ರೀಲ್ಸ್​ ಹುಚ್ಚಿಗಾಗಿ ಪ್ರಾಣ ಬಿಟ್ಟ ಮಹಿಳೆ? ಮೈ ಝುಂ ಎನ್ನೋ ವಿಡಿಯೋ ವೈರಲ್​

Published : May 07, 2025, 02:53 PM ISTUpdated : May 07, 2025, 02:57 PM IST
ರೀಲ್ಸ್​ ಹುಚ್ಚಿಗಾಗಿ ಪ್ರಾಣ ಬಿಟ್ಟ ಮಹಿಳೆ? ಮೈ ಝುಂ ಎನ್ನೋ ವಿಡಿಯೋ ವೈರಲ್​

ಸಾರಾಂಶ

ಲೈಕ್ಸ್‌ಗಾಗಿ ಅಪಾಯಕಾರಿ, ಅಶ್ಲೀಲ ರೀಲ್ಸ್‌ಗಳ ಹುಚ್ಚು ಹೆಚ್ಚುತ್ತಿದೆ. ಪ್ಯಾರಾಗ್ಲೈಡಿಂಗ್‌ ವೇಳೆ ಹಗ್ಗ ತುಂಡಾದ ವಿಡಿಯೋ ವೈರಲ್‌. ಉತ್ತಮ ವಿಷಯಗಳಿಗಿಂತ ಅಸಭ್ಯ ರೀಲ್ಸ್‌ಗಳಿಗೆ ಬೇಡಿಕೆ ಹೆಚ್ಚು. ಜೀವಕ್ಕೆ ಅಪಾಯ ತಂದೊಡ್ಡುವ ರೀಲ್ಸ್‌ಗಳಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಇಂದು  ರೀಲ್ಸ್‌ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್‍‌ ಎಂದು ಫೇಮಸ್‌ ಆಗಲು ಕಾಣುವ ಮಾರ್ಗ ಇದೊಂದೇ. ರೀಲ್ಸ್‌ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್‌ ಕೂಡ ಜಾಸ್ತಿಯಾಗುತ್ತಿದೆ. ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್‌ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್‌ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ. ರೈಲು ಹಳಿಗಳ ಮೇಲೆ ನಿಲ್ಲುವುದು, ಬೆಟ್ಟದ ತುದಿಯಲ್ಲಿ ಹೋಗುವುದು... ಹೀಗೆ ರೀಲ್ಸ್ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಚಿತ್ರ-ವಿಚಿತ್ರವಾಗಿ ರೀಲ್ಸ್‌ ಮಾಡಲು ಹೋಗಿ ಥಳಿತಕ್ಕೆ ಒಳಗಾಗುವವರೂ ಇದ್ದಾರೆ.

ಇದೀಗ ಅಂಥದ್ದೇ ಒಂದು ಭಯಾನಕ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಮಹಿಳೆಯೊಬ್ಬರು ಪ್ಯಾರಾಗ್ಲೈಂಡಿಂಗ್​ ಮಾಡುವ ವಿಡಿಯೋ ಇದಾಗಿದೆ. ಬೆಟ್ಟದ ಮೇಲಿನಿಂದ ಹಗ್ಗ ಕಟ್ಟಿದ ಬಿಡಲಾಗುತ್ತದೆ. ಈ ಸಮಯದಲ್ಲಿ ಮಹಿಳೆ ಖುಷಿಯಿಂದಲೇ ಹೋಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಹಗ್ಗ ತುಂಡಾಗಿ ಮಹಿಳೆ ಕೆಳಗೆ ಬಿದ್ದಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಲೇ ರೀಲ್ಸ್​ ಹುಚ್ಚಿಗಾಗಿ ಇಂಥ ಭಯಾನಕ ಸ್ಟಂಟ್​ ಮಾಡುವ ಅಗತ್ಯ ಇದೆಯೇ ಎಂದು ಕೇಳುತ್ತಿದ್ದಾರೆ. ಈ ವಿಡಿಯೋ ನೋಡಿದರೆ ಮೈಯೆಲ್ಲಾ ಝುಂ ಎನ್ನುವಂತಿದೆ. ಆದರೆ ಇದು ಅಪೂರ್ಣ ವಿಡಿಯೋ. ಮಹಿಳೆ ಕೆಳಗೆ ಬೀಳುತ್ತಿದ್ದಂತೆಯೇ ಪ್ಯಾರಾಚ್ಯೂಟ್​ ತೆರೆದು ಮಹಿಳೆ ಮೇಲಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದ್ದರೂ ಅದರ ಪೂರ್ಣ ವಿಡಿಯೋ ಸದ್ಯ ಎಲ್ಲಿಯೂ ಲಭ್ಯವಿಲ್ಲ. ಆದ್ದರಿಂದ ಇದರ ಸತ್ಯಾಸತ್ಯತೆ ತಿಳಿಯುವುದು ಕಷ್ಟವಾಗಿದೆ.

ಉಫ್​... ಲೈಕ್ಸ್​ಗಾಗಿ ಇದೆಂಥ ಹುಚ್ಚು? ಟವಲ್​ ಸುತ್ತಿಕೊಂಡು ಬಿಚ್ಚಿಬಿಚ್ಚಿ ತೋರಿಸಿದ ಯುವತಿಯರು!

ಈ ಮಹಿಳೆ ಬದುಕಿದ್ದಾಳೋ, ಇನ್ನೇನು ಆಗಿದ್ಯೋ ಗೊತ್ತಿಲ್ಲ. ಆದರೆ ಇಂಥ ಭಯಾನಕ ಸ್ಟಂಟ್​ ಮಾಡುವ ಮುನ್ನ ಸ್ವಲ್ಪ ಯೋಚನೆ ಮಾಡಿದರೆ ಒಳ್ಳೆಯದು ಎನ್ನುವುದು ಎಲ್ಲರ ಅನಿಸಿದೆ. ಅಷ್ಟಕ್ಕೂ, ಕಷ್ಟಪಟ್ಟು ವಿಷಯಗಳನ್ನು ಕಲೆ ಹಾಕಿ ಒಳ್ಳೊಳ್ಳೆ ವಿಷಯಗಳನ್ನು ಕೊಟ್ಟು ರೀಲ್ಸ್​ ಮಾಡಿದರೆ ಅಥವಾ ಸುದ್ದಿ ಬರೆದರೆ, ಸಂದರ್ಶನ ಮಾಡಿದರೆ ಅದರತ್ತ ಕಣ್ಣೆತ್ತಿಯೂ ನೋಡದ ದೊಡ್ಡ ವರ್ಗವೇ ಇದೆ. ಜನರ ಕಾಲಿಗೆ ಬಿದ್ದು ಇದನ್ನು ನೋಡಿ ಎಂದು ಹೇಳುವ ಸ್ಥಿತಿ ಇದೆ. ಆದರೆ ಅಸಭ್ಯ, ಅಶ್ಲೀಲ ಎನ್ನುವಂಥ ರೀಲ್ಸ್​ಗಳಿಗೆ ಸಕತ್​ ಡಿಮಾಂಡ್​. ಅದರಲ್ಲಿಯೂ  ಮಹಿಳೆಯರು ಒಂದು ಹಂತಕ್ಕೆ ಮುಂದೆ ಹೋಗಿದ್ದಾರೆ! ವಯಸ್ಸಿನ ಮಿತಿ ಇಲ್ಲದೇ ಇಂಥ ರೀಲ್ಸ್​ಗಳನ್ನು ಮಾಡುತ್ತಿದ್ದಾರೆ! ಎಲ್ಲಾ ಹಂತಗಳನ್ನೂ ದಾಟಿ ಯಾವ ಹೇಸಿಗೆಯೂ ಇಲ್ಲದೇ ಅವರು ರೀಲ್ಸ್​ ಮಾಡಿದರೆ, ಅವರನ್ನು ಟ್ರೋಲ್​ ಮಾಡುತ್ತಾ, ಅಸಭ್ಯ ಶಬ್ದಗಳಿಂದ ಬೈಯುತ್ತಾ ಜೊಲ್ಲು ಸುರಿಸಿಕೊಂಡು ನೋಡುವ ದೊಡ್ಡ ವರ್ಗವೇ ಇದೆ ಎನ್ನುವುದೂ ಸುಳ್ಳಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡಬಾರದೇ ಎಂದು ಕಮೆಂಟ್​ ಮಾಡುವ ಬಹಳಷ್ಟು ಕಮೆಂಟಿಗರಿಗೆ ತಾವು ನೋಡ್ತಿರೋ ಈ ಅಸಭ್ಯ ರೀಲ್ಸ್​ ಪಕ್ಕದಲ್ಲಿಯೇ ಇನ್ನೊಂದು ಒಳ್ಳೆಯ ವಿಷಯ ಇರುವ ಬಗ್ಗೆ ತಿಳಿದಿರುವುದೇ ಇಲ್ಲ! ಏಕೆಂದರೆ ಅದು ಯಾರಿಗೂ ಬೇಡ. 

ಇದೇ ಕಾರಣಕ್ಕೆ ಇಂದು ವ್ಯೂಸ್​, ಶೇರ್​, ಕಮೆಂಟ್ಸ್​, ಲೈಕ್ಸ್​, ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಂಡವರಲ್ಲಿ ಒಂದೋ ಸೆಲೆಬ್ರಿಟಿಗಳು ಇಲ್ಲವೇ ಈ ರೀತಿಯ ಅಶ್ಲೀಲತೆಯನ್ನೇ ವಿಜೃಂಭಿಸಿ ರೀಲ್ಸ್​ ಮಾಡುವವರೇ ಆಗಿದ್ದಾರೆ! ಮತ್ತೆ ಕೆಲವರು ತಮ್ಮ ಜೀವವನ್ನು ಅಪಾಯಕ್ಕಿಟ್ಟು ಇಂಥ ರೀಲ್ಸ್ ಮಾಡುತ್ತಾರೆ. ಇದಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ರೈಲು ಹಳಿಗಳ ಮೇಲೆ ನಿಂತು ರೀಲ್ಸ್​ ಮಾಡುವ ಹುಚ್ಚಿನಿಂದ ಮತ್ತು ಫಾಲ್ಸ್​ಗಳ ತುದಿಯಲ್ಲಿ ನಿಂತು ರೀಲ್ಸ್​ ಮಾಡುವವರೇ ಪ್ರಾಣ ಕಳೆದುಕೊಂಡಿರುವ ಹಲವು ಉದಾಹರಣೆಗಳು ಇವೆ. 

ರೇಷ್ಮಾ ಆಂಟಿಗೆ ಪತಿಯಿಂದ ಹಲ್ಲೆ? ಅಪ್ಪನಿಗೂ ಚೂರಿಯಿಂದ ಇರಿತ: ವಿಡಿಯೋ ವೈರಲ್​

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!