Women Health : ಹೆರಿಗೆ ನಂತ್ರ ಮಮ್ಮಿ ಮೇಕ್ ಓವರ್ ಸರ್ಜರಿ ಮಾಡಿಸಿಕೊಳ್ಳೋದೇಕೆ?

Published : Apr 03, 2023, 02:26 PM IST
Women Health : ಹೆರಿಗೆ ನಂತ್ರ ಮಮ್ಮಿ ಮೇಕ್ ಓವರ್ ಸರ್ಜರಿ ಮಾಡಿಸಿಕೊಳ್ಳೋದೇಕೆ?

ಸಾರಾಂಶ

ಮಹಿಳೆ ದೇಹ ನೋಡ್ತಿದ್ದಂತೆ ಆಕೆ ತಾಯಿಯಾಗಿದ್ದಾಳೆ ಅನ್ನೋದನ್ನು ಹೇಳ್ಬಹುದು. ಯಾಕೆಂದ್ರೆ ಹೆರಿಗೆಯಾಗ್ತಿದ್ದಂತೆ ಆಕೆ ದೇಹದ ಆಕಾರದಲ್ಲಿ ಬದಲಾವಣೆ ಕಾಡುತ್ತದೆ. ಈ ಬದಲಾವಣೆಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ಮಹಿಳೆಯರು ಮಮ್ಮಿ ಮೇಕ್ ಓವರ್ ಗೆ ಮುಂದಾಗ್ತಿದ್ದಾರೆ.   

ತಾಯಿಯಾಗುವುದು ಮಹಿಳೆ ಜೀವನದಲ್ಲಾಗುವ ದೊಡ್ಡ ಬದಲಾವಣೆ. ಮಡಿಲಿಗೊಂದು ಮಗು ಬಂದ್ರೆ ಮಹಿಳೆ ಪ್ರಪಂಚ ಮರೆಯುತ್ತಾಳೆ. ಆದ್ರೆ ಗರ್ಭಧಾರಣೆಯಿಂದ ಹೆರಿಗೆವರೆಗೆ ಮಾತ್ರವಲ್ಲದೆ ಹೆರಿಗೆ ನಂತ್ರವೂ ಅನೇಕ ಸಮಸ್ಯೆಗಳನ್ನು ತಾಯಿ ಎದುರಿಸಬೇಕಾಗುತ್ತದೆ. ಗರ್ಭಧಾರಣೆ ನಂತ್ರ ಹಾರ್ಮೋನ್ ಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮಹಿಳೆ ದೇಹ ಮತ್ತು ಮನಸ್ಸು ಎರಡರಲ್ಲೂ ದೊಡ್ಡ ಮಟ್ಟದ ಬದಲಾವಣೆಯಾಗುತ್ತದೆ. ದೇಹದ ತೂಕ ಹೆಚ್ಚಾಗುವುದು, ಬೆನ್ನು, ಸೊಂಟ ನೋವು, ಸ್ತನದ ಆಕಾರ ಬದಲಾಗುವುದು ಹೀಗೆ ಅನೇಕ ಬದಲಾವಣೆಯನ್ನು ನಾನು ನೋಡಬಹುದು. ಪೂರ್ವ ಗರ್ಭಧಾರಣೆಯ ದೇಹವನ್ನು ಸಂಪೂರ್ಣವಾಗಿ ಮರಳಿ ಪಡೆಯಲು ಸಾಧ್ಯವಿಲ್ಲ. ಅನೇಕ ಮಹಿಳೆಯರು ಮತ್ತೆ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ. ಆಹಾರ ಮತ್ತು ವ್ಯಾಯಾಮದ ಮೂಲಕ  ನಿರಂತರ ಪ್ರಯತ್ನ ನಡೆಸುತ್ತಾರೆ. ಈಗಿನ ದಿನಗಳಲ್ಲಿ ಮಮ್ಮಿ ಮೇಕ್ ಓವರ್ ಸರ್ಜರಿ ಪ್ರಸಿದ್ಧಿ ಪಡೆಯುತ್ತಿದೆ. ನಾವಿಂದು ಮಮ್ಮಿ ಮೇಕ್ ಓವರ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಮಮ್ಮಿ ಮೇಕ್ ಓವರ್ (Mommy Makeover) ಸರ್ಜರಿ ಎಂದರೇನು? :
ಹೆರಿಗೆ  ನಂತ್ರ ದೇಹದಲ್ಲಿ ಆಗುವ ಬದಲಾವಣೆಗಳನ್ನು ಸರಿಪಡಿಸಲು ಮಮ್ಮಿ ಮೇಕ್ ಓವರ್ ಶಸ್ತ್ರಚಿಕಿತ್ಸೆ (Surgery) ಯ ಸಹಾಯ ಮಾಡುತ್ತದೆ. ಇದು ಒಂದು ರೀತಿಯ ಕಾಸ್ಮೆಟಿಕ್ ಪ್ಲಾಸ್ಟಿಕ್ ಸರ್ಜರಿ ಎನ್ನಬಹುದು. ಈ ಶಸ್ತ್ರ ಚಿಕಿತ್ಸೆ ಮೂಲಕ ದೇಹವನ್ನು ಮೊದಲಿನಂತೆಯೇ ಮಾಡಬಹುದು. ಹೊಟ್ಟೆ, ಸ್ತನ ಮತ್ತು ಯೋನಿ ಶಸ್ತ್ರಚಿಕಿತ್ಸೆ ಇದ್ರಲ್ಲಿ ಒಳಗೊಂಡಿದೆ.  ಗರ್ಭಾವಸ್ಥೆ (Pregnancy) ಯಲ್ಲಿ ಹೊಟ್ಟೆ ದೊಡ್ಡದಾಗುತ್ತದೆ. ಹೆರಿಗೆ (Childbirth) ಯ ನಂತರ ಈ ಸ್ಥಳದ ಅಂಗಾಂಶಗಳು ಸಡಿಲಗೊಳ್ಳುತ್ತವೆ. ಮಮ್ಮಿ ಮೇಕ್ ಓವರ್ ಶಸ್ತ್ರಚಿಕಿತ್ಸೆಯ ಅಂಗಾಂಶಗಳನ್ನು ಬಿಗಿಗೊಳಿಸುತ್ತದೆ. ಸ್ತನ್ಯಪಾನದಿಂದ ಸ್ತನ ಗಾತ್ರದಲ್ಲೂ ಬದಲಾವಣೆ ಕಂಡು ಬರುತ್ತದೆ. ಸ್ತನ (Breast) ದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಸ್ತನದ ಆಕಾರವನ್ನು ಮತ್ತೆ ಮರಳಿ ಪಡೆಯಲು ಬಹಳ ಕಷ್ಟ. ಮಮ್ಮಿ ಮೇಕ್ ಓವರ್ ಶಸ್ತ್ರಚಿಕಿತ್ಸೆಯು ಸ್ತನದ ಆಕಾರವನ್ನು ಸರಿಪಡಿಸಲು ನೆರವಾಗುತ್ತದೆ. ಮಮ್ಮಿ ಮೇಕ್ ಓವರ್ ಶಸ್ತ್ರಚಿಕಿತ್ಸೆ ಮೂಲಕ ಯಾವುದೇ ವಯಸ್ಸಿನ ಮಹಿಳೆಯರು ತಮ್ಮ ದೇಹದ ಆಕಾರ ಸುಧಾರಿಸಿಕೊಳ್ಳಬಹುದು. 

Womens Health: ಬೇಸಿಗೆಯಲ್ಲಿ ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆಯಿರಲಿ ವಿಶೇಷ ಕಾಳಜಿ

ಮಮ್ಮಿ ಮೇಕ್ ಓವರ್ ಶಸ್ತ್ರಚಿಕಿತ್ಸೆಯಲ್ಲಿ ಯಾವೆಲ್ಲ ಅಂಗಗಳ ಚಿಕಿತ್ಸೆ ಮಾಡಬಹುದು? : ಮಮ್ಮಿ ಮೇಕ್ ಓವರ್ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯರು ಬ್ರೆಸ್ಟ್ ಲಿಫ್ಟ್, ಬ್ರೆಸ್ಟ್ ಆಗ್ಮೆಂಟೇಶನ್, ಬ್ರೆಸ್ಟ್ ರಿಡಕ್ಷನ್, ಟಮ್ಮಿ ಟಕ್, ಲಿಪೊಸಕ್ಷನ್, ಲ್ಯಾಬಿಯಾಪ್ಲ್ಯಾಸ್ಟಿ ಸರ್ಜರಿಯನ್ನು ಮಾಡಲಾಗುತ್ತದೆ. 

ಯಾವಾಗ ಮತ್ತು ಯಾರು ಈ ಚಿಕಿತ್ಸೆಗೆ ಒಳಗಾಗಬಹುದು :  ವೈದ್ಯರ ಪ್ರಕಾರ, ಹೆರಿಗೆಯಾದ 6 ತಿಂಗಳ ನಂತರ ಅಥವಾ 1 ವರ್ಷದ ನಂತರ ತಾಯಂದಿರುವ ಮಮ್ಮಿ ಮೇಕ್ ಓವರ್ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ಸ್ತನ್ಯಪಾನವನ್ನು ನಿಲ್ಲಿಸಿದ ನಂತ್ರ ಈ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಧೂಮಪಾನ ಮಾಡುವ ಮಹಿಳೆಯರು ಈ ಚಿಕಿತ್ಸೆಗೆ ಒಳಗಾಗುವುದು ಅಪಾಯಕಾರಿ ಎಂದು ತಜ್ಞರು ಹೇಳ್ತಾರೆ. 

ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯರಲ್ಲಿ ಲೈಂಗಿಕ ಬಯಕೆ ಹೆಚ್ಚಾಗುತ್ತದಂತೆ ಹೌದಾ?

ಮಮ್ಮಿ ಮೇಕ್ ಓವರ್ ಸರ್ಜರಿಯ ಪ್ರಯೋಜನಗಳೇನು? :
•  ಈ ಶಸ್ತ್ರಚಿಕಿತ್ಸೆಯಲ್ಲಿ ತಾಯಿಯ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಮತ್ತು ಚರ್ಮವನ್ನು ತೆಗೆಯಲಾಗುತ್ತದೆ. 
• ಹೆರಿಗೆ ನಂತ್ರ ದೇಹ ಆಕಾರ ಕಳೆದುಕೊಂಡಿರುತ್ತದೆ. ಎಷ್ಟೇ ವ್ಯಾಯಾಮ, ಯೋಗಗಳನ್ನು ಮಾಡಿದ್ರೂ ಕೆಲವೊಂದು ಅಂಗವನ್ನು ಸರಿಪಡಿಸಲು ಸಾಧ್ಯವಿಲ್ಲ.  ಅಂಥ ಸಂದರ್ಭದಲ್ಲಿ ದೇಹದ ವಿನ್ಯಾಸವನ್ನು ಸರಿಪಡಿಸಲು ಈ ಶಸ್ತ್ರಚಿಕಿತ್ಸೆ ಸಹಾಯ ಮಾಡುತ್ತದೆ.  
• ಹೆರಿಗೆ ನಂತ್ರ ಹೊಟ್ಟೆಯಲ್ಲಿ ಅತಿ ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ. ಈ ಶಸ್ತ್ರಚಿಕಿತ್ಸೆಯ ಸಹಾಯದಿಂದ ಹೊಟ್ಟೆ ಮತ್ತು ಚರ್ಮದ ಮೇಲೆ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕಬಹುದು. ಇದು ಚರ್ಮವನ್ನು ಬಿಗಿಗೊಳಿಸುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!