ಗರ್ಭಕೋಶ ಶಸ್ತ್ರಚಿಕಿತ್ಸೆ ನಂತ್ರ Sex Life ಹೇಗಿರುತ್ತೆ?

By Suvarna NewsFirst Published Jan 8, 2022, 4:24 PM IST
Highlights

 ಹಾರ್ಮೋನುಗಳ ಬದಲಾವಣೆಯನ್ನು ಮಹಿಳೆಯರು ಸದಾ ಎದುರಿಸುತ್ತಾರೆ. ಗರ್ಭಕೋಶದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಗರ್ಭಕೋಶ ತೆಗೆಯಬೇಕು ಎಂದಾಗ ಪ್ರತಿಯೊಬ್ಬ ಮಹಿಳೆಗೆ ಭಯ ಕಾಡುತ್ತದೆ. ಆಕೆ ತಲೆಯಲ್ಲಿ ಅನೇಕ ಪ್ರಶ್ನೆಗಳೆದ್ದಿರುತ್ತವೆ.

ಪ್ರತಿ ವರ್ಷ ಅನೇಕ ಮಹಿಳೆ (Woman)ಯರು ಗರ್ಭಕೋಶ ಶಸ್ತ್ರಚಿಕಿತ್ಸೆ (Hysterectomy)ಗೆ ಒಳಗಾಗ್ತಾರೆ. ಚಿಕಿತ್ಸೆ (Treatment )ವೇಳೆ ಮಹಿಳೆಯರ ಗರ್ಭಕೋಶವನ್ನು ತೆಗೆಯಲಾಗುತ್ತದೆ. ಇದ್ರ ನಂತ್ರ ಆರೋಗ್ಯ(Health)ದ ಬಗ್ಗೆ ಆಲೋಚನೆ ಮಾಡುವ ಮಹಿಳೆಯರು ಲೈಂಗಿಕ ಜೀವನದ ಬಗ್ಗೆಯೂ ಚಿಂತಿಸುತ್ತಾರೆ. ಗರ್ಭಕೋಶ ತೆಗೆದ ನಂತ್ರ ಲೈಂಗಿಕ ಕ್ರಿಯೆ (Sex )ನಡೆಸುವುದು ಎಷ್ಟು ಸೂಕ್ತ? ಇದ್ರರಿಂದ ಆಗುವ ಸಮಸ್ಯೆಯೇನು? ಇದು ಸಂಪೂರ್ಣ ತೃಪ್ತಿ ನೀಡಬಲ್ಲದೆ? ಹೀಗೆ ಅನೇಕ ಪ್ರಶ್ನೆಗಳು ಏಳಲು ಶುರುವಾಗುತ್ತವೆ.

ಗರ್ಭಕೋಶ ತೆಗೆದ ನಂತ್ರವೂ ಸಂಭೋಗ ಬೆಳೆಸಬಹುದು. ಈ ಶಸ್ತ್ರಚಿಕಿತ್ಸೆ ನಂತ್ರ ಕೆಲ ಮಹಿಳೆಯರ ಲೈಂಗಿಕ ಜೀವನದಲ್ಲಿ ಸಕಾರಾತ್ಮಕ ಪ್ರಭಾವವಾಗುತ್ತದೆ. ವಿಶೇಷವಾಗಿ ಶಸ್ತ್ರಚಿಕಿತ್ಸೆಗೆ ಮೊದಲು ಲೈಂಗಿಕ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯರು ಶಸ್ತ್ರಚಿಕಿತ್ಸೆ ನಂತ್ರ ನಿರಾಳರಾಗ್ತಾರೆ. ಇದು ಪ್ರತಿಯೊಬ್ಬರಿಗೂ ಅನ್ವಯಿಸುವುದಿಲ್ಲ.  ಕೆಲವು ಮಹಿಳೆಯರು ಶಸ್ತ್ರಚಿಕಿತ್ಸೆಯ ನಂತರ ಸಾಮಾನ್ಯ ಅಡ್ಡ ಪರಿಣಾಮಗಳನ್ನು ಅನುಭವಿಸಬಹುದು. ಇದು ಆರಂಭದಲ್ಲಿ ಸಂಭೋಗದ ಮೇಲೆ ಪರಿಣಾಮ ಬೀರಬಹುದು. ಗರ್ಭಕೋಶ ಶಸ್ತ್ರಚಿಕಿತ್ಸೆ ನಂತರ ಲೈಂಗಿಕ ಜೀವನದ ಮೇಲೆ ಏನೆಲ್ಲ ಪರಿಣಾಮವಾಗುತ್ತದೆ ಎಂಬುದು ಇಲ್ಲಿದೆ.

ಗರ್ಭಕೋಶ ಶಸ್ತ್ರಚಿಕಿತ್ಸೆ ನಂತ್ರ ಸೆಕ್ಸ್ ಗೆ ಎಷ್ಟು ದಿನ ಕಾಯಬೇಕು?
ಗರ್ಭಕೋಶದ ಶಸ್ತ್ರಚಿಕಿತ್ಸೆ ನಂತರ ಸುಮಾರು 6 ವಾರಗಳವರೆಗೆ ಮಹಿಳೆಯು ಯೋನಿ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆಪರೇಷನ್ ನಂತ್ರ ಚೇತರಿಸಿಕೊಳ್ಳಲು ಸರಾಸರಿ 6 ರಿಂದ 8 ವಾರ ಬೇಕಾಗುತ್ತವೆ. ಯೋನಿ ಡಿಸ್ಚಾರ್ಜ್ ನಿಲ್ಲುವವರೆಗೆ ಮತ್ತು ಗಾಯವು ವಾಸಿಯಾಗುವವರೆಗೆ ಮಹಿಳೆಯರು ಲೈಂಗಿಕ ಚಟುವಟಿಕೆಯಿಂದ ದೂರವಿರಬೇಕು. ಕೆಲವು ಮಹಿಳೆಯರು ಶಸ್ತ್ರಚಿಕಿತ್ಸೆಯ ನಂತರ ಹಲವಾರು ವಾರಗಳವರೆಗೆ ಯೋನಿ ರಕ್ತಸ್ರಾವ ಮತ್ತು ನೋವನ್ನು ಅನುಭವಿಸಬಹುದು. ಲೈಂಗಿಕ ಆಸಕ್ತಿ ಕೂಡ ಕಡಿಮೆಯಾಗುವ ಸಾಧ್ಯತೆಯಿದೆ. ಆದ್ರೆ ಇದು ಪ್ರತಿ ಮಹಿಳೆಯಲ್ಲೂ ಒಂದೇ ರೀತಿಯಿರುವುದಿಲ್ಲ. 

ಗರ್ಭಕೋಶ ಶಸ್ತ್ರಚಿಕಿತ್ಸೆ ನಂತ್ರ ಏನಾಗುತ್ತದೆ?
ಶಸ್ತ್ರಚಿಕಿತ್ಸೆ ನಂತ್ರ ಆ ಜಾಗದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಆದ್ರೆ ಇದು ಲೈಂಗಿಕತೆಯನ್ನು ಆನಂದಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಸಾಮಾನ್ಯವಾಗಿ, ಗರ್ಭಕೋಶದ ಶಸ್ತ್ರಚಿಕಿತ್ಸೆ ಯೋನಿಯ ಸಂವೇದನೆ ಅಥವಾ ಮಹಿಳೆಯ ಸಂಭೋಗದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಯೋನಿಯ ಗಾತ್ರವು ಸ್ವಲ್ಪ ದೊಡ್ಡದಾಗುತ್ತದೆ. 
ಗರ್ಭಕೋಶದ ಶಸ್ತ್ರ ಚಿಕಿತ್ಸೆ ನಂತರ ಸಂಭೋಗದ ವೇಳೆ ರಕ್ತಸ್ರಾವ ಆಗುವುದಿಲ್ಲ. ಒಂದು ವೇಳೆ ರಕ್ತಸ್ರಾವವಾದಲ್ಲಿ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಶಸ್ತ್ರಚಿಕಿತ್ಸೆಯು ವೈದ್ಯಕೀಯವಾಗಿ ಕಾಡುವ  ಲೈಂಗಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಸಂಭೋಗವನ್ನು ಆರಾಮದಾಯಕವಾಗಿಸುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಸೆಕ್ಸ್ ಮೊದಲಿಗಿಂತ ಆರಾಮ ನೀಡುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ.  

ಗರ್ಭಕೋಶದ ಶಸ್ತ್ರಚಿಕಿತ್ಸೆ ನಂತ್ರ ಕಾಡುವ ಸಮಸ್ಯೆ : ಕೆಲವೇ ಕೆಲವು ಮಹಿಳೆಯರಿಗೆ ಸಂಭೋಗದ ವೇಳೆ ಕೆಲ ಸಮಸ್ಯೆ ಕಾಡುತ್ತದೆ. 

Relationship Tips: ಹುಡುಗಿ ಹುಡುಗನಿಂದ ನಿಜಕ್ಕೂ ಬಯಸೋದೇನು?

ಕಡಿಮೆಯಾಗುವ ಸೆಕ್ಸ್ ಆಸಕ್ತಿ : ಗರ್ಭಕೋಶ ಶಸ್ತ್ರಚಿಕಿತ್ಸೆ ನಂತರ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗಲು ಮುಖ್ಯ ಕಾರಣ ಈಸ್ಟ್ರೊಜೆನ್. ಗರ್ಭಾಶಯ ತೆಗೆದು ಹಾಕುವುದರಿಂದ ಈಸ್ಟ್ರೊಜೆನ್ ಹಾರ್ಮೋನ್ ಕಡಿಮೆಯಾಗುತ್ತದೆ. ಈಸ್ಟ್ರೊಜೆನ್  ಮಹಿಳೆಯರಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿ ಬೆಳವಣಿಗೆಗೆ ಮುಖ್ಯವಾಗಿದೆ.

ಯೋನಿ ಶುಷ್ಕತೆ : ಗರ್ಭಕೋಶದ ಶಸ್ತ್ರಚಿಕಿತ್ಸೆ ನಂತರ ಕೆಲವು ಮಹಿಳೆಯರು ಯೋನಿ ಶುಷ್ಕತೆಯನ್ನು ಅನುಭವಿಸುತ್ತಾರೆ. ಇದರಿಂದ ಸಂಭೋಗ ಬೆಳೆಸುವಾಗ ನೋವಾಗುತ್ತದೆ. ಆದ್ರೆ ಇದಕ್ಕೆ ಪರಿಹಾರವಿದೆ. ಲೂಬ್ರಿಕಂಟ್‌ಗಳನ್ನು ಇದಕ್ಕೆ ಬಳಸಬಹುದು.  

Sarvangasana Benefits : ಬೆನ್ನು ನೋವಿನ ಸಮಸ್ಯೆಗೆ ಸರ್ವಾಂಗಾಸನ ಬೆಸ್ಟ್

ಲೈಂಗಿಕ ಪ್ರಚೋದನೆಯಲ್ಲಿ ಬದಲಾವಣೆ : ಕೆಲವು ಮಹಿಳೆಯರು ಗರ್ಭಕೋಶ ಚಿಕಿತ್ಸೆ ನಂತರ ಲೈಂಗಿಕ ಸಮಯದಲ್ಲಿ ತಮ್ಮ ಯೋನಿಯಲ್ಲಿ ಸಂವೇದನೆಯ ನಷ್ಟವನ್ನು ಅನುಭವಿಸುತ್ತಾರೆ. ಆದ್ರೆ ಇದು ಮಹಿಳೆಯ ಪರಾಕಾಷ್ಠೆಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಉತ್ತಮ ಲೈಂಗಿಕ ಪ್ರಚೋದನೆಯನ್ನು ಅನುಭವಿಸಲು ಲೈಂಗಿಕ ಸ್ಥಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. 
 

click me!