ರಿಸೆಪ್ಷನಿಸ್ಟ್ ಆಗಿ ಬಂದಿದ್ದ ಹೆಣ್ಣು ಮಗಳು ಈಗ ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಪಿಚ್ ಕ್ಯುರೇಟರ್!

By Suvarna NewsFirst Published Jul 29, 2024, 9:22 PM IST
Highlights

ಮೂರು ದಶಕಗಳ ಹಿಂದೆ ರಿಸೆಪ್ಶನಿಸ್ಟ್ ಆಗಿ ಬಂದ ಹೆಣ್ಣು ಮಗಳು, ತನ್ನ ಸತತ ಪರಿಶ್ರಮ, ಸಾಧನೆ, ಛಲದಿಂದ ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಪಿಚ್ ಕ್ಯುರೇಟರ್ ಆಗಿ ಬಡ್ತಿ ಪಡೆದಿದ್ದಾರೆ. ಬೆಂಗಳೂರಿನ ಜೆಸ್ಸಿಯ ರೋಚಕ ಪಯಣದ ಸಾಹಸಗಾಥೆ ಇಲ್ಲಿದೆ.

ಸುದರ್ಶನ್, ಕ್ರೀಡಾ ಪತ್ರಕರ್ತ

“ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು” 30 ವರ್ಷಗಳ ಹಿಂದೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ receptionist ಆಗಿ ಬಂದಿದ್ದ ಹೆಣ್ಣು ಮಗಳು. ಅದೇ ಹೆಣ್ಣು ಮಗಳೀಗ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಮೊದಲ ಮಹಿಳಾ ಪಿಚ್ ಕ್ಯುರೇಟರ್.. ಕ್ರಿಕೆಟ್ ಗಂಧಗಾಳಿಯೇ ಗೊತ್ತಿರದ ಮಹಿಳೆ. ಕ್ರಿಕೆಟ್ ಎಂದರೆ ಬೌಂಡರಿ, ಸಿಕ್ಸರ್ ಅಷ್ಟೇ ಎಂದುಕೊಂಡಿದ್ದಾಕೆ.  ಆ ಹೆಣ್ಣು ಮಗಳು ದೇಶದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ ಆಗಿದ್ದೇ ಒಂದು ರೋಚಕ ಕಥೆ.

Latest Videos

ಕಳೆದ 10 ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ಯುರೇಟರ್ ಆಗಿದ್ದ ಜೆಸ್ಸಿ ಮೇಡಂ ಈಗ ಬಿಸಿಸಿಐ ಅಧೀನದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪಿಚ್ ಕ್ಯುರೇಟರ್. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋದಾಗಲೆಲ್ಲಾ ಮೈದಾನದತ್ತ ಒಮ್ಮೆ ಕಣ್ಣು ಹಾಯಿಸದೆ ಬಂದದ್ದು ತೀರಾ ಕಡಿಮೆ. ಆಗೆಲ್ಲಾ ಮೈದಾನದಲ್ಲೊಬ್ಬರು ತಲೆಗೆ ರೌಂಡ್ ಕ್ಯಾಪ್ ಹಾಕಿದ lady ಕಾಣಿಸುತ್ತಿದ್ದರು. ಅವರೇ ಜೆಸಿಂತಾ ಕಲ್ಯಾಣ್.
 
ಕ್ರಿಕೆಟ್’ನಲ್ಲಿ ಬದುಕು ಕಟ್ಟಿಕೊಳ್ಳಲು ಬಯಸುವ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ಈ ಜೆಸಿಂತಾ ಕಲ್ಯಾಣ್. ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿರುವ ಹಾರೋಬೆಲೆ ಎಂಬ ಹಳ್ಳಿಯವರು ಜೆಸಿಂತಾ ಕಲ್ಯಾಣ್. ಒಬ್ಬ ಬಡ ರೈತನ ಮಗಳು. 30 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಹೊರಟವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ receptionist ಆಗಿ ಸೇರಿಕೊಳ್ಳುತ್ತಾರೆ. ಅಲ್ಲಿಂದ ಕೆಲ ವರ್ಷಗಳಲ್ಲಿ KSCA admistration sectionಗೆ ಪ್ರಮೋಷನ್. 2014ರಲ್ಲಿ ಆಗಿನ KSCA ಸೆಕ್ರೆಟರಿ ಬ್ರಿಜೇಶ್ ಪಟೇಲ್, ಜೆಸಿಂತಾ ಅವರನ್ನು ಕರೆದು ಒಂದು ಮಾತು ಹೇಳುತ್ತಾರೆ. 

ಯುವಜನತೆಗೆ ಸ್ಫೂರ್ತಿಯಾಗಿರುವ ಮಲೆನಾಡಿನ ಮಹಿಳೆ ಅನಸೂಯ

"ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡಿದ್ದು ಸಾಕು, ಮೈದಾನದಲ್ಲಿ ಕೆಲಸ ಮಾಡುವ ಗ್ರೌಂಡ್ಸ್’ಮನ್’ಗಳ man management ಜವಾಬ್ದಾರಿ ನೋಡಿಕೋ’’ ಎಂದು.  ಆ ದಿನ ಒಲ್ಲದ ಮನಸ್ಸಿನಿಂದಲೇ ಚಿನ್ನಸ್ವಾಮಿ ಮೈದಾನಕ್ಕೆ ಹೆಜ್ಜೆ ಇಡುತ್ತಾರೆ ಜೆಸಿಂತಾ.  ‘’ಅವತ್ತು ಇಟ್ಟ ಹೆಜ್ಜೆ ಮುಂದಿನ ಚರಿತ್ರೆಯೊಂದಕ್ಕೆ ಮುನ್ನುಡಿ’’ ಎಂದು ಆಕೆಗೇನು ಗೊತ್ತಿತ್ತು..? 

ಚಿನ್ನಸ್ವಾಮಿ ಮೈದಾನದ ಗ್ರೌಂಡ್ಸ್’ಮನ್’ಗಳನ್ನು ನೋಡಿಕೊಳ್ಳುವ ಕೆಲಸ ಅದು. AC ರೂಮ್’ನಲ್ಲಿ ಕೆಲಸ ಮಾಡುತ್ತಿದ್ದವರು, ಬಿರು ಬಿಸಿಲಿನ ಹೊಡೆತದಲ್ಲಿ ಕೆಲಸ ಮಾಡಬೇಕಾದ ಜವಾಬ್ದಾರಿಗೆ ಒಗ್ಗಿಕೊಳ್ಳಲು 6 ತಿಂಗಳು ಹಿಡಿದವು.  ಕೆಲಸ ಮಾಡುತ್ತಾ ಮಾಡುತ್ತಾ ಚಿನ್ನಸ್ವಾಮಿ ಕ್ರೀಡಾಂಗಣದ ಆಗಿನ ಮುಖ್ಯ ಪಿಚ್ ಕ್ಯುರೇಟರ್ ಪ್ರಶಾಂತ್ ರಾವ್ ಅವರ ಬಳಿ ಪಿಚ್ ಸಿದ್ಧಗೊಳಿಸುವ ಕಲೆ ಮತ್ತು ಕೌಶಲ್ಯಗಳನ್ನು ಕಲಿಯಲಾಂಭಿಸಿದರು ಜೆಸಿಂತಾ. ಇವರಿಗೆ ಕ್ಯುರೇಟಿಂಗ್ ಕಲೆಯನ್ನು ಕಲಿಸಿದ ಗುರು Prashanth Rao

ಪಿಚ್ ಸಿದ್ಧ ಪಡಿಸುವ ಕೆಲಸವೆಂದರೆ ಅದೊಂದು ತಪಸ್ಸು. ಪ್ರತೀ ದಿನ ಗಂಟೆಗಟ್ಟಲೆ ಶ್ರಮ ಕೇಳುವ ಕೆಲಸವದು. ಜೆಸಿಂತಾ ಶ್ರಮಜೀವಿಯಾಗಿ ಬಿಟ್ಟರು. ಕ್ಯುರೇಟಿಂಗ್ ಕಲೆಯನ್ನು ಕರಗತ ಮಾಡಿಕೊಂಡವರು 2018ರಲ್ಲಿ ಬಿಸಿಸಿಐ curatorship exam ಬರೆದು ಅಧಿಕೃತವಾಗಿ ಪಿಚ್ ಕ್ಯುರೇಟರ್ ಎನಿಸಿದರು. ಇದೇ ವರ್ಷ ಬೆಂಗಳೂರಿನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ #wplಗೆ ಅಷ್ಟೂ ಪಿಚ್’ಗಳನ್ನು ಸಿದ್ಧಪಡಿಸಿದವರು ಇವರೇ. ಮಧ್ಯೆ ಒಂದಷ್ಟು ರಣಜಿ ಟ್ರೋಫಿ ಪಂದ್ಯಗಳಿಗೆ ಕ್ಯುರೇಟರ್ ಆಗಿ ಕೆಲಸ ಮಾಡಿದ ಅನುಭವವೂ ಸಿಕ್ಕಿತ್ತು.  ದೇಶದ ಮೊದಲ ಮಹಿಳಾ ಕ್ರಿಕೆಟ್ ಪಿಚ್ ಕ್ಯುರೇಟರ್ ಎಂದು ಕರೆಸಿಕೊಂಡವರು ಈಗ National Cricket Academyಯ ಕ್ಯುರೇಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 

ಇವತ್ತು NCAಗೆ ಹೋದಾಗ ಸಿಕ್ಕಿದರು. ‘’ಏನ್ ಜೆಸ್ಸಿ ಮೇಡಂ ನೀವಿಲ್ಲಿ ಎಂದು ಕೇಳಿದೆ. ಇನ್ನು ನಾನು ಇಲ್ಲೇ’’ ಎಂದರು. ತೊಟ್ಟಿದ್ದ ಜರ್ಸಿಯ ಮೇಲೆ ಮಿಂಚುತ್ತಿದ್ದ NCA ಲಾಂಛನ ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿತ್ತು. 

ವಿಶ್ವದ ಎತ್ತರದ ಹಿಮ ಪರ್ವತ ಏರಿ ಮೈಸೂರಿನ ವೈದ್ಯೆ ಡಾ ಉಷಾ ಹೆಗ್ಡೆ ಸಾಧನೆ!

click me!