ನಮ್ಮ ದೇಹದಲ್ಲಿ ಯಾವುದೇ ಬದಲಾವಣೆಯಾದ್ರೂ ಅದು ಸೂಕ್ಷ್ಮವಾಗಿ ನಮಗೆ ಸೂಚನೆ ನೀಡುತ್ತದೆ. ಕೆಲವರು ಅದನ್ನು ಪತ್ತೆ ಹಚ್ಚಿ, ಚಿಕಿತ್ಸೆ ಪಡೆದ್ರೆ ಮತ್ತೆ ಕೆಲವರು ವಿಫಲರಾಗ್ತಾರೆ. ಸ್ತನ್ಯಪಾನ ಮಾಡೋದು ಮಾತ್ರವಲ್ಲ ಅದ್ರ ಬಣ್ಣ ಯಾವುದು ಎಂಬುದು ತಿಳಿದಿರಬೇಕು. ಯಾಕೆಂದ್ರೆ ಬದಲಾಗುವ ಎದೆ ಹಾಲಿನ ಬಣ್ಣ ನಿಮ್ಮ ಆರೋಗ್ಯದ ಏರುಪೇರನ್ನು ಹೇಳುತ್ತದೆ.
ಈಗಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಕೆಲ ಕ್ಯಾನ್ಸರ್ ಕೊನೆ ಹಂತದಲ್ಲಿ ಪತ್ತೆಯಾಗ್ತಿದೆ. ಇದ್ರಿಂದ ರೋಗಿಗಳನ್ನು ಉಳಿಸಿಕೊಳ್ಳೋದು ಕಷ್ಟವಾಗುತ್ತದೆ. ಕ್ಯಾನ್ಸರ್ ಪತ್ತೆ ಮಾಡಲು ನಾನಾ ವಿಧಾನಗಳಿವೆ. ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲ ಬದಲಾವಣೆಗಳು ಕಾನ್ಸರ್ ಮುನ್ಸೂಚನೆ ನೀಡುತ್ತದೆ. ಎದೆ ಹಾಲಿನ ಮೂಲಕವೂ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯ ಸಂಕೇತವನ್ನೂ ಪತ್ತೆ ಮಾಡಬಹುದೇ ಎಂಬ ಪ್ರಶ್ನೆಯೊಂದು ಈಗ ಕಾಡ್ತಿದೆ.
ಇತ್ತೀಚಿಗೆ ನಡೆದ ಘಟನೆಯೊಂದು ಈ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಗರ್ಭಾವಸ್ಥೆ (Pregnancy) ಯ 32 ನೇ ವಾರದಲ್ಲಿ ಮಹಿಳೆಯೊಬ್ಬಳ ಎದೆ ಹಾಲಿನ ಬಣ್ಣ ಬದಲಾಗಿದೆ. ಅನುಮಾನಗೊಂಡ ಮಹಿಳೆ ಪರೀಕ್ಷೆ (Test) ನಡೆಸಿದಾಗ ಕ್ಯಾನ್ಸರ್ (Cancer) ಇರೋದು ಪತ್ತೆಯಾಗಿದೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೇಟ್ ಗ್ರೇಂಗರ್ ಗೆ ಈಗಾಗಲೇ ಮೂರು ಮಕ್ಕಳಿದ್ದಾರೆ. ಫೆಬ್ರವರಿ 25 ರಂದು ಅವರು ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆ ಎದೆ ಹಾಲಿನ ಬಣ್ಣ ಗುಲಾಬಿ ಬಣ್ಣಕ್ಕೆ ತಿರುಗಿತ್ತಂತೆ. ಅನುಮಾನ ಬಂದ ಗ್ರೇಂಗರ್, ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರಿಗೆ ಟ್ರಿಪಲ್ ನೆಗೆಟಿವ್ (Triple Negative) ಸ್ತನ ಕ್ಯಾನ್ಸರ್ ಇದೆ ಎಂಬುದು ತಿಳಿದುಬಂದಿದೆ.
Health Care: ಮತ್ತೆ ಮತ್ತೆ ಭಯ ಬೀಳುವುದು ಪ್ಯಾನಿಕ್ ಅಟ್ಯಾಕ್ ಆಗಿರಬಹುದು!
ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ : ಇದು ಬೇರೆ ಕ್ಯಾನ್ಸರ್ ಗಿಂತ ಬಹಳ ಭಿನ್ನವಾಗಿರುತ್ತವೆ. ಕ್ಯಾನ್ಸರ್ ಕೋಶಗಳು ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ರಿಸೆಪ್ಟರ್ಸ್, ಮತ್ತು ಹೆಚ್ ಇಆರ್ 2 ಪ್ರೋಟೀನ್‌ಗಳನ್ನು ಹೊಂದಿರದಿದ್ದಾಗ ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಈ ಕ್ಯಾನ್ಸರ್ ಸಾಮಾನ್ಯವಾಗಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ.
ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಲಕ್ಷಣವೇನು? : ಸ್ತನದಲ್ಲಿ ಊತ, ಅಸಹಜವಾಗಿ ಬೆಳೆಯುವ ಚರ್ಮ, ನಿಪ್ಪಲ್ ನಲ್ಲಿ ನೋವು, ನಿಪ್ಪಲ್ ಒಳಗೆ ಹೋಗುವುದು, ನಿಪ್ಪಲ್ ಸುತ್ತ ಒಣ ಮತ್ತು ಫ್ಲಾಕಿ ಚರ್ಮ, ನಿಪ್ಪಲ್ ನಲ್ಲಿ ಡಿಸ್ಜಾರ್ಜ್, ತೋಳಿನ ಕೆಳಗೆ ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು ಇದ್ರ ಲಕ್ಷಣವಾಗಿದೆ.
Healthy Food: ಬಹುಪಯೋಗಿ ಸಾಸಿವೆ ಮಾರಣಾಂತಿಕವೂ ಹೌದು
ಅಪಾಯಕಾರಿ ಈ ಕ್ಯಾನ್ಸರ್ : ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಅಪಾಯಕಾರಿ ಎಂದು ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಹೇಳಿದೆ. ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ವೇಗವಾಗಿ ಹರಡುತ್ತದೆ. ಉಳಿದ ಸ್ತನ ಕ್ಯಾನ್ಸರ್‌ಗೆ ಹೋಲಿಸಿದರೆ, ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಚಿಕಿತ್ಸೆಯ ನಂತರ ಮತ್ತೆ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆಯಂತೆ. ಈ ಕ್ಯಾನ್ಸರ್ ನಿಂದ ಬದುಕಿ ಬರುವ ಪ್ರಮಾಣ ಬಹಳ ಕಡಿಮೆ ಎನ್ನಬಹುದು. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಎಲ್ಲ ವಿಧದ ಸ್ತನ ಕ್ಯಾನ್ಸರ್ ನಲ್ಲಿ ಶೇಕಡಾ 10 – 15ರಷ್ಟು ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಇರುತ್ತದೆ ಎಂದು ತಜ್ಞರು ಹೇಳ್ತಾರೆ.
ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ನ ಕಾರಣಗಳು : ರಕ್ತ ಸಂಬಂಧಿಗಳಲ್ಲಿ ಈ ಖಾಯಿಲೆ ಮೊದಲೇ ಇದ್ದರೆ ನಿಮಗೆ ಬರುವ ಸಾಧ್ಯತೆಯಿರುತ್ತದೆ. BRCA1 ಮತ್ತು BRCA2 ಜೀನ್‌ಗಳು ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ ಈ ಸಮಸ್ಯೆ ಕಾಡುತ್ತದೆ. ತೂಕ ಹೆಚ್ಚಾದಾಗ, ಋತುಬಂಧದಲ್ಲಿ ವಿಳಂಬ, ವಿಕಿರಣಕ್ಕೆ ದೇಹವನ್ನು ಒಡ್ಡಿವುದು ಹಾಗೂ ಅಧಿಕ ಪ್ರಮಾಣದಲ್ಲಿ ಮದ್ಯ ಸೇವನೆ ಕೂಡ ಇದಕ್ಕೆ ಕಾರಣವಾಗುತ್ತದೆ. ಟ್ರಿಪಲ್ ನೆಗಟಿವ್ ಸ್ತನ ಕ್ಯಾನ್ಸರ್ ಅನ್ನು ಎದುರಿಸಲು ಕಾರ್ಡಮೋನಿನ್ ಬಹಳ ಪ್ರಯೋಜನಕಾರಿ. ಕಾರ್ಡಮೋನಿನ್ ನೈಸರ್ಗಿಕ ಸಂಯುಕ್ತವಾಗಿದ್ದು, ಇದು ಟ್ರಿಪಲ್ ನೆಗಟಿವ್ ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿ. ಇದರ ಅಂಶ ಏಲಕ್ಕಿ ಮತ್ತು ಶುಂಠಿಯಲ್ಲಿ ಕಂಡು ಬರುತ್ತದೆ.