ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಆರಂಭವಾದ ಮೇಲೆ ಆಭರಣ ಕಳ್ಳತನ ಸೇರಿದಂತೆ ಮಹಿಳೆಯರ ಸುರಕ್ಷತೆಗಾಗಿ ಇಲ್ಲಿಯ ಪೊಲೀಸ್ ಇಲಾಖೆ ಮೂರು ಜನ ಪುರುಷ ಮತ್ತು ಮೂವರು ಮಹಿಳಾ ಹೋಂಗಾರ್ಡ್ಸ್ಗಳನ್ನು ಬಸ್ ನಿಲ್ದಾಣದಲ್ಲಿ ನೇಮಕ ಮಾಡಿದೆ.
ನರಗುಂದ (ಜೂ.15) ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಆರಂಭವಾದ ಮೇಲೆ ಆಭರಣ ಕಳ್ಳತನ ಸೇರಿದಂತೆ ಮಹಿಳೆಯರ ಸುರಕ್ಷತೆಗಾಗಿ ಇಲ್ಲಿಯ ಪೊಲೀಸ್ ಇಲಾಖೆ ಮೂರು ಜನ ಪುರುಷ ಮತ್ತು ಮೂವರು ಮಹಿಳಾ ಹೋಂಗಾರ್ಡ್ಸ್ಗಳನ್ನು ಬಸ್ ನಿಲ್ದಾಣದಲ್ಲಿ ನೇಮಕ ಮಾಡಿದೆ.
ಯೋಜನೆಗೆ ಚಾಲನೆ ನೀಡಿದ ನಂತರ ದಿನೇ ದಿನೇ ಪುರುಷರಗಿಂತ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈ ಮೊದಲು ಮದುವೆ, ಸೀಮಂತ, ಬೀಗತನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ತಮ್ಮ ಕುಟುಂಬದ ಸದಸ್ಯರು ಮಾತ್ರ ಹೋಗುತ್ತಿದ್ದರು. ಆದರೆ ಬಸ್ ಪ್ರಯಾಣವನ್ನು ಸರ್ಕಾರ ಉಚಿತ ಮಾಡಿದ ನಂತರ ತಮ್ಮ ಮನೆ ಅಕ್ಕ ಪಕ್ಕದವರನ್ನು ಸಹ ಕರೆದುಕೊಂಡು ಹೋಗುತ್ತಿದ್ದಾರೆ.
undefined
ಬಸ್ಸಲ್ಲಿ ಶೇ.95 ಮಹಿಳಾ ಪ್ರಯಾಣಿಕರೇ ಭರ್ತಿ; ಪುರುಷರಿಗೆ ಸೀಟು ಬಿಟ್ಟುಕೊಡುವಂತೆ ಕಂಡಕ್ಟರ್ ಮನವಿ
ಮಹಿಳೆಯರು ಬಸ್ ಹತ್ತುವಾಗ ನೂಕುನುಗ್ಗಲು ಉಂಟಾಗುತ್ತಿದ್ದು, ಕಳ್ಳರು ಕೈಚಳಕ ತೋರುವ ಸಾಧ್ಯತೆ ಇದೆ. ಹೀಗಾಗಿ ಇಲಾಖೆ ಸಿಬ್ಬಂದಿ ನೇಮಿಸಿದೆ.
ನಮ್ಮ ಡಿಪೋದಲ್ಲಿ ಮಹಿಳೆಯರು ಓಡಾಟ ಮಾಡಲು ಬಸ್‌ಗಳ ಕೊರತೆ ಸದ್ಯ ಇಲ್ಲ, ಮುಂದೆ ಕೊರತೆಯಾದರೆ ಮೇಲಧಿಕಾರಿಗಳ ಜೊತೆ ಚರ್ಚಿಸಿ ಹೆಚ್ಚುವರಿ ಬಸ್ ಬಿಡಲಾಗುವುದು, ಕಳ್ಳತನ ತಡೆಯಲು ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದೇವೆ ಎಂದು ಕೆಎಸ್ಸಾರ್ಟಿಸಿ ತಾಲೂಕು ಘಟಕ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ತಿಳಿಸಿದರು.
ಸಾರಿಗೆ ವಾಹನದಲ್ಲಿ ಗಂಡಸರಿಗೆ ಮಾತ್ರ ಬೋರ್ಡ್, ಮಹಿಳೆಯರ ಫ್ರೀ ಬಸ್ ಪ್ರಯಾಣ ಫುಲ್ ಟ್ರೋಲ್!
ಬಸ್ ನಿಲ್ದಾಣದಲ್ಲಿ ಕಳ್ಳತನ ಮತ್ತು ಇತರೆ ಅಹಿತಕರ ಘಟನೆ ಸಂಭವಿಸಬಾರದೆಂದು ಪೊಲೀಸ್ ಸಿಬ್ಬಂದಿ ಮತ್ತು ಹೋಂಗಾರ್ಡ್ಸ್ ಪುರುಷ ಹಾಗೂ ಮಹಿಳಾ ಸಿಬ್ಬಂದಿ ನೇಮಕ ಮಾಡಿದ್ದೇವೆ ಎಂದು ಸಿಪಿಐ ಮಲ್ಲಯ್ಯ ಮಠಪತಿ ಹೇಳಿದರು.