Women Life: ಹೆಣ್‌ ಮಕ್ಳು ನಿಜಕ್ಕೂ ಸ್ಟ್ರಾಂಗಾ?

Suvarna News   | Asianet News
Published : Jan 07, 2022, 08:03 PM IST
Women Life: ಹೆಣ್‌ ಮಕ್ಳು ನಿಜಕ್ಕೂ ಸ್ಟ್ರಾಂಗಾ?

ಸಾರಾಂಶ

ಪುರುಷರು ಮಹಿಳೆಯರಷ್ಟು ಹೆಚ್ಚು ಕಾಲ ಬದುಕೋದಿಲ್ಲ. ಆದರೆ ಆರೋಗ್ಯವಂತ ಜೀವನ ನಡೆಸುತ್ತಾರೆ. ಮಹಿಳೆಯರ ಜೀವನ ಇದಕ್ಕೆ ವಿರುದ್ಧ. ಹೆಚ್ಚು ಕಾಲ ಬದುಕುತ್ತಾರೇನೋ ನಿಜ. ಆದರೆ, ಹೆಲ್ತಿಯಾಗಿದ್ದು ಜೀವನ ನಡೆಸುವುದು ಕಡಿಮೆ.  

ಹೆಣ್ಣು ಮಗು (Girl Child) ಹುಟ್ಟುವಾಗ ಗಟ್ಟಿ. ಬೆಳೆಯುವಾಗಲೂ ಗಂಡು (Male) ಮಕ್ಕಳಷ್ಟು ಕಾಳಜಿ, ಆರೈಕೆ (Care) ಬೇಕಾಗಿಲ್ಲ ಎನ್ನುವ ಮಾತುಗಳನ್ನು ಕೇಳಿದ್ದೇವೆ. ನೋಡುತ್ತ ನೋಡುತ್ತ ದೊಡ್ಡವರಾಗುವ ಹೆಣ್ಣು ಮಕ್ಕಳು ಆನಂತರದ ಜೀವನದಲ್ಲಿ ಬಾಲ್ಯದಲ್ಲಿರುವಷ್ಟು ಸ್ಟ್ರಾಂಗಾಗಿ ಇರುವುದಿಲ್ಲ. ಹೆಣ್‌ ಮಕ್ಕಳೇ ಸ್ಟ್ರಾಂಗು (Strong) ಗುರು…ಎಂದು ನಾವು ಹೇಳುತ್ತೇವಾದರೂ ನೈಜ ಪರಿಸ್ಥಿತಿ ಹಾಗಿಲ್ಲ. ಆರೋಗ್ಯದ ವಿಚಾರಕ್ಕೆ ಬಂದರೆ, ಗಂಡುಮಕ್ಕಳಿಗಿಂತ ಕೆಳಮಟ್ಟದ ಜೀವನ ಹೆಣ್ಣಿನದ್ದು. ಮಹಿಳೆಯರು (Woman) ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎನ್ನುವುದೇನೋ ನಿಜ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಕೇವಲ ನಮ್ಮ ದೇಶದಲ್ಲೊಂದೇ ಅಲ್ಲ, ವಿಶ್ವಾದ್ಯಂತ ಇದೇ ಟ್ರೆಂಡ್‌ (Trend) ನೋಡಬಹುದು. ಆದರೆ, ಮಹಿಳೆಯರು ಆರೋಗ್ಯಪೂರ್ಣ (Healthy) ಜೀವಿತಾವಧಿ (Lifetime) ಹೊಂದಿರುವುದು ಕಡಿಮೆ. ಪುರುಷರಷ್ಟು ಆರೋಗ್ಯವಂತ ಜೀವನ ನಡೆಸುವುದಿಲ್ಲ. 2021ನೇ ಸಾಲಿನ ವಿಶ್ವ ಆರೋಗ್ಯ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.

ನಿಮಗೆ ಗೊತ್ತೇ? ಭಾರತದಲ್ಲಿ ಮಹಿಳೆಯರು ಪುರುಷರಿಗಿಂತ ಸರಾಸರಿ ಮೂರು ವರ್ಷ ಹೆಚ್ಚು ಬದುಕುತ್ತಾರೆ. ದಂಪತಿಯನ್ನು ತೆಗೆದುಕೊಂಡರೆ ಪತಿಗಿಂತ ಪತ್ನಿ ಹೆಚ್ಚು ಕಾಲ ಜೀವಿಸುವುದನ್ನು ಕಾಣಬಹುದು. ಆದರೆ, ಅವರು ಹೆಲ್ತಿ ಜೀವನ ನಡೆಸುವ ಅವಧಿ ಮಾತ್ರ ಕಡಿಮೆ. ಮಹಿಳೆಯರ ದೇಹ ರಚನೆ ಸೇರಿದಂತೆ, ಬಸಿರು(Pregnancy), ಬಾಣಂತನ(Delivery), ದೇಹದಲ್ಲಾಗುವ ಹಾರ್ಮೋನ್‌ ಏರಿಳಿತ (Harmone Imbalance)ದಿಂದಾಗಿ ಆಕೆಯ ಆರೋಗ್ಯವೂ ಏರುಪೇರಾಗುತ್ತಿರುತ್ತದೆ.

ಸಾಮಾಜಿಕ (Social) ಸ್ಥಾನಮಾನವಿಲ್ಲ
ಇಲ್ಲಿ ಇನ್ನೊಂದು ಮುಖ್ಯ ಅಂಶವೆಂದರೆ, ಮಹಿಳೆಯರ ಸಾಮಾಜಿಕ ಸ್ಥಿತಿಗತಿ. ನೀವೇ ನೋಡಿ, ಸಾಮಾನ್ಯವಾಗಿ ಭಾರತೀಯ ಕುಟುಂಬಗಳಲ್ಲಿ  ಪುರುಷರ ಆರೋಗ್ಯಕ್ಕೆ ಕೊಡುವ ಪ್ರಾಧಾನ್ಯತೆಯನ್ನು ಮಹಿಳೆಯರ ಆರೋಗ್ಯಕ್ಕೆ ನೀಡುವುದಿಲ್ಲ. ಕೂಡು ಕುಟುಂಬಗಳಲ್ಲಿ ಮಹಿಳೆಯರ ಆರೋಗ್ಯದ ಕುರಿತಾಗಿ ಅನಾದರ (Neglect) ಹೆಚ್ಚು ಕಂಡುಬರುತ್ತದೆ. ದುಡಿಮೆ ಮಾಡುವ ಮಹಿಳೆ ಕೂಡ ದುಡಿಯದ ಪತಿಗಿಂತ ಕಡೆಯದಾಗಿ ಪರಿಗಣಿಸಲ್ಪಡುತ್ತಾಳೆ. ಕುಡಿದು ಬೀಳುವ ಗಂಡಸಿನ ಆರೋಗ್ಯದ ಕಡೆಗೆ ಗಮನ ವಹಿಸುವಷ್ಟು ಸುಲಭವಾಗಿ ಇಡೀ ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರ ಬಗ್ಗೆ ಗಮನ ವಹಿಸುವುದಿಲ್ಲ. ನಮ್ಮ ದೇಶದಲ್ಲಂತೂ ಕೃಷಿ ಮಹಿಳೆಯ ಸಂಖ್ಯೆ ಅಪಾರ. ಅವರೇ ದುಡಿದು ಮನೆ ನಿಭಾಯಿಸುತ್ತಾರೆ. ಆದರೆ, ಅವರಿಗೆ ಅನಾರೋಗ್ಯವುಂಟಾದರೆ ಅವರ ಆರೋಗ್ಯಕ್ಕಾಗಿ ಹಣ ವೆಚ್ಚ ಮಾಡಲು ಹಿಂದೇಟು ಹಾಕುತ್ತಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಹೆಣ್ಣು ಸಾವಿರಾರು ಮಕ್ಕಳ ತಾಯಿಯಾಗಿದ್ದು ಹೇಗೆ?

ನಿರ್ಧಾರ (Decision) ಕೈಗೊಳ್ಳುವ ಸ್ಥಾನಮಾನವಿಲ್ಲದಿರುವುದು

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ನಿರ್ಧಾರ ತೆಗೆದುಕೊಳ್ಳುವ ಸ್ಥಾನಮಾನ ಕಡಿಮೆ. ಹೀಗಾಗಿ, ಮಹಿಳೆಯರ ಕುರಿತಾದ ನಿರ್ಲಕ್ಷ್ಯದ ಧೋರಣೆಯನ್ನು ಇಂದಿಗೂ ಕಾಣಬಹುದು. ಮಹಿಳೆಯರ ಆರೋಗ್ಯಕ್ಕಾಗಿ ಹಣ ವೆಚ್ಚ ಮಾಡುವುದನ್ನು ಅಪ್ರಯೋಜಕ ಎನ್ನುವ ಭಾವನೆಯೂ ಇದರಿಂದಲೇ ಮೂಡಿರಬಹುದು.

ಎಲ್ಲದರ ಪರಿಣಾಮವೆಂಬಂತೆ, ಮಹಿಳೆಯರು ಆಗಿಂದಾಗ್ಗೆ ಆಕೆ ಅನಾರೋಗ್ಯವನ್ನು ಅನುಭವಿಸುತ್ತಾಳೆ. ಆರೋಗ್ಯವಂತ ಜೀವನ ಮರೀಚಿಕೆಯಾಗುತ್ತದೆ. ಅಚ್ಚರಿಯೆಂದರೆ, 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಹಿಳೆಯರು 80ಕ್ಕೂ ಹೆಚ್ಚು ವರ್ಷ ಬದುಕುತ್ತಾರೆ. 2012-19ನೇ ಸಾಲಿನ ಅವಧಿಯಲ್ಲಿ ಅವರ ಜೀವಿತಾವಧಿ ಇನ್ನಷ್ಟು ಗುಣಮಟ್ಟ ಪಡೆದಿರುವುದು ಕಂಡುಬಂದಿದೆ. ಆದರೆ, ಅವರ ಆರೋಗ್ಯವಂತ ಜೀವನದ ಅವಧಿ ಹಿಂದಿಗಿಂತ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.   

ಹಳ್ಳಿ ಹೆಂಗಸು ಮಾಡಬಹುದಾದ ಬ್ಯುಸಿನೆಸ್ ಇವು

ತಾರತಮ್ಯ (Difference) ಇಂದಿಗೂ ಅಪಾರ
ಮುಂದುವರಿದ ದೇಶಗಳಿಗಿಂತ ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿ ಮಹಿಳೆಯರ ಜೀವಿತಾವಧಿ ಸಮಯ ಹಾಗೂ ಆರೋಗ್ಯಪೂರ್ಣ ಜೀವಿತಾವಧಿ ಎರಡೂ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಇವುಗಳಲ್ಲಿ  ಸುಧಾರಣೆ ಕಂಡುಬಂದಿದೆ. ವರದಿ ಪ್ರಕಾರ, ಕೇವಲ ಎರಡು ರಾಷ್ಟ್ರಗಳಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಕಾಲ ಬದುಕುತ್ತಾರೆ. ಓಮನ್‌ (Oman) ಮತ್ತು ಆಫ್ಘಾನಿಸ್ತಾನ (Afghanistan)ದ ಪುರುಷರು ಮಹಿಳೆಯರಿಗಿಂತ ಹೆಚ್ಚು ಜೀವಿತಾವಧಿ ಹೊಂದಿದ್ದಾರೆ. ಇನ್ನು, ಲಿಂಗಾಧಾರಿತ ತಾರತಮ್ಯ ಅಧಿಕವಾಗಿರುವ ರಾಷ್ಟ್ರಗಳಲ್ಲಿ ಮಹಿಳೆಯರ ಆರೋಗ್ಯದ ಕುರಿತು ಹೆಚ್ಚು ಅನಾದರ ಕಂಡುಬಂದಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?