
ಸೌಂದರ್ಯ ಎನ್ನುವುದು ನೋಡುಗರ ಕಣ್ಣಿನಲ್ಲಿ ಇರುತ್ತದೆ. ಸೌಂದರ್ಯಕ್ಕೆ ನಿಜವಾದ ವ್ಯಾಖ್ಯಾನವೇ ಇಲ್ಲ ಅಥವಾ ಹಲವು ರೀತಿಯ ವ್ಯಾಖ್ಯಾನಗಳಿವೆ. ಹಲವರಿಗೆ ದೈಹಿಕ ಸೌಂದರ್ಯ ಮುಖ್ಯ, ಕೆಲವರಿಗೆ ಬುದ್ಧಿವಂತ ವ್ಯಕ್ತಿ ಸುಂದರವಾಗಿ ಕಾಣಿಸುತ್ತಾರೆ. ಇನ್ನು ದೈಹಿಕ ಸೌಂದರ್ಯದ ಬಗ್ಗೆ ಮಾತನಾಡುವುದಾದರೆ, ಒಬ್ಬ ವ್ಯಕ್ತಿ ಒಬ್ಬರಿಗೆ ಚೆನ್ನಾಗಿ ಕಾಣಿಸಬಹುದು, ಆದರೆ ಅದೇ ವ್ಯಕ್ತಿ ಇನ್ನೊಬ್ಬರಿಗೆ ಛೇ ಇವರೆಂಥ ಚೆಂದ ಇದ್ದಾರೆ ಎನ್ನಿಸಬಹುದು. ನೋಡಲು ಚೆನ್ನಾಗಿಲ್ಲ ಎಂದುಕೊಂಡಿದ್ದ ವ್ಯಕ್ತಿಯ ಜೊತೆ ಸ್ವಲ್ಪ ಸಮಯ ಕಳೆದು, ಅವರ ಗುಣಗಳು ಸಕತ್ ಇಷ್ಟವಾಗಿಬಿಟ್ಟರೆ ಅದೇ ವ್ಯಕ್ತಿ ನಮ್ಮ ಅರಿವಿಗೆ ಬಾರದೆಯೇ ಸುಂದರವಾಗಿ ಕಾಣಿಸುವುದು ಇದ್ದರೆ, ಅದೇ ಇನ್ನೊಂದೆಡೆ, ಸುಂದರ ವ್ಯಕ್ತಿ ಎನ್ನಿಸಿಕೊಂಡ ವ್ಯಕ್ತಿಯ ನಡವಳಿಗೆ ಕೆಟ್ಟದ್ದಾಗಿದ್ದರೆ ಅವರು ಕುರೂಪಿ ಎನ್ನಿಸುವುದು ಉಂಟು. ಆದ ಕಾರಣ ಸೌಂದರ್ಯ ಎನ್ನುವ ವ್ಯಾಖ್ಯಾನವೇ ಹುಚ್ಚು ಕಲ್ಪನೆ ಎನ್ನಲಾಗುತ್ತದೆ.
ಇದರ ಹೊರತಾಗಿಯೂ ಮಹಿಳೆಯರ ವಿಷಯಕ್ಕೆ ಬರುವುದಾದರೆ, ಸಾಮಾನ್ಯವಾಗಿ, ಸುಂದರಿ ಎಂದಾಕ್ಷಣ ಮೈ ಬಣ್ಣ ಹಾಗೂ ತೆಳ್ಳಗಿನ ಶರೀರ ಅರ್ಥಾತ್ ತೆಳ್ಳಗೆ-ಬೆಳ್ಳಗೆ ಇದ್ದು ಆಕರ್ಷಕ ಕಣ್ಣು, ದೇಹ ರಚನೆ, ಉದ್ದ ಕೂದಲು, ದೊಡ್ಡ ಕಣ್ಣುಗಳು, ಗುಲಾಬಿ ದಳಗಳಂತಹ ತುಟಿಗಳು ಮತ್ತು ಕೆಂಪು ಕೆನ್ನೆಗಳನ್ನು ಹೊಂದಿರುವವಳನ್ನು ಸುಂದರಿ ಎಂದು ಪರಿಗಣಿಸಲಾಗಿತ್ತದೆ. ಇಷ್ಟು ಹೇಳುತ್ತಿದ್ದಂತೆಯೇ ಬಹುತೇಕ ಮಂದಿಯ ತಲೆಯಲ್ಲಿ ಅವರಿಷ್ಟರ ಚಿತ್ರ ನಟಿಯರು ಕಣ್ಣ ಮುಂದೆ ಬರಬಹುದು. ಆದರೆ ಅವರದ್ದು ಏನಿದ್ದರೂ ಕೃತಕ ಸೌಂದರ್ಯ, ಇಲ್ಲವೇ ಪ್ಲಾಸ್ಟಿಕ್ ಸರ್ಜರಿಯ ಸೌಂದರ್ಯ ಅಷ್ಟೇ. ಸುಂದರಿ ಸುಂದರಿ ಎಂದು ಹೊಗಳುವ ನಟಿಯರ ಮೇಕಪ್ ರಹಿತ ಮುಖ ನೋಡಿಬಿಟ್ಟರೆ ಬಹುಶಃ ಅವರಿಗೇ ಅವರ ಗುರುತು ಸಿಗುವುದು ಕಷ್ಟ ಎನ್ನುವ ಮಾತೂ ಇದೆ. ಜೊತೆಗೆ ಬೇಕಾದ ಎಲ್ಲಾ ಭಾಗಗಳಿಗೂ ಪ್ಲಾಸ್ಟಿಕ್ ಸರ್ಜರಿಯಿಂದ ರೂಪು ಪಡೆದುಕೊಳ್ಳುವುದು ಗುಟ್ಟಾಗೇನೂ ಉಳಿದಿಲ್ಲ.
ನೋಡಲು ಚೆನ್ನಾಗಿಲ್ಲ, ಕಲರ್ ಇಲ್ಲ ಎಂದು ತುಂಬಾ ಫೀಲಿಂಗ್ ಇತ್ತು: ಮನದ ಮಾತು ಹೇಳಿದ್ದ ಅಪ್ಪು ವಿಡಿಯೋ ವೈರಲ್!
ಅದೇನೇ ಇರಲಿ. ಇಲ್ಲಿ ಹೇಳಹೊರಟಿರುವುದು ಸಹಜ ಸೌಂದರ್ಯ ಎಂದೇನು ಹೇಳಲಾಗುತ್ತದೆಯೋ, ಅಂಥ ಸುಂದರಿಯರು ಅತಿ ಹೆಚ್ಚು ಯಾವ ರಾಜ್ಯದಲ್ಲಿ ಇದ್ದಾರೆ ಎನ್ನುವ ಬಗ್ಗೆ. ಈಚೆಗೆ ನಡೆಸಿದ ಸಮೀಕ್ಷೆಯಲ್ಲಿ, ಇದು ಬಯಲುಗೊಂಡಿದೆ. ಮಹಿಳೆಯರ ಚರ್ಮ, ಕಣ್ಣಿನ ಬಣ್ಣ ಮತ್ತು ದೇಹದ ಆಕಾರ ಸೇರಿದಂತೆ ಹಲವಾರು ಅಂಶಗಳನ್ನು ಪರಿಶೀಲಿಸಿ ಸೌಂದರ್ಯದ ವ್ಯಾಖ್ಯಾನ ಮಾಡಿದ್ದು, ಅದರಲ್ಲಿ ಟಾಪ್-1 ರಾಜ್ಯ ಎನ್ನಿಸಿಕೊಂಡಿರುವುದು ಜಮ್ಮು ಮತ್ತು ಕಾಶ್ಮೀರ. ಅದರಲ್ಲಿಯೂ ವಿಶೇಷವಾಗಿ ಹುಂಜಾ ಸಮುದಾಯದ ಮಹಿಳೆಯರು ವಯಸ್ಸಾದರೂ ಸುಂದರವಾಗಿರುತ್ತಾರೆ, ಇವರದ್ದು ಮೇಕಪ್ರಹಿತ ನೈಜ ಸೌಂದರ್ಯ ಎಂದು ವಿಶ್ಲೇಷಿಸಲಾಗಿದೆ.
ಇದನ್ನು ಹೊರತುಪಡಿಸಿದರೆ, ಹಿಮಾಚಲ ಮತ್ತು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳ ಮಹಿಳೆಯರನ್ನು ಸಹ ತುಂಬಾ ಸುಂದರವೆಂದು ಪರಿಗಣಿಸಲಾಗುತ್ತದೆ. ಮಣಿಪುರ ಮತ್ತು ಮಿಜೋರಾಂನಲ್ಲಿ ವಾಸಿಸುವ ಮಹಿಳೆಯರೂ ಸುಂದರಿಯರ ಪಟ್ಟಿಯಲ್ಲಿದ್ದಾರೆ. ನಂತರದ ಸ್ಥಾನ ಸಿಕ್ಕಿರುವುದು ಸಿಕ್ಕಿಂಗೆ. ಇಲ್ಲಿಯ ಮಹಿಳೆಯ ಆಕರ್ಷಕ ನೋಟದಿಂದಾಗಿ, ಅವರು ದೇಶದ ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಎಲ್ಲಾ ಮಹಿಳೆಯರ ಸೌಂದರ್ಯಕ್ಕೆ ಪರಿಸರ ಮತ್ತು ಬೆಟ್ಟಗುಡ್ಡಗಳ ಜೀವನವೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಕಾಶ್ಮೀರವನ್ನು ಸುಂದರ ಮಹಿಳೆಯರ ರಾಜ್ಯ ಎಂದು ಕರೆಯಲಾಗುತ್ತದೆ. ಇಲ್ಲಿನ ಮಹಿಳೆಯರು ಬಾಲ್ಯದಿಂದಲೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ವಿಶೇಷವಾಗಿ ಚರ್ಮ ಮತ್ತು ಕೇಶವಿನ್ಯಾಸದ ಸೌಂದರ್ಯದ ಬಗ್ಗೆ ಗಮನ ಹರಿಸುವುದರಿಂದ, ಇಲ್ಲಿನ ಮಹಿಳೆಯರು ತುಂಬಾ ಹಾಟ್ ಮತ್ತು ಬೋಲ್ಡ್ ಆಗಿ ಕಾಣುತ್ತಾರೆ ಎಂದು ಹೇಳಲಾಗುತ್ತಿದೆ. ಇವಿಷ್ಟೇ ಸದ್ಯ ಲಿಸ್ಟ್ನಲ್ಲಿ ಇರುವುದು. ಹಾಗೆಂದು ಉಳಿದ ರಾಜ್ಯಗಳ ಮಹಿಳೆಯರು ಬೇಸರಿಸುವ ಅಗತ್ಯವಿಲ್ಲ ಬಿಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.