ಯುವಜನತೆಗೆ ಸ್ಫೂರ್ತಿಯಾಗಿರುವ ಮಲೆನಾಡಿನ ಮಹಿಳೆ ಅನಸೂಯ

By Suvarna News  |  First Published Jul 15, 2024, 2:24 PM IST

ಕನ್ನಡ ಮೀಡಿಯಂನಲ್ಲಿ ಬಿಎ ಮಾಡಿರುವ ಅನಸೂಯ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದವರು. ತಮ್ಮ ಮೂವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಬೆಳೆಸಿ, ಅವರೂ ಉತ್ತಮ ಉದ್ಯೋಗದಲ್ಲಿದ್ದಾರೆ. ನೌಕರಿಯಿಂದ ನಿವೃತ್ತಿ ಹೊಂದಿದ ಬಳಿಕವೂ ತಮ್ಮಲ್ಲಿರುವ ಕುಶಲತೆಗಳಿಂದ ಇತರರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಯೋಗ, ಧ್ಯಾನ ಕಲಿಸಿಕೊಡುವ ಕೇಂದ್ರವನ್ನೂ ನಡೆಸುತ್ತಿದ್ದಾರೆ


ಯುವಕರೆಂದರೆ, ಸವಾಲುಗಳು ಬಂದಂತೆಲ್ಲ, ಅವುಗಳನ್ನು ಎದುರಿಸಲು ಸದಾ ಸಿದ್ಧರಿರುವವರು. ಎಲ್ಲವೂ ಸುಗಮವಾಗಿ, ಯಾವುದೇ ತೊಂದರೆಯಿಲ್ಲದೆ ಸಾಗಬೇಕೆಂದು ನಿರೀಕ್ಷಿಸುವವರು ಅಥವಾ ಅದಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವವರು ಯುವಕರಲ್ಲ. ಜೀವನದಲ್ಲಿ ಕೊನೆಯಿಲ್ಲದ ಉತ್ಸಾಹವನ್ನು ಹೊಂದಿರುವವರೇ ನಿಜವಾದ ಯುವಕರು ಎಂದು ಪೂಜ್ಯ ಗುರುದೇವ್ ಶ್ರೀ ಶ್ರೀ ರವಿ ಶಂಕರ್ ರವರು ಹೇಳುತ್ತಾರೆ.
 
ಇದಕ್ಕೆ ಉತ್ತಮ ಉದಾಹರಣೆಯೆಂದರೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅನಸೂಯರವರು. ಕನ್ನಡ ಮೀಡಿಯಂನಲ್ಲಿ ಬಿಎ ಮಾಡಿರುವ ಇವರು ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದವರು. ತಮ್ಮ ಮೂವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಬೆಳೆಸಿ, ಅವರೂ ಉತ್ತಮ ಉದ್ಯೋಗದಲ್ಲಿದ್ದಾರೆ. 62 ವರ್ಷ ವಯಸ್ಸಿನ ಅನಸೂಯರವರು, ನೌಕರಿಯಿಂದ ನಿವೃತ್ತಿ ಹೊಂದಿದ ಬಳಿಕವೂ ಮನೆಯಲ್ಲಿ ಸುಮ್ಮನೆ ಕೂರಬಾರದು, ತಮ್ಮಲ್ಲಿರುವ ಕುಶಲತೆಗಳಿಂದ ಇತರರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಯೋಗ, ಧ್ಯಾನ ಕಲಿಸಿಕೊಡುವ ಕೇಂದ್ರವನ್ನೂ ನಡೆಸುತ್ತಿದ್ದಾರೆ. ನಾವು ನೌಕರಿಯಿಂದ ನಿವೃತ್ತಿ ಹೊಂದಿರುತ್ತೇವೆ. ಆದರೆ ನಮ್ಮ ಮನಸ್ಸಿಗೆ ನಿವೃತ್ತಿ ಆಗಿರುವುದಿಲ್ಲ ಎಂಬುದು ಅವರಾಡುವ ಸ್ಫೂರ್ತಿದಾಯಕ, ಆತ್ಮವಿಶ್ವಾಸದ ನುಡಿಗಳು.

 

Tap to resize

Latest Videos

undefined

ಬರಲಿದೆ ಶ್ರೀ ಶ್ರೀ ರವಿಶಂಕರ ಗುರೂಜಿ ಜೀವನಕಥನ ಆಧರಿಸಿದ ಸಿನಿಮಾ..!
 
ಆರ್ಟ್ ಆಫ್ ಲಿವಿಂಗ್ ನ ಯೂತ್ ಲೀಡರ್ಶಿಪ್ ಟ್ರೈನಿಂಗ್ ಪ್ರೋಗ್ರಾಂ (YLTP) ಅನ್ನುವ ಕೋರ್ಸ್ ಮಾಡಿ, ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯೆಗಳನ್ನು ಹಾಗೂ ನಾಯಕತ್ವ, ಬ್ಯುಸಿನೆಸ್ ಮುಂತಾದ ವಿಷಯಗಳ ಬಗ್ಗೆ ಕಲಿತುಕೊಂಡ ಅನಸೂಯರವರು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಸದಾ ಕನ್ನಡದಲ್ಲೇ ವ್ಯವಹರಿಸುತ್ತಿದ್ದ ಅನಸೂಯರವರಿಗೆ, ಇಂಗ್ಲಿಷ್ ಮಾತನಾಡಲು ಕಲಿತರೆ ತನ್ನ ಸಮಾಜ ಸೇವೆಯನ್ನು ಇನ್ನೂ ಚೆನ್ನಾಗಿ ನಿರ್ವಹಿಸಬಹುದೆಂಬ ಯೋಚನೆ ಮೂಡಿಬಂತು. ಇದಕ್ಕಾಗಿ ಅವರಿಗೆ ನೆರವಾಗಿದ್ದೇ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ರೂರಲ್ ಡೆವಲಪ್ಮೆಂಟ್ ಪ್ರೋಗ್ರಾಂ (SSRDP) ವತಿಯಿಂದ ನಡೆಸಲಾದ ಆರ್ಟ್ ಆಫ್ ಲಿವಿಂಗ್ – ಬೋಶ್ ಬ್ರಿಡ್ಜ್ ಕಾರ್ಯಕ್ರಮ.
 
ತಮ್ಮ ಈ ವಯಸ್ಸಿನಲ್ಲಿಯೂ ಕಲಿಯುವಿಕೆಯ ಕಡೆಗೆ ಅಪಾರ ಉತ್ಸಾಹವನ್ನು ಹೊಂದಿರುವ ಅನಸೂಯರವರು, ಈ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಮಾತನಾಡುವುದನ್ನು ಮಾತ್ರವಲ್ಲದೆ, ಬ್ಯುಸಿನೆಸ್ ಸ್ಕಿಲ್, ಭಾಷಣ ಕಲೆ, ಕಂಪ್ಯೂಟರ್ ನಲ್ಲಿ ಇಂಗ್ಲೀಷ್ ಟೈಪಿಂಗ್ – ಇಂತಹ ಹಲವಾರು ಕುಶಲತೆಗಳನ್ನು ಕಲಿತರು. “ಇದರಿಂದ ನನ್ನ ಜೀವನದಲ್ಲಿ ಬಹಳ ಸಹಾಯವಾಗಿದೆ ಇದು ನನ್ನ ಮುಂದಿನ ಜೀವನದ ದಾರಿಗೆ ಒಂದು ಬೆಂಬಲವಾಗಿ; ಒಂದು ಒಳ್ಳೆಯ ಪಾಠವನ್ನು ಕೊಟ್ಟಿದೆ. ಬ್ರಿಜ್ ಕೋರ್ಸಿನಿಂದ ತಿಳಿದುಕೊಂಡಿದ್ದೇನೆ, ಕಲಿತುಕೊಂಡಿದ್ದೇನೆ; ಒಂದು ಉಪಯೋಗ ಆಗಿದೆ” ಎಂಬುದು ಅವರ ಮನದಾಳದಿಂದ ಬರುವ ಮಾತು.
 
“ನಮ್ಮ ಮನಸ್ಸಲ್ಲಿ ನಾವು ಇನ್ನೂ ಏನಾದರೂ ಕೆಲಸ ಮಾಡಬಹುದು ಅನ್ನುವಂತಹ ಒಂದು ಉತ್ಸಾಹ ಇಟ್ಟುಕೊಂಡಿರಬೇಕು. ಹಾಗೆ ನಾನು ಇಟ್ಟುಕೊಂಡಿದ್ದೇನೆ. ಅದನ್ನಿಟ್ಟುಕೊಂಡು ನಾನು ಸಮಾಜ ಸೇವೆ ಮಾಡುತ್ತಾ ಇದ್ದೇನೆ. ಆ ಸಮಾಜ ಸೇವೆ ಮಾಡುವುದರಿಂದ ನಮಗೆ ಇನ್ನೂ ಸಹಾಯಕವಾಗುತ್ತದೆ” ಎಂದು ಹೇಳುವ ಅನಸೂಯರವರು ತಾವು ಈ ಕಾರ್ಯಕ್ರಮದ ಪ್ರಯೋಜನ ಪಡೆದಿರುವಂತೆಯೇ ತಮ್ಮ ಸುತ್ತಮುತ್ತಲಿನ ಜನರು; ವಿಶೇಷವಾಗಿ ನಿರುದ್ಯೋಗಿ ಯುವಕ ಯುವತಿಯರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂಬ ಉದ್ದೇಶದಿಂದ, ಈ ಕಾರ್ಯಕ್ರಮವನ್ನು ಇತರರಿಗಾಗಿ ಆಯೋಜಿಸುವ ಗುರಿಯನ್ನಿಟ್ಟುಕೊಂಡು ಮುಂದೆ ಸಾಗುತ್ತಿದ್ದಾರೆ.

ಐಸ್‌ಲ್ಯಾಂಡ್ ಪ್ರಧಾನಿ ಬೆನೆಡಿಕ್ಟ್‌ಸನ್ ಭೇಟಿಯಾದ ರವಿಶಂಕರ್ ಗುರೂಜಿ; ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ
 
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ, ಹಲವು ವಲಯಗಳಲ್ಲಿ ಕೌಶಲ್ಯ ತರಬೇತಿಯನ್ನು ನೀಡುತ್ತಾ ಬಂದಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ರೂರಲ್ ಡೆವಲಪ್ಮೆಂಟ್ ಪ್ರೋಗ್ರಾಂ (SSRDP), ಭಾರತದ 18 ರಾಜ್ಯಗಳಲ್ಲಿ 95 ಶ್ರೀ ಶ್ರೀ ಕೌಶಲ್ಯ ವಿಕಾಸ ಕೇಂದ್ರಗಳು, ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ನಡೆಸುತ್ತಿದೆ. ವಿವಿಧ ವಲಯಗಳಿಂದ 50 ಕ್ಕೂ ಹೆಚ್ಚು ವಿವಿಧ ಉದ್ಯೋಗ ಸ್ಥಾನಗಳಿಗಾಗಿ ಕೌಶಲ್ಯ ತರಬೇತಿ ಮತ್ತು ಪ್ರಮಾಣೀಕರಣವನ್ನು ಒದಗಿಸುತ್ತದೆ. ಸೌರಶಕ್ತಿಯಂತಹ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಕ್ಷೇತ್ರಗಳಲ್ಲಿ ಕೌಶಲ್ಯ ನೀಡುವುದರ ಮೇಲೆ ವಿಶೇಷ ಗಮನಹರಿಸುತ್ತಿದೆ. ಇಷ್ಟು ಮಾತ್ರವಲ್ಲದೆ, ಭಾರತದಾದ್ಯಂತ 16 ಜೈಲುಗಳಲ್ಲಿ, ಕೈದಿಗಳ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ, ಕೈದಿಗಳಲ್ಲಿ ಸ್ವಾಭಿಮಾನವನ್ನು ಬೆಳೆಸಲು, ಸ್ವಯಂ-ವಿನಾಶಕಾರಿ ನಡವಳಿಕೆಯ ಮಾದರಿಗಳಿಂದ ಹೊರಬರಲು ಅವರಿಗೆ ಸಹಾಯ ಮಾಡಲು ಮತ್ತು ಅವರಿಗೆ ಆರ್ಥಿಕ ಪುನರ್ವಸತಿಗಾಗಿ ಸರಿಯಾದ ಮಾರ್ಗವನ್ನು ಒದಗಿಸುತ್ತಿದ್ದಾರೆ.

click me!