ಮಹಿಳೆಯರು ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡಿರ್ತಾರೆ. ಮದುವೆ ಸಂದರ್ಭದಲ್ಲಿ ತೂಕ ಇಳಿಸಿರುವ ಹುಡುಗಿರುವ ಮದುವೆಯಾಗಿ ಮಕ್ಕಳಾಗ್ತಿದ್ದಂತೆ ದೇಹದ ಆಕಾರ ಕಳೆದುಕೊಳ್ತಾರೆ. ಜೊತೆಗೆ ಮಾನಸಿಕ ಅಸ್ವಸ್ಥತೆ ಅನುಭವಿಸ್ತಾರೆ. ಡೆಲಿವರಿ ನಂತ್ರ ಮಾನಸಿಕವಾಗಿ ಹಾಗೂ ದೈಹಿಕವಾಗಿ ಫಿಟ್ ಆಗಿರ್ಬೇಕೆಂದ್ರೆ ಕೆಲ ಯೋಗ ಮಾಡಿ.
ಹೆರಿಗೆ (Delivery) ನಂತ್ರ ತಾಯಿ (Mother) ಯ ದೇಹ ಮೊದಲಿನಂತಾಗಲು ಸಮಯ ತೆಗೆದುಕೊಳ್ಳುತ್ತದೆ. ದೇಹ (Body) ಮಾತ್ರವಲ್ಲ ಮನಸ್ಸಿನ ಆರೋಗ್ಯ (Health) ದಲ್ಲಿ ಕೂಡ ಬದಲಾವಣೆ ಕಂಡು ಬರುತ್ತದೆ. ಮನಸ್ಸು ಹಾಗೂ ದೇಹ ಎರಡನ್ನೂ ಸ್ವಸ್ಥವಾಗಿಡುವುದು ಬಹಳ ಮುಖ್ಯ. ಹೆರಿಗೆ ಒಂದು ಮರುಜನ್ಮವಿದ್ದಂತೆ. ದೇಹದ ಇಡೀ ಭಾಗ ನೋವುಂಡಿರುತ್ತದೆ. 9 ತಿಂಗಳು ಮಗುವನ್ನು ಹೊಟ್ಟೆಯಲ್ಲಿ ಹೊತ್ತಿರುವ ಕಾರಣ ದೇಹದ ಆಕಾರ ಸಂಪೂರ್ಣ ಬದಲಾಗಿರುತ್ತದೆ. ಡಿಲೆವರಿ ನಂತ್ರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ತಾಯಿ ತನ್ನ ಆರೋಗ್ಯದ ಜೊತೆ ಮಕ್ಕಳನ್ನು ನೋಡಿಕೊಳ್ಳಬೇಕು. ಸ್ತನ್ಯಪಾನ (Breast Feeding) ಮಾಡಲು ದೀರ್ಘ ಸಮಯ ಕುಳಿತುಕೊಳ್ಬೇಕಾಗುತ್ತದೆ. ರಾತ್ರಿ ನಿದ್ರೆ ಇರುವುದಿಲ್ಲ. ಬೆಳಿಗ್ಗೆ ಕೂಡ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ. ಹೆರಿಗೆಯ ನಂತರ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಬಹಳ ಮುಖ್ಯ. ಯೋಗ, ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯವನ್ನು ಕಾಪಾಡಲು ಸಹಕಾರಿ. ಹೆರಿಗೆಯಾದ ತಕ್ಷಣ ಯೋಗ ಮಾಡಲು ಸಾಧ್ಯವಿಲ್ಲ. ತಜ್ಞರ ಪ್ರಕಾರ, ಕೆಲವು ದಿನಗಳು ಅಥವಾ ವಾರಗಳ ನಂತರ ಯೋಗ ಪ್ರಾರಂಭಿಸಬೇಕು. ಅಧ್ಯಯನದ ಪ್ರಕಾರ, ಮಗುವಿನ ಜನನದ ನಂತರ ಯೋಗ ಮಾಡುವುದು ತಾಯಿಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಗ ಮಾಡಬೇಕು. ಹೆರಿಗೆಯ ನಂತರ ಯೋಗವನ್ನು ಪೋಸ್ಟ್ ಮಾರ್ಟಮ್ ಯೋಗ ಎಂದು ಕರೆಯಲಾಗುತ್ತದೆ. ಇಂದು ಈ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡ್ತೇವೆ.
ಪೋಸ್ಟ್‌ಪಾರ್ಟಮ್ ಯೋಗ ಎಂದರೇನು? : ಪೋಸ್ಟ್ ಮಾರ್ಟಮ್ ಯೋಗವು ಮಾರ್ಪಡಿಸಿದ ಮತ್ತು ಕಡಿಮೆ ಹಿಗ್ಗಿಸುವಿಕೆಯ ಯೋಗಾಭ್ಯಾಸವಾಗಿದೆ. ಮಗುವಿನ ಜನನದ ನಂತರ ತಾಯಿಯ ದೇಹವು ಅನೇಕ ಬದಲಾವಣೆಗಳಿಗೆ ಒಳಗಾಗುತ್ತದೆ. ಹೆರಿಗೆಯ ಮೂರು ತಿಂಗಳ ಮುಂಚೆಯೇ ಗರ್ಭಿಣಿಯರು ಈ ಯೋಗ ಶುರು ಮಾಡಬಹುದು. ಅದು ಗರ್ಭಿಣಿಯರ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಯಾರಿಗೂ ಹೇಳಿಕೊಳ್ಳಲಾಗದ ಹೆಣ್ಣು ಮಕ್ಕಳು ನೋವಿದು!
ಯೋಗದ ಪ್ರಯೋಜನಗಳೇನು? : ಹೆರಿಗೆ ನಂತ್ರ ಅನೇಕ ಮಹಿಳೆಯರು ಖಿನ್ನತೆ ಸಮಸ್ಯೆ ಎದುರಿಸುತ್ತಾರೆ. ಪೋಸ್ಟ್ ಮಾರ್ಟಮ್ ಯೋಗವು ಈ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಈ ಯೋಗವು ಅನೇಕ ಇತರ ಪ್ರಯೋಜನಗಳನ್ನು ಹೊಂದಿದೆ. ಈ ಯೋಗವು, ನಿಮ್ಮ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ತಾಯಿಯ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಕಿರಿಕಿರಿ ಮತ್ತು ಕೋಪವೂ ಕಡಿಮೆಯಾಗುತ್ತದೆ. ಯೋಗ ಮಾಡುವುದರಿಂದ ನಿಮ್ಮ ಸ್ನಾಯುಗಳ ಒತ್ತಡವೂ ಕಡಿಮೆಯಾಗುತ್ತದೆ. ಇದರಿಂದ ಇಡೀ ದೇಹ ರಿಲ್ಯಾಕ್ಸ್ ಆಗುತ್ತದೆ.
ಪಿರಿಯಡ್ಸ್ ಸಮಯದಲ್ಲಿ ಸ್ವಚ್ಛತೆಗೆ ಗಮನ ಕೊಡಿ, ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ !
ಪೋಸ್ಟ್ ಮಾರ್ಟಮ್ (Postpartum Yoga) ಯೋಗದಿಂದ ಯಾವ ರೋಗಲಕ್ಷಣಗಳು ಕಡಿಮೆಯಾಗುತ್ತವೆ : ಮೊದಲೇ ಹೇಳಿದಂತೆ ಹೆರಿಗೆ ನಂತ್ರ ತಾಯಿಯಾದವಳು ಅನೇಕ ಮಾನಸಿಕ ಸಮಸ್ಯೆ ಎದುರಿಸುತ್ತಾಳೆ. ಅದ್ರಲ್ಲಿ ಮೂಡ್ ಸ್ವಿಂಗ್ (Mood Swing) ಮುಖ್ಯವಾದದ್ದು. ಹೆರಿಗೆ ನಂತ್ರ ಆಗುವ ಮೂಡ್ ಸ್ವಿಂಗ್ ಗೆ ಯೋಗದಲ್ಲಿಯೇ ಮದ್ದಿದೆ. ಯೋಗ ನಮ್ಮ ಮನಸ್ಸಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಯೋಗದಲ್ಲಿ ಉಸಿರಾಟ ಕ್ರಿಯೆ ದೀರ್ಘವಾಗುವ ಕಾರಣ, ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಹೋಗುತ್ತದೆ. ಇದು ದೇಹಕ್ಕೆ ರೋಗ ಬರದಂತೆ ತಡೆಯುತ್ತದೆ. ಮನಸ್ಸು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಹೆರಿಗೆ ನಂತ್ರ ಯೋಗ ಮಾಡಿದ್ರೆ ಕಿರಿಕಿರಿ, ಕೋಪ ಕಡಿಮೆಯಾಗುತ್ತದೆ. ನಾನು ಒಳ್ಳೆ ತಾಯಿ ಆಗ್ತೇನಾ ಎಂಬ ಪ್ರಶ್ನೆ ಅನೇಕ ಮಹಿಳೆಯರನ್ನು ಕಾಡ್ತಿರುತ್ತದೆ. ಇಂಥ ಅನುಮಾನ, ನಕಾರಾತ್ಮಕ ಭಾವನೆ ಕಡಿಮೆಯಾಗಿ, ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳನ್ನು ನೋಡಿಕೊಳ್ಳಲಾಗದಷ್ಟು ದಣಿವಿರುವ ಮಹಿಳೆಯರು ಅವಶ್ಯಕವಾಗಿ ಯೋಗ ಮಾಡ್ಬೇಕು. ಹಾಗೆ ಗೊತ್ತಿಲ್ಲದೆ ಬರುವ ಅಳು ತಡೆಯಲು ಕೂಡ ಯೋಗ ನೆರವಾಗುತ್ತದೆ.