Inspiring woman: ಇದು ಸೀರೆಯುಟ್ಟವಳ ಸಿಕ್ಸ್ ಪ್ಯಾಕ್ ಕಥೆ!

Suvarna News   | Asianet News
Published : Feb 21, 2022, 12:09 PM ISTUpdated : Feb 21, 2022, 12:12 PM IST
Inspiring woman: ಇದು ಸೀರೆಯುಟ್ಟವಳ ಸಿಕ್ಸ್ ಪ್ಯಾಕ್ ಕಥೆ!

ಸಾರಾಂಶ

ಮದುವೆಯಾಗಿ ಸೀರೆಯುಟ್ಟುಕೊಂಡು ಮನೆಯೊಳಗೇ ಇದ್ದ ಈ ಮಹಿಳೆ ಸಿಕ್ಸ್ ಪ್ಯಾಕ್ ಮಾಡಿಕೊಂಡದ್ದು, ಇಂಟರ್‌ನ್ಯಾಷನಲ್ ಚಾಂಪಿಯನ್ ಆದದ್ದು ಒಂದು ಸ್ಫೂರ್ತಿಯುತ ಕತೆ.   

ನಾನು ಮದುವೆಯಾಗಿ (Marriage) ಗಂಡನ ಮನೆಗೆ ಬಂದ ನಂತರ, ನನ್ನ ಬದುಕು ಮನೆಯ ನಾಲ್ಕು ಕೋಣೆಗಳ ನಡುವೆ ಸೀಮಿತವಾಗಿ ಹೋಯಿತು. ಬೆಳಗ್ಗೆ ಐದು ಗಂಟೆಗೆ ಏಳುತ್ತಿದ್ದೆ. ಗಂಡ ಮಕ್ಕಳು ಸೇರಿದಂತೆ ಮನೆಯವರಿಗೆಲ್ಲಾ ಅಡುಗೆ (Kitchen) ಮಾಡುತ್ತಿದ್ದೆ. ನಂತರ ಕ್ಲೀನಿಂಗು. ಪ್ರತಿದಿನವೂ ಇದೇ ಕೆಲಸ. ಹತ್ತು ವರ್ಷಗಳ ಕಾಲ ಹೀಗೇ ಕಳೆದುಹೋಯಿತು. ನಾನು ಮದುವೆಗೆ ಮೊದಲು ಮಾಡುತ್ತಿದ್ದುದು, ನನ್ನ ಪ್ರೀತಿಯ ಹವ್ಯಾಸಗಳೆಲ್ಲಾ ಕಳೆದೇಹೋದವು ಅನ್ನಿಸತೊಡಗಿತು. ಮನೆಯಲ್ಲೇ ಮಕ್ಕಳಿಗೆ ಮ್ಯೂಸಿಕ್ (Music) ಹೇಳಿಕೊಡತೊಡಗಿದೆ. ಆದರೆ ಅದಕ್ಕೂ ಮನೆಯೊಳಗೇ ಇರಬೇಕಾಗಿತ್ತು. ನನ್ನ ಆರೋಗ್ಯ (Heakth) ಕೆಡತೊಡಗಿತು. ಈ ನಡುವೆ 25 ಕಿಲೋದಷ್ಟು ದೇಹತೂಕ ಹೆಚ್ಚಿಸಿಕೊಂಡಿದ್ದೆ.

ಇದೇ ಸಂದರ್ಭದಲ್ಲಿ ನಾನು ಜಿಮ್‌ಗೆ (Gym) ಹೋಗಲು ಶುರು ಮಾಡಿದ್ದು. ಅದೊಂದು ರಿಲೀಫ್ ನೀಡಿತು. ಬೆಳಗ್ಗೆ ಬೇಗನೇ ಏಳುತ್ತಿದ್ದೆ. ಹೀಗಾಗಿ ಜಿಮ್‌ಗೆ ಹೋಗಿ ಬಂದ ನಂತರವೂ ಮನೆಯರಿಗೆ ಅಡುಗೆ ಮಾಡಿಡಲು ಸಾಕಷ್ಟು ಸಮಯ ಸಿಗುತ್ತಿತ್ತು. ಮುಂದಿನ 7 ತಿಂಗಳಲ್ಲಿ 24 ಕಿಲೋ ಮೈತೂಕ ಇಳಿಸಿದೆ. ನನ್ನದೇ ಒಂದು ಜಿಮ್ ಶುರು ಮಾಡಬೇಕು ಎನಿಸಿತು. ಗಂಡನಿಗೆ ಹೇಳಿದೆ. ನಾವು ಒಂದು ಫ್ಲ್ಯಾಟ್ ಖರೀದಿಸಿ ಜಿಮ್‌ ಆರಂಭಿಸಿದೆವು. ಇದಕ್ಕಾಗಿ ನನ್ನ ಆಭರಣಗಳನ್ನು ಮಾರಬೇಕಾಯಿತು, ಸಾಲ ಮಾಡಬೇಕಾಯಿತು. ನಾಲ್ಕೇ ತಿಂಗಳಲ್ಲಿ ನಮ್ಮ ಜಿಮ್‌ ಆ ಸುತ್ತಮುತ್ತಲಲ್ಲಿ ಮನೆ ಮಾತಾಯಿತು.

Rhiannon Harries : ಭಾರತೀಯ ಹುಡುಗನ ವಿವಾಹವಾದ ಬ್ರಿಟಿಷ್ ರಾಜತಾಂತ್ರಿಕ ಅಧಿಕಾರಿ!

ನಾವು ಇನ್ನೂ ಬೆಳೆಯಬಹುದು ಎನಿಸಿತು. ದೊಡ್ಡ ಆವರಣವೊಂದನ್ನು ಬಾಡಿಗೆಗೆ ಖರೀದಿಸಿದೆವು. ಇಷ್ಟರಲ್ಲಿ ನನಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಬೇಕು ಎಂಬ ಆಸೆ ಮೂಡಿತು. ಅಷ್ಟರಲ್ಲಿ ನನ್ನ ದೇಹತೂಕ ಇಳಿಸಿದ್ದೆ. ಸಿಕ್ಸ್‌ ಪ್ಯಾಕ್‌ಗಾಗಿ ನಿರಂತರ ಶ್ರಮ ವಹಿಸಿದೆ, 8 ತಿಂಗಳಲ್ಲಿ ನನ್ನ ದೇಹದಲ್ಲಿ ಸಿಕ್ಸ್ ಪ್ಯಾಕ್‌ (Six pack) ಇದ್ದವು!
ಇದೀಗ ನನ್ನಲ್ಲಿ ಹೊಸ ಬಗೆಯ ಆತ್ಮವಿಶ್ವಾಸ ಮೂಡತೊಡಗಿತ್ತು. ಒಮ್ಮೆ ನಾನು ಕಾರಿನಲ್ಲಿ ಹೋಗುತ್ತಿದ್ದಾಗ ಒಂದು ಟೂ ವ್ಹೀಲರ್ ನನ್ನ ಕಾರಿಗೆ ಗುದ್ದಿತು. ನಾನು ಅಂದು ಸೀರೆ ಉಟ್ಟುಕೊಂಡು ಡ್ರೈವ್ ಮಾಡುತ್ತಿದ್ದೆ. ಆ ದ್ವಿಚಕ್ರ ವಾಹನ ಚಾಲಕ ನನ್ನನ್ನು ಕೆಟ್ಟ ಪದಗಳಿಂದ ನಿಂದಿಸತೊಡಗಿದ. ನಾನು ಕಾರಿನಿಂದ ಕೆಳಗಿಳಿದಿದ್ದೇ ತಡ, ನನ್ನ ದೇಹ ನೋಡಿ ಅವನ ಜಂಘಾಬಲವೆಲ್ಲ ಉಡುಗಿಹೋಯಿತು. ನಾನು ಅವನಿಗೆ ನಾಲ್ಕು ತಪರಾಕಿ ಬಿಗಿದೆ. ಮುಂದೆಂದೂ ಹೆಣ್ಣುಮಕ್ಕಳು ಎಂಬ ಕಾರಣಕ್ಕಾಗಿ ಹೀಗೆಲ್ಲ ಬಾಯಿ ಸಡಿಲ ಬಿಡಬೇಡ ಎಂದು ಬುದ್ಧಿ ಹೇಳಿದೆ.



ಮೀಡಿಯಾಗಳೂ (Media) ಕೂಡ ನನ್ನನ್ನು ಫೋಟೋಶೂಟ್‌ಗಾಗಿ (Photo shoot) ಕಾಂಟ್ಯಾಕ್ಟ್ ಮಾಡುತ್ತಿದ್ದವು. ಇದರ ನಡುವೆ, ಇಂಡಿಯನ್ ಬಾಡಿ ಬಿಲ್ಡಿಂಗ್ ಫೆಡರೇಶನ್, ನನಗೆ ಅಂತಾರಾಷ್ಟ್ರೀಯ ಬಾಡಿಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಹ್ವಾನ ನೀಡಿತು. ನನ್ನ ಕಿವಿಯನ್ನು ನಾನೇ ನಂಬದಂತಾಗಿತ್ತು. ನಾನು ಒಪ್ಪಿಕೊಂಡೆ ಹಾಗೂ ಟ್ರೇನಿಂಗ್ ಆರಂಭಿಸಿದೆ. 

Women Lifestyle : ಏರಿದ ತೂಕವೇ ಗಳಿಕೆಗೆ ಮೂಲ, ತಿಂಗಳಿಗೆ 10 ಲಕ್ಷ ರೂ. ಸಂಪಾದಿಸ್ತಾಳೆ ಈಕೆ

ಆದರೆ ಇದೆಲ್ಲ ನನ್ನ ಅತ್ತೆ ಮನೆಯವರಿಗೆ ಗೊತ್ತಿರಲಿಲ್ಲ. ಇನ್ನೇನು ಪಂದ್ಯಾಟ 15 ದಿನ ಉಳಿದಿದೆ ಅನ್ನುವಾಗ ನನ್ನ ಮಾವ ತೀರಿಕೊಂಡರು. ಅಲ್ಲಿದ್ದಾಗ ನಾನು ಮೈತುಂಬ ಸಲ್ವಾರ್ ಕಮೀಜ್ ತೊಟ್ಟುಕೊಂಡು ಇರುತ್ತಿದ್ದೆ. ಜಿಮ್ ವರ್ಕ್ಔಟ್ ಮಾಡಲು ಸಮಯ, ಅವಕಾಶ ಇರಲಿಲ್ಲ. ಡಯಟ್‌ ಸಾಧ್ಯವಿರಲಿಲ್ಲ. ಮನೆಯಲ್ಲಿ ಮೊಟ್ಟೆ ಸಹ ಸೇವಿಸುವಂತಿರಲಿಲ್ಲ. ಕಡೆಗೆ ಗುಟ್ಟಾಗಿ ನಾನು ಹೊರ ಹೋಗಲು, ಜಿಮ್‌ಗೆ ಹೋಗಲು, ಭಾವ ಸಹಾಯ ಮಾಡಿದರು.    
  
ಕಡೆಗೂ ನಾನು ಮನೆಗೆ ಹೋಗಲೇಬೇಕು, ಇಲ್ಲದಿದ್ದರೆ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂಬ ಕಾರಣ ನೀಡಿ ನಾನು ಅಲ್ಲಿಂದ ಹೊರಟುಬಂದುಬಿಟ್ಟೆ. ಚಾಂಪಿಯನ್ ಪಂದ್ಯಾವಳಿ ನಡೆಯಲಿದ್ದ ಬುಡಾಪೆಸ್ಟ್ ಕಷ್ಟಪಟ್ಟು ತಲುಪಿದೆ. ನಂಬಿದ್ರೆ ನಂಬಿ, ಆರನೇ ಸ್ಥಾನ ಪಡೆದುಕೊಂಡೆ! ನಂತರ ನಾನು ಪರ್ವತಾರೋಹಣ (Mountaineering) ಶುರು ಮಾಡಿದೆ. ಅದು ರಿಸ್ಕಿ ಎಂದು ಗಂಡ ಹೇಳಿದರೂ ಬಿಡಲಿಲ್ಲ. ನಂತರ ಸಂಗೀತ ಕಲಿಯುವಿಕೆ ಮುಂದುವರಿಸಿದೆ, ಡಿಜೆ ಕೂಡ ಮಾಡಿದೆ ಹಾಗೂ ಫೋಟೋಗ್ರಫಿ (Photigraphy) ಕೋರ್ಸಿಗೂ ಸೇರಿಕೊಂಡೆ. 

Relationship Coaching : ಪ್ರೀತಿಸುವ ಪರಿ ಹೇಳಿಕೊಡುವ ಮಾಡೆಲ್ ಪಡೀತಾಳೆ ಗಂಟೆಗೆ 30 ಸಾವಿರ ರೂ.!

ಇಷ್ಟೆಲ್ಲ ಮಾಡಲು ನಿನ್ನಿಂದ ಹೇಗೆ ಸಾಧ್ಯವಾಯಿತು ಎಂದು ನನ್ನ ಪರಿಚಯದ ಇತರ ಗೃಹಿಣಿಯರು ಕೇಳುವುದುಂಟು. ಅದು ಸಿಂಪಲ್, ಏನೆಂದರೆ, ನಾನು ಪ್ರೀತಿಸುತ್ತಿದ್ದುದನ್ನು ನಾನು ಮಾಡಿದ್ದೇನೆ. ನಾನು ಆರಂಭಿಸಿದ್ದು ಸ್ವಲ್ಪ ತಡವಾಗಿರಬಹುದು. ಆದರೇನಂತೆ? 45ನೇ ವಯಸ್ಸಿನಲ್ಲಿ ನಾನು ಬಾಡಿ ಬಿಲ್ಡರ್, ಮೌಂಟೆನೀಯರ್, ಡಿಜೆ, ಫೋಟೋಗ್ರಾಫರ್, ಜಿಮ್ ಟ್ರೇನರ್ ಎಲ್ಲವೂ ಆಗಿದ್ದೇನೆ.  ನಾನೀಗ ತುಂಬಾ ಸುಖಿ. ಅದೇ ಎಲ್ಲಕ್ಕಿಂತ ಮುಖ್ಯವಾದುದು. ನೀವು ಪ್ರೀತಿಸುವುದನ್ನು ಮಾಡಿ. 

 

  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?