
ಸುಂದರವಾಗಿ ಕಾಣಲು ಬಹುತೇಕರು ಮೇಕಪ್ ಮೊರೆ ಹೋಗ್ತಾರೆ. ಮೇಕಪ್ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮೇಕಪ್ ಗೆ ವಯಸ್ಸಿನ ಮಿತಿಯಿಲ್ಲ. ಚಿಕ್ಕ ವಯಸ್ಸಿನಿಂದಲೇ ಮೇಕಪ್ ಮಾಡುವ ಅನೇಕರಿದ್ದಾರೆ. ಪ್ರತಿ ದಿನ ಮೇಕಪ್ ಇಲ್ಲದೆ ಮನೆಯಲ್ಲಿ ಕೆಲವರು ಹೊರಗೆ ಹೋಗೋದಿಲ್ಲ. ಮತ್ತೆ ಕೆಲವರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಆಗಾಗ ಬ್ಯೂಟಿ ಪಾರ್ಲರ್ ಗೆ ಹೋಗಿ, ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡ್ತಾರೆ. ಈ ಸೌಂದರ್ಯ ವರ್ಧಕಗಳಲ್ಲಿ ರಾಸಾಯನಿಕ ಅಂಶವಿರುತ್ತದೆ. ಇದು ನಮ್ಮ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಈ ವಿಷ್ಯ ಕೆಲವರಿಗೆ ತಿಳಿದಿದೆ. ಆದ್ರೆ ಇದ್ರ ಬಗ್ಗೆ ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಆ ಕ್ಷಣ ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಮುಂದೆ ಬರುವ ಅಪಾಯವನ್ನು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಮೇಕಪ್ ಮಾಡೋ ಅಭ್ಯಾಸ ಇರೋ ಹಾಗೆಯೇ ಮೇಕಪ್ ರಿಮೂವ್ ಮಾಡೋ ಅಭ್ಯಾಸನೂ ಇರಬೇಕು.
ಮೇಕಪ್ ಖಚಿತವಾಗಿ ನಿಮ್ಮನ್ನು ಸುಂದರವಾಗಿ (Beautiful) ಕಾಣುವಂತೆ ಮಾಡುತ್ತದೆ. ಮುಖದ ಮೊಡವೆಗಳು, ಕಲೆಗಳು ಕಾಣದಂತೆ ಮುಖವನ್ನು ಬ್ಯೂಟಿಫುಲ್ ಆಗಿ ತೋರಿಸುತ್ತದೆ. ಹೀಗಾಗಿ ಮಹಿಳೆಯರು ಮನೆಯಿಂದ ಹೊರ ಹೋಗಬೇಕಾದರೆ ಎಲ್ಲಾ ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸಿ ಸುಂದರವಾಗಿ ಮೇಕಪ್ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಮೇಕಪ್ ಮಾಡೋದೇನೋ ಸರಿ. ಆದ್ರೆ ಮೇಕಪ್ ರಿಮೂವ್ ಮಾಡದೇ ಮಲಗೋ ಅಭ್ಯಾಸ ಮಾತ್ರ ಖಂಡಿತಾ ಒಳ್ಳೆಯದಲ್ಲ. ಮೇಕಪ್ ಮಾಡಿ ಮನೆಯಿಂದ ಹೊರ ಹೋಗಿ, ಸುದೀರ್ಘ ದಿನದ ನಂತರ ನೀವು ಸುಸ್ತಾಗಬಹುದು ಮತ್ತು ಮೇಕ್ಅಪ್ ತೆಗೆಯುವುದು ಒಂದು ದೊಡ್ಡ ಕೆಲಸದಂತೆ ಭಾಸವಾಗಬಹುದು. ಹಾಗಿದ್ದರೂ, ನೀವು ಮಲಗುವ ಮೊದಲು ನಿಮ್ಮ ಎಲ್ಲಾ ಮೇಕ್ಅಪ್ ಅನ್ನು ತೆಗೆದುಹಾಕುವುದು ಮುಖ್ಯವಾಗಿದೆ. ಯಾಕೆಂದರೆ ಮೇಕಪ್‌ನೊಂದಿಗೆ ಮಲಗುವ ಅಭ್ಯಾಸ (Habit) ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ.
Beauty Tips: ಮೇಕಪ್ ಮಾಡಿಕೊಳ್ಳದೆ ಸುಂದರವಾಗಿ ಕಾಣುವುದು ಹೇಗೆ..?
ಮಲಗುವ ಮೊದಲು ಮೇಕಪ್ ತೆಗೆಯದಿದ್ದರೆ ಚರ್ಮದ ಸಮಸ್ಯೆ
ಮೊಡವೆ: ನೀವು ಮಲಗುವ ಮೊದಲು ನಿಮ್ಮ ಮೇಕಪ್ ಅನ್ನು ತೆಗೆದುಹಾಕದಿದ್ದರೆ, ಅದು ನಿಮ್ಮ ಚರ್ಮದ (Skin) ರಂಧ್ರಗಳ ಮೇಲೆ ಹಾಗೆಯೇ ಇರುತ್ತದೆ. ಇದು ಚರ್ಮದ ರಂಧ್ರಗಳನ್ನು ಮುಚ್ಚುತ್ತದೆ. ಮುಖದ ರಂಧ್ರಗಳು ಮುಚ್ಚಿಹೋದಾಗ, ಇದು ಮೊಡವೆ (Pimple)ಗಳನ್ನು ಉಂಟು ಮಾಡುತ್ತದೆ. ಚರ್ಮವನ್ನು ಹಾನಿಗೊಳಿಸುತ್ತದೆ. ಅಲ್ಲದೆ, ದೀರ್ಘಕಾಲದವರೆಗೆ ಮೇಕ್ಅಪ್ ಮಾಡುವುದು ಇತರ ಚರ್ಮದ ಸಮಸ್ಯೆಗಳಿಗೂ ಕಾರಣವಾಗಬಹುದು. ಹೀಗಾಗಿ, ಮಲಗುವ ಮೊದಲು ಮೇಕಪ್ ತೆಗೆದುಹಾಕಿ ಮತ್ತು ನಿಮ್ಮ ಚರ್ಮಕ್ಕೆ ಸ್ವಲ್ಪ ತೇವಾಂಶವನ್ನು ಸೇರಿಸಿ. ಮುಖ ತೇವವಾಗಿರುವುದರಿಂದ ಬೇಗನೇ ಮೊಡವೆಯಾಗುವುದಿಲ್ಲ.
ತುರಿಕೆ ಚರ್ಮ: ದೀರ್ಘಕಾಲದವರೆಗೆ ಮೇಕಪ್ ಧರಿಸಿದಾಗ, ಚರ್ಮವು ಬಹಳಷ್ಟು ಬಾರಿ ಒಣಗುತ್ತದೆ. ಇದು ತುರಿಕೆಗೆ ಕಾರಣವಾಗಬಹುದು. ಇದಲ್ಲದೆ, ಮೇಕಪ್ ರಿಮೂವ್ ಮಾಡದಿದ್ದರೆ, ಮುಖದಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇದು ನಿಮ್ಮ ಚರ್ಮಕ್ಕೆ ಹಾನಿಕಾರಕವಾಗಿದೆ.
ಕಿರಿಕಿರಿಯುಂಟುಮಾಡುವ ಕಣ್ಣುಗಳು: ಮೇಕಪ್ ರಿಮೂವ್ ಮಾಡದೇ ಮಲಗಿದಾಗ ಕಣ್ಣುಗಳ (Eyes) ಸೂಕ್ಷ್ಮ ಪ್ರದೇಶವು ಉರಿಯಲು ಶುರುವಾಗುತ್ತದೆ. ಏಕೆಂದರೆ ಕಣ್ಣುಗಳ ಸುತ್ತಲಿನ ಚರ್ಮವು ಉಸಿರಾಡಲು ಕಷ್ಟವಾಗುತ್ತದೆ. ಆದ್ದರಿಂದ, ಮಲಗುವ ಮೊದಲು ಮೇಕ್ಅಪ್ ಅನ್ನು ತೆಗೆದುಹಾಕುವುದು ಬಹಳ ಮುಖ್ಯ.
Beauty Tips: ತುಟಿಯ ಸುತ್ತಲಿನ ಸುಕ್ಕು ನಿವಾರಿಸಲು ಈ ಟ್ಟ್ರಿಕ್ಸ್ ಟ್ರೈ ಮಾಡಿ
ಒಣ ತುಟಿಗಳು: ಪ್ರತಿಯೊಬ್ಬರೂ ಲಿಪ್‌ಸ್ಟಿಕ್ ಹಚ್ಚುವುದನ್ನು ಇಷ್ಟಪಡುತ್ತಾರೆ. ಆದರೆ ಲಿಪ್‌ಸ್ಟಿಕ್ ಗಾಢವಾಗಿ ಹಚ್ಚುವುದೇನೋ ಸರಿ. ಆದರೆ ನೀವು ಮಲಗುವ ಮೊದಲು ಅವುಗಳನ್ನು ತೆಗೆದುಹಾಕದಿರುವುದು ತುಟಿಗಳು ಒಣಗಲು ಮತ್ತು ಒಡೆಯಲು ಕಾರಣವಾಗುತ್ತದೆ. ಏಕೆಂದರೆ ಲಿಪ್‌ಸ್ಟಿಕ್‌ಗಳು ತುಟಿಗಳನ್ನು ತೇವಗೊಳಿಸುವುದಿಲ್ಲ, ಬದಲಿಗೆ ಅವು ತುಟಿಗಳನ್ನು ಇನ್ನಷ್ಟು ಹೆಚ್ಚು ಒಣಗಿಸುತ್ತವೆ. ಹೀಗಾಗಿ ಯಾವತ್ತೂ ಮೇಕಪ್‌ನ್ನು ತೆಗೆಯದೆ ಮಲಗುವ ತಪ್ಪನ್ನು ಮಾಡಲೇಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.