ಮುಟ್ಟಿದ್ರೆ ಶಾಕ್: ಮಹಿಳೆಯರ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಶೂ ತಯಾರಿಸಿದ ವಿದ್ಯಾರ್ಥಿ

Published : Feb 04, 2025, 01:15 PM IST
ಮುಟ್ಟಿದ್ರೆ  ಶಾಕ್: ಮಹಿಳೆಯರ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಶೂ ತಯಾರಿಸಿದ ವಿದ್ಯಾರ್ಥಿ

ಸಾರಾಂಶ

ರಾಜಸ್ಥಾನದ ಪಾಲಿಟೆಕ್ನಿಕ್ ವಿದ್ಯಾರ್ಥಿಯೊಬ್ಬರು ಯುವತಿಯರ ರಕ್ಷಣೆಗಾಗಿ ವಿದ್ಯುತ್ ಆಘಾತ ನೀಡುವ ಶೂವನ್ನು ಕಂಡುಹಿಡಿದಿದ್ದಾರೆ. ಈ ಶೂ ಧರಿಸಿದ ಯುವತಿಯನ್ನು ಯಾರಾದರೂ ಮುಟ್ಟಿದರೆ, ಆ ವ್ಯಕ್ತಿಗೆ ವಿದ್ಯುತ್ ಆಘಾತವಾಗುತ್ತದೆ ಮತ್ತು ಯುವತಿಯ ಕುಟುಂಬಕ್ಕೆ ಸ್ಥಳದ ಮಾಹಿತಿ ಕಳುಹಿಸುತ್ತದೆ.

ಅಲ್ವಾರ್ : ಇಂದು ನಗರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು, ಕಿರುಕುಳಗಳು ಹೆಚ್ಚಾಗುತ್ತಿವೆ. ಆದರೆ ಸಾಮಾಜಿಕ ಮನಸ್ಥಿತಿಗಳ ಭಯದಿಂದಾಗಿ ಬಹುತೇಕ ಮಕ್ಕಳಾಗಲಿ ದೊಡ್ಡವರಾಗಲಿ ಇಂತಹ ವಿಚಾರಗಳನ್ನು ಹೇಳಿಕೊಳ್ಳಲು ಇಂದಿಗೂ ಹಿಂಜರಿಯುತ್ತಾರೆ. ಇದೇ ಕಾರಣಕ್ಕೆ ಹೆಣ್ಣು ಮಕ್ಕಳ ರಕ್ಷಣೆಗಾಗಿ ರಾಜಸ್ಥಾನದ ಪಾಲಿಟೆಕ್ಸಿಕ್ ವಿದ್ಯಾರ್ಥಿಯೊಬ್ಬ ಇಲೆಕ್ಟ್ರಿಕ್ ಶೂ ಕಂಡು ಹಿಡಿದಿದ್ದು, ಇದನ್ನು ಧರಿಸಿದ ಯುವತಿಯನ್ನು ಟಚ್‌ ಮಾಡಿದರೆ ಟಚ್ ಮಾಡಿದವರಿಗೆ ಕರೆಂಟ್ ಶಾಕ್ ಹೊಡೆಯುತ್ತೆ. ಜೊತೆಗೆ ಹುಡುಗಿ ಇರುವ ಸ್ಥಳದ ಬಗ್ಗೆ ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ಹೋಗುತ್ತದೆ. 

ವಿವೇಕ್ ಚೌಧರಿ ಎಂಬುವವರೇ ಈ ಇಲೆಕ್ಟ್ರಿಕ್ ಶೂ ನಿರ್ಮಿಸಿದ ಯುವಕ.  ಅಲ್ವಾರ್‌ನ ಲಕ್ಷ್ಮಣ್‌ಗಢದ ಲಿಲಿ ಗ್ರಾಮದ ನಿವಾಸಿಯಾದ ವಿವೇಕ್ ಚೌಧರಿ ಕೊನೆಯ ವರ್ಷದ ಪಾಲಿಟೆಕ್ಷಿಕ್ ಓದುತ್ತಿದ್ದು, ಮಹಿಳೆಯರು ಮತ್ತು ಹುಡುಗಿಯರ ಮೇಲಿನ ಕಿರುಕುಳದ ದಿನನಿತ್ಯದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಾಧನವನ್ನು ಕಂಡು ಹಿಡಿದಿದ್ದಾರೆ.  

ಈ ಶೂಗಳನ್ನು ಧರಿಸಿರುವ ಯಾವುದೇ ಮಹಿಳೆ ಅಥವಾ ಹುಡುಗಿಯನ್ನು ಮುಟ್ಟಿದರೆ ಮುಟ್ಟಿದವರಿಗೆ ಕೂಡಲೇ ವಿದ್ಯುತ್ ಆಘಾತವಾಗುತ್ತದೆ. ಜೊತೆಗೆ ಶೂ ಧರಿಸಿದವರು ನೀಡುವ ಒಂದು ಸಣ್ಣ ಸಿಗ್ನಲ್, ಅವರಿರುವ ಜಾಗದ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ನೀಡುತ್ತದೆ. ಈ ಸಾಧನ ಹೇಗಿದೆ ಎಂದರೆ ಶೂ ಧರಿಸಿದ ಹೆಣ್ಣು ಮಕ್ಕಳನ್ನು ಟಚ್ ಮಾಡಿದವರಿಗೆ ತನಗೆ ವಿದ್ಯುತ್ ಆಘಾತ ಹೇಗೆ ಆಯಿತು ಎಂಬುದೇ ತಿಳಿಯುವುದಿಲ್ಲ. ಅತ್ಯಂತ ಮುಖ್ಯವಾದ ವಿಷಯವೆಂದರೆ ಹಗಲು ಅಥವಾ ರಾತ್ರಿಯೇ ಆಗಿರಲಿ, ಶೂಗಳಲ್ಲಿ ಅಳವಡಿಸಲಾದ ಈ ಸಾಧನದ ಮೂಲಕ ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ.
ಯಾವುದೇ ಮಹಿಳೆ ಅಥವಾ ಹುಡುಗಿ ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದರೆ, ಅವಳು ತಕ್ಷಣವೇ ತಾನು ಧರಿಸಿರುವ ಶೂವಿನಲ್ಲಿ ಹಿಮ್ಮಡಿಯನ್ನು ಕಾಲಿನಿಂದಲೇ ಬಲವಾಗಿ ಒತ್ತಿದರೆ ಆ ಸಾಧನದಿಂದ ಹೊರಬರುವ ಕರೆಂಟ್ ಸಕ್ರಿಯಗೊಳ್ಳುತ್ತದೆ ಎಂದು ವಿವೇಕ್ ಹೇಳಿದಾರೆ. ಇದರಿಂದ ಯಾರಾದರೂ ಮಹಿಳೆ ಅಥವಾ ಹುಡುಗಿಗೆ ಲೈಂಗಿಕವಾಗಿ ಕಿರುಕುಳ ನೀಡಿದರೆ, ಅವರಿಗೆ ತೀವ್ರವಾದ ವಿದ್ಯುತ್ ಆಘಾತವಾಗುತ್ತದೆ. ಇದರೊಂದಿಗೆ, ಇನ್ನೊಂದು ಶೂನಲ್ಲಿ ಅಳವಡಿಸಲಾದ ಜಿಪಿಎಸ್ ಮೂರು ಸಂಖ್ಯೆಗಳಿಗೆ ಘಟನೆ ನಡೆದ ಸ್ಥಳವನ್ನು ಕಳುಹಿಸುತ್ತದೆ. ಇದರಿಂದಾಗಿ ಕುಟುಂಬ ಸದಸ್ಯರು ಸಹ ಜಾಗರೂಕರಾಗುತ್ತಾರೆ. ಸ್ಥಳದ ಮಾಹಿತಿ ಕಳುಹಿಸಲು ಒಂದು ಶೂನ ಬದಿಯಲ್ಲಿ ಒಂದು ಬಟನ್ ಕೂಡ ಇದೆ.

ಎರಡೂ ಶೂಗಳಲ್ಲಿ ಅಳವಡಿಸಿರುವ ಸಾಧನಗಳಲ್ಲಿ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 100 ವೋಲ್ಟ್‌ಗಳ ಆಘಾತವನ್ನು ನೀಡಬಹುದು. ಪೊಲೀಸ್ ಅಧಿಕಾರಿಗಳ ಮುಂದೆ ಈ ಸಾಧನದ ಪ್ರಸ್ತುತಿಯನ್ನು ಸಹ ನೀಡಿದ್ದೇನೆ ಎಂದು ವಿವೇಕ್ ಹೇಳಿದ್ದಾರೆ. ಅವರು ವಿನ್ಯಾಸಗೊಳಿಸಿದ ಸಾಧನ ಪೊಲೀಸ್ ಅಧಿಕಾರಿಗಳಿಗೆ ನಿಜವಾಗಿಯೂ ಇಷ್ಟವಾಗಿದ್ದು, ಶೂ ಸಂಸ್ಥೆಗಳು ಮುಂದೆ ಬಂದಲ್ಲಿ ಶಾಲಾ ವಿದ್ಯಾರ್ಥಿನಿಯರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವಲ್ಲಿ ಇದು ಮಹತ್ವದ ಮೈಲಿಗಲ್ಲಾಗಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!