
ತುಂಬಾ ಸೊಗಸಾಗಿ ಕಾಣಬೇಕು ಎಂಬುದು ಬಹುತೇಕರ ಆಸೆ. ಇತ್ತಿಚೆಗೆ ಹುಡುಗರಿಗೂ ಸೌಂದರ್ಯ ಪ್ರಜ್ಞೆ ಜಾಗೃತಿಯಾಗಿದೆ. ಆದರೆ ಹೆಣ್ಣು ಮಕ್ಕಳಿಗೆ ಹೋಲಿಸಿದರೆ ಪುರುಷರು ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದು ತುಸು ಕಡಿಮೆ. ಚೆನ್ನಾಗಿ ಕಾಣುವುದಕ್ಕೆ ಹೆಣ್ಣು ಮಕ್ಕಳು ಎಷ್ಟು ಬೇಕಾದರೂ ನೋವು ಸಹಿಸಿಕೊಳ್ಳುತ್ತಾರೆ. ಏನನ್ನೂ ಬೇಕಾದರು ಉಜ್ಜುತ್ತಾರೆ. ಬೆಳ್ಳಗೆ ಕಾಣಬೇಕು ಗೌರವರ್ಣಹೊಂದಿರಬೇಕು ಎಂಬದು ಬಹುತೇಕ ಎಲ್ಲಾ ಹೆಂಗೆಳೆಯರ ಆಸೆ. ಹೀಗಾಗಿ ಬ್ಯೂಟಿ ಹಾಗೂ ಸ್ಕಿನ್ ಪ್ರಾಡಕ್ಟ್‌ಗಳಷ್ಟು ಲಾಭದಾಯಕವಾಗಿ ನಡೆಯುವ ಸಂಸ್ಥೆಗಳು ಮತ್ತೊಂದಿಲ್ಲ. ಇದರ ಜೊತೆ ಮಹಿಳೆಯರು ಪ್ಲಾಸ್ಟಿಕ್ ಸರ್ಜರಿಯ ಮೊರೆಯನ್ನು ಹೋಗುತ್ತಾರೆ. ಲೇಸರ್ ಚಿಕಿತ್ಸೆಯನ್ನು ಮಾಡಿಕೊಳ್ಳುತ್ತಾರೆ. ಹೀಗೆ ಇದೆಲ್ಲಾ ನೋವುಗಳನ್ನು ತಿನ್ನೋದು ಒಂದೇ ಒಂದು ಕಾರಣಕ್ಕೆ ಅದು ತಾನು ಚೆನ್ನಾಗಿ ಕಾಣಬೇಕು ಎಂಬ ಆಸೆಯಿಂದ. ಅದೇ ರೀತಿ ಚೀನಾದಲ್ಲಿ ಈಗ ಹೆಣ್ಣು ಮಕ್ಕಳು ಚೆನ್ನಾಗಿ ಕಾಣುವುದಕ್ಕೆ ಕೃತಕ ಮೂಗಿನ ಮೊರೆ ಹೋಗಿದ್ದು, ಈ ಕೃತಕ ಮೂಗುಗಳು ಅವರನ್ನು ಗುರುತು ಸಿಗದಷ್ಟು ಬದಲಾಯಿಸಿ ಬಿಡುತ್ತವೆ.
ಹೌದು ಚೀನಾದಲ್ಲಿ ಈಗ ಕೃತಕ ಮೂಗುಗಳ ಹಾವಳಿ ಹೆಚ್ಚಾಗಿದೆ. ಚೀನಾದ ಮಹಿಳೆಯರು ತಮ್ಮ ಸೊಟ್ಟಗೆ, ಮೊಂಡು ಕಪ್ಪೆಯಂತೆ ಇರುವ ಮೂಗನ್ನು ಮರೆಮಾಚಿ ಸೊಗಸದ ತೀಕ್ಷ್ಣ ಹಾಗೂ ಚೂಪಾದ ಮೂಗನ್ನು ಪಡೆಯುವುದಕ್ಕಾಗಿ ಹೈಟೆಕ್ ಮೇಕಪ್ ಮೊರೆ ಹೋಗಿದ್ದಾರೆ. ಅನೇಕ ಸಿನಿಮಾ ತಾರೆಯರು, ಶ್ರೀಮಂತ ಮನೆತನದವರು ತಮ್ಮ ಒರೆಕೊರೆ ಮೊಂಡದ ಮೂಗನ್ನು ಸರಿಪಡಿಸಿಕೊಳ್ಳಲು ಕಾಸ್ಮೆಟಿಕ್ ಸರ್ಜರಿಯ ಮೊರೆ ಹೋಗುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲಿ ಜನಸಾಮಾನ್ಯರು ಕಾಸ್ಮೆಟಿಕ್ ಬದಲು ಹೈಟೆಕ್ ಮೇಕಪ್ ಮೊರೆ ಹೋಗುತ್ತಿದ್ದು, ಅದರ ಮೂಲಕವೇ ತಮ್ಮ ಒರೆಕೊರೆಯಾಗಿರುವ ಮೂಗನ್ನು ನೇರ ಮಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ ಈ ಕೃತಕ ಮೂಗನ್ನು ಅಳವಡಿಸುವ ಈ ಹೈಟೆಕ್ ಮೇಕಪ್‌ಗೆ ಸ್ಕ್ಲಪ್ಚರ್ ಮೇಕಪ್ ಎಂದು ಕರೆಯಲಾಗುತ್ತದೆ. ಇದೊಂದು ಹೈಟೆಕ್ ಮೇಕಪ್ ಎನಿಸಿದ್ದು, ಇದನ್ನು ಮಾಡುವುದರಿಂದ ಇದು ಕೃತಕ ಮೂಗು ಎಂಬುದು ಯಾರಿಗೂ ತಿಳಿಯುವುದೇ ಇಲ್ಲ, ಇದು ಒಬ್ಬರ ನೋಟವನ್ನು ಸಂಪೂರ್ಣವಾಗಿ ಬದಲಾಯಿಸಿ ಬಿಡುತ್ತದೆ. ಹಾಗೆಯೇ ಇದನ್ನು ತೆಗೆದರೆ ಅವರ ಗುರುತು ಪತ್ತೆ ಮಾಡುವುದು ಕೂಡ ಕಷ್ಟವೇ ಅಷ್ಟೊಂದು ಬದಲಾವಣೆ ಈ ಮೇಕಪ್‌ನಿಂದ ಮಾಡಿಕೊಳ್ಳಬಹುದಾಗಿದೆ.
ಇದೇನಿದು ಸ್ಕ್ಲಪ್ಚರ್ ಮೇಕಪ್?
ಈ ಸ್ಕ್ಲಪ್ಚರ್ ಮೇಕಪ್ ಮಾಡುವುದಕ್ಕೆ ವಿಶೇಷವಾದ ಮೇಣ ಅಥವಾ ಸಿಲಿಕಾನ್ ಅನ್ನು ಬಳಸಲಾಗುತ್ತದೆ. ಇದರ ಮೂಲಕ ನಕಲಿ ಮೂಗನ್ನು ರೆಡಿ ಮಾಲಾಗುತ್ತದೆ. ಹಾಗೂ ನಿಮ್ಮ ರಿಯಲ್ ಮೂಗನ್ನು ಮೇಕಪ್ ಮೂಲಕವೇ ಅಡಗಿಸಲಾಗುತ್ತದೆ. ಈ ಮೂಲಕ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲಾಗುತ್ತದೆ. ಹಾಗೆಯೇ ಕೆನ್ನೆಯನ್ನು ತೆಳ್ಳಗೆ ಮಾಡುವುದಕ್ಕೆ ಹಾಗೂ ಗಲ್ಲವನ್ನು ಚೂಪಾಗಿಸಲು ಟೇಪ್‌ಗಳನ್ನು ಬಳಸಲಾಗುತ್ತದೆ. ಇವುಗಳನ್ನು ತಲೆಕೂದಲಿನ ಕೆಳಗೆ ಅಡಗಿಸಲಾಗುತ್ತದೆ. ಈ ರೀತಿಯ ಮೇಕಪ್‌ಗಳು ಈಗ ಚೀನಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡಿಂಗ್‌ನಲ್ಲಿದೆ. ಈ ವೀಡಿಯೋಗಳಲ್ಲಿ ಚೀನಾದ ವಧುಗಳು ಈ ನಕಲಿ ಮೂಗನ್ನು ಪಡೆಯುವುದಕ್ಕಾಗಿ ಈ ಸ್ಕ್ಲಪ್ಚರ್ ಮೇಕಪ್‌ನ್ನು ಮಾಡಿಕೊಳ್ಳುತ್ತಾರೆ. ಮದುವೆ ಮಾತ್ರವಲ್ಲದೇ ಹಲವು ಬೇರೆ ಬೇರೆ ಸಮಾರಂಭಗಳಿಗೆ ಈ ರೀತಿ ಸಿದ್ಧಗೊಳ್ಳುವ ಮೂಲಕ ಹೆಣ್ಣು ಮಕ್ಕಳು ಸೊಗಸಾಗಿ ಕಾಣುತ್ತಾರೆ. ಈ ಮೇಕಪ್ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.