ಇಲ್ಲೊಬ್ಬರು ಮಹಿಳೆ ಮಾತ್ರ ಅಪ್ಪಟ ನೃತ್ಯ ಪ್ರತಿಭೆ. ಕಲೆ ಸಂಗೀತಕ್ಕೆ ಭಾಷೆ, ದೇಶ ಗಡಿಗಳ ಹಂಗಿಲ್ಲ ಎಂಬಂತೆ ಇವರು ಕೊರಿಯನ್ ಫೇಮಸ್ ಹಾಡು 'ಆಅ ಪಚಾ ಪಚಾ ಹಾಡಿಗೆ' ಸಖತ್ ಡಾನ್ಸ್ ಮಾಡಿದ್ದು, ಯುವ ಪ್ರತಿಭೆಗಳನ್ನು ಮೀರಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀಡಿಯೋಗಳು ದಿನವೂ ವೈರಲ್ ಆಗುತ್ತಿರುತ್ತವೆ. ಯಾವ ವೀಡಿಯೋ ಏಕೆ ವೈರಲ್ ಆಗುತ್ತದೆ. ಜನ ಯಾವುದನ್ನು ಇಷ್ಟಡುತ್ತಾರೆ ಎಂದು ಹೇಳಲಾಗದು, ಜನರ ಮನಸ್ಥಿತಿ ವಿಚಿತ್ರ ಅಭಿರುಚಿಯನ್ನು ಆಧರಿಸಿ ಕೆಲ ವೀಡಿಯೋಗಳು ವೈರಲ್ ಆದರೆ, ಮತ್ತೆ ಕೆಲ ವೀಡಿಯೋಗಳು ಸ್ಥಿರವಾದ ಕಂಟೆಂಟ್, ಪ್ರತಿಭೆ, ಸಾಮರ್ಥ್ಯವನ್ನು ಅವಲಂಬಿಸಿವೆ. ಹೀಗೆ ಇದುವರೆಗೆ ಸಾರಿಯುಟ್ಟು ದೇಸಿ ನಾರಿಯರು ಮಾಡಿದ ಸಾಕಷ್ಟು ವೀಡಿಯೋಗಳು ವೈರಲ್ ಆಗಿವೆ. ಆದರೆ ಇಲ್ಲೊಬ್ಬರು ಮಹಿಳೆ ಮಾತ್ರ ಅಪ್ಪಟ ನೃತ್ಯ ಪ್ರತಿಭೆ. ಕಲೆ ಸಂಗೀತಕ್ಕೆ ಭಾಷೆ, ದೇಶ ಗಡಿಗಳ ಹಂಗಿಲ್ಲ ಎಂಬಂತೆ ಇವರು ಕೊರಿಯನ್ ಫೇಮಸ್ ಹಾಡು 'ಆಅ ಪಚಾ ಪಚಾ ಹಾಡಿಗೆ' ಸಖತ್ ಡಾನ್ಸ್ ಮಾಡಿದ್ದು, ಯುವ ಪ್ರತಿಭೆಗಳನ್ನು ಮೀರಿಸುತ್ತಿದ್ದಾರೆ. ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಎಲ್ಲರೂ ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ.
ತಲೆ ಸ್ನಾನ ಮಾಡಿ ತಲೆಗೆ ಬಟ್ಟೆ ಕಟ್ಟಿಕೊಂಡಿರುವ ಮಹಿಳೆ ಸೊಗಸಾದ ನೇರಳೆ ಬಣ್ಣದ ಸೀರೆಯುಟ್ಟಿದ್ದು, ಪ್ರಸ್ತುತ ಸೋಶೀಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರುವ ಆಆ ಪಚಾ ಪಚಾ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದು, ಇವರ ಸ್ಟೆಪ್‌ಗಳು ಮೈಕಲ್ ಜಾಕ್ಸನ್‌ಗೆ ಪೈಪೋಟಿ ನೀಡುವಂತಿದೆ. ಈ ವೀಡಿಯೋ ಅನೇಕರಿಗೆ ಇಷ್ಟವಾಗಲು ಮುಖ್ಯ ಕಾರಣ ಮಹಿಳೆಯ ಡಾನ್ಸ್ ಟಾಲೆಂಟ್ ಜೊತೆ ದೇಹವನ್ನು ಸಂಪೂರ್ಣವಾಗಿ ಮುಚ್ಚಿರುವ ಸೀರೆ ಇಲ್ಲಿ ಮಹಿಳೆ ಕೇವಲ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆಯೇ ಹೊರತು ದೇಹವಲ್ಲ, ಇದೇ ಕಾರಣಕ್ಕೆ ಜನರು ಈ ವೀಡಿಯೋವನ್ನು ಇಷ್ಟಪಟ್ಟು ವೈರಲ್ ಮಾಡಿದ್ದು, ಕಾಮೆಂಟ್‌ನಲ್ಲೂ ಇದನ್ನೇ ಬರೆದಿದ್ದಾರೆ.
ಅಂದಹಾಗೆ ಈ ಪ್ರತಿಭೆಯ ಹೆಸರು ಜ್ಯೋತಿ ಎಲ್, ಕರ್ನಾಟಕದ ಹರಿಹರ ಮೂಲದವರು ಎಂಬುದು ಇವರ ಇನ್ಸ್ಟಾ ಪ್ರೊಫೈಲ್ ನೋಡಿದರೆ ತಿಳಿದು ಬರುತ್ತದೆ. ಇವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರ ಅದ್ಭುತ ಡಾನ್ಸ್ ಪ್ರತಿಭೆಯ ಅನಾವರಣವಾಗಿದೆ. ಅನೇಕರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. ಹೃದಯದಿಂದ ಗೌರವ ನೀಡಬೇಕಾದಂತಹ ನಿಜವಾದ ಭಾರತೀಯ ನಾರಿ ಈಕೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವುಮನ್ ಪವರ್ ಅಂದರೆ ಇದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನಗೆ ಸಾರಿ ಉಟ್ಟರೆ ಸಾರಿಯಾಗಿ ನಡೆಯುವುದಕ್ಕೂ ಕಷ್ಟವಾಗುತ್ತಿದೆ. ಆದರೆ ಇವರು ಹೇಗೆ ಬಿಂದಾಸ್ ಆಗಿ ಸ್ಟೆಪ್ ಹಾಕುತ್ತಿದ್ದಾರೆ ನೋಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ ಸರಳವಾಗಿರುವ ಇವರು ಮಾಡುವ ಡಾನ್ಸ್ ಮಾತ್ರ ಬಹಳ ಅದ್ದೂರಿಯಾಗಿದೆ.
ಅದೇನೇ ಇರಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕೆ ದೇಹ ತೋರಿಸಿಕೊಂಡು ಏನೇನೋ ಮಾಡುವವರ ಮಧ್ಯೆ ಈ ಹಳ್ಳಿಯ ಅಪ್ಪಟ್ಟ ಪ್ರತಿಭೆ ಜ್ಯೋತಿಯವರನ್ನು ಅಭಿನಂದಿಸಲೇಬೇಕು. ಇವರ ಡಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.