ಮಗು ಹೆಣ್ಣಾಗ್ಲಿ ಗಂಡಾಗ್ಲಿ ಆರೋಗ್ಯವಾಗಿರಲಿ ಎಂದು ಕೆಲವರು ಬಯಸ್ತಾರೆ. ಮತ್ತೆ ಕೆಲವರು ಗಂಡು ಅಥವಾ ಹೆಣ್ಣಿನ ಬಯಕೆ ಹೊಂದಿರುತ್ತಾರೆ. ಈ ಆಸೆ ಅತಿಯಾದ್ರೆ ಕಷ್ಟ… ಈ ಮಹಿಳೆಯಂತೆ ಹೆರುತ್ಲೆ ಇರಬೇಕಾಗುತ್ತೆ.
ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಬೇಕು ಎನ್ನುವ ಬಯಕೆ ಅನೇಕರದ್ದು. ಮಗಳು ಆಗ್ಲಿ ಬಿಡಲಿ, ವಂಶೋದ್ಧಾರಕ ಬೇಕು ಎನ್ನುವ ಕಾರಣಕ್ಕೆ ಗಂಡು ಮಗು ಪಡೆಯಲು ಅನೇಕ ಪ್ರಯತ್ನ ನಡೆಸಿದ ಜನರು ನಮ್ಮಲ್ಲಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಮಾಡಿ, ಗಂಡು ಮಗುವಿಗಾಗಿ ದೇವರಲ್ಲಿ ಹರಕೆ ಹೊತ್ತುಕೊಂಡವರು ಸಾಕಷ್ಟು ಮಂದಿ. ಈಗ್ಲೂ ಅನೇಕರು ಗಂಡು ಮಗುವಿಗಾಗಿ ಹಪಹಪಿಸುತ್ತಾರೆ. ಗಂಡು ಮಗು ಹೆರಲಿಲ್ಲ ಎನ್ನುವ ಕಾರಣಕ್ಕೆ ಪತ್ನಿಯನ್ನೇ ಹೊರಗೆ ಹಾಕುವ ಕೆಲ ಘಟನೆಗಳು ಈಗ್ಲೂ ವರದಿಯಾಗ್ತಿರುತ್ತವೆ. ಆದ್ರೆ ಇತ್ತೀಚಿಗೆ ಕಾಲ ಸ್ವಲ್ಪ ಬದಲಾಗಿದೆ. ಗಂಡು ಮಕ್ಕಳ ಜೊತೆ ಹೆಣ್ಣು ಮಕ್ಕಳನ್ನು ಕೂಡ ಖುಷಿಯಿಂದ ಜನರು ಸ್ವೀಕರಿಸುತ್ತಿದ್ದಾರೆ. ಹೆಣ್ಣು ಮಗು ಜನಿಸಿದಾಗ ಹಬ್ಬ ಮಾಡಿ ಅದನ್ನು ಸಂಭ್ರಮಿಸುವವರಿದ್ದಾರೆ.
9 ಗಂಡು ಮಕ್ಕಳ ತಾಯಿ (Mother) ಈಕೆ : ಗಂಡು ಮಗು ಬೇಕು ಎನ್ನುವ ಕಾರಣ ನಾಲ್ಕೈದು ಹೆಣ್ಣು ಹೆರುವ ಜನರ ಮಧ್ಯೆಯೇ ಈ ಮಹಿಳೆ ಗಮನ ಸೆಳೆದಿದ್ದಾರೆ. ಈ ಮಹಿಳೆಗೆ ಮಗಳೊಬ್ಬಳು ಮನೆಗೆ ಬರಬೇಕೆಂಬ ಆಸೆ ಅತೀಯಾಗಿದೆ. ಇದೇ ಕಾರಣಕ್ಕೆ 9 ಗಂಡು ಮಕ್ಕಳನ್ನು ಈ ಮಹಿಳೆ ಪಡೆದಿದ್ದಾರೆ. 9 ಮಕ್ಕಳ ತಾಯಿ ಈಗ ಮತ್ತೊಮ್ಮೆ ಗರ್ಭಿಣಿ. ಈ ದಂಪತಿ ಟೆಕ್ಸಾಸ್ (Texas) ನಲ್ಲಿ ನೆಲೆಸಿದ್ದಾರೆ. ಮಹಿಳೆಯ ಹೆಸರು ಯಲಾನ್ಸಿಯಾ ರೊಸಾರಿಯೊ. ಅವರಿಗೆ ಕೇವಲ 30 ವರ್ಷ. ಯಲಾನ್ಸಿಯಾಗೆ ಹೆಣ್ಣು ಮಗು ಬೇಕಂತೆ. ಆದರೆ ಅವರ ಆಸೆ ಇನ್ನೂ ಈಡೇರುತ್ತಿಲ್ಲ.
ಮತ್ತೆ ಗರ್ಭಿಣಿ (Pregnant) ಯಲಾನ್ಸಿ : ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದೇನೆ ಎಂದು ಯಲಾನ್ಸಿಯಾ ಹೇಳಿದ್ದಾರೆ. ಈ ವರ್ಷ ಖಂಡಿತಾ ಹೆಣ್ಣು ಮಗುವಿಗೆ ಜನ್ಮ ನೀಡ್ತೇನೆಂದು ಯಲಾನ್ಸಿ ಬಲವಾದ ನಂಬಿಕೆ ಹೊಂದಿದ್ದಾರೆ. ಯಲಾನ್ಸಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವಳಿಗಳ ಸ್ಕ್ಯಾನ್ ಪೋಸ್ಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ. ಹೆಣ್ಣು ಮಗು ಹುಟ್ಟುವವರೆಗೂ ನಾನು ಮಕ್ಕಳನ್ನು ಪಡೆಯುತ್ತಲೇ ಇರುತ್ತೇನೆ ಎನ್ನುತ್ತಾರೆ ಯಲಾನ್ಸಿಯಾ.
ಯಲಾನ್ಸಿಯಾ ಮಕ್ಕಳ ವಯಸ್ಸೆಷ್ಟು? : ಯಲಾನ್ಸಿಯಾ ಮೊದಲ ಮಗುವಿನ ವಯಸ್ಸು 12 ವರ್ಷ. ಜಮೆಲ್ ದೊಡ್ಡ ಮಗ. ಮೈಕೆಲ್ ಜೂನಿಯರ್ ಗೆ 9 ವರ್ಷ. ಏಂಜೆಲೋಗೆ 8 ವರ್ಷ. ಅರ್ಮಾನಿಗೆ 6 ವರ್ಷ. ಪ್ರಿನ್ಸ್ ಗೆ 5 ವರ್ಷ. ಸಿನ್ಸಿರ್ ಗೆ 3 ವರ್ಷ. ಇನ್ನೊಂದು ಮಗನಿಗೆ 2 ವರ್ಷ. ಇನ್ನು ಗಿಮಾನಿಗೆ 1 ವರ್ಷವಾದ್ರೆ ಕೈರೋಗೆ 2 ತಿಂಗಳು.
ಪಲ್ಯ ತಿಂದಂಗೆ ಉಪ್ಪಿಕಾಯಿ ತಿಂತೀರಾ? ಲೈಂಗಿಕ ಜೀವನಕ್ಕೇ ಕುತ್ತು ತರೋದು ಪಕ್ಕಾ
18ನೆ ವರ್ಷಕ್ಕೆ ಗರ್ಭ ಧರಿಸಿದ ಮಹಿಳೆ : ಯಲಾನ್ಸಿಯಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಕ್ಕಳೊಂದಿಗೆ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರೊಸಾರಿಯೊ ಅವರು 18 ನೇ ವಯಸ್ಸಿನಲ್ಲಿ ತನ್ನ ಮೊದಲ ಮಗನಿಗೆ ಜನ್ಮ ನೀಡಿದರು. ಅಂದಿನಿಂದ ಅವರು ಪ್ರತಿ ವರ್ಷ ನಿರಂತರವಾಗಿ ಗರ್ಭಿಣಿಯಾಗುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿ ಆಗುವ ಏರಿಳಿತಗಳ ಬಗ್ಗೆಯೂ ಅವರು ಇನ್ಸ್ಟಾಗ್ರಾಮ್ ನಲ್ಲಿ ಮಾತನಾಡ್ತಾರೆ. ಒಮ್ಮೆ ಅವರು ಗರ್ಭಪಾತಕ್ಕೆ ಒಳಗಾಗಿದ್ದರಂತೆ.
ಸಾಮಾಜಿಕ ಜಾಲತಾಣದಲ್ಲಿ (Social Media) ಯಲಾನ್ಸಿ ಟ್ರೋಲ್ ಆಗಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡ್ತೇನೆ ಎಂದಾಗ ಜನರು ನಾನಾ ರೀತಿ ಕಮೆಂಟ್ ಮಾಡ್ತಿದ್ದಾರೆ. ಇದ್ಯಾವುದಕ್ಕೂ ಯಲಾನ್ಸಿಯಾ ತಲೆಕೆಡಿಸಿಕೊಂಡಿಲ್ಲ. ಈ ಎಲ್ಲ ಮಕ್ಕಳನ್ನು ಸಾಕಲು ನನ್ನ ಬಳಿ ಹಣವಿದೆ ಎಂದ ಯಲಾನ್ಸಿ ನಮ್ಮ ಕುಟುಂಬದ ಮಾಸಿಕ ವೇತನ 2200 ಡಾಲರ್. ಇದನ್ನು ನಾವು ಆರಾಮವಾಗಿ ಹೊಂದಿಸುತ್ತಿದ್ದೇವೆಂದು ಯಲಾನ್ಸಿ ಹೇಳಿದ್ದಾರೆ.