ಚೀನಾದ ಹ್ಯುಂಗ್ಲೌ ಗ್ರಾಮದ ಮಹಿಳೆಯರೆಲ್ಲರೂ ಸೊಂಪಾದ ಕೂದಲಿನ ಒಡತಿಯರು. ಬರೋಬ್ಬರಿ 5-7 ಅಡಿ ಉದ್ದದ, ಕಪ್ಪನೆಯ, ದಟ್ಟವಾದ ಕೂದಲು ಎಂಥವರನ್ನೂ ಸೆಳೆಯುತ್ತದೆ.
ಕೂದಲು (Hair) ದಟ್ಟ(Thick)ವಾಗಿ, ಕಪ್ಪಗೆ (Black), ಮೋಡಿ ಮಾಡುವಂತಿರಬೇಕು ಎನ್ನುವುದು ಬಹುತೇಕ ಹೆಮ್ಮಕ್ಕಳ ಬಯಕೆ. ಕೂದಲಿನ ಆರೋಗ್ಯಕ್ಕಾಗಿ ಏನೆಲ್ಲ ಪ್ರಯತ್ನ ಮಾಡಿದರೂ ಕಪ್ಪಾಗದೆ, ದಟ್ಟವಾಗದೆ, ಉದ್ದವೂ ಬೆಳೆಯದೆ ಸೋತವರಿದ್ದಾರೆ. ಕ್ಲೋರಿನ್ ಯುಕ್ತ ನೀರು, ಹಾನಿಕಾರಕ (Unhealthy) ಶ್ಯಾಂಪೂಗಳು, ಮಾಲಿನ್ಯ(Pollution), ಹಾಗೂ ರಾಸಾಯನಿಕಭರಿತ ಆಹಾರದಿಂದಾಗಿ ಕೂದಲು ಏನೇ ಮಾಡಿದರೂ ಇಂದಿನ ದಿನಗಳಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ. ಚೆಂದನೆಯ ಕೂದಲಿಗಾಗಿ ದುಬಾರಿ ಚಿಕಿತ್ಸೆ(Treatment)ಗಳ ಮೊರೆ ಹೋಗುವವರೂ ಇದ್ದಾರೆ. ಹೀಗಾಗಿ, ಅಪರೂಪಕ್ಕೆ ಯಾರಾದರೂ ಉದ್ದ ಕೂದಲಿನ ಲಲನೆಯರು ಕಂಡರೆ ಸಣ್ಣದೊಂದು ಹೊಟ್ಟೆಉರಿ ಸಹಜ.
ಚೀನಾ(China)ದಲ್ಲೊಂದು ಊರಿದೆ. ಇಲ್ಲಿನ ಮಹಿಳೆ(Women)ಯರಿಗೆ ಉದ್ದ ಕೂದಲನ್ನು ಬೆಳೆಸುವುದು, ಮೆಂಟೇನ್ ಮಾಡುವುದು ಅತಿ ಸುಲಭ. ಉದ್ದನೆಯ ಕಪ್ಪನೆಯ ಕೂದಲು ಅವರ ಸಂಪ್ರದಾಯದ ಭಾಗವೂ ಹೌದು. ಅವರ ಕೂದಲನ್ನು ನೋಡಿದರೆ ಎಂಥವರೂ ಮೂಕವಿಸ್ಮಿತರಾಗಬೇಕು, ಹಾಗಿರುತ್ತದೆ.
ದಕ್ಷಿಣ ಚೀನಾದ ಗುಲಿನ್ (Guilin) ನಗರದಿಂದ ಹ್ಯುಂಗ್ಲೌ (Huangluo) ಗ್ರಾಮಕ್ಕೆ 2 ತಾಸಿನ ಹಾದಿ. ಇಲ್ಲಿನ ಎಲ್ಲ ಮಹಿಳೆಯರೂ 5ರಿಂದ 7 ಅಡಿ ಉದ್ದದ ಕೂದಲನ್ನು ಅತ್ಯಂತ ಸಾಮಾನ್ಯವಾಗಿ ಹೊಂದಿರುತ್ತಾರೆ. ಇವರ ಕೂದಲಿನ ಭಾರ ಬರೋಬ್ಬರಿ 1 ಕೆಜಿ ತೂಗುವುದೂ ಇದೆ! ಈ ಮಹಿಳೆಯರ ಕೂದಲಿನ ಕಾರಣಕ್ಕಾಗಿಯೇ ಈ ಗ್ರಾಮ 'ವಿಶ್ವದ ಅತಿ ಉದ್ದದ ಕೂದಲಿನ ಗ್ರಾಮ’ ಎಂದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ (Guinnes Book of World Records) ಗೂ ಸೇರ್ಪಡೆಯಾಗಿದೆ.
ಯಾವೋ (Yao) ಜನಾಂಗಕ್ಕೆ ಸೇರಿರುವ ಈ ಮಹಿಳೆಯರಿಗೆ ಕೂದಲನ್ನು ಬೆಳೆಸುವುದು ಹವ್ಯಾಸವಲ್ಲ, ಬದಲಿಗೆ ಸಂಪ್ರದಾಯ(Tradition). ಹೆಣ್ಣುಮಕ್ಕಳಿಗೆ 17-18 ವರ್ಷವಾದಾಗ ಸಮಾರಂಭವೊಂದನ್ನು ಆಯೋಜಿಸಲಾಗುತ್ತದೆ. ಆ ಸಮಯದಲ್ಲಿ ಅವರ ಕೂದಲನ್ನು ಕತ್ತರಿಸಲಾಗುತ್ತದೆ. ಅಜ್ಜಿ ಅಥವಾ ಮನೆಯ ಹಿರಿಯ ಮಹಿಳೆಯರು ಹುಡುಗಿಯ ಕೂದಲನ್ನು ಕತ್ತರಿಸುತ್ತಾರೆ. ಈ ಸಮಾರಂಭದ ಉದ್ದೇಶವೆಂದರೆ, ಹುಡುಗಿ ಮದುವೆಯಾಗಲು ಸಿದ್ಧಳಾಗಿದ್ದಾಳೆ ಎನ್ನುವ ಸಂದೇಶ ನೀಡುವುದು. ಮದುವೆಯ ಸಂದರ್ಭದಲ್ಲಿ ಕತ್ತರಿಸಿದ ಕೂದಲನ್ನು ಚೆಂದನೆಯ ಗಿಫ್ಟ್ ಬಾಕ್ಸ್ ನಲ್ಲಿಟ್ಟು, ಉಡುಗೊರೆಯಾಗಿ ನೀಡಲಾಗುತ್ತದೆ. ಅದೇ ಕೊನೆ, ಹುಡುಗಿ ಜೀವನದಲ್ಲಿ ಮತ್ತೆಂದೂ ತನ್ನ ಕೂದಲನ್ನು ಕತ್ತರಿಸುವಂತಿಲ್ಲ.
Fame ಪಡೆದ ನಟಿಯರ ಜೀವನದ ಸಮಸ್ಯೆ, ಸಮಂತಾ ವ್ಯಥೆ ಇದು!
ವಿಚಿತ್ರ ನಂಬಿಕೆ (Belief)
ಕೂದಲನ್ನು ಹಾಗೆ ಉದ್ದ ಬೆಳೆಸುವುದಕ್ಕೆ ಒಂದು ವಿಚಿತ್ರವೆನ್ನಿಸುವ ಕಾರಣವಿದೆ. ಕೂದಲೆಂದರೆ, ಕುಟುಂಬದ ಹಿರಿಯರೊಂದಿಗೆ ಬೆಸೆಯುವ ಮಾಧ್ಯಮ(Medium)ವನ್ನಾಗಿ ಅವರು ಪರಿಗಣಿಸುತ್ತಾರೆ! ಕೂದಲು ಬೆಳೆಯುತ್ತಿರುವ ಸಮಯದಲ್ಲಿ ಹುಡುಗಿಯರು ತಮ್ಮ ಪೂರ್ವಿಕರ ಆಶೀರ್ವಾದ ಕೋರುತ್ತಾರೆ. ಅಚ್ಚರಿಯೆಂದರೆ, ಆ ಬಳಿಕ ಕೂದಲು ಚೆನ್ನಾಗಿ ಬೆಳೆಯುವುದಷ್ಟೇ ಅಲ್ಲ, ಅವರಿಗೆ 80 ವರ್ಷವಾಗುವವರೆಗೂ ನೆರೆ(Grey)ಯುವುದೂ ಇಲ್ಲ!
Stomach cancer: ಇದ್ದಕ್ಕಿದ್ದಂಗೆ ತೂಕ ಇಳೀತಿದ್ರೆ ಇಗ್ನೋರ್ ಮಾಡ್ಬೇಡಿ!
ಆದಾಯ(Income)ದ ಮಾರ್ಗ (Way)
ಮದುವೆಗೂ ಮುನ್ನ ಗ್ರಾಮದ ಹೆಣ್ಣುಮಕ್ಕಳು ಕೂದಲನ್ನು ಎತ್ತಿ ಕಟ್ಟಿ ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರೆ. ಮದುವೆಯ ನಂತರ ಮುಂಭಾಗದಿಂದ ಬಿಗಿದುಕೊಳ್ಳುತ್ತಾರೆ. ಹಿಂದೆಲ್ಲ ತಮ್ಮ ಪತಿ ಹಾಗೂ ಮಕ್ಕಳಿಗೆ ಮಾತ್ರ ಹೆಣ್ಣುಮಕ್ಕಳ ಕೂದಲಿನ ದರ್ಶನವಾಗುತ್ತಿತ್ತು. ಬೇರ್ಯಾರಿಗೂ ಅದನ್ನು ಪ್ರದರ್ಶಿಸುತ್ತಿರಲಿಲ್ಲ. ಆದರೆ, 1980ರ ದಶಕದಿಂದ ಚೀನಾದ ಈ ಗ್ರಾಮಕ್ಕೆ ಪ್ರವಾಸಿಗರ ದಂಡು ಬರತೊಡಗಿತು. ಕೂದಲಿನಿಂದಾಗಿ ಮಹಿಳೆಯರಿಗೆ ಲಾಭವಾಗಲು ಶುರುವಾಯಿತು. ಹೀಗಾಗಿ, ಆ ಸಮಯದಿಂದ ಕೂದಲನ್ನು ಮುಚ್ಚಿಟ್ಟುಕೊಳ್ಳುವ ಪದ್ಧತಿಗೆ ತಿಲಾಂಜಲಿ ಇಟ್ಟರು.
ಅಕ್ಕಿಯ ಶ್ಯಾಂಪೂ (Shampoo) ಮತ್ತು ತಣ್ಣನೆ ನೀರು (Cold Water)
ಅಷ್ಟಕ್ಕೂ ಈ ಮಹಿಳೆಯರ ಉದ್ದ ಕೂದಲಿನ ಆರೋಗ್ಯದ ಗುಟ್ಟು ಗೊತ್ತೇನು? ಅಕ್ಕಿ ತೊಳೆದ ನೀರಿನಿಂದ ಮಾಡಿದ ಶ್ಯಾಂಪೂ ಹಾಗೂ ತಣ್ಣನೆಯ ನೀರಿನ ಸ್ನಾನ. ಇದನ್ನು ಹೊರತು ಪಡಿಸಿದರೆ ಬೇರೆ ಯಾವ ಮಾರ್ಗವನ್ನೂ ಅವರು ಅನುಸರಿಸುವುದಿಲ್ಲ. ಅಕ್ಕಿಯ ನೀರಿಗೆ ಟೀ, ತುಪ್ಪಳ ಹಾಗೂ ಕೆಲವು ಮೂಲಿಕೆಗಳನ್ನು ಹಾಕಿ ಶ್ಯಾಂಪೂ ತಯಾರಿಸಲಾಗುತ್ತದೆ. ಇದರಿಂದ ಕೂದಲನ್ನು ತೊಳೆದುಕೊಂಡು, ನದಿ ನೀರಿನ ಸ್ನಾನ ಮಾಡುತ್ತಾರೆ.