
ಹೆಣ್ಣುಮಕ್ಕಳು ಧರಿಸುವ ಬಟ್ಟೆಗಳ ಬಗ್ಗೆ ಆಗಾಗ್ಗೆ ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ಹೆಚ್ಚು ಅ*ತ್ಯಾಚಾರ ನಡೆಯಲು ಹೆಣ್ಣುಮಕ್ಕಳು ಧರಿಸುವ ಬಟ್ಟೆ ಕಾರಣ ಎಂದು ಹಲವರು ಹೇಳಿದರೆ, ಬಟ್ಟೆಗೂ, ಅ*ತ್ಯಾಚಾರಕ್ಕೂ ಸಂಬಂಧವಿಲ್ಲ ಎನ್ನುವುದು ಮತ್ತೆ ಕೆಲವರ ಮಾತು. ಇದಕ್ಕೆ ಸಂಬಂಧ ಇದ್ದದ್ದೇ ಹೌದಾದರೆ, ಕಾಮುಕರು ಚಿಕ್ಕ ಮಕ್ಕಳ ಮೇಲೆ ಯಾಕೆ ಇಂಥ ಕೃತ್ಯ ಎಸಗುತ್ತಾರೆ ಎಂದು ಅವರು ಪ್ರಶ್ನಿಸುತ್ತಾರೆ. ಆದರೆ ಹೀಗೆ ದೇಹ ಪ್ರದರ್ಶನ ಮಾಡುತ್ತಾ, ತುಂಡುಡುಗೆ ತೊಟ್ಟ ಹೆಣ್ಣುಮಕ್ಕಳು ಈ ಕಾಮುಕರಿಗೆ ಸಿಗುವುದಿಲ್ಲ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಸುಲಭದಲ್ಲಿ ಸಿಗುವ ಮಕ್ಕಳ ಮೇಲೆ ತಮ್ಮ ತೀಟೆ ತೀರಿಸಿಕೊಳ್ಳುತ್ತಾರೆ. ಇದರಲ್ಲಿ ಬಹುದೊಡ್ಡ ಕೊಡುಗೆ ಎಲ್ಲವನ್ನೂ ಬಿಟ್ಟಿರೋ ಚಿತ್ರ ನಟಿಯರದ್ದಾಗಿರುತ್ತದೆ, ಅವರನ್ನೇ ಅನುಸರಿಸಿ ಕೆಲವು ಹೆಣ್ಣುಮಕ್ಕಳು, ಹೆಂಗಸರು ತಾವೇನು ಕಡಿಮೆ ಎನ್ನುವ ಕಾರಣಕ್ಕೆ ಧಾರಾಳವಾದ ಪ್ರದರ್ಶನ ಮಾಡುತ್ತಾರೆ ಎನ್ನುವುದು ಅವರ ಮಾತು.
ಇದನ್ನೂ ಓದಿ: ಕಮೆಂಟ್ ಹಾಕುವಾಗ ಎಚ್ಚರ ಎಚ್ಚರ! ಜೈಲೂಟ ಫಿಕ್ಸ್- ಡಿಲೀಟ್ ಮಾಡಿದ್ರೂ, ಫೇಕ್ ಐಡಿ ಆದ್ರೂ ಶಿಕ್ಷೆ ಗ್ಯಾರೆಂಟಿ!
ಹೀಗೆ ಬಟ್ಟೆಯ ಬಗ್ಗೆ ಪರ- ವಿರೋಧದ ನಿಲುವು ವ್ಯಕ್ತವಾಗುತ್ತಲೇ ಇರುತ್ತವೆ. ಇದೀಗ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Choudhary) ಅವರು, ಈ ಬಗ್ಗೆ ಮಾತನಾಡಿದ್ದಾರೆ. ಇವತ್ತಿನ ಮಾಡರ್ನೇಷನ್ ಕಾಲದಲ್ಲಿ ಬಟ್ಟೆ ಅವರವರಿಗೆ ಬಿಟ್ಟ ವಿಷಯ. ತುಂಡು ಬಟ್ಟೆ ಹಾಕಿಕೊಳ್ಳುವುದರಿಂದಲೇ ಅವರಿಗೆ ಸಂಸ್ಕಾರ ಇಲ್ಲ ಎಂದು ಹೇಳಲು ಆಗುವುದಿಲ್ಲ. ನಾನೊಬ್ಬಳು ಡೆಂಟಿಸ್ಟ್. ನನ್ನ ಕಾಲೇಜ್ ಡೇಸ್ನಲ್ಲಿ ಅಷ್ಟೇ ಏಕೆ 50 ವರ್ಷಗಳ ರೀಯೂನಿಯನ್ ಸಂದರ್ಭದಲ್ಲಿಯೂ ಚಿಕ್ಕ ಬಟ್ಟೆ, ಜೀನ್ಸ್ ಎಲ್ಲಾ ತೊಟ್ಟು ಡಾನ್ಸ್ ಮಾಡಿದ್ದೇನೆ. ಈಗ ನನಗೆ ಸೀರೆ ಇಷ್ಟ. ಅದಕ್ಕೇ ಸೀರೆ ಉಡುತ್ತಿದ್ದೇನೆ ಅಷ್ಟೇ. ಹಾಗೆಂದ ಮಾತ್ರಕ್ಕೆ ತುಂಡುಡುಗೆ ತೊಟ್ಟರೆ ಅವರಿಗೆ ಸಂಸ್ಕಾರ ಇಲ್ಲ ಎಂದು ಅರ್ಥವಲ್ಲ ಎಂದಿದ್ದಾರೆ.
ಪರ ವಿರೋಧ ನಿಲುವು:
ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ- ವಿರೋಧ ಚರ್ಚೆ ಶುರುವಾಗಿದೆ. ಕೆಲವರು ಅಧ್ಯಕ್ಷೆಯ ಮಾತನ್ನು ಒಪ್ಪಿಕೊಂಡಿದ್ದರೆ, ಮತ್ತೆ ಕೆಲವರು ನಿಮ್ಮಂಥ ಸ್ಥಾನದಲ್ಲಿ ಇರುವವರೇ ಈ ರೀತಿ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತದೇ ಅ*ತ್ಯಾಚಾರ ಪ್ರಕರಣಗಳ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ವಾದ ಶುರುವಾಗಿದೆ. ಹಲವರು ಪುರುಷರಿಗೆ ಸಂಸ್ಕಾರ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ವಾದಿಸುತ್ತಿದ್ದಾರೆ. ಆದಿಮಾನವರಲ್ಲಿ ಬಟ್ಟೆನೇ ಇರ್ಲಿಲ್ಲ. ಆದರೆ ಅಲ್ಲಿನ ಗಂಡುಜೀವಿಗಳಲ್ಲಿ ಸಂಸ್ಕಾರ ಇತ್ತು. ನೋಡೋರ ದೃಷ್ಟಿಯಲ್ಲೇ ದೋಷವಿರೋವಾಗ ಸಂಸ್ಕಾರ ಕಡಿಮೆ ಇದ್ದದ್ದು ಕೆಲವು ಅಸಂಸ್ಕಾರಿಗಳ ಬುದ್ಧಿಗೇಡಿತನ ಅದು ಎಂದು ಒಬ್ಬರು ಹೇಳಿದ್ದಾರೆ.
ಮತ್ತೆ ಕೆಲವರು, ತುಂಡು ಬಟ್ಟೆಗೆ ನೀವು ಈ ರೀತಿಯ ಪ್ರಚಾರ ಕೊಡುವುದು ಸರಿಯಾದ ಆಯ್ಕೆ ಅಲ್ಲ. ನಮ್ಮದು ಭಾರತೀಯ ಸಂಪ್ರದಾಯ. ಇಡೀ ವಿಶ್ವವೇ ಇಂದು ಭಾರತೀಯ ಸಂಪ್ರದಾಯದ ಮೊರೆ ಹೋಗುತ್ತಿರುವಾಗ, ಇಲ್ಲಿಯ ಆಚಾರ ವಿಚಾರಗಳೇ ಶ್ರೇಷ್ಠವಾದದ್ದು ಎಂದು ನಂಬಿರುವ ಸಂದರ್ಭದಲ್ಲಿ ದೇಹ ಪ್ರದರ್ಶನ ಮಾಡುತ್ತಾ, ಅಶ್ಲೀಲತೆ ಮೆರೆಯುವುದು ಸರಿಯಾದುದಲ್ಲ. ಮಕ್ಕಳಿಗೆ ಬುದ್ಧಿ ಹೇಳಬೇಕಾದ ನೀವೇ ಈ ರೀತಿ ಮಾಡುವುದು ಸರಿಯಲ್ಲ ಎಂದೂ ಹೇಳುತ್ತಿದ್ದಾರೆ. ಚಿಕ್ಕ ಮಕ್ಕಳ ಮೇಲೆ ಇಂದು ದೌರ್ಜನ್ಯ ನಡೆಯುತ್ತಿರುವುದಕ್ಕೆ ದೊಡ್ಡವರು ಇಂಥ ಅಶ್ಲೀಲ ಬಟ್ಟೆ ಹಾಕುವುದೇ ಕಾರಣ ಎನ್ನುವುದು ಅವರ ವಾದ. ಕೆಟ್ಟ ದೃಷ್ಟಿ ಎನ್ನುವುದು ನೋಡುಗರ ಕಣ್ಣಿನಲ್ಲಿಯೇ ಇರುತ್ತದೆ ಎಂದು ಹೇಳುವುದು ಬಲು ಸುಲಭ. ಆದರೆ, ಹೆಣ್ಣುಮಕ್ಕಳು ಇಂಥ ಅಸಭ್ಯ ಡ್ರೆಸ್ ಹಾಕಿದಾಗ ಗಂಡಸರು ಮಾತ್ರವಲ್ಲದೇ, ಹೆಣ್ಣು ಮಕ್ಕಳೇ ಅವರನ್ನು ಕಣ್ಣುಬಿಟ್ಟು ನೋಡುವುದು ಇದೆ. ಪರಿಸ್ಥಿತಿ ಹೀಗಿರುವಾಗ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹೆಣ್ಣಿನ ಬಟ್ಟೆ ಎನ್ನುವುದು ನಿಲ್ಲದ ಚರ್ಚೆಯ ವಿಷಯವಾಗಿದೆ. ಗುಡ್ನ್ಯೂಸ್ ಕನ್ನಡ ಚಾನೆಲ್ನಲ್ಲಿ ಅಧ್ಯಕ್ಷೆ ಹೇಳಿದ್ದೇನು? ಇಲ್ಲಿದೆ ವಿಡಿಯೋ:
ಇದನ್ನೂ ಓದಿ: Prajwal Revanna ಪೆನ್ಡ್ರೈವ್ನಲ್ಲಿ ಏನೇನಿತ್ತು? ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.