40 ಲೀಟರ್ ಎದೆಹಾಲು ದಾನ ಮಾಡಿದ ನಿರ್ಮಾಪಕಿ, ಕಾರಣ ಕೇಳಿ..!

By Suvarna News  |  First Published Nov 19, 2020, 6:42 PM IST

ತಮ್ಮ ಪುಟ್ಟ ಕಂದನಿಗೆ ಹಾಲುಣಿಸಿ ಉಳಿದ ಹಾಲನ್ನು ಈಕೆ ವೇಸ್ಟ್ ಮಾಡಲಿಲ್ಲ, ತನ್ನ ಎದೆ ಹಾಲು ಸಂಗ್ರಹಿಸಿ ದಾನ ಮಾಡಿದ್ದಾರೆ. ಇದು ಮಾತೃ ಹೃದಯದ ಮಮತೆಯ ರೂಪ.. ಇಲ್ಲಿ ಓದಿ ನಿಧಿ ಅವರ ಸ್ಟೋರಿ


ಬಾಲಿವುಡ್‌ನ ಖ್ಯಾತ ನಿರ್ಮಾಪಕಿ ನಿಧಿ ಪರ್ಮಾರ್ ಹಿರಾ ನಂದನಿ 40 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ. ಫೆಬ್ರವರಿಯಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಈಕೆ ಲಾಕ್‌ಡೌನ್‌ನಲ್ಲಿ ಎದೆಹಾಲು ದಾನ ಮಾಡೋಕೆ ನಿರ್ಧರಿಸಿದ್ದರು.

ಸಾಂಡ್‌ ಕಿ ಆಂಖ್ ನಿರ್ಮಾಪಕಿ ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ನನ್ನ ಮಗುವಿಗೆ ಕುಡಿಸಿದ ಮೇಲೆಯೂ ಬಹಳಷ್ಟು ಹಾಲು ಉಳಿಯುತ್ತಿತ್ತು. ಎದೆಹಾಲು ಸರಿಯಾಗಿ ಸಂರಕ್ಷಿಸಿದರೆ 3ರಿಂದ 4ತಿಂಗಳು ಉಳಿಯುತ್ತದೆ ಎಂಬುದನ್ನು ಇಂಟರ್‌ನೆಟ್‌ನಲ್ಲಿ ಓದಿದೆ ಎನ್ನುತ್ತಾರೆ ನಿಧಿ

Tap to resize

Latest Videos

ವಯಸ್ಸಾದ್ರೂ ಯಂಗ್‌ ಲುಕ್‌ ಬೇಕಂದ್ರೆ ಹಿಂಗೆಲ್ಲ ಮಾಡ್ಲೇಬಾರ್ದು..!

ಎದೆ ಹಾಲಿನಿಂದ ಫೇಸ್‌ಪ್ಯಾಕ್ ಮಾಡುತ್ತಾರೆ, ನನ್ನ ಗೆಳತಿಯರು ಕೆಲವರು ಎದೆ ಹಾಲಿನಿಂದ ಕಾಲನ್ನೂ ತೊಳೆಯುತ್ತಾರೆ ಎಂದರು. ಇದು ಹಾಲನ್ನು ಪೋಲು ಮಾಡುವ ಅತ್ಯಂತ ಕ್ರೂರ ವಿಧಾನ ಎನಿಸಿತ್ತು ನನಗೆ. ಸಲೂನ್‌ಗೆ ಎದೆ ಹಾಲು ನೀಡಲು ಇಷ್ಟವಿರಲಿಲ್ಲ. ಹಾಗಾಗಿ ಎದೆ ಹಾಲು ದಾನ ಮಾಡೋ ಬಗ್ಗೆ ಹುಡುಕಾಡಿದೆ ಅಂತಾರೆ ನಿಧಿ.

ಮುಂಬೈನ ಖಾರ್‌ನ ಸೂರ್ಯ ಆಸ್ಪತ್ರೆಗೆ 40 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ ಈಕೆ. ಬಾಂದ್ರಾದ ಗೈನಕಾಲಜಿಸ್ಟ್‌ನ್ನು ಸಂಪರ್ಕಿಸಿದೆ. ಅವರು ಸೂರ್ಯ ಆಸ್ಪತ್ರೆಗೆ ದಾನ ಮಾಡುವಂತೆ ಸೂಚಿಸಿದರು. 150 ಎಂಎಲ್‌ನಂತೆ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದೆ.

ಮಸಲ್ಸ್ ಬೆಳೆಸೋಕೆ ಎದೆ ಹಾಲು ಕುಡಿತಾರಂತೆ ಪುರುಷರು..!

ಆಸ್ಪತ್ರೆಯವರೇ ನನ್ನ ಮನೆಗೆ ಬಂದು ಸಂಗ್ರಹಿಸಿದ ಹಾಲನ್ನು ತೆಗೆದುಕೊಂಡಿದ್ದಾರೆ. 15-20 ದಿನಕ್ಕೊಮ್ಮೆ ನಾನು ಹಾಲು ಸಂಗ್ರಹಿಸಿ ನೀಡಿದೆ. ಮೇ ವರೆಗೆ ಸುಮಾರು 40 ಲೀಟರ್ ಹಾಲು ನೀಡಿದೆ ಎಂದಿದ್ದಾರೆ ಈ ನಿರ್ಮಾಪಕಿ.

click me!