ಮೊದಲ ಸಲದ ಸಂಭೋಗ ಅಥವಾ ಆಕೆ ವರ್ಜಿನಿಟಿ ಕಳೆದುಕೊಂಡ ಸಂದರ್ಭ ಅವಳ ದೇಹ ಹಾಗೂ ಮನಸ್ಸಿನಲ್ಲಿ ಬದಲಾವಣೆಗಳು ಆಗಿಯೇ ಆಗುತ್ತವೆ. ಕನ್ಯತ್ವವನ್ನು ಕಳೆದುಕೊಳ್ಳುವುದು ಹಲವಾರು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗೆ ಕಾರಣ ಆಗುತ್ತೆ.
ಗಂಡು ಮೊದಲ ಸಲ ಸಂಭೋಗದಲ್ಲಿ ಪಾಲ್ಗೊಂಡಾಗ ದೈಹಿಕವಾಗಿ ಅಥವಾ ಮಾನಸಿಕವಾಗಿ ಬದಲಾವಣೆ ಆಗುತ್ತಾ ಇಲ್ವಾ ಅನ್ನೋದರ ಬಗ್ಗೆ ತಿಳಿಯೋದು ಕಡಿಮೆ. ಆದರೆ ಹೆಣ್ಣಿನ ವಿಚಾರದಲ್ಲಿ ಹಾಗಲ್ಲ. ಮೊದಲ ಸಲದ ಸಂಭೋಗ ಅಥವಾ ಆಕೆ ವರ್ಜಿನಿಟಿ ಕಳೆದುಕೊಂಡ ಸಂದರ್ಭ ಅವಳ ದೇಹ ಹಾಗೂ ಮನಸ್ಸಿನಲ್ಲಿ ಬದಲಾವಣೆಗಳು ಆಗಿಯೇ ಆಗುತ್ತವೆ. ಕನ್ಯತ್ವವನ್ನು ಕಳೆದುಕೊಳ್ಳುವುದು ಹಲವಾರು ಸಾಮಾಜಿಕ ಮತ್ತು ಭಾವನಾತ್ಮಕ ಬದಲಾವಣೆಗೆ ಕಾರಣ ಆಗುತ್ತೆ.
1. Hormone ಬದಲಾವಣೆಗಳು
ಸೆಕ್ಸ್(Sex)ನಲ್ಲಿ ತೊಡಗುವುದರಿಂದ ನಿಮ್ಮ ಮೆದುಳು ಎಂಡಾರ್ಫಿನ್ (Endorphines), ಸಿರೊಟೋನಿನ್, ಡೋಪಮೈನ್ (Dopamine) ಮತ್ತು ಆಕ್ಸಿಟೋಸಿನ್ ಎಂಬ ಕೆಲವು ಒಳ್ಳೆಯ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳು ಒತ್ತಡವನ್ನು ಕಡಿಮೆ ಮಾಡುತ್ತದೆ, ಮುಖ್ಯವಾಗಿ ಸಂತೋಷದ ಭಾವನೆಗಳು ಉಕ್ಕುವ ಹಾಗೆ ಮಾಡಬಹುದು. ಸಂಭೋಗಿಸಿದ ವ್ಯಕ್ತಿಯೊಂದಿಗೆ ಆಕೆಯ ಬಂಧ ಮತ್ತು ನಂಬಿಕೆ ಹೆಚ್ಚಾಗಲು ಸೆಕ್ಸ್ ಕಾರಣವಾಗುತ್ತದೆ.
2. ಸ್ತನಗಳು ದೃಢವಾಗುತ್ತವೆ
ಹೆಣ್ಣು ಲೈಂಗಿಕವಾಗಿ ಸಕ್ರಿಯರಾಗಿರುವಾಗ, ಸ್ತನಗಳು(Breasts) ದೃಢವಾಗಬಹುದು ಮತ್ತು ಕೋಮಲವಾಗಬಹುದು. ಏಕೆಂದರೆ ಸಂಭೋಗವು ಸ್ತನಗಳ ಅಂಗಾಂಶಗಳನ್ನು ಊದಿಕೊಳ್ಳುವಂತೆ ಮಾಡುತ್ತದೆ, ಪ್ರಚೋದನೆಯಿಂದ ಸ್ತನಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಇದರಿಂದ ಸ್ತನಗಳು ಹೆಚ್ಚು ದೃಢಗೊಳ್ಳುತ್ತವೆ.
3. ಮೊಲೆತೊಟ್ಟುಗಳಲ್ಲಿ ಹೆಚ್ಚುವ ಸಂವೇದನೆ
ಲೈಂಗಿಕತೆಯು ಸ್ತನ ಮತ್ತು ಅರೋಲಾಗಳ ಸುತ್ತ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದು ಮೊಲೆತೊಟ್ಟುಗಳನ್ನು (Breast tips) ಮೊದಲಿಗಿಂತ ಹೆಚ್ಚು ಸೂಕ್ಷ್ಮವಾಗಿರುವಂತೆ ಮಾಡಬಹುದು. ಹೆಚ್ಚಿದ ನಾಳೀಯ ರಕ್ತದ ಹರಿವಿನಿಂದ ಉಂಟಾಗುವ ವಾಸೊಕೊಂಜೆಶನ್ (Voscongestion) ಎಂದು ಕರೆಯಲ್ಪಡುವ ಪ್ರಕ್ರಿಯೆಯು ಮೊಲೆತೊಟ್ಟುಗಳನ್ನು ಸಂವೇದನಾಶೀಲಗೊಳಿಸುತ್ತದೆ, ಯೋನಿ ಮತ್ತು ಚಂದ್ರನಾಡಿ ದೊಡ್ಡದಾಗಲು ಕಾರಣವಾಗುತ್ತದೆ.
4. ಯೋನಿಯಲ್ಲಿ ಬದಲಾವಣೆಗಳು
ಕನ್ಯತ್ವದ ಪೊರೆ ಸರಿದಾಗ ಯೋನಿ (Vigina) ಪ್ರದೇಶದಲ್ಲಿ ಕೆಲವು ಬದಲಾವಣೆಗಳು, ಪ್ರಚೋದನೆಗಳು ಉಂಟಾಗುತ್ತವೆ. ಯೋನಿ ಫ್ಲೆಕ್ಸಿಬಲ್ ಆಗಿ ಬದಲಾಗುತ್ತೆ. ಮೊದಲಿಗಿಂತ ಹೆಚ್ಚು ಹೊಂದಿಕೊಳ್ಳುತ್ತದೆ. ಚಂದ್ರನಾಡಿ(Clitoris) ವಿಸ್ತರಿಸಲ್ಪಡುತ್ತದೆ, ಇದರಿಂದ ಮುಂದಿನ ಸಂಭೋಗವು ಕಡಿಮೆ ನೋವಿನಿಂದ ಕೂಡಿರುತ್ತದೆ ಮತ್ತು ಹೆಚ್ಚು ಆಹ್ಲಾದಕರವಾಗಿರುತ್ತದೆ.
Menopause Time: ಮೆನೋಪಾಸ್ ಕಿರಿಕಿರಿ ಆಗ್ತಿದ್ರೆ, ಈ ರೀತಿ ಮಾಡಿ
5. Clitoris ಮತ್ತು ಗರ್ಭಾಶಯಗಳ ಪ್ರತಿಕ್ರಿಯೆ
ಕನ್ಯತ್ವವನ್ನು ಕಳೆದುಕೊಂಡ ನಂತರ ಚಂದ್ರನಾಡಿ ಮತ್ತು ಗರ್ಭಾಶಯದ ಪ್ರತಿಕ್ರಿಯೆ ರೀತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಗರ್ಭಾಶಯ ಮತ್ತು ಚಂದ್ರನಾಡಿಗಳು ಲೈಂಗಿಕತೆಗೆ ಹೆಚ್ಚು ಬಳಕೆಯಾಗುವುದರಿಂದ, ಅವು ಹೊಂದಿಕೊಳ್ಳುತ್ತವೆ ಮತ್ತು ಹೆಚ್ಚು ಸಹಜವಾಗುತ್ತವೆ. ದೇಹವು ಲೈಂಗಿಕವಾಗಿ ಉತ್ಸುಕವಾದಾಗ ಅವು ಸಂಕುಚಿತಗೊಳ್ಳುತ್ತವೆ ಮತ್ತು ವಿಸ್ತರಿಸುತ್ತವೆ. ಹೆಣ್ಣು ಉದ್ರೇಕಗೊಳ್ಳದಿದ್ದಾಗ ಸಹಜ ಸ್ಥಿತಿಯಲ್ಲೇ ಇದ್ದುಬಿಡುತ್ತವೆ.
6. ಹೊಳೆಯುವ ಚರ್ಮಮೊದಲ ಬಾರಿಗೆ ಲೈಂಗಿಕತೆಗೆ ಒಳಪಟ್ಟಾಗ ಅಚ್ಚರಿ ಎಂಬಂತೆ ಚರ್ಮದ ಹೊಳಪು ಹೆಚ್ಚಬಹುದು. ಲೈಂಗಿಕತೆಯು ಸಂತೋಷದ ಹಾರ್ಮೋನು Endorphines ಬಿಡುಗಡೆಗೆ ಕಾರಣವಾಗಬಹುದು, ಇದು ಒತ್ತಡ ನಿವಾರಿಸುತ್ತದೆ ಹಾಗೂ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಸಂಭೋಗದ ಸಮಯದಲ್ಲಿ ರಕ್ತ ಪರಿಚಲನೆಯು ಹೆಚ್ಚಾಗುವುದರಿಂದ, ಅದು ಚರ್ಮದ ಮೇಲೆ ಹೊಳೆಯುವ ಪರಿಣಾಮವನ್ನು ಬೀರಬಹುದು.
ನಿಮ್ಮ ಸಂಗಾತಿಯನ್ನು ಹತ್ತಿರಕ್ಕೆ ತರಲು ಅತ್ಯುತ್ತಮ ಟ್ರಿಕ್ಸ್ ಇಲ್ಲಿವೆ !!
7. Periods ವ್ಯತ್ಯಾಸ ಆಗಬಹುದು
ಸೆಕ್ಸ್ ನಲ್ಲಿ ಪಾಲ್ಗೊಂಡ ಬಳಿಕ ಪೀರಿಯೆಡ್ಸ್ ನಲ್ಲಿ ವ್ಯತ್ಯಾಸ ಉಂಟಾಗಬಹುದು. ಇದನ್ನೇ ಕೆಲವರು ಗರ್ಭ ಧರಿಸಿಬಿಟ್ಟೆ ಅಂತ ಭಾವಿಸುವುದಿದೆ. ಆದರೆ ಮೊದಲ ಸಲ ಸೆಕ್ಸ್‌ನಲ್ಲಿ ಪಾಲ್ಗೊಂಡ ಬಳಿಕ ಆಗುವ ಪೀರಿಯೆಡ್ಸ್ ವ್ಯತ್ಯಾಸವನ್ನೇ ಗರ್ಭಧಾರಣೆಯ ಚಿಹ್ನೆಯಾಗಿ ಪರಿಗಣಿಸಲಾಗುವುದಿಲ್ಲ. ಸಾಮಾನ್ಯವಾಗಿ ದೇಹವು ಹಲವಾರು ಹಾರ್ಮೋನುಗಳ ಬದಲಾವಣೆಗಳಿಗೆ ಒಳಗಾಗಿರುವುದರಿಂದ ಪೀರಿಯೆಡ್ಸ್ ನಲ್ಲಿ ವ್ಯತ್ಯಾಸ ಆಗಬಹುದು. ಪೀರಿಯೆಡ್ಸ್ ಲೇಟ್ ಆಗಿ ಆಗಬಹುದು. ಹೀಗಾಗಿ ಇದನ್ನಷ್ಟೇ ಗರ್ಭಧಾರಣೆ ಚಿಹ್ನೆ ಅಂತ ಪರಿಗಣಿಸಿದರೆ ಮೋಸ ಹೋಗಬಹುದು. ಪ್ರೆಗ್ನೆನ್ಸಿ ಇತರೆ ಲಕ್ಷಣಗಳು ಕಂಡುಬಂದಾಗ ಪೀರಿಯೆಡ್ಸ್ ಆಗದೇ ಹೋದರೆ ಆಗ ಗರ್ಭ ನಿಂತಿದೆ ಎಂದುಕೊಳ್ಳಬಹುದು.
Relationship Tips: ಸಂಗಾತಿ ಮರಳಿ ಸಿಗಬೇಕೆ? ಹೀಗ್ಮಾಡಿ