ಪಿರಿಯಡ್ಸ್ ಸಮಯದಲ್ಲಿ ನೋವು ಮಾಮೂಲಿ. ಹಾಗಂತ ನೋವು ಹೆಚ್ಚಾದ್ರೂ ಮಾತ್ರೆ ನುಂಗ್ತಾ ಸಮಯ ಕಳೆಯಬೇಡಿ. ನಿಮಗೆ ಕಾಣಿಸಿಕೊಂಡ ಅತಿ ನೋವಿಗೆ ಬೇರೆ ಕಾರಣವಿರಬಹುದು. ಇದು ಗರ್ಭಧಾರಣೆಗೆ ಸಮಸ್ಯೆ ತರಬಹುದು.
ಮುಟ್ಟಿನ ಸಮಯದಲ್ಲಿ ಮಹಿಳೆಯರು ಹೊಟ್ಟೆ ನೋವು ಹಾಗೂ ಸೆಳೆತವನ್ನು ಅನುಭವಿಸುವುದು ಸರ್ವೆ ಸಾಮಾನ್ಯ. ಕೆಲ ಮಹಿಳೆಯರಿಗೆ ಹೊಟ್ಟೆಯಲ್ಲದೆ ಸೊಂಟ, ಕಿಬ್ಬೊಟ್ಟೆ, ಕಾಲು ನೋವು ಕೂಡ ಕಾಣಿಸಿಕೊಳ್ಳುತ್ತದೆ. ಇದನ್ನು ಮುಟ್ಟಿನ ಸೆಳೆತ ಎಂದೂ ಕರೆಯಲಾಗುತ್ತದೆ. ಇದು ಎಲ್ಲ ಮಹಿಳೆಯರಿಗೂ ಒಂದೇ ರೀತಿ ಇರೋದಿಲ್ಲ. ಕೆಲವರಿಗೆ ಮೂರು ದಿನ ನೋವು ಕಾಣಿಸಿಕೊಂಡ್ರೆ ಮತ್ತೆ ಕೆಲವರಿಗೆ ಒಂದೇ ದಿನಕ್ಕೆ ನೋವು ಕಡಿಮೆಯಾಗುತ್ತೆ. ಇನ್ನು ಕೆಲವರ ನೋವು ವಿಪರೀತವಾಗಿರುತ್ತದೆ. ನೋವು ಸಹಿಸಿಕೊಳ್ಳಲಾಗದೆ ಅವರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಮುಟ್ಟಿನ ಸಮಯದಲ್ಲಿ ಇಡೀ ದಿನ ಮಲಗಿರುವವರಿದ್ದಾರೆ.
ಪಿರಿಯಡ್ಸ್ (Periods) ವೇಳೆ ನೋವು ಸಾಮಾನ್ಯ. ಹಾಗಂತ ಅಸಹನೀಯ ನೋವ (Pain) ನ್ನು ನಿರ್ಲಕ್ಷ್ಯ ಮಾಡ್ಬೇಡಿ. ಅಸಹನೀಯ ನೋವಿನ ಹಿಂದೆ ಹಲವು ಗಂಭೀರ ಕಾರಣಗಳಿರುವ ಸಾಧ್ಯತೆಯಿದೆ. ಹಾಗಾಗಿ ವೈದ್ಯ (doctor) ರ ಬಳಿ ಹೋಗೋದು ಒಳಿತು. ನಾವಿಂದು ಮುಟ್ಟಿನ ವೇಳೆ ಅಸಹನೀಯ ನೋವಿಗೆ ಕಾರಣವೇನು ಹಾಗೆ ಏನು ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೆವೆ.
undefined
ಕುಡಿಯೋ ಹಾಲಿಗೂ, ಸ್ತನದ ಕ್ಯಾನ್ಸರ್‌ಗೂ ಏನಾದರೂ ಲಿಂಕ್ ಇದ್ಯಾ?
ಸೆಳೆತಕ್ಕೆ ಇದು ಕಾರಣ :
ಪ್ರೊಸ್ಟಗ್ಲಾಂಡಿನ್ ಎಂಬ ಹಾರ್ಮೋನ್ (Hormone ) ನಿಂದಾಗಿ ಮುಟ್ಟಿನ ಸಮಯದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಗರ್ಭಾಶಯದ ಅಂಗಾಂಶಗಳು ಮುಟ್ಟಿನ ಸಮಯದಲ್ಲಿ ಪ್ರೋಸ್ಟಗ್ಲಾಂಡಿನ್‌ಗಳನ್ನು ಉತ್ಪತ್ತಿ ಮಾಡುತ್ತವೆ. ಈ ಕಾರಣದಿಂದ ಸ್ನಾಯುವಿನ ಸೆಳೆತ ಕಾಣಿಸಿಕೊಳ್ಳುತ್ತದೆ. ಸೊಂಟ ನೋವು ಹಾಗೂ ಕಾಲು ನೋವಿಗೂ ಇದೆ ಕಾರಣ. ಈ ಹಾರ್ಮೋನ್, ಅಂಡೋತ್ಪತ್ತಿ, ಮುಟ್ಟಿನ ಪ್ರಕ್ರಿಯೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಮುಟ್ಟಿನ ಸಮಯದಲ್ಲಿ ಕಾಡುವ ವಿಪರೀತ ನೋವು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಇದು ಸಾಮಾನ್ಯವಲ್ಲ. ಇದು ಫಲವತ್ತತೆಯಲ್ಲಿ ಏನೂ ಯಡವಟ್ಟಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಗರ್ಭಧರಿಸುವ ಪ್ಲಾನ್ ನಲ್ಲಿದ್ದು, ನಿಮಗೆ ಮುಟ್ಟಿನ ವೇಳೆ ಅತಿ ಹೆಚ್ಚು ನೋವಾಗ್ತಿದೆ ಎಂದಾದ್ರೆ ನಿಮ್ಮ ಪ್ಲಾನ್ ಕ್ಯಾನ್ಸಲ್ ಮಾಡಿ, ವೈದ್ಯರನ್ನು ಸಂಪರ್ಕಿಸಿ. ಮುಟ್ಟಿನ ನೋವಿನ ಹಿಂದೆ ಗಂಭೀರ ಖಾಯಿಲೆಯೂ ಕಾರಣವಾಗಿರಬಹುದು.
ಅಸಹನೀಯ ಮುಟ್ಟಿನ ನೋವಿಗೆ ಕಾರಣ :
ಫೈಬ್ರಾಯ್ಡ್‌ಗಳ ಅಭಿವೃದ್ಧಿ : ಇದೊಂದು ಗಡ್ಡೆಯಾಗಿದೆ. ಇದು ಗರ್ಭಾಶಯದೊಳಗೆ ಬೆಳೆಯುತ್ತದೆ. ಇದ್ರಿಂದಾಗಿ ನೋವು ಹೆಚ್ಚಾಗುತ್ತದೆ. ಇದು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗೆಯೇ ಫಲವತ್ತತೆ ಮೇಲೆ ಪರಿಣಾ ಬೀರುತ್ತದೆ.
ಎಂಡೊಮೆಟ್ರಿಯೊಸಿಸ್ ಕಾಯಿಲೆ : ಇದ್ರಲ್ಲಿ ಗರ್ಭಾಶಯದ ಅಂಗಾಂಶವು ಗರ್ಭಾಶಯದ ಹೊರಗೆ ಹರಡಲು ಪ್ರಾರಂಭಿಸುತ್ತದೆ. ಹಾಗೆಯೇ ಸುತ್ತಲಿರುವ ಅಂಗಕ್ಕೆ ತೊಂದರೆ ನೀಡಲು ಶುರು ಮಾಡುತ್ತವೆ. ಗರ್ಭಾಶಯದ ಕಾರ್ಯಕ್ಕೆ ಇದು ಅಡ್ಡಿಯುಂಟು ಮಾಡುತ್ತದೆ. ಇದ್ರಲ್ಲಿ ಮಹಿಳೆಯರಿಗೆ ಹೆಚ್ಚು ನೋವಾಗುತ್ತದೆ. ಹಾಗೆಯೇ ಸಂತಾನೋತ್ಪತ್ತಿ ಕಷ್ಟವಾಗುತ್ತದೆ. ಇದಕ್ಕೆ ಚಿಕಿತ್ಸೆ ಕೂಡ ಸರಿಯಾಗಿಲ್ಲ. ಅರ್ಧಕ್ಕಿಂತ ಹೆಚ್ಚು ಮಹಿಳೆಯರಿಗೆ ಮಕ್ಕಳಾಗದಿರಲು ಎಂಡೊಮೆಟ್ರಿಯೊಸಿಸ್ ಕಾರಣ ಎಂದು ವೈದ್ಯರು ಹೇಳ್ತಾರೆ.
ಅಡೆನೊಮೈಯೋಸಿಸ್ : ಅಂಗಾಂಶದ ಪದರವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದ್ರಿಂದಾಗಿ ವಿಪರೀತ ನೋವು, ಆಗಾಗ ಮುಟ್ಟಾಗುವುದು, ಸುಸ್ತು ಕಾಡುತ್ತದೆ. ಇದು ಫಲವತ್ತತೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಮುಟ್ಟಿನ ವೇಳೆ ವಿಪರೀತ ನೋವು ಮಾತ್ರ ಇದ್ರಿಂದ ಹೆಚ್ಚಾಗುತ್ತದೆ.
Womens Health: ಮಹಿಳೆ ಈ ವಸ್ತುಗಳನ್ನೆಲ್ಲಾ ಬಳಸೋದು ಆರೋಗ್ಯಕ್ಕೆ ಒಳ್ಳೇದಲ್ಲ
ಇನ್ಪಿಮೆಟರಿ ಪೆಲ್ವಿಕ್ ಸಮಸ್ಯೆ : ಮುಟ್ಟಿನ ವೇಳೆ ಅತಿ ಹೆಚ್ಚು ನೋವು ಕಾಡಲು ಇನ್ಪಿಮೆಟರಿ ಪೆಲ್ವಿಕ್ ಸಮಸ್ಯೆ ಮುಖ್ಯ ಕಾರಣವಾಗಿದೆ. ಇದ್ರಿಂದಾಗಿ ಫಾಲೋಪಿಯನ್ ಟ್ಯೂಬ್‌ಗಳಲ್ಲಿ ಅಡಚಣೆ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ, ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯ ಸೇರುವಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ರೋಗದಲ್ಲಿ ಕೂಡ ಗರ್ಭಧಾರಣೆಗೆ ಸಮಸ್ಯೆಯಾಗುವ ಸಾಧ್ಯತೆಯಿರುತ್ತದೆ.