ಬಾಣಲೆಯಲ್ಲಿಯೇ ಆಹಾರ ಯಾಕೆ ಸೇವಿಸ್ಬಾರದು ಗೊತ್ತಾ?

By Suvarna NewsFirst Published Aug 29, 2022, 6:05 PM IST
Highlights

ಅಡುಗೆ ಮಾಡಿದ ಪ್ಯಾನ್‌ನಲ್ಲಿ ನಾವೆಲ್ಲ ಆಹಾರ ಸೇವನೆ ಮಾಡೋದಿಲ್ಲ. ಅದನ್ನು ಪ್ಲೇಟ್‌ಗೆ ಹಾಕಿ ತಿನ್ನತ್ತೇವೆ. ಯಾಕೆ ಬಾಣಲೆಯಲ್ಲಿ ಆಹಾರ ತಿನ್ಬಾರದು ಎಂಬ ಪ್ರಶ್ನೆಗೆ ಅನೇಕರ ಬಳಿ ಉತ್ತರವಿಲ್ಲ. ಅದು ಯಾಕೆ, ಅದಕ್ಕೆ ವೈಜ್ಞಾನಿಕ ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ.
 

ಆಹಾರ ತಯಾರಿಸುವಾಗ ನಾವು ಪ್ಯಾನ್ ಬಳಕೆ ಮಾಡ್ತೇವೆ. ಇತ್ತೀಚಿನ ದಿನಗಳಲ್ಲಿ ಅನೇಕ ವಿಧದ ಪ್ಯಾನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಾನ್ ಸ್ಟಿಕ್ ಪ್ಯಾನ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅಡುಗೆ ಮಾಡೋದು ಸುಲಭ ಎನ್ನುವ ಕಾರಣಕ್ಕೆ ಬಹುತೇಕರು ನಾನ್ ಸ್ಟಿಕ್ ಆಯ್ಕೆ ಮಾಡಿಕೊಳ್ತಾರೆ. ಯಾವುದೇ ಪ್ಯಾನ್ ನಲ್ಲಿ ಆಹಾರ ತಯಾರಾಗಿರಲಿ, ಆಹಾರ ಸೇವನೆ ಮಾಡುವಾಗ ಅದನ್ನು ಪ್ಲೇಟ್ ಗೆ ಹಾಕ್ತೇವೆ. ಒಬ್ಬರೇ ಇರಲಿ ಇಲ್ಲ ನಾಲ್ಕೈದು ಮಂದಿ ಇರಲಿ, ಪ್ಲೇಟ್ ಗೆ ಹಾಕಿಕೊಂಡು ಆಹಾರ ಸೇವನೆ ಮಾಡೋದು ಪದ್ಧತಿ. ಇದು ಬರೀ ಪದ್ಧತಿಯಲ್ಲ, ಬಾಣಲೆಯಲ್ಲಿ ಆಹಾರ ಸೇವನೆ ಮಾಡದಿರಲು ಅನೇಕ ಕಾರಣವಿದೆ. ಯಾಕೆ ಬಾಣಲೆಯಲ್ಲಿ ಆಹಾರ ಸೇವನೆ ಮಾಡ್ಬಾರದು ಎಂಬುದನ್ನು ನಾವಿಂದು ಹೇಳ್ತೇವೆ.

ಬಾಣಲೆ (Pan) ಯಲ್ಲಿ ಆಹಾರ ಸೇವನೆ ಮಾಡ್ಬೇಡ ಎಂದು ನಿಮ್ಮ ಹಿರಿಯರು ಹೇಳಿರೋದನ್ನು ನೀವು ಕೇಳಿರಬಹುದು. ಹಿರಿಯರ ಮಾತನ್ನು ಕೆಲವರು ನಿರ್ಲಕ್ಷ್ಯ ಮಾಡ್ತಾರೆ. ಮತ್ತೆ ಕೆಲವರು ಏನಾಗುತ್ತೆ ಅಂತಾ ಪ್ರಶ್ನೆ ಮಾಡ್ತಾರೆ. ಕೆಲವೇ ಕೆಲವು ಮಂದಿ ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡ್ತಾರೆ. 

ಬಾಣಲೆಯಲ್ಲಿ ಆಹಾರ (Food) ಸೇವನೆ ಮಾಡದಿರಲು ಕಾರಣ : ಅವಿವಾಹಿತ (Bachelors) ವ್ಯಕ್ತಿ ಬಾಣಲೆಯಲ್ಲಿ ಆಹಾರ ಸೇವನೆ ಮಾಡಿದ್ರೆ ಮದುವೆ ಸಂದರ್ಭದಲ್ಲಿ ಮಳೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಇನ್ನು ವಿವಾಹಿತ ವ್ಯಕ್ತಿಗಳು ಬಾಣಲೆಯಲ್ಲಿ ಆಹಾರ ಸೇವನೆ ಮಾಡಿದ್ರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಎಂದು ಹೇಳ್ತಾರೆ. ಬರೀ ಈ ಕಾರಣಕ್ಕೆ ಮಾತ್ರವಲ್ಲ ಪ್ಯಾನ್ ನಲ್ಲಿ ಆಹಾರ ಸೇವನೆ ಮಾಡದಿರಲು ವೈಜ್ಞಾನಿಕ ಕಾರಣವೂ ಇದೆ. ಇದು ನಮ್ಮ ಆರೋಗ್ಯಕ್ಕೆ ಸಂಬಂಧಿಸಿದೆ. 

ಬಾಣಲೆಯಲ್ಲಿ ಆಹಾರ ಸೇವನೆ ಮಾಡದಿರಲು ವೈಜ್ಞಾನಿಕ ಕಾರಣ : ಹಿಂದಿನ ಕಾಲದಲ್ಲಿ ಆಹಾರ ತಯಾರಿಸಲು ಮಣ್ಣಿನ ಮಡಿಕೆ ಇಲ್ಲವೆ ಕಬ್ಬಿಣದ ಪ್ಯಾನ್ ಬಳಕೆ ಮಾಡಲಾಗ್ತಾಯಿತ್ತು. ಕಬ್ಬಿಣದ ಪ್ಯಾನ್ ಗೆ ಒಗ್ಗರಣೆ ಬಿದ್ದ ಕೆಲವೇ ನಿಮಿಷಗಳಲ್ಲಿ ಪ್ಯಾನನ್ನು ನೀರಿಗೆ ಹಾಕಿದ್ದನ್ನು ನೀವು ನೋಡಿರಬಹುದು. ಇದ್ಯಾಕೆ ಎಂಬ ಪ್ರಶ್ನೆ ಮೂಡಿಬಹುದು.

Kitchen Hacks: ತರಕಾರಿಗಳ ರಾಜ ಆಲೂಗಡ್ಡೆ ಖರೀದಿ ಹೀಗಿರಲಿ

ಇನ್ನೊಂದು ವಿಷ್ಯವೆಂದ್ರೆ ಹಿಂದಿನ ಕಾಲದಲ್ಲಿ ಪಾತ್ರೆಗಳನ್ನು ತೊಳೆಯಲು ಯಾವುದೇ ಡಿಟರ್ಜೆಂಟ್ ಇರಲಿಲ್ಲ. ಸ್ಟೀಲ್ ಪಾತ್ರೆಗೂ ಇರಲಿಲ್ಲ. ಕಬ್ಬಿಣ ಪ್ಯಾನ್ ಗೆ ಹಿಡಿದ ಜಿಡ್ಡು ಹೋಗ್ಬೇಕು ಎನ್ನುವ ಕಾರಣಕ್ಕೆ ತಕ್ಷಣ ಅದನ್ನು ನೀರಿಗೆ ಹಾಕ್ತಿದ್ದರು. ನಂತ್ರ ಅದನ್ನು ಸ್ವಚ್ಛಗೊಳಿಸಲು ಬೂದಿ ಇಲ್ಲವೆ ಮಣ್ಣನ್ನು ಬಳಸ್ತಾ ಇದ್ದರು. ಅನ್ನ ಅಥವಾ ಬೇರೆ ಯಾವುದೇ ಆಹಾರ ತಯಾರಿಸಿದಾಗ ಅದ್ರಲ್ಲಿ ಜಿಡ್ಡಿರುತ್ತಿತ್ತು. ನೀವು ಎಷ್ಟೇ ಸ್ವಚ್ಛಗೊಳಿಸಿದ್ರೂ ಜಿಡ್ಡು ಹೋಗ್ತಿರಲಿಲ್ಲ. ಇದ್ರಲ್ಲಿ ಆಹಾರ ಸೇವನೆ ಮಾಡಿದಾಗ ಅದ್ರಲ್ಲಿರುವ ಕೊಳೆ ಹೊಟ್ಟೆ ಸೇರುತ್ತಿತ್ತು. ಇದ್ರಿಂದ ಹೊಟ್ಟೆ ನೋವು ಸೇರಿದಂತೆ ಆರೋಗ್ಯ ಸಮಸ್ಯೆ ಕಾಡಲು ಶುರುವಾಗ್ತಾಯಿತ್ತು. 

ಆಹಾರ ತಯಾರಿಸಿದ ತಕ್ಷಣ ಕಬ್ಬಿಣದ ಪ್ಯಾನ್ ನಿಂದ ಆಹಾರವನ್ನು ಹೊರಗೆ ತೆಗೆಯಬೇಕಾಗಿತ್ತು. ಒಂದ್ವೇಳೆ ಆಹಾರವನ್ನು ಬೇರೆ ಪಾತ್ರೆಗೆ ಬದಲಿಸಿಲ್ಲವೆಂದ್ರೆ ಕೊಳೆ ತೆಗೆಯೋದು ಮತ್ತೂ ಕಷ್ಟವಾಗಿತ್ತು. ಜೊತೆಗೆ ಆಹಾರಕ್ಕೆ ಕೊಳೆ ಅಂಟಿಕೊಳ್ಳುವ ಕಾರಣ ಆರೋಗ್ಯ ಹಾಳಾಗ್ತಿತ್ತು. 

ಇಷ್ಟೇ ಅಲ್ಲ ತುಪ್ಪ ಸವರಿದ ಬಾಣಲೆಯಲ್ಲಿ ಆಹಾರ ಸೇವಿಸುವುದರಿಂದ ಹೊಟ್ಟೆ ನೋವು ಕಾಡುವ ಸಂಭವವೂ ಹೆಚ್ಚು. ನೀವು ಬಾಣಲೆಯನ್ನು ಎಷ್ಟೇ ಶುಚಿಗೊಳಿಸಿ, ನಂತ್ರವೂ ಅದ್ರಲ್ಲಿ ಸ್ವಲ್ಪ ಆಹಾರ ಅಥವಾ ಜಿಡ್ಡು ಪ್ಯಾನ್ ಗೆ ಅಂಟಿಕೊಂಡಿರುತ್ತವೆ. ಬಾಣಲೆಯಲ್ಲಿ ಆಹಾರವನ್ನು ಸೇವಿಸಿದಾಗ ಹೊಟ್ಟೆ ನೋವು ಬರುವುದು ಸಹಜ. 

ಎಂಟು ತಿಂಗಳ ಕಾಲ ತಿನ್ನಲು 426 ಬಗೆಯ ಆಹಾರ ಸಿದ್ಧಪಡಿಸಿಟ್ಟ ಮಹಿಳೆ !

ವೈಜ್ಞಾನಿಕ ಕಾರಣ ಹೇಳಿದ್ರೆ ಜನರು ನಂಬೋದು ಕಷ್ಟ. ಹಾಗಾಗಿ ಮದುವೆ, ಆರ್ಥಿಕ ಸಮಸ್ಯೆ ಹೆಸರಿನಲ್ಲಿ ಇದನ್ನು ಜಾರಿಗೊಳಿಸಲಾಗಿತ್ತು. ಈಗ್ಲೂ ಜನರು ಇದನ್ನು ಪಾಲಿಸಿಕೊಂಡು ಬರ್ತಿದ್ದಾರೆ. 
 

click me!