ಮಹಿಳಾ ನಾಯಕತ್ವಕ್ಕೆ ಎಚ್ಎಎಲ್ ಉತ್ತೇಜನ: 'ತೇಜಸ್ವಿ' ರಾಷ್ಟ್ರೀಯ ಮಹಿಳಾ ಸಮಾವೇಶ

Published : Sep 04, 2025, 09:23 PM IST
Tejasvi Conference HAL

ಸಾರಾಂಶ

ಬೆಂಗಳೂರಿನಲ್ಲಿ 'ತೇಜಸ್ವಿ' ಎಂಬ ಮೊದಲ ರಾಷ್ಟ್ರೀಯ ಮಹಿಳಾ ಸಮಾವೇಶವನ್ನು ಎಚ್ಎಎಲ್ ಮತ್ತು ಫೋರಮ್ ಆಫ್ ವಿಮೆನ್ ಇನ್ ಪಬ್ಲಿಕ್ ಸೆಕ್ಟರ್ ಆಯೋಜಿಸಿದ್ದವು. ಮನೆ ಮತ್ತು ಕೆಲಸದಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸಲಾಯಿತು. ಕಾರ್ಯಕ್ರಮದ ಪೂರ್ಣ ವರದಿ ಇಲ್ಲಿದೆ

ಬೆಂಗಳೂರು (ಸೆ.4): ದ ಫೋರಮ್ ಆಫ್ ವಿಮೆನ್ ಇನ್ ಪಬ್ಲಿಕ್ ಸೆಕ್ಟರ್ (ಸಾರ್ವಜನಿಕ ವಲಯದ ಮಹಿಳೆಯರ ಸಂಘಟನೆ) ಮತ್ತು ಎಚ್ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಸಂಸ್ಥೆಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಬಿ) ಫ್ಯಾಮಿಲೀಸ್ ವೆಲ್‌ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ಭಾರತದ ಮೊದಲ ರಾಷ್ಟ್ರೀಯ ಮಹಿಳಾ ಸಮಾವೇಶವಾದ 'ತೇಜಸ್ವಿ' ಅನ್ನು ಆಯೋಜಿಸಿದವು. 'ತೇಜಸ್ವಿ' ಸಮಾವೇಶವನ್ನು 'ವಿಮೆನ್ ಹೂ ಕ್ರಿಯೇಟ್ ರೇಡಿಯನ್ಸ್ ಎಟ್ ಹೋಮ್ ಆ್ಯಂಡ್ ಇನ್ ದ ವರ್ಕ್ ಪ್ಲೇಸ್' (ಮನೆ ಮತ್ತು ಉದ್ಯೋಗ ಸ್ಥಳಗಳೆರಡರಲ್ಲೂ ತಮ್ಮ ಛಾಪು ಮೂಡಿಸುವ ಮಹಿಳೆಯರು) ಎಂಬ ಥೀಮ್ ಅಡಿಯಲ್ಲಿ, ಎಚ್ಎಎಲ್ ಮ್ಯಾನೇಜ್ಮೆಂಟ್ ಅಕಾಡೆಮಿಯಲ್ಲಿ ಗುರುವಾರ ಆಯೋಜಿಸಲಾಯಿತು. ಈ ಸಮಾರಂಭ ಮಹಿಳೆಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನಿರ್ವಹಿಸುವ ಪಾತ್ರಗಳನ್ನು ಗೌರವಿಸಿತು.

ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ವಿಭಾಗದ ಜಂಟಿ ಕಾರ್ಯದರ್ಶಿಯಾದ ಮನಿಷಾ ಚಂದ್ರ ಐಎಎಸ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮನಿಷಾ ಅವರು ರಾಷ್ಟ್ರದ ಪ್ರಗತಿಯಲ್ಲಿ ಎಚ್ಎಎಲ್ ನಿರ್ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದರು. ಮಹಿಳೆಯರು ಮನೆಗಳಲ್ಲಿ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ನಿರ್ವಹಿಸುತ್ತಿರುವ ಪಾತ್ರವನ್ನು ಬಣ್ಣಿಸಿದ ಅವರು, ಮಹಿಳೆಯರು ರೇಡಿಯಂಟ್, ಅಥೆಂಟಿಕ್, ಡೆಡಿಕೇಟೆಡ್, ಇಂಟಲಿಜೆಂಟ್, ಅಟಾಪ್ಟೇಬಲ್, ನರ್ಚರಿಂಗ್, ಕ್ರಿಯೇಟಿವ್ ಮತ್ತು ಎಂಪತೆಟಿಕ್ (RADIANCE) ಎಂದು ವಿವರಿಸಿದರು.

ಸಮಾರಂಭದಲ್ಲಿ, ಎಚ್ಎಎಲ್ (ಬಿ) ಫ್ಯಾಮಿಲೀಸ್ ವೆಲ್‌ಫೇರ್ ಅಸೋಸಿಯೇಷನ್ನಿನ 50ನೇ ವರ್ಷವನ್ನು ಆಚರಿಸಲು ವಿಶೇಷ ಗೋಲ್ಡನ್ ಜ್ಯುಬಿಲೀ ಅಂಚೆ ಕವರ್ ಅನ್ನು ಬಿಡುಗಡೆಗೊಳಿಸಲಾಯಿತು. ಈ ಸಂಸ್ಥೆಯ ವತಿಯಿಂದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದ್ದು, ಸಮಿತಿಯ ಮುಖ್ಯಸ್ಥರಾದ ಡಾ. ಶುಭಾ ಸುನಿಲ್ ಅವರ ನೇತೃತ್ವದಲ್ಲಿ ಇನ್ನಷ್ಟು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗ್ರಂಥಿಶಾಸ್ತ್ರಜ್ಞರು (ಆಂಕಾಲಜಿಸ್ಟ್) ಮತ್ತು ಶಸ್ತ್ರಚಿಕಿತ್ಸಕರಾದ ಡಾ. ವಿಜಯಲಕ್ಷ್ಮಿ ದೇಶಮಾನೆ, ಅಮೃತಾ ವಿಶ್ವಪೀಠಂನ ಡೀನ್ ಮತ್ತು ಯುನೆಸ್ಕೋ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಮುಖ್ಯಸ್ಥರಾದ ಡಾ. ಭವಾನಿ ರಾವ್, ಗುಪ್ತಾ ನಾಯರ್ & ಕೊ ಸಂಸ್ಥೆಯ ಸತ್ಯಭಾಮಾ ಗುಪ್ತಾ ಸೇರಿದಂತೆ ವಿವಿಧ ಅತಿಥಿಗಳು ಸಮಾರಂಭದಲ್ಲಿ ಭಾಗಿಯಾಗಿ, ನಾಯಕತ್ವ, ಮಹಿಳಾ ಸಬಲೀಕರಣ ಮತ್ತು ಯೋಗಕ್ಷೇಮ, ಆರ್ಥಿಕತೆ, ಉದ್ಯೋಗ ಮತ್ತು ಜೀವನದ ನಡುವಿನ ಸಮತೋಲನ ಸೇರಿದಂತೆ ವಿವಿಧ ವಿಚಾರಗಳ ಕುರಿತು ಅರಿವು ಮೂಡಿಸಿದರು.

 

ಎಚ್ಎಎಲ್, ಕೇಂದ್ರೀಯ ರಕ್ಷಣಾ ಸಂಸ್ಥೆಗಳು, ಮತ್ತು ದೇಶಾದ್ಯಂತ ಇತರ ಸಿಪಿಎಸ್ಇಗಳ 350ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದರು. ಸಮಾರಂಭದಲ್ಲಿ ಆಯೋಜಿಸಲಾದ ವಿವಿಧ ಮಾಹಿತಿಪೂರ್ಣ ಅವಧಿಗಳು ಸಂಸ್ಥೆಗಳು, ಕುಟುಂಬಗಳು ಮತ್ತು ಸಮಾಜಕ್ಕೆ ಹೊಸ ಅವಕಾಶಗಳನ್ನು ಒದಗಿಸಿದವು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!