ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಮಾಡೋರಿಗೆ C & T ಅಂದ್ರೆ ಏನು ಗೊತ್ತಾ? ಎಷ್ಟು ಲೈನ್ ಬಂದ್ರೆ ಪಾಸಿಟಿವ್?

By Vaishnavi Chandrashekar  |  First Published Dec 20, 2024, 5:26 PM IST

ಮನೆಯಲ್ಲಿ ಮಾಡಬೋದು ಸರಳ ಪ್ರೆಗ್ನೆನ್ಸಿ ಟೆಸ್ಟ್‌. ವೈದ್ಯರನ್ನು ಸಂಪರ್ಕಿಸುವ ಮುನ್ನ ನೀವೇ ಮಾಡಿಕೊಳ್ಳಿ ಈ ಸಿಂಪಲ್ ಟೆಸ್ಟ್‌...... 


ಹೆಣ್ಣುಮಕ್ಕಳಿ ಪ್ರತಿ ಸಲ ಕನ್ಫ್ಯೂಸ್ ಹೆಚ್ಚಾಗೋದು ಪ್ರೆಗ್ನೆನ್ಸಿ ಟೆಸ್ಟ್ ಮಾಡುವ ಸಮಯದಲ್ಲಿ. ನಿಗದಿತ ದಿನಾಂಕ ಮೀರಿದರೂ ಪೀರಿಯಡ್ಸ್‌ ಆಗಿಲ್ಲ ಅಂದ್ರೆ ಮೊದಲು ಮಾಡುವುದು ಅಥವಾ ಮಾಡಿಸಿಕೊಳ್ಳುವುದು ಪ್ರೆಗ್ನೆನ್ಸಿ ಟೆಸ್ಟ್‌. ನೇರವಾಗಿ ವೈದ್ಯರ ಬಗ್ಗೆ ಹೋಗಿ ಹೀಗಾಗಿ ಏನ್ ಮಾಡಬೇಕು ಎಂದು ಗಾಬರಿ ಆಗುವ ಬದಲು ಮೆಡಿಕಲ್ ಸ್ಟೋರ್‌ನಲ್ಲಿ ಸಿಗುವ ಪ್ರೆಗ್ನೆನ್ಸಿ ಕಿಟ್‌ ಬಳಸಬಹುದು. ಸಾಮಾನ್ಯವಾಗಿ ಪ್ರೆಗ್ನೆನ್ಸಿ ಕಿಟ್‌ನ ಬೆಲೆ 50/- ರೂಪಾಯಿಗಳಿಂದ 150/- ರೂಪಾಯಿಗಳವರೆಗೂ ಇದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಖರೀದಿ ಮಾಡಬಹುದು, ಬೆಲೆ ಎಷ್ಟೇ ಇದ್ದರೂ ರಿಸಲ್ಟ್‌ ತೋರಿಸುವುದು ಒಂದೇ. 

ಟೆಸ್ಟ್‌ ಸಮಯ?

Tap to resize

Latest Videos

undefined

ಬೆಳಗ್ಗೆ ಎದ್ದ ತಕ್ಷಣ ನಾವು ಪಾಸ್ ಮಾಡುವ ಮೊದಲ ಮೂತ್ರದಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಬೇಕು. ವೈದ್ಯರು ಹೇಳುವ ಪ್ರಕಾರ ದಿನ ಮೊದಲ ಮೂತ್ರದಲ್ಲಿ Ph ಪ್ರಮಾಣ ಹೆಚ್ಚಿರುತ್ತದೆ ಅಲ್ಲದೆ ಹಲವು ಸಮಯಗಳ ಕಾಲ ನೀರು ಸೇವಿಸದೆ ಅಥವಾ ಮೂತ್ರ ಪಾಸ್ ಮಾಡದೆ ಡೈಲ್ಯೂಟ್ ಆಗಿರುವುದಿಲ್ಲ ಎಂದು. ಕಿಟ್‌ನಲ್ಲಿ ಒಂದು ಫಿಲ್ಲರ್ ಕೊಟ್ಟಿರುತ್ತಾರೆ ನಿಮ್ಮ ಮೂತ್ರವನ್ನು ಕಿಟ್‌ನಲ್ಲಿ ಇರುವ ಸರ್ಕಲ್‌ನಲ್ಲಿ ಹಾಕಬೇಕು. ಹಾಕಿದ ತಕ್ಷಣವೇ ಉದ್ದ ಇರುವ ಲೈನ್‌ನಲ್ಲಿ ಬಣ್ಣ ಬದಲಾಗುತ್ತದೆ.

ಮೂಗೂತಿ ಸುಂದರಿ ಅನ್ನೋಕೆ ಮೂಗೇ ಇಲ್ಲ; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು

C ಆಂಡ್ T ಅಂದರೆ ಏನು?

ಮೂತ್ರವನ್ನು ಸರ್ಕಲ್‌ಗೆ ಹಾಕಿದ ಕೂಡಲೇ ಆ ಲೈನ್‌ನ ಕೊನೆಯವರೆಗೂ ಕೆಂಪು ಬಣ್ಣ ಪಾಸ್ ಆಗುವಂತೆ ಕಾಣಿಸುತ್ತದೆ. ಒಂದು ವೇಳೆ ಸಿ ಬಳಿ ಕೆಂಪು ಅಥವಾ ಪಿಂಕ್ ಲೈನ್ ಬಂದರೆ ಟೆಸ್ಟ್‌ ನೆಗೆಟಿವ್ ಎಂದು, ಅಂದರೆ ನೀವು ಪ್ರೆಗ್ನೆಂಟ್ ಆಗಿಲ್ಲ. ಒಂದು ವೇಳೆ ಸಿ ಮತ್ತು ಟಿ ಎರಡರ ಬಳಿಯೂ ಕೆಂಪು ಲೈನ್ ಬಂದರೆ ಟೆಸ್ಟ್‌ ಪಾಸಿಟಿವ್ ಎಂದು, ಆಗ ನೀವು ಪ್ರೆಗ್ನೆಂಟ್ ಆಗಿದ್ದೀರಿ ಎಂದು. ಸಿ ಮತ್ತು ಟಿ ಬಳಿ ಯಾವುದೇ ಲೈನ್ ಬಂದಿಲ್ಲ ಅಂದರೆ ಮತ್ತೊಮ್ಮೆ ಟೆಸ್ಟ್‌ ಮಾಡಿ ನೋಡಿ ಇಲ್ಲವಾದರೆ ವೈದ್ಯರನ್ನು ಸಂಪರ್ಕಿಸಬೇಕು. 

ಕೀರ್ತಿ ಸುರೇಶ್ ಡೀಪ್‌ ಡ್ರೆಸ್ ಹಾಕಿದ್ರೂ ಕತ್ತಲಿರೋ ತಾಳಿ ಮೇಲೆದೆ ನೆಟ್ಟಿಗರ ಕಣ್ಣು; ಫೋಟೋ ವೈರಲ್

click me!