ ಮಾಡಿಕೊಳ್ಳುವ ವಿಷಯ ರಿವೀಲ್​ ಆಗಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಇದು ಪಾರ್ಕ್​ ಮಾಡುವ ಸಮಯದಲ್ಲಿ ಕಾರು ಚಾಲಕರು ಯಾರ ಕೈಗೆ ಕೀ ಕೊಡುತ್ತಾರೆ ಎಂಬ ಬಗ್ಗೆ ನಡೆಸಿದ ಪ್ರಯೋಗವಿದು.

ಸುಂದರಿಯರು ಹೆಚ್ಚಿರೋ ಭಾರತದ ರಾಜ್ಯ ಯಾವುದು ಗೊತ್ತಾ? ಕರ್ನಾಟಕಕ್ಕೆ ಸ್ಥಾನ ಇದ್ಯಾ? ಇಲ್ಲಿದೆ ಡಿಟೇಲ್ಸ್​

ಆರಂಭದಲ್ಲಿ ಸುಂದರ ಯುವತಿ ಮತ್ತು ಪಕ್ಕದಲ್ಲಿ ಓರ್ವ ಪುರುಷನನ್ನು ನಿಲ್ಲಿಸಲಾಗಿತ್ತು. ಕಾರು ಪಾರ್ಕಿಂಗ್​ ಮಾಡಲು ಬಂದ ಚಾಲಕರ ಪೈಕಿ ಶೇಕಡಾ 97 ಮಂದಿ ಆ ಪುರುಷನನ್ನೇ ಕರೆದು ಕೀಲಿಯನ್ನು ನೀಡಿದರು. ಇಬ್ಬರಿಗೂ ಒಂದೇ ರೀತಿಯ ಸಮವಸ್ತ್ರ ಧರಿಸಿ ಪಾರ್ಕಿಂಗ್​ ಜಾಗದಲ್ಲಿ ನಿಲ್ಲಿಸಲಾಗಿತ್ತು.  ಯುವ ಚಾಲಕರೂ ಕೀಲಿ ಕೊಡುವ ವಿಷಯ ಬಂದಾಗ ಪುರುಷನನ್ನೇ ಕರೆದು ಪಾರ್ಕ್​ ಮಾಡುವಂತೆ ಕೀಲಿಯನ್ನು ಆತನ ಕೈಗೆ ಇತ್ತರು.  ಸ್ವಲ್ಪ ಸಮಯದ ಬಳಿಕ ಇನ್ನಷ್ಟು ಪರೀಕ್ಷೆ ಮಾಡುವ ಸಲುವಾಗಿ ಅದೇ ಸುಂದರ ಯುವತಿಯಲ್ಲಿ ಅಲ್ಲಿಯೇ ಇಟ್ಟು ಪಕ್ಕದಲ್ಲಿ ವಯಸ್ಸಾದ ಅಜ್ಜನನ್ನು ನಿಲ್ಲಿಸಿದರು.  ಅದಕ್ಕೂ ಮುನ್ನ ಯುನಿಫಾರ್ಮ್​ ಇಲ್ಲದ ಮಧ್ಯವಯಸ್ಕನನ್ನು ನಿಲ್ಲಿಸಲಾಯಿತು. ಆತ ಉದ್ದೇಶಪೂರ್ವಕವಾಗಿ ಕೇರ್​ಲೆಸ್​ ಆಗಿ ಚಿಪ್ಸ್​ ತಿನ್ನುತ್ತಾ ನಿಂತಿದ್ದ. ಈಗಲೂ ಶಾಕಿಂಗ್​ ಫಲಿತಾಂಶ ಬಂದಿತ್ತು. ಬಂದವರೆಲ್ಲರೂ ಅವನನ್ನೇ ಕರೆದರೇ ವಿನಾ ಯುವತಿಯನ್ನು ಅಲ್ಲ, ಕೊನೆಗೆ ಅಜ್ಜ ಬಂದಾಗ ಅಜ್ಜನನ್ನೇ ಕರೆದು ಪಾರ್ಕ್​ ಮಾಡುವಂತೆ ಕೀಲಿ ಕೊಟ್ಟರೇ ವಿನಾ ಒಬ್ಬರೇ ಒಬ್ಬರು ಕೂಡ ಆ ಯುವತಿಯನ್ನು ಕರೆಯಲಿಲ್ಲ. ಕುತೂಹಲದ ವಿಷಯ ಏನೆಂದರೆ, ಅಲ್ಲಿ ಹಲವು ಮಹಿಳೆಯರೂ ಕಾರು ಚಲಾಯಿಸಿಕೊಂಡು ಬಂದಿದ್ದರು. ಅವರು ಕೂಡ ಪಾರ್ಕ್​  ಮಾಡಲು ಪುರುಷ ಇಲ್ಲವೇ ಅಜ್ಜನನ್ನು ಕರೆದರೇ ವಿನಾ ಆ ಯುವತಿಯನ್ನು ಕರೆಯಲಿಲ್ಲ. ಇನ್ನು ಯುವ ಚಾಲಕರು ಕೂಡ ಯುವತಿಯತ್ತ ದೃಷ್ಟಿ ಬೀರಿ ಒಂದು ನಗು ಚೆಲ್ಲಿರುವುದನ್ನು ವಿಡಿಯೋದಲ್ಲಿ ನೋಡಬಹುದು, ಆದರೆ ಕರೆದದ್ದು ಮಾತ್ರ ಪುರುಷ ಇಲ್ಲವೇ ಆ ವಯಸ್ಸಾದವರನ್ನು! 

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಥಹರೇವಾರಿ ಕಮೆಂಟ್ಸ್​ ಹರಿದಾಡುತ್ತಿದೆ. ವಿಚಿತ್ರ ಎಂದರೆ, ಈ ರೀತಿ ಮಾಡಿರುವುದರಲ್ಲಿ ಯಾವುದೇ ದೋಷ ಕಾಣಿಸುತ್ತಿಲ್ಲ ಎಂದು ಕಮೆಂಟ್​ ಹಾಕಿದವರೇ ಹೆಚ್ಚು! ಯುವತಿಯರಿಗೆ ಕೀ ಕೊಡುವಾಗ ಅಪ್ಪಿತಪ್ಪಿ ಟಚ್​ ಆಗಿಬಿಟ್ಟರೆ ಲೈಂ..ಕ ದೌರ್ಜನ್ಯದ ಕೇಸ್​ ಹಾಕಿ ಒಳಗೆ ಹಾಕಿಸಿಬಿಟ್ಟರೆ ಎನ್ನುವ ಭಯ ಇದ್ದೇಇರುತ್ತದೆ ಎಂದು ಕೆಲವರು ಬರೆದಿದ್ದರೆ, ಮಹಿಳೆಯರು ಗಾಡಿ ಓಡಿಸುವ ಪರಿಯನ್ನು ರಸ್ತೆಯ ಮೇಲೆ ನೋಡಿದರೆ ತಿಳಿಯುತ್ತದೆ, ಇನ್ನು ದುಬಾರಿ ಕಾರನ್ನು ಅವರ ಕೈಗೆ ಇತ್ತು ಕೊನೆಗೆ ಪಡಬಾರದ ಪಾಡು ಪಡುವುದು ಯಾರಿಗೆ ಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತಿದ್ದು, ಅದರಲ್ಲಿ ತಪ್ಪೇನಿಲ್ಲ ಎಂದೇ ಕಮೆಂಟ್​ ಮಾಡಿದವರು ಹೆಚ್ಚು!

 ನೋಡಲು ಚೆನ್ನಾಗಿಲ್ಲ, ಕಲರ್​ ಇಲ್ಲ ಎಂದು ತುಂಬಾ ಫೀಲಿಂಗ್​ ಇತ್ತು: ಮನದ ಮಾತು ಹೇಳಿದ್ದ ಅಪ್ಪು ವಿಡಿಯೋ ವೈರಲ್​!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!