ಮಾನಸಿಕ ಸಮಸ್ಯೆ, ವಕ್ರ ಕುತ್ತಿಗೆ, ಆತ್ಮಹತ್ಯೆ ಯತ್ನ, ಈಗ ಭಾರತದ ಕಿರಿಯ ಸಿಇಒ!

Published : Jun 08, 2022, 09:41 AM ISTUpdated : Jun 08, 2022, 10:07 AM IST
ಮಾನಸಿಕ ಸಮಸ್ಯೆ, ವಕ್ರ ಕುತ್ತಿಗೆ, ಆತ್ಮಹತ್ಯೆ ಯತ್ನ, ಈಗ ಭಾರತದ ಕಿರಿಯ ಸಿಇಒ!

ಸಾರಾಂಶ

ಇದೊಂದು ಅಪರೂಪದ ಸ್ಫೂರ್ತಿದಾಯಕ ಮಹಿಳೆಯ ಕಥೆ. ಈಕೆ ಎದುರಿಸಿದ ದೈಹಿಕ ಸಮಸ್ಯೆ, ಗೇಲಿ, ಮಾನಸಿಕ ಸಮಸ್ಯೆ ಅಪಾರ. ಎಲ್ಲದನ್ನೂ ಎದುರಿಸಿ ಈಕೆ ಗೆದ್ದು ಬಂದಿದ್ದಾಳೆ.  

ಇವರ ಹೆಸರು ರಾಧಿಕಾ ಗುಪ್ತಾ. ಇವರ ಬದುಕಿನ ಕತೆಯೇ ವಿಚಿತ್ರ. ಇದರಲ್ಲಿ ಒಂದು ಬಾಲಿವುಡ್ ಫಿಲಂಗೆ ಆಗುವಷ್ಟು ಸರಕು ಇದೆ. ಗೇಲಿ, ಅಪಹಾಸ್ಯ, ದೈಹಿಕ ಸಮಸ್ಯೆ, ಮಾನಸಿಕ ಸಮಸ್ಯೆ, ಆತ್ಮಹತ್ಯೆ ಯತ್ನ...ಎಲ್ಲದರ ನಂತರ ಆಕೆ ಈಗ ದೊಡ್ಡದೊಂದು ಕಾರ್ಪೊರೇಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದಾರೆ.

ಬನ್ನಿ, ಅವರ ಕತೆಯನ್ನು ಅವರ ಮಾತುಗಳಲ್ಲೇ ಕೇಳೋಣ:

ನಾನು ಹುಟ್ಟುವಾಗಲೇ ನನ್ನ ಕುತ್ತಿಗೆ ವಕ್ರವಾಗಿತ್ತು. ಸಾಲದು ಎಂದು ನನ್ನಲ್ಲಿ ಇನ್ನಷ್ಟು ವಿಚಿತ್ರ ಸಂಗತಿಗಳಿದ್ದವು. ನಾವು ಯಾವಾಗಲೂ ಪ್ರತಿ 3 ವರ್ಷಗಳಿಗೊಮ್ಮೆ ಬೇರೆ ದೇಶಗಳಿಗೆ ಹೋಗಿ ವಾಸಿಸುತ್ತಿದ್ದೆವು. ನನ್ನ ತಂದೆ ರಾಜತಾಂತ್ರಿಕರಾಗಿದ್ದರು. ಪಾಕಿಸ್ತಾನ, ನ್ಯೂಯಾರ್ಕ್ ಮತ್ತು ದೆಹಲಿಯಲ್ಲಿ, ನಂತರ ನೈಜೀರಿಯಾದಲ್ಲಿ ವಾಸ ಇದ್ದೆವು.

ವಯಸ್ಸಾದಂತೆ ಮಹಿಳೆಯರು ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾಯಿಸಬೇಕು?

ನಾನು 7ನೇ ತರಗತಿಯಲ್ಲಿ ವಿಚಿತ್ರವಾದ ಮಗು ಎನಿಸಿದ್ದೆ. ನನ್ನ ಇಂಗ್ಲಿಷ್‌ನ ಭಾರತೀಯ ಉಚ್ಚಾರಣೆಯನ್ನು ವಿದ್ಯಾರ್ಥಿಗಳು ಗೇಲಿ ಮಾಡುತ್ತಿದ್ದರು. 'ದಿ ಸಿಂಪ್ಸನ್ಸ್‌'ನ ಸಿನಿಮಾ ಪಾತ್ರದ ಹಾಗೆ ನನಗೆ 'ಅಪು' ಎಂದು ಅಡ್ಡ ಹೆಸರು ನೀಡಿದರು. ನನ್ನನ್ನು ಯಾವಾಗಲೂ ನನ್ನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಗೆ ಹೋಲಿಸುತ್ತಿದ್ದರು. ನನ್ನಮ್ಮ ಎತ್ತರದ, ಬೆರಗುಗೊಳಿಸುವ ಸುಂದರ ಮಹಿಳೆಯಾಗಿದ್ದಳು. ಅವಳಿಗೆ ಹೋಲಿಸಿದರೆ ನಾನು ಎಷ್ಟು ಕೊಳಕು ಎಂದು ಜನರು ಸೂಚಿಸುತ್ತಿದ್ದರು. ನನ್ನ ಆತ್ಮವಿಶ್ವಾಸ ಕುಸಿಯಿತು.

ಆ ವರ್ಷಗಳಲ್ಲಿ ನನ್ನ ಅಭದ್ರತೆಯನ್ನು ಹೂತುಹಾಕಲು ಕಲಿತೆ. ಆದರೆ ಅವರು ಗೇಲಿ ಎಂದಿಗೂ ಬಿಡಲಿಲ್ಲ. ನನ್ನ 22ನೇ ವಯಸ್ಸಿನಲ್ಲಿ, ನಾನು ಹುಡುಕುತ್ತಿದ್ದ 7ನೇ ಉದ್ಯೋಗವೂ ನನ್ನ ಕೈತಪ್ಪಿತು. ನಾನು ನನ್ನ ಡಾರ್ಮಿಟರಿ ಕೋಣೆಯ ಕಿಟಕಿಯಿಂದ ಹೊರಗೆ ಜಿಗಿದು ಸಾಯಲು ಮುಂದಾದೆ. ಗಾಬರಿಯಾದ ನನ್ನ ಗೆಳೆಯರು ಸಹಾಯಕ್ಕೆ ಜನ ಕರೆದು ನನ್ನನ್ನು ಉಳಿಸಿಕೊಂಡರು. ನನ್ನನ್ನು ಮನೋವೈದ್ಯಕೀಯ ವಾರ್ಡ್‌ಗೆ ಸೇರಿಸಲಾಯಿತು. ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಹೇಳಿದರು. ‘ನನಗೆ ಕೆಲಸದ ಸಂದರ್ಶನವಿದೆ– ಇದು ನನ್ನ ಕೊನೆಯ ಸಂದರ್ಶನ' ಎಂದು ಹೇಳಿದ ನಂತರ ಹೋಗಲು ಬಿಟ್ಟರು.

ಆ ದಿನ, ನಾನು ನಿಜವಾಗಿಯೂ ಕೆಲಸವನ್ನು ಪಡೆದುಕೊಂಡೆ- ಅದು ಮೆಕಿನ್ಸೆಯಲ್ಲಿ. ನನ್ನ ಜೀವನ ಕೊನೆಗೂ ಸರಿಯಾದ ಹಾದಿಯತ್ತ ಹೊರಳಿತು. ಆದರೆ 3 ವರ್ಷಗಳ ನಂತರ ನಾನು 2008ರ ಆರ್ಥಿಕ ಬಿಕ್ಕಟ್ಟು ಉದ್ಭವಿಸಿತು. ಕೆಲಸ ಕಳೆದುಕೊಂಡೆ. ಹೊಸದೇನಾದರೂ ಮಾಡೋಣ ಎಂದು ಮುಂದುವರಿದೆ. 25ನೇ ವಯಸ್ಸಿನಲ್ಲಿ ನಾನು ಅದನ್ನೆಲ್ಲ ಬಿಟ್ಟು ನನ್ನ ಪತಿ ಮತ್ತು ಸ್ನೇಹಿತರೊಂದಿಗೆ ನನ್ನ ಸ್ವಂತ ಆಸ್ತಿ ನಿರ್ವಹಣೆ ವ್ಯವಹಾರವನ್ನು ಪ್ರಾರಂಭಿಸಲು ಭಾರತಕ್ಕೆ ಮರಳಿದೆ.

Success Women: ಜಗತ್ತು ಸುತ್ತುವ ಈ ಯುವತಿ ಆಸೆಗೆ ಆಸರೆಯಾಗಿದ್ದು ಷೇರು ಮಾರುಕಟ್ಟೆ

ಕೆಲವು ವರ್ಷಗಳ ನಂತರ, ನಮ್ಮ ಕಂಪನಿಯನ್ನು Edelweiss MF ಖರೀದಿಸಿತು. ಆಗ ನಾನು ಕಾರ್ಪೊರೇಟ್ ಏಣಿಯನ್ನು ಏರಲು ಪ್ರಾರಂಭಿಸಿದ್ದೆ. ಸೂಟ್‌ಗಳಿಂದ ತುಂಬಿದ ಕೋಣೆಯಲ್ಲಿ ನಾನು ಸೀರೆ ಧರಿಸುತ್ತಿದ್ದೆ. Edelweiss MFನಲ್ಲಿ ಹೊಸ CEO ಅನ್ನು ನೇಮಿಸುವ ಕುರಿತು ಮಾತುಕತೆ ಪ್ರಾರಂಭವಾಯಿತು. ‘ಅವರು ನನ್ನನ್ನು ನೇಮಿಸಿಕೊಳ್ಳಲಾರರು’ ಎಂದುಕೊಂಡಿದ್ದೆ. ಆದರೆ ನನ್ನ ಪತಿ ‘ನೀನು ಆ ಕೆಲಸಕ್ಕೆ ಉತ್ತಮ ವ್ಯಕ್ತಿ' ಎಂದು ನನ್ನನ್ನು ಪ್ರೋತ್ಸಾಹಿಸುತ್ತಲೇ ಇದ್ದರು.

ಹಾಗಾಗಿ ನಾನು ನನ್ನ ಬಾಸ್ ಬಳಿಗೆ ಹೋಗಿ, 'ನಾನು CEO ಆಗಲು ಬಯಸುತ್ತೇನೆ. ನನ್ನ ಅನುಭವ ಹಾಗೂ ಉತ್ಸಾಹವನ್ನು ಇಲ್ಲಿ ಬಳಸುತ್ತೇನೆ’ ಎಂದೆ. ಕೆಲವು ತಿಂಗಳುಗಳ ನಂತರ, 33ನೇ ವಯಸ್ಸಿನಲ್ಲಿ, ನಾನು ಭಾರತದ ಅತ್ಯಂತ ಕಿರಿಯ CEOಗಳಲ್ಲಿ ಒಬ್ಬಳಾದೆ!

ಮುಂದಿನ ವರ್ಷ ಒಂದು ಈವೆಂಟ್‌ನಲ್ಲಿ ಮಾತನಾಡಲು ನನ್ನನ್ನು ಆಹ್ವಾನಿಸಲಾಯಿತು. ಅದು ನನ್ನ ಜೀವನವನ್ನು ಮತ್ತಷ್ಟು ಬದಲಾಯಿಸಿತು. ನನ್ನ ಲುಕ್ ಬಗ್ಗೆ ನನ್ನ ಬಾಲ್ಯದ ಅಭದ್ರತೆ, ನಿರಾಕರಣೆಗಳು, ನನ್ನ ಹೋರಾಟಗಳು, ಆತ್ಮಹತ್ಯೆಯ ಪ್ರಯತ್ನ, ಎಲ್ಲವನ್ನೂ ಹಂಚಿಕೊಂಡೆ. ಎಲ್ಲ ಭಾರವನ್ನೂ ಕಳಚಿಕೊಂಡೆ. ನನ್ನ ಮಾತುಗಳು ವೈರಲ್ ಆದವು. ನಾನು ‘ಕತ್ತು ಮುರಿದ ಹುಡುಗಿ’ ಎಂದು ಹೆಸರಾದೆ. ಜನರು ಅವರ ಕತೆಗಳನ್ನೂ ನನ್ನೊಂದಿಗೆ ಹಂಚಿಕೊಳ್ಳತೊಡಗಿದರು.

ನನ್ನ ಎಲ್ಲಾ ದೋಷಗಳೊಮದಿಗೇ ನಾನು ಬದುಕಬಹುದು ಎಂಬ ಆತ್ಮವಿಶ್ವಾಸ ಇಂದು ಮೂಡಿದೆ. ಕಳೆದ 4 ವರ್ಷಗಳಲ್ಲಿ ನನ್ನ ಕಥೆಯನ್ನು ಇನ್ನಷ್ಟು ಮಂದಿಯ ಜೊತೆಗೆ ಹಂಚಿಕೊಳ್ಳಲು ಆತ್ಮಕತೆಯ ಪುಸ್ತಕವನ್ನು ಸಹ ಬರೆದಿದ್ದೇನೆ.

ಕಳೆದ ಒಂದು ದಶಕದಲ್ಲಿ ನನ್ನ ದೊಡ್ಡ ಸಾಧನೆಯೆಂದರೆ, 'ನಾನು ಅಪರಿಪೂರ್ಣ, ಆದರೆ ಸುಂದರಿ' ಎಂದು ನನ್ನನ್ನು ಒಪ್ಪಿಕೊಂಡಿರುವುದು. ಈಗ ನನ್ನ ಲುಕ್ ಬಗ್ಗೆ ಏನಾದರೂ ಯಾರಾದರೂ ಕೆಟ್ಟ ಕಮೆಂಟ್ ಮಾಡಿದರೆ ನಾನು ಕೇಳುತ್ತೇನೆ- ''ಹೌದು, ನನ್ನ ಕಣ್ಣುಗಳಲ್ಲಿ ಡೊಂಕು ಇದೆ ಮತ್ತು ಕುತ್ತಿಗೆ ವಕ್ರವಾಗಿದೆ. ನಿಮ್ಮಲ್ಲಿ ವಿಶಿಷ್ಟವಾದುದು ಏನಿದೆ?’’

Woman with Saree ರಸ್ತೆಯಲ್ಲಿ ಸೀರೆಯುಟ್ಟ ನಾರಿಯ ಲಾಂಗ್‌ಬೋರ್ಡ್ ಸವಾರಿ!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?