ಹೆಣ್ಮಕ್ಕಳ ಕಷ್ಟ ನಿಮಗೇನು ಗೊತ್ತು, ಬ್ರಾ ಧರಿಸ್ಬೇಕು, ಪ್ಯಾಂಟಿ ಹಾಕ್ಬೇಕು, ಒಂದಲ್ಲ ಎರಡಲ್ಲ ಎನ್ನುವವರನ್ನು ನೀವು ನೋಡಿರಬಹುದು. ಪ್ಯಾಂಟಿ ಧರಿಸೋದು ಅಭ್ಯಾಸ. ಅದನ್ನ ಧರಿಸಲೇಬೇಕು ಎಂದೇನಿಲ್ಲ. ಅದನ್ನ ಹಾಕಿಕೊಳ್ಳದೆ ಹೋದ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚು.
ಕೆಲವೊಂದು ಅಭ್ಯಾಸಕ್ಕೆ ನಮ್ಮ ಮನಸ್ಥಿತಿ ಹಾಗೂ ನಮ್ಮ ಶರೀರಿ ಒಗ್ಗಿಕೊಂಡಿರುತ್ತದೆ. ಒಂದೇ ಕೆಲಸವನ್ನು ಪದೇ ಪದೇ ಮಾಡಿದರೆ ಅದು ಅಭ್ಯಾಸವಾಗುತ್ತದೆ. ನಂತ್ರ ಅದಿಲ್ಲದೆ ನಮಗೆ ಇರಲು ಸಾಧ್ಯವಾಗುವುದಿಲ್ಲ. ಬೆಳಿಗ್ಗೆ ಹಲ್ಲುಜ್ಜುವುದು, ಪ್ರತಿದಿನ ಟೀ ಕುಡಿಯುವುದು, ದಿನ ಪತ್ರಿಕೆ ಓದುವುದು, ವಾಟ್ಸ್ ಅಪ್ ಚೆಕ್ ಮಾಡೋದು ಹೀಗೆ ಕೆಲ ಅಭ್ಯಾಸ ಬಿಡೋದು ಸುಲಭವಲ್ಲ. ಒಳ ಉಡುಪು ಧರಿಸೋದು ಕೂಡ ಒಂದು ಅಭ್ಯಾಸವೆ ಆಗಿದೆ. ಒಳ ಉಡುಪು ಧರಿಸಬೇಕೆಂದು ಎಲ್ಲೂ ನಿಯಮವಿಲ್ಲ. ಆದ್ರೆ ಬಾಲ್ಯದಿಂದಲೇ ಪ್ಯಾಂಟಿ ಧರಿಸುವ ಜನರಿಗೆ ಅದನ್ನು ಬಿಡಲು ಸಾಧ್ಯವಾಗುವುದಿಲ್ಲ. ಪ್ಯಾಂಟಿ ಧರಿಸಿದ ನಂತ್ರವೇ ಬಟ್ಟೆ ಧರಿಸಬೇಕು, ಇದು ಅಲಿಖಿತ ನಿಯಮ. ಪ್ಯಾಂಟಿ ಇಲ್ಲದೆ ಐದು ನಿಮಿಷ ಇರಲು ಸಾಧ್ಯವಿಲ್ಲ ಎನ್ನುವವರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲ ಮಹಿಳೆಯರು ಬ್ರಾ ಧರಿಸೋದನ್ನು ಬಿಟ್ಟಿದ್ದಾರೆ. ಆದ್ರೆ ಪ್ಯಾಂಟಿ ಧರಿಸದೆ ಇರೋದು ಕಷ್ಟ ಎನ್ನುತ್ತಾರೆ. ಅಷ್ಟಕ್ಕೂ ಈ ಪ್ಯಾಂಟಿ ಧರಿಸದೆ ಹೋದ್ರೆ ಏನಾಗುತ್ತೆ ಎಂಬುದನ್ನು ನಾವಿಂದು ಹೇಳ್ತೇವೆ.
ಪ್ಯಾಂಟಿ (Panty) ಧರಿಸದೆ ಹೋದ್ರೆ ಏನಾಗುತ್ತೆ ಎಂಬುದನ್ನು ನೋಡೋಣ.
ಕಡಿಮೆಯಾಗುತ್ತೆ ಸೋಂಕಿ (Infection) ನ ಅಪಾಯ : ಯಸ್, ಅನೇಕರು ಪ್ಯಾಂಟಿ ಧರಿಸದೆ ಹೋದ್ರೆ ಸೋಂಕು ಕಾಡುತ್ತೆ ಎಂದುಕೊಂಡಿದ್ದಾರೆ. ಆದ್ರೆ ಅದು ತಪ್ಪು. ಪ್ಯಾಂಟಿ ಧರಿಸಿದ್ರೆ ಸೋಂಕಿನ ಅಪಾಯ ಹೆಚ್ಚು. ಸಿಂಥೆಟಿಕ್ ಒಳ ಉಡುಪುಗಳನ್ನು ಧರಿಸಿದರೆ ಸೋಂಕಿನ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಗಾಳಿಯಾಡಲು ಇಲ್ಲಿ ಅವಕಾಶವಿರುವುದಿಲ್ಲ. ಇದರಿಂದ ತೇವಾಂಶ ಉಳಿಯುತ್ತದೆ. ಇದ್ರಿಂದ ಸೋಂಕು ಹೆಚ್ಚಾಗುತ್ತದೆ.
ಕಿರಿಕಿರಿ ಕಡಿಮೆ : ಪ್ರತಿ ದಿನ ಜೀನ್ಸ್ (Jeans) ಧರಿಸುವ ಮಹಿಳೆಯರು ಪ್ಯಾಂಟಿ ಧರಿಸಲೇಬೇಕು. ಇಲ್ಲವೆಂದ್ರೆ ಅವರು ಕಿರಿಕಿರಿ ಅನುಭವಿಸುತ್ತಾರೆ. ಅದೇ ಮೃದುವಾದ ಬಟ್ಟೆ ಧರಿಸುವ ಮಹಿಳೆಯರು ಪ್ಯಾಂಟಿ ಧರಿಸಬೇಕೆಂದೇನೂ ಇಲ್ಲ. ಪ್ಯಾಂಟಿ ಇಲ್ಲದೆ ಹೋದ್ರೆ ಯೋನಿ ಕಿರಿಕಿರಿ ಕಡಿಮೆಯಾಗುತ್ತದೆ.
ಗರ್ಭಿಣಿ ಉಪವಾಸ ಮಾಡೋದ್ರಿಂದ ಮಗುವಿನ ಮೇಲಾಗುವ ಪರಿಣಾಮ ಗೊತ್ತೇ ?
ಹೆಚ್ಚು ಆರಾಮ : ಪ್ಯಾಂಟಿ ಧರಿಸದೆ ಬಟ್ಟೆ ಧರಿಸೋದು ಅನೇಕರಿಗೆ ಕಷ್ಟ. ಆರಂಭದಲ್ಲಿ ವಿಚಿತ್ರ ಅನುಭವ ನೀಡಬಹುದು. ಆದ್ರೆ ಕೆಲವೇ ದಿನಗಳಲ್ಲಿ ಇದು ಅಭ್ಯಾಸವಾದ್ರೆ ನಿಮಗೆ ಆರಾಮವೆನ್ನಿಸುತ್ತದೆ. ಪ್ಯಾಂಟಿ ಧರಿಸಿದ್ದಕ್ಕಿಂತ ಧರಿಸದೆ ಇದ್ದಾಗ ನೀವು ಆರಾಮದಾಯಕ ಅನುಭವ ಪಡೆಯುತ್ತೀರಿ. ಯಾಕೆಂದ್ರೆ ತೇವದ ಸಮಸ್ಯೆ ಇರೋದಿಲ್ಲ.
ಕಡಿಮೆಯಿರುತ್ತೆ ಯೋನಿ ವಾಸನೆ : ಬಹುತೇಕ ಮಹಿಳೆಯರು ಯೋನಿ ವಾಸನೆಯಿಂದ ಬಳಲುತ್ತಾರೆ. ಇದು ಅವರಲ್ಲಿ ನಾಚಿಕೆ, ಕಿರಿಕಿರಿಯುಂಟು ಮಾಡುತ್ತದೆ. ಸಾಮಾನ್ಯವಾಗಿ ಒಳ ಉಡುಪುಗಳು ತೇವಾಂಶಗೊಂಡಿದ್ದಾಗ ಯೋನಿಯಿಂದ ಬರುವ ವಾಸನೆ ಹೆಚ್ಚಾಗುತ್ತದೆ. ಈ ತೇವಾಂಶ ಇಲ್ಲದಿದ್ದರೆ ವಾಸನೆಯೂ ಕಡಿಮೆ. ಪ್ಯಾಂಟಿ ಧರಿಸದೆ ಹೋದ್ರೆ ತೇವಾಂಶ ಕಾಡುವುದಿಲ್ಲ. ಹಾಗಾಗಿ ವಾಸನೆ ಕಡಿಮೆಯಾಗುತ್ತದೆ.
ಇದನ್ನು ನೆನಪಿಡಿ : ಎಲ್ಲ ಸಮಯದಲ್ಲೂ ಪ್ಯಾಂಟಿ ಧರಿಸದೆ ಇರೋದು ಸೂಕ್ತವಲ್ಲ. ಪಿರಿಯಡ್ಸ್ (Panties) ಸಮಯದಲ್ಲಿ ಪ್ಯಾಂಟಿ ಧರಿಸಬೇಕಾಗುತ್ತದೆ. ಜೀನ್ಸ್ ಅಥವಾ ಗಟ್ಟಿಯಾದ ಬಟ್ಟೆಗಳನ್ನು ಧರಿಸಿದಾಗ ನೀವು ಪ್ಯಾಂಟಿ ಧರಿಸಬೇಕು. ಇಲ್ಲವೆಂದ್ರೆ ಯೋನಿಗೆ (Vagina) ಹಾನಿಯಾಗುತ್ತದೆ. ಹೆಚ್ಚು ಡಿಸ್ಚಾರ್ಜ್ ಆಗ್ತಿರುವ ಸಮಯದಲ್ಲಿ ಕೂಡ ನೀವು ಪ್ಯಾಂಟಿ ಧರಿಸುವುದು ಬಹಳ ಮುಖ್ಯ.
ಚಡ್ಡಿದೋಸ್ತ್ ಜತೆ ಜಗಳವಾದ್ರೆ ಸಾರಿ ಕೇಳದಿದ್ರೂ ಪರ್ವಾಗಿಲ್ಲ, ಸ್ನೇಹ ಮುರಿದುಕೊಳ್ಳಬೇಡಿ!
ವೈದ್ಯರನ್ನು ಸಂಪರ್ಕಿಸಿ : ಪ್ಯಾಂಟಿ ಧರಿಸಲು ಇಷ್ಟವಿಲ್ಲ ಎಂದಾದ್ರೆ ಅಥವಾ ಕಡಿಮೆ ಸಮಯ ಪ್ಯಾಂಟಿ ಧರಿಸ್ತೇನೆ ಎನ್ನುವವರು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ವೈದ್ಯರನ್ನು ಭೇಟಿಯಾಗಿ. ವೈದ್ಯರ ಸಲಹೆ ನಂತ್ರ ನೀವು ಪ್ಯಾಂಟಿ ಧರಿಸಬೇಕೇ ಬೇಡ್ವೇ ಎಂಬುದನ್ನು ತೀರ್ಮಾನಿಸಿ. ಯಾಕೆಂದ್ರೆ ಎಲ್ಲರ ಆರೋಗ್ಯ ಸ್ಥಿತಿ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಪ್ಯಾಂಟಿ ಧರಿಸುವುದು ಅನಿವಾರ್ಯವಾಗಿರಬಹುದು.