ವೈರಲ್ ಕುಮಾರಿ ಆಂಟಿಗೆ ರಿಲೀಫ್, ಫುಡ್ ಸ್ಟಾಲ್ ತೆರೆಯಲು ಸಿಎಂ ಆದೇಶ

By Suvarna News  |  First Published Feb 1, 2024, 2:56 PM IST

ಹೈದ್ರಾಬಾದ್ ನ ಕುಮಾರಿ ಆಂಟಿಗೆ ನೆಮ್ಮದಿ ಸಿಕ್ಕಿದೆ. ಹನ್ನೊಂದು ವರ್ಷದಿಂದ ಹೊಟ್ಟೆ ತುಂಬಿಸುತ್ತಿದ್ದ ಫುಡ್ ಸ್ಟಾಲ್ ಬಂದ್ ಆಗುವ ಭಯದಲ್ಲಿದ್ದ ಆಂಟಿಗೆ ಸಿಎಂ ನೆಮ್ಮದಿ ನೀಡಿದ್ದಾರೆ. ಇಷ್ಟಲ್ಲದೆ ಖುಷಿ ಸುದ್ದಿಯೊಂದು ಸಿಕ್ಕಿದೆ.  
 


ರುಚಿ ರುಚಿ ಅಡುಗೆ ಅಂದ್ರೆ ಎಲ್ಲರೂ ಇಷ್ಟಪಡ್ತಾರೆ. ಅದ್ರಲ್ಲೂ ಭಾರತೀಯರು ಒಳ್ಳೆ ಊಟ ಹುಡುಕಿಕೊಂಡು ದೂರದ ಊರುಗಳಿಗೆ ಬೇಕಾದ್ರೂ ಹೋಗ್ತಾರೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈಗ ಆಹಾರ, ರೆಸ್ಟೋರೆಂಟ್ ವಿಡಿಯೋಗಳು ಹೆಚ್ಚು ವೈರಲ್ ಆಗ್ತಿವೆ. ಜನರು ಆ ವಿಡಿಯೋಗಳನ್ನು ನೋಡಿ, ರುಚಿ ಟೆಸ್ಟ್ ಮಾಡೋಕೆ ಅಲ್ಲಿಗೆ ಹೋಗ್ತಾರೆ. ಸಾಮಾಜಿಕ ಜಾಲತಾಣದ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದ ಆಂಟಿ ಕುಮಾರಿ ಆಂಟಿ. ಹೈದ್ರಾಬಾದ್ ನಲ್ಲಿರುವ ಈ  ಬೀದಿ ಬದಿ ಅಂಗಡಿ ಸದ್ಯ ಸುದ್ದಿಯಲ್ಲಿದೆ. ಟ್ರಾಫಿಕ್ ಜಾಮ್ ಎನ್ನುವ ಕಾರಣಕ್ಕೆ ಪೊಲೀಸರು, ಅಂಗಡಿ ತೆರವುಗೊಳಿಸುವಂತೆ ಹೇಳಿದ್ದರು. ಇದ್ರಿಂದ ಟೆನ್ಷನ್ ನಲ್ಲಿದ್ದ ಕುಮಾರಿ ಆಂಟಿಗೆ ಈಗ ರಿಲೀಫ್ ಸಿಕ್ಕಿದೆ. ಕುಮಾರಿ ಆಂಟಿ ಅಂಗಡಿ ತೆರವುಗೊಳಿಸುವ ಆದೇಶವನ್ನು ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆದೇಶ ನೀಡಿದ್ದಾರೆ. ಅಷ್ಟಕ್ಕೂ ಕುಮಾರಿ ಆಂಟಿ ಯಾರು, ಅವರು ಬೀದಿ ಬದಿ ಅಂಗಡಿಯಲ್ಲಿ ಏನೆಲ್ಲ ಸಿಗ್ತಿತ್ತು ಎನ್ನುವ ವಿವರ ಇಲ್ಲಿದೆ.

ಹೈದ್ರಾಬಾದ್ (Hyderabad) ನ ಐಟಿಸಿ ಕೊಹಿನೂರ್ ಜಂಕ್ಷನ್ (ITC Kohinoor Junctin) ಬಳಿ ರಸ್ತೆಬದಿಯಲ್ಲಿ ಕುಮಾರಿ ಆಂಟಿ ಫುಡ್ ಸ್ಟಾಲ್ (Food Stall) ಇದೆ. ಕಳೆದ ಹನ್ನೊಂದು ವರ್ಷಗಳಿಂದ ಕುಮಾರಿ ಆಂಟಿ (Kumari Aunty) ಈ ಫುಡ್ ಸ್ಟಾಲ್ ನಡೆಸುತ್ತಿದ್ದಾರೆ. ಅನ್ನ, ಚಿಕನ್ (Chicken) ಹಾಗೂ ಮಟನ್ ಇಲ್ಲಿನ ಫೇಮಸ್ ಆಹಾರವಾಗಿದೆ. ಕುಮಾರಿ ಆಂಟಿಯ ಸ್ಟಾಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಲಭ್ಯವಿದೆ. ಅಲ್ಲಿಗೆ ಪ್ರತಿದಿನ 400-500 ಗ್ರಾಹಕರು ಊಟಕ್ಕೆ ಬರುತ್ತಾರೆ. ಅವರ ಹೆಚ್ಚಿನ ಗ್ರಾಹಕರು ಐಟಿ ಮತ್ತು ಐಟಿಯೇತರ ಕಂಪನಿಗಳ ಉದ್ಯೋಗಿಗಳು.   

Tap to resize

Latest Videos

undefined

ಮಾತು ಮಾತಿಗೂ ಸಿಡುಕುವ ಮಧ್ಯ ವಯಸ್ಕ ಮಹಿಳೆ; ಕಾರಣವೇನು?

ಕುಮಾರಿ ಆಂಟಿ ಚಿಕನ್ ಹಾಗೂ ಮಟನ್ ರುಚಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ಹಂಚಿಕೊಳ್ಳಲಾಗಿತ್ತು. ಈ ವಿಡಿಯೋ ವೈರಲ್ ಆಗಿದ್ದಲ್ಲದೆ ಕುಮಾರಿ ಆಂಟಿ ಬಗ್ಗೆ ಕೆಲ ವಿಡಿಯೋಗಳು ಪೋಸ್ಟ್ ಆಗಿದ್ದವು. ಇದನ್ನು ನೋಡಿದ ಜನರು, ಕುಮಾರಿ ಆಂಟಿ (Kumari Aunty) ಕೈ ರುಚಿ ನೋಡಲು ಶಾಪ್ ಗೆ ಬರ್ತಿದ್ದರು. ಅನೇಕ ಸೆಲೆಬ್ರಿಟಿಗಳು ಕೂಡ ಇಲ್ಲಿಗೆ ಬಂದಿದ್ದರು. ಅಲ್ಲದೆ ಕೆಲ ಯುಟ್ಯೂಬರ್, ವಿಡಿಯೋಗ್ರಾಫರ್ ಇಲ್ಲಿಗೆ ಬರ್ತಿದ್ದರು. ಗ್ರಾಹಕರ ಜೊತೆ ಯುಟ್ಯೂಬರ್ ಸಂಖ್ಯೆ ಹೆಚ್ಚಾಗಿದ್ದರಿಂದ ಶಾಪ್ ಮುಂದೆ ಜನಸಂದಣಿ ಹೆಚ್ಚಾಗ್ತಾನೆ ಇತ್ತು. ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಿದ್ದು ಒಂದ್ಕಡೆ ಲಾಭವಾದ್ರೆ ಇನ್ನೊಂದು ಕಡೆ ನಷ್ಟವಾಗಿತ್ತು. ಟ್ರಾಫಿಕಲ್ ಪೊಲೀಸರಿಗೆ ಅಲ್ಲಿನ ಟ್ರಾಫಿಕ್ ನಿಯಂತ್ರಿಸೋದು ದೊಡ್ಡ ತಲೆನೋವಾಗಿತ್ತು.

ಇದೇ ಕಾರಣಕ್ಕೆ ಮಂಗಳವಾರ ಸಂಚಾರಿ ಪೊಲೀಸರು (Traffic Police), ಕುಮಾರಿ ಆಂಟಿ ಸ್ಟಾಲ್ ಮುಂದೆ ನಿಂತಿದ್ದ ವಾಹನಗಳನ್ನು ತೆರವುಗೊಳಿಸಿದ್ದಲ್ಲದೆ ದಂಡ ವಿಧಿಸಿದ್ದರು. ಅಲ್ಲದೆ ಹೈದರಾಬಾದ್ ಟ್ರಾಫಿಕ್ ಪೊಲೀಸರು, ಫುಡ್ ಸ್ಟಾಲ್ ಮುಚ್ಚುವಂತೆ ಆದೇಶ ನೀಡಿದ್ದರು. ಈ ವಿಷ್ಯ ಸಾಕಷ್ಟು ಸುದ್ದಿ ಮಾಡಿತ್ತು. ಇದಾದ್ಮೇಲೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಧ್ಯಪ್ರವೇಶಿಸಿ ಆದೇಶವನ್ನು ರದ್ದುಗೊಳಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆ (Urban Development Department) ಮತ್ತು ಪೊಲೀಸ್ ಮಹಾನಿರ್ದೇಶಕರು ಮತ್ತು ಪೌರಾಡಳಿತ ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಆದೇಶದ ನಂತ್ರ ಕುಮಾರಿ ಆಂಟಿ ಫುಡ್ ಸ್ಟಾಲ್ ಗೆ ಯಾವುದೇ ಸಮಸ್ಯೆ ಆಗೋದಿಲ್ಲ. ಅದು ಎಂದಿನಂತೆ ತೆರೆದಿರಲಿದೆ. ಈ ಮಧ್ಯೆ ಮುಖ್ಯಮಂತ್ರಿ ಶೀಘ್ರವೇ ಕುಮಾರಿ ಆಂಟಿ ಫುಡ್ ಸ್ಟಾಲ್ಗೆ ಭೇಟಿ ನೀಡೋದಾಗಿ ಹೇಳಿದ್ದಾರೆ.

ಪತಿ ಜೊತೆ ನಿಮ್ಮ ಸಂಬಂಧ ಹೇಗಿದೆ? ಕೆಚಪ್ ಮೂಲಕ ಚೆಕ್ ಮಾಡಿ

ಇದು ಕುಮಾರಿ ಆಂಟಿ ಮುಖದಲ್ಲಿ ನಗು ಮೂಡಿಸಿದೆ. ಅವರು ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಘಟನೆಯಲ್ಲಿ ಮುಖ್ಯಮಂತ್ರಿ ನನ್ನ ಪರ ನಿಲ್ತಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಅವರು ಸ್ಟಾಲ್ ಗೆ ಬರ್ತಾರೆ ಎನ್ನುವ ಸುದ್ದಿ ಕೇಳಿ ಖುಷಿಯಾಗಿದೆ. ಅವರ ಆಯ್ಕೆಯ ಭಕ್ಷ್ಯವನ್ನು ನಾನು ತಯಾರಿಸ್ತೇನೆ ಎಂದು ಕುಮಾರಿ ಆಂಟಿ ಹೇಳಿದ್ದಾರೆ. 
 

click me!