Home Decoration: ಮನೆ ನೀಟಾಗಿರಬೇಕು, ಹೀಗಿಟ್ಕೊಳ್ಳಿ!

By Suvarna News  |  First Published Feb 21, 2022, 7:19 PM IST

ಮನೆ ಕ್ಲೀನಿಂಗ್  (Home Cleaning) ಒಂದು ದೊಡ್ಡ ಕೆಲಸ. ಕೆಲ ಮಹಿಳೆಯರು ಗಂಟೆಗಟ್ಟಲೆ ಮನೆಯನ್ನು ಸ್ವಚ್ಛಗೊಳಿಸ್ತಾರೆ ನಿಜ. ಆದ್ರೆ ಎಷ್ಟೇ ತೊಳೆದು, ಬಳಿದು ಮಾಡಿದ್ರೂ ಮನೆ ಕೊಳಕು ಹೋಗುವುದಿಲ್ಲ. ಮನೆ ನೋಡಲು ಸುಂದರವಾಗಿ ಕಾಣುವುದಿಲ್ಲ. ಈ ಸಮಸ್ಯೆ ನಿಮಗೂ ಇದ್ರೆ ಇದನ್ನೋದಿ.
 


ಸುಂದರ (Beautiful) ವಾದ ಮನೆ (Home) ಇದ್ದರೆ ಸಾಲದು,ಮನೆ ಸ್ವಚ್ಛ (Clean) ವಾಗಿರಬೇಕು. ಆಗ ಮನೆ ಎಷ್ಟೇ ಚಿಕ್ಕದಾಗಿದ್ದರೂ ಎಲ್ಲರನ್ನು ಆಕರ್ಷಿಸುತ್ತದೆ. ಮನೆಯನ್ನು ಸ್ವಚ್ಛಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮನೆಯನ್ನು ಸ್ವಚ್ಛಗೊಳಿಸಲು ಸಾಕಷ್ಟು ಶ್ರಮವಹಿಸಬೇಕು. ಮನೆಯ ಮೂಲೆ,ಮೂಲೆಯನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಮನೆಯ ಮೇಜು,ಟಿವಿ ಮೇಲಿರುವ ಧೂಳು ಅಥವಾ ಕೊಳೆ ಮುಜುಗರಕ್ಕೆ ಕಾರಣವಾಗುತ್ತದೆ. ಮನೆಯನ್ನು ಇಷ್ಟು ಶುಚಿಗೊಳಿಸಿದ್ರೂ ಮನೆ ಸ್ವಚ್ಛವಾಗಿ ಕಾಣುತ್ತಿಲ್ಲ ಏಕೆ ಎಂದು ಅನೇಕ ಮಹಿಳೆಯರಿಗೆ ಅರ್ಥವಾಗುವುದಿಲ್ಲ. ಮನೆ ಸುಂದರವಾಗಿ ಕಾಣದಿರಲು ಮನೆಯಲ್ಲಿರುವ ವಸ್ತು ಹಾಗೂ ಅದನ್ನು ಇಡುವ ವಿಧಾನ ಕಾರಣ. ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಂದು ಮನೆ ಸ್ವಚ್ಛತೆ ಬಗ್ಗೆ ಒಂದಿಷ್ಟು ಟಿಪ್ಸ್ ನೀಡ್ತೇವೆ.

ಸಣ್ಣ ಮನೆಯಲ್ಲಿರಲಿ ಕಡಿಮೆ ಪೀಠೋಪಕರಣ (Furniture) : ಎಲ್ಲರ ಮನೆಯಲ್ಲೂ ವಿಶಾಲವಾದ ಜಾಗವಿರುವುದಿಲ್ಲ. ಅನೇಕರು ಕಡಿಮೆ ಸ್ಥಳಾವಕಾಶ ಹೊಂದಿರುತ್ತಾರೆ. ಆದ್ರೆ ಸಣ್ಣ ಜಾಗದಲ್ಲಿಯೇ ಸಾಕಷ್ಟು ಪೀಠೋಪಕರಣಗಳ ಬಳಕೆ ಮಾಡುತ್ತಾರೆ. ಸುಂದರವಾದ ಮತ್ತು ಸ್ವಚ್ಛವಾದ ಮನೆಗಾಗಿ ಅಗತ್ಯಕ್ಕೆ ಅನುಗುಣವಾಗಿ ಸರಕುಗಳು ಅಥವಾ ಪೀಠೋಪಕರಣಗಳನ್ನು ಇಡಬೇಕು. ಸಣ್ಣ ಮನೆಯಲ್ಲಿ ಹೆಚ್ಚಿನ ಪೀಠೋಪಕರಣಗಳನ್ನು ಇಟ್ಟರೆ , ಮನೆ ಸ್ವಚ್ಛಗೊಳಿಸಿದ ನಂತರವೂ ಕೊಳಕಾಗಿ ಕಾಣುತ್ತದೆ. ಅನೇಕ ಬಾರಿ ಜನರು ಒಂದೇ ಕೋಣೆಯಲ್ಲಿ ಸೋಫಾ, ಹಾಸಿಗೆ ಮತ್ತು ಕಂಪ್ಯೂಟರ್ ಟೇಬಲ್ ಇಡುತ್ತಾರೆ. ಇದರಿಂದಾಗಿ ಕೋಣೆಯಲ್ಲಿ ಸ್ಥಳಾವಕಾಶವಿರುವುದಿಲ್ಲ. ಮನೆಯ ಕೋಣೆಯಲ್ಲಿ  ಸೋಫಾ ಸೆಟ್ ಮಾತ್ರ ಇಡಿ. ಇದರಿಂದ ನಿಮ್ಮ ಕೋಣೆ ದೊಡ್ಡದಾಗಿ ಮತ್ತು ಸ್ವಚ್ಛವಾಗಿ ಕಾಣುತ್ತದೆ.

Tap to resize

Latest Videos

INSPIRING WOMAN: ಇದು ಸೀರೆಯುಟ್ಟವಳ ಸಿಕ್ಸ್ ಪ್ಯಾಕ್ ಕಥೆ!

ವಾಲ್ ಹ್ಯಾಂಗರ್‌ ಬಳಕೆ : ಅನೇಕರ ಮನೆಯ ಕುರ್ಚಿ,ಸೋಫಾ,ಬೆಡ್ ಮೇಲೆ ಬಟ್ಟೆಗಳು ಬಿದ್ದಿರುತ್ತವೆ. ಇದಲ್ಲದೆ ವಾಲ್ ಹ್ಯಾಂಗರ್ ಮೇಲೆ ಬಟ್ಟೆಯನ್ನು ನೇತು ಹಾಕಿರುತ್ತಾರೆ. ಇದು ಮನೆಯ ಅಂದವನ್ನು ಹಾಳು ಮಾಡುತ್ತದೆ. ಅಲ್ಲಲ್ಲಿ ನೇತಾಡುವ ಬಟ್ಟೆಗಳು ನೋಡಲು ತಂಪೆನಿಸುವುದಿಲ್ಲ. ಹಾಗಾಗಿ ಮನೆಯ ವಾಲ್ ಹ್ಯಾಂಗರ್ ಮೇಲೆ ಅಪ್ಪಿತಪ್ಪಿಯೂ ಬಟ್ಟೆ ಇಡಬೇಡಿ. ಬಟ್ಟೆಗಳನ್ನು ಸದಾ ಕಪಾಟಿನಲ್ಲಿ ಇಡಿ. ವಾಲ್ ಹ್ಯಾಂಗರ್ ಮೇಲೆ ಯಾವಾಗಲೂ ಮಾಸ್ಕ್,ಕೀಯಂತಹ ಅಗತ್ಯ  ವಸ್ತುಗಳನ್ನು ಇರಿಸಿ.  

ಮನೆಯ ಮುಖ್ಯ ದ್ವಾರದ ಬಗ್ಗೆ ಇರಲಿ ಗಮನ : ಮನೆಯ ಎಂಟ್ರಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅತಿಥಿಗಳನ್ನು ಮೊದಲು ಸೆಳೆಯುವ ಜಾಗ ಇದು. ಹಾಗಾಗಿ ಇದ್ರ ಬಗ್ಗೆ ಹೆಚ್ಚಿನ ಗಮನ ನೀಡಿ. ಅತಿಥಿಗಳು ಬಂದು ಕುಳಿತುಕೊಳ್ಳುವ ಜಾಗದಲ್ಲಿ ಅನವಶ್ಯಕ ವಸ್ತುಗಳನ್ನು ಇಡಬೇಡಿ. ಕೆಳಗೊಂದು ಸುಂದರ ಮ್ಯಾಟ್ ಹಾಕಿ. ಒಂದೆರಡು ಸುಂದರ ಕುರ್ಚಿಗಳಿರಲಿ. ಇದನ್ನು ಬಿಟ್ಟು ಹೆಚ್ಚಿನ ಸಾಮಾನುಗಳನ್ನು ಅಲ್ಲಿಡಬೇಡಿ.

Relationship Coaching : ಪ್ರೀತಿಸುವ ಪರಿ ಹೇಳಿಕೊಡುವ ಮಾಡೆಲ್ ಪಡೀತಾಳೆ ಗಂಟೆಗೆ 30 ಸಾವಿರ ರೂ.!

ಮೇಜಿನ ಮೇಲೆ ಹೆಚ್ಚಿನ ವಸ್ತು ಬೇಡ : ಮನೆಯ ಟಿವಿ ಸ್ಟ್ಯಾಂಡ್ ಅಥವಾ ಮೇಜು,ಮೇಕಪ್ ಸ್ಟ್ಯಾಂಡ್ ಮೇಲೆ ಹೆಚ್ಚಿನ ವಸ್ತುಗಳನ್ನು ಮಹಿಳೆಯರು ಇಟ್ಟಿರುತ್ತಾರೆ. ಪ್ರತಿ ದಿನ ಆ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ವಸ್ತುಗಳ ಮಧ್ಯೆ ಧೂಳಿರುತ್ತದೆ. ಅಲ್ಲದೆ ಒಂದಿಷ್ಟು ವಸ್ತುಗಳು ಮೇಜಿನ ಮೇಲಿದ್ದರೆ ನೋಡಲು ಸುಂದರವಾಗಿ ಕಾಣುವುದಿಲ್ಲ. ಸ್ವಚ್ಛ ಮತ್ತು ಖಾಲಿ ಟೇಬಲ್ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.

ಬಾಗಿಲ ಮೇಲೆ ಟವೆಲ್ : ಬೇಕಾದ ತಕ್ಷಣ ಕೈಗೆ ಸಿಗುತ್ತದೆ ಎಂಬ ಕಾರಣಕ್ಕೆ ಅನೇಕರು ಬಾಗಿಲಿನ ಮೇಲೆ ಟವೆಲ್ ಇಟ್ಟಿರುತ್ತಾರೆ. ಹಾಸಿಗೆ ಅಥವಾ ಬಾಗಿಲಿನ ಮೇಲೆ ಇಡುವ ಟವೆಲ್ ಮನೆಯನ್ನು ಕೊಳಕು ಮಾಡುತ್ತದೆ. ನಿಮ್ಮ ಮನೆಯಲ್ಲೂ ಟವೆಲ್ ಅನ್ನು ಬಾಗಿಲಿನ ಮೇಲೆ ಇರಿಸಿದರೆ ಇಂದಿನಿಂದ ಅದನ್ನಿಡಲು ಬೇರೆ ವ್ಯವಸ್ಥೆ ಮಾಡಿ. ಸ್ನಾನದ ನಂತರ ಟವೆಲ್ ಅನ್ನು ಬಿಸಿಲಿನಲ್ಲಿ ಒಣಗಿಸಿ. ಇದರ ನಂತರ ಟವೆಲ್ ಅನ್ನು ಬೀರು ಅಥವಾ ಬಾತ್ರೂಮ್ನಲ್ಲಿ ಇರಿಸಿ.

ಕೊಳಕು ಪರದೆ, ಕಾರ್ಪೆಟ್‌ : ಪರದೆಗಳನ್ನು ಪ್ರತಿದಿನ ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಕಾರ್ಪೆಟ್‌ಗಳು ಮತ್ತು ಪರದೆಗಳನ್ನು ಪ್ರತಿದಿನ ತೊಳೆಯಲಾಗುವುದಿಲ್ಲ, ಆದರೆ ಅನೇಕ ಮನೆಗಳಲ್ಲಿ ಪರದೆಗಳು ಮತ್ತು ಕಾರ್ಪೆಟ್‌ಗಳನ್ನು 6 ತಿಂಗಳವರೆಗೆ ಸ್ವಚ್ಛಗೊಳಿಸುವುದಿಲ್ಲ, ಇದರಿಂದಾಗಿ ಪರದೆಗಳು ಮತ್ತು ಕಾರ್ಪೆಟ್‌ಗಳು ಕೊಳಕಾಗುತ್ತವೆ. ಕೆಲವೊಮ್ಮೆ ಅದ್ರಿಂದ ವಾಸನೆ ಬರುತ್ತದೆ. ಹಾಗಾಗಿ ಕಾರ್ಪೆಟ್ ಬಗ್ಗೆಯೂ ಗಮನವಿರಲಿ.

click me!