ನೀತಾ ಅಂಬಾನಿಯೂ ಅಲ್ಲ, ಯಾವ ನಟಿಯೂ ಅಲ್ಲ; ಭಾರತದ ಅತ್ಯಂತ ಶ್ರೀಮಂತ ಮಹಿಳೆ ಈಕೆ

By Suvarna News  |  First Published Feb 3, 2024, 6:42 PM IST

ಭಾರತದಲ್ಲೇ ಅತ್ಯಂತ ಶ್ರೀಮಂತರು ಎಂದ ಕೂಡಲೇ ಅಂಬಾನಿ ಕುಟುಂಬ ನೆನಪಾಗುತ್ತದೆ. ಆದರೆ, ಭಾರತದ ಅತ್ಯಂತ ಶ್ರೀಮಂತ ಮಹಿಳೆ ನೀತಾ ಅಂಬಾನಿಯೂ ಅಲ್ಲ, ಇಶಾ ಅಂಬಾನಿಯೂ ಅಲ್ಲ, ಈಕೆ 73 ವರ್ಷದ ಮಹಿಳೆ!
 


ಭಾರತದ ಶ್ರೀಮಂತ ಮಹಿಳೆ ಎಂದ ಕೂಡಲೇ 230 ಕೋಟಿ ರೂ. ಖರ್ಚು ಮಾಡಿ ಬರ್ತ್‌ಡೇ ಆಚರಿಸಿಕೊಂಡ ನೀತಾ ಅಂಬಾನಿ ಇರಬಹುದು ಎನಿಸುತ್ತದೆ. ಅಥವಾ, ಆಕೆಯ ಪುತ್ರಿ ಇಶಾ ಅಂಬಾನಿ ಇರಬಹುದು ಎಂದು ನೀವಂದುಕೊಂಡರೂ ಅಚ್ಚರಿ ಇಲ್ಲ. ಆದರೆ, ಭಾರತದ ಅತ್ಯಂತ ಶ್ರೀಮಂತ ಮಹಿಳೆ ಅಂಬಾನಿ, ಅದಾನಿ ಕುಟುಂಬದ ಯಾರೂ ಅಲ್ಲ. ಈಕೆ 73 ವರ್ಷದ ಮಹಿಳೆ ಸಾವಿತ್ರಿ ಜಿಂದಾಲ್. 

ಜಾಗತಿಕ ಸೆಲ್ಫ್ ಮೇಡ್ ಬಿಲಿಯನೇರ್‌ಗಳಲ್ಲಿ ಭಾರತವು ಗಮನಾರ್ಹವಾದ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ದೇಶದಲ್ಲಿ 105 ಬಿಲಿಯನೇರ್‌ಗಳಿದ್ದಾರೆ. ಮಹಿಳೆಯರು ಕೂಡಾ ಬಿಲಿಯನೇರ್ ಏಣಿಯತ್ತ ಸಾಗುತ್ತಿದ್ದಾರೆ.  
ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಮಹಿಳೆಯಷ್ಟೇ ಅಲ್ಲ, ಭಾರತದ ಒಟ್ಟು ಶ್ರೀಮಂತರಲ್ಲಿ 5ನೇ ಸ್ಥಾನ ಹೊಂದಿದ್ದಾರೆ. ಒಪಿ ಜಿಂದಾಲ್ ಗ್ರೂಪ್‌ನ ಮುಖ್ಯಸ್ಥೆ ಸಾವಿತ್ರಿಯ ಆಸ್ತಿ ಜನವರಿ 30, 2024ರಂದು ಸಂಗ್ರಹಿಸಿದ ಮಾಹಿತಿಯಂತೆ ಬರೋಬ್ಬರಿ 29.1 ಶತಕೋಟಿ ಡಾಲರ್. ಅಂದರೆ ಹತ್ತಿರತ್ತಿರ 2,39,600 ಕೋಟಿ ರುಪಾಯಿಗಳು. ಸರಳ ಕಾಟನ್ ಸೀರೆ ಉಟ್ಟು ಸಿಂಪಲ್ ಆಗಿ ಕಾಣುವ ಸಾವಿತ್ರಿ ಜಿಂದಾಲ್ ಭಾರತದ ಟಾಪ್ 10 ಶ್ರೀಮಂತರಲ್ಲಿ ಒಬ್ಬಳೇ ಮಹಿಳೆ ಕೂಡಾ ಹೌದು. 

Tap to resize

Latest Videos

 2005ರಲ್ಲಿ ಅವರ ಪತಿ O.P. ಜಿಂದಾಲ್ ಅವರ ಮರಣದ ನಂತರ ಜಿಂದಾಲ್ ಸಾಮ್ರಾಜ್ಯವನ್ನು ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಸಾವಿತ್ರಿ. ಸಂಸ್ಥೆಯು ಸಂಸ್ಥೆಯು JSW ಸ್ಟೀಲ್, ಜಿಂದಾಲ್ ಸ್ಟೀಲ್ & ಪವರ್, JSW ಎಂಜರಿ, JSW ಸಾ, ಜಿಂದಾಲ್ ಸ್ಟೇನ್‌ಲೆಸ್ ಮತ್ತು JSW ಹೋಲ್ಡಿಂಗ್ಸ್‌ನಂತಹ ಕಂಪನಿಗಳನ್ನು ನಡೆಸುತ್ತದೆ. ಕೇವಲ 2023ರಲ್ಲಿ ಜಿಂದಾಲ್ ಅಧ್ಯಕ್ಷೆಯ ಆಸ್ತಿಯ ನಿವ್ವಳ ಮೌಲ್ಯ 9.6 ಶತಕೋಟಿ ಡಾಲರ್‌ನಷ್ಟು ಹೆಚ್ಚಾಗಿದೆ.

ವ್ಯಾಪಾರದ ಜೊತೆಗೆ, ರಾಜಕೀಯಕ್ಕೂ ಕಾಲಿಟ್ಟಿದ್ದಾರೆ ಸಾವಿತ್ರಿ. ಹಿಸಾರ್ ನಿಂದ 2005 ರಲ್ಲಿ ಹರಿಯಾಣ ವಿಧಾನಸಭಾ ಸ್ಥಾನವನ್ನು ಗೆದ್ದ ಅವರು 2009ರಲ್ಲಿ ಮರು ಆಯ್ಕೆಯಾದರು ಮತ್ತು 2013 ರಲ್ಲಿ ಹರಿಯಾಣ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ನೇಮಕಗೊಂಡರು.

ಷಹಜಹಾನ್ ಪತ್ನಿ ಮಮ್ತಾಜ್ ಕಂಡುಕೊಂಡ ಈ ಹೊಸ ರೆಸಿಪಿ, ಇಂದು ಪ್ರತಿಯೊಬ್ಬರಿಗೂ ಫೇವರೇಟ್!

ಭಾರತದ ಟಾಪ್ 10 ಶ್ರೀಮಂತ ಮಹಿಳೆಯರು
1. ಸಾವಿತ್ರಿ ಜಿಂದಾಲ್ $29.1 ಬಿ, ಜಿಂದಾಲ್ ಗ್ರೂಪ್
2. ರೋಹಿಕಾ ಸೈರಸ್ ಮಿಸ್ತ್ರಿ, $8.7 ಬಿ
3. ರೇಖಾ ಜುಂಜುನ್ವಾಲಾ, $8.0 B, ಟೈಟಾನ್ ಕಂಪನಿ ಲಿಮಿಟೆಡ್
4. ವಿನೋದ್ ಗುಪ್ತಾ $4.2 ಬಿ, ಹ್ಯಾವೆಲ್ಸ್
5. ಸ್ಮಿತಾ ಕೃಷ್ಣ-ಗೋದ್ರೆಜ್ $3.3 ಬಿ, ಗೋದ್ರೇಜ್
6. ಲೀನಾ ತಿವಾರಿ $3.2 B, USV ಫಾರ್ಮಾ
7, ಫಲ್ಗುಣಿ ನಾಯರ್ $3.0 ಬಿ, Nykaa
8. ಅನು ಅಗಾ $2.8 ಬಿ, ಥರ್ಮ್ಯಾಕ್ಸ್
9. ಕಿರಣ್ ಮಜುಂದಾರ್-ಶಾ $2.5 ಬಿ, ಬಯೋಕಾನ್
10. ರಾಧಾ ವೆಂಬು $2.1 ಬಿ, ಜೊಹೊ ಕಾರ್ಪೊರೇಷನ್

click me!