ಬಾಣಂತಿಗೆ ಕೊಳೆತ ಮೊಟ್ಟೆ ಪೂರೈಕೆ:  ಮರಿ ಸಹಿತ ರಕ್ತ ಹೆಪ್ಪುಗಟ್ಟಿ ದುರ್ನಾತ!

By Ravi Janekal  |  First Published Jun 24, 2023, 5:12 PM IST

ಬಾಣಂತಿಯೊಬ್ಬರಿಗೆ ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆ ವಿತರಿಸಿದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಎಂಜಿರ ಎ‌ಂಬಲ್ಲಿ ನಡೆದಿದೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜೂ.24): ಬಾಣಂತಿಯೊಬ್ಬರಿಗೆ ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆ ವಿತರಿಸಿದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಎಂಜಿರ ಎ‌ಂಬಲ್ಲಿ ನಡೆದಿದೆ.

Tap to resize

Latest Videos

ಮನೆಗೆ ತಂದು ಮೊಟ್ಟೆ ಬೇಯಿಸಿದಾಗ ಸಂಪೂರ್ಣ ಕೊಳೆತು ಹೋಗಿರುವುದು ಪತ್ತೆಯಾಗಿದ್ದು, ಬೇಯಿಸಿದ ಮೊಟ್ಟೆಯೊಳಗೆ ರಕ್ತ ಹೆಪ್ಪುಗಟ್ಟಿ ಕೊಳೆತು ದುರ್ನಾತ ಬೀರಿದೆ. ಅಲ್ಲದೇ ಕೆಲ ಮೊಟ್ಟೆಯಲ್ಲಿ ಕೋಳಿ ಮರಿ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಂಗಳೂರು: ಶಿಷ್ಟಾಚಾರ ಉಲ್ಲಂಘನೆಗೆ ಬಿಜೆಪಿ ಶಾಸಕರು ಗರಂ, ಸಚಿವ‌ ಗುಂಡೂರಾವ್ ಎದುರಲ್ಲೇ ಆಕ್ರೋಶ..!

 ರೆಖ್ಯಾ ಗ್ರಾಮದ ಎಂಜಿರ ಕಟ್ಟೆ ಅಂಗನವಾಡಿಯಿಂದ ವಿತರಣೆಯಾಗಿದ್ದ ಮೊಟ್ಟೆಗಳು ಇದಾಗಿದ್ದು, ರೆಖ್ಯಾದ ಬಾಣಂತಿಯೊಬ್ಬರಿಗೆ ವಿತರಿಸಿದ್ದ ಮೊಟ್ಟೆಗಳಾಗಿವೆ. ಸದ್ಯ ಕೊಳೆತ ಮೊಟ್ಟೆಯ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಬಾಣಂತಿಯರಿಗೆ ಕಳಪೆ ಗುಣಮಟ್ಟದ ಮೊಟ್ಟೆ ಪೂರೈಕೆಯಾಗ್ತಿರೋದು ಬೆಳಕಿಗೆ ಬಂದಿದೆ. 

ರೆಖ್ಯಾ ಗ್ರಾಮದ ಕಿರಣ್ ಕುಮಾರ್ ಎಂಬವರ ಪತ್ನಿಗೆ ವಿತರಿಸಿದ್ದ ಮೊಟ್ಟೆಗಳಾಗಿದ್ದು, ಮಗು ಮತ್ತು ತಾಯಿಯ ಪೌಷ್ಟಿಕಾಂಶ ಉದ್ದೇಶದಿಂದ ಸರ್ಕಾರ ಮೊಟ್ಟೆಗಳನ್ನ ವಿತರಿಸುತ್ತಿದೆ. ಇನ್ನು ಈ ಬಗ್ಗೆ ಅಂಗನವಾಡಿ ಶಿಕ್ಷಕಿಗೆ ಮಾಹಿತಿ ನೀಡಿರುವ ಕುಟುಂಬಿಕರು ಮೇಲಾಧಿಕಾರಿಗೂ ದೂರು ನೀಡಿದ್ದಾರೆ. ಆದರೆ ಮೊಟ್ಟೆ ನಾವೇ ವಿತರಿಸಿದ್ದಾ? ಅಥವಾ ಬೇರೆ ಅಂಗಡಿಯದ್ದಾ? ಗೊತ್ತಿಲ್ಲ. ಆದರೆ ಅದು‌ ನಾವು ವಿತರಿಸಿದ ಮೊಟ್ಟೆ ಅಲ್ಲ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಅಂಗನವಾಡಿ ಶಿಕ್ಷಕಿ ಮಾಹಿತಿ ನೀಡಿದ್ದಾರೆ. 

Wildlife: ಸುಣ್ಣದ ಡಬ್ಬಿ ನುಂಗಿ ನರಳಾಡಿದ ನಾಗರಹಾವಿಗೆ ಡಾಕ್ಟರ್ ಯಶಸ್ವಿ ಶಸ್ತ್ರ ಚಿಕಿತ್ಸೆ!

ಆ ಮೊಟ್ಟೆ ನಮ್ಮದೇ ಅಂಗನವಾಡಿಯದ್ದು ಅಂತ ಹೇಗೆ ಹೇಳೋದು ಅಂತ ಶಿಕ್ಷಕಿ ಜಾರಿಕೊಂಡಿದ್ದಾರೆ. ಇನ್ನು‌ ಮನೆಯವರು ಕೂಡ ಶಿಕ್ಷಕಿಗೆ ಮಾಹಿತಿ ನೀಡಿ ಸುಮ್ಮನಾಗಿದ್ದಾರೆ. ಈಗ ನಾವು ಅದು ಅಂಗನವಾಡಿಯದ್ದೇ ಅಂತ ಹೇಗೆ ಸಾಕ್ಷ್ಯ ಕೊಡೋದು ಅಂತ ಮನೆಯವರು ಕೂಡ ದೂರು ನೀಡಿ ಮೌನವಾಗಿದ್ದಾರೆ. ಆದರೆ ಸರ್ಕಾರದ ಯೋಜನೆ ಹೆಸರಿನಲ್ಲಿ ಬಾಣಂತಿಯರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಗೆ ಇದೊಂದು ಸ್ಪಷ್ಟ ನಿದರ್ಶನ.

click me!