ಮನೆಗೆ ಬಂದ ಮೂಷಿಕನನ್ನು ಓಡಿಸೋದು ಹೇಗೆ?

Published : Sep 18, 2022, 06:14 PM IST
ಮನೆಗೆ ಬಂದ ಮೂಷಿಕನನ್ನು ಓಡಿಸೋದು ಹೇಗೆ?

ಸಾರಾಂಶ

ಅದು ಹೇಗೆ ಅಪಾರ್ಟ್‌ಮೆಂಟಿನ ನಾಲ್ಕನೇ ಫ್ಲೋರಿನ ಮನೆಗೂ ಇಲಿ ಬಂದು ಸೇರುತ್ತೋ ಗೊತ್ತಾಗೋಲ್ಲ. ಆದರೆ, ಸಾಯಿಸಲು ಮನಸ್ಸಿಲ್ಲ. ಮನೆಯಿಂದ ಓಡಿಸಬೇಕು ಎನಿಸಿದರೆ ಹೀಗ್ ಮಾಡಿ. 

ಮನೆ ಗಲೀಜಾಗಿಟ್ಟು ಕೊಂಡರೆ, ರಾಶಿ ರಾಶಿ ವಸ್ತುಗಳನ್ನು ಒಂದೆಡೆ ಹಾಕಿ ಕೊಂಡಿದ್ದರೆ ಇಲಿ ಸೇರೋದು ಗ್ಯಾರಂಟಿ. ಇಲಿ ನಿಮ್ಮ ನಿದ್ರೆ ಕೆಡಿಸುತ್ತಿದ್ದರೆ, ಓಡಿಸಲು ಇಲ್ಲಿ ಟಿಪ್ಸ್. ಮನೆಯಲ್ಲಿಯೇ ಸಿಗುವ ಈ ಸಿಂಪಲ್ ಪದಾರ್ಥಗಳನ್ನು ಬಳಸಿ, ಇಲಿಗಳನ್ನು ಕೊಲ್ಲದೆಯೂ ಮನೆಯಿಂದ ಹೊರಗೆ ಓಡಿಸಬಹುದು. ನೆಮ್ಮದಿಯಾಗಿ ನಿದ್ರಿಸಬಹುದು. 

ಹಳ್ಳಿಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲಿಯೂ ರಾಶಿ ರಾಶಿ ಹಾಕಿರುವ ಕಸಕ್ಕೆ ಇಲಿಗಳು ಬೇಗ ಅಟ್ರಾಕ್ಟ್ ಆಗುತ್ತವೆ. ಅಲ್ಲಿಂದ ಮನೆಯೊಳಗೂ ಕಾಲಿಡುತ್ತೆ. ಒಮ್ಮೆ ನುಗ್ಗಿದರೆ ಸಾಕು. ಅದು ಮಾಡೋ ಹಾನಿ ಅಷ್ಟಿಷ್ಟಲ್ಲ. ಮನೆಯಲ್ಲಿ ಬಟ್ಟೆ (Cloths), ಅಡುಗೆ ಮನೆಯ (Kitchen) ವಸ್ತುಗಳು ಹಾನಿಗೊಳಗಾಗುತ್ತವೆ. ಅಕಸ್ಮಾತ್ ನಮ್ಮ ಅರಿವಿಗೆ ಬಾರದೇ ಅವು ಮುಟ್ಟಿರುವ ಆಹಾರವನ್ನು (Food) ನಾವು ತಿಂದರೆ ನಮ್ಮ ಆರೋಗ್ಯಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ. ಇಂಥ ಉಪದ್ರವಿ ಜೀವಿಗಳನ್ನು ಕೊಲ್ಲಲು ಸುಲಭವಾಗಿ ಮನಸ್ಸು ಬರೋಲ್ಲ. ಅಷ್ಟೇ ಅಲ್ಲ ಗಣಪತಿ ವಾಹನ (Vehicle of Ganapati) ಎಂಬ ಕಾರಣಕ್ಕೆ ಈ ಮೂಷಿಕನ ಮೇಲೆ ಎಲ್ಲಿಲ್ಲದ ವ್ಯಾಮೋಹ ಬೇರೆ ಭಾರತೀಯರಿಗೆ.  

ಮಾರುಕಟ್ಟೆಯಲ್ಲಿ ಈ ಇಲಿ ಕೊಲ್ಲಲು ಅನೇಕ ವಿಷಗಳಿವೆ. (Rat Poison). ಸುಲಭವಾಗಿ ಬೊಂಡಾನೋ, ಬಜ್ಜಿಯೊಂದಿಗೆ ಇಟ್ಟು ಇಲಿಗಳನ್ನು ತಿನ್ನುವಂತೆ ಮಾಡಿ ಸಾಯಿಸಿ ಬಿಡಬಹುದು. ವಾಸನೆಯಿಂದ ಮನೆಯವರು ಇರುವುದೇ ಕಷ್ಟ. ಮತ್ತೆ ಸತ್ತ ಇಲಿಯನ್ನು ಎಸೆಯೋದು ಕಷ್ಟ ಬಿಡಿ. ಎಲ್ಲ ಕಾರಣಗಳಿಂದಲೂ ಗಣಪತಿ ವಾಹನವನ್ನು ಮನೆಯಿಂದ ಓಡಿಸಲು ಕೆಲವು ರಾಸಾಯನಿಕ ಮುಕ್ತ ಮನೆ ಮದ್ದುಗಳನ್ನೇ ಬಳಸುವುದು ಒಳ್ಳೆಯದು. ಅವಗಳ ಝಲಕ್ ಇಲ್ಲಿವೆ ನೋಡಿ. 

Rat Bite Fever: ಮಾರಣಾಂತಿಕ ಇಲಿ ಜ್ವರದ ಬಗ್ಗೆ ಎಚ್ಚರವಿರಲಿ

ಪುದೀನಾ (Mint Leaves): 
ಇಲಿ ಬಂದು ನಿಮ್ಮ ಮನೆಯಲ್ಲಿ ವಾಸ್ತವ್ಯ ಹೂಡಿದೆ. ಭಯ ಬೇಡ. ಪುದೀನಾ ಎಲೆ ಅಥವಾ ಹೂವು ತೆಗೆದುಕೊಳ್ಳಿ. ಅದನ್ನು ಇಲಿ ಬಿಲದ ಬಳಿ ಅಥವಾ ಸಾಮಾನ್ಯವಾಗಿ ಅವು ಬರುವ ಜಾಗದಲ್ಲಿಡಿ. ಘಮ್ ಎನ್ನುವ ಇದರ ವಾಸನೆ (Smell)ಯನ್ನು ತಡೆದುಕೊಳ್ಳುವುದು ಇಲಿಗೆ ಕಷ್ಟ. ಸುಲಭವಾಗಿ ಓಡಿ ಹೋಗುತ್ತವೆ. ಮತ್ತೆ ಬರಲು ಹಿಂದೇಟು ಹಾಕುತ್ತವೆ.

ಪಲಾವ್ ಎಲೆ  (bay leaves): ಬಿರಿಯಾನಿಗಳಲ್ಲಿ ಬಳಸುವ ಈ ಎಲೆ ಅತ್ಯುತ್ತಮ ಔಷಧವೂ ಹೌದು. ಅತ್ಯಂತ ತೀಕ್ಷ್ಣ ಸುಗಂಧ ಬೀರುವ ಈ ಎಲೆಗಳು ಪುದೀನಾದಂತೆಯೇ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಓಡಾಡುವ ಜಾಗದಲ್ಲಿ ವಾಸನೆ ಹೊಡೆಯುವಷ್ಟು ಎಲೆಗಳನ್ನಿಟ್ಟರೆ ಸಾಕು. ತಲೆ ಸುತ್ತುವಂತಾಗಿ ಈ ಉಪದ್ರವಿ ಜೀವಿಗಳು ಬರುವುದೇ ಇಲ್ಲ. 


ಫಿನೈಲ್ ಮಾತ್ರೆಗಳು (Phenyl Tablets): 
ಅಬ್ಬಾ ಇದರ ವಾಸನೆಯನ್ನು ಎಂಥವರಾದರೂ ಗ್ರಹಿಸುವುದು ಕಷ್ಟ. ಅಂಥದ್ರಲ್ಲಿ ಇಲಿಗಳಿಗೆ ಹೇಗೆ ಸಾಧ್ಯ ಹೇಳಿ? ಬಟ್ಟೆಯಲ್ಲಿ ಸುತ್ತಿಟ್ಟರೆ ಸಾಕು. ಘಂ ಎನ್ನುವ ವಾಸನೆಗೆ ಇಲಿಗೆ ತಲೆ ಸುತ್ತಿದಂತಾಗುತ್ತದೆ. ಮನೆಯ ಮೂಲೆ ಮೂಲೆಗಳಲ್ಲಿಟ್ಟರೂ ಕೆಲವು ಕೀಟ-ಕ್ರಮಿಗಳು ಮನೆಯಿಂದ ಓಡುತ್ತವೆ. ಆದರೆ, ಮಕ್ಕಳಿದ್ದರೆ ಸ್ವಲ್ಪ ಜಾಗೃತೆ ಅತ್ಯಗತ್ಯ. 

ಕೆಂಪು ಮೆಣಸಿನಕಾಯಿ (red chillies): 
ನಮಗೇ ಕೆಮ್ಮು ಬರಿಸುವ ಈ ಕೆಂಪು ಮೆಣಸಿನ ಘಾಟಿನಿಂದ ಇಲಿಗಳಂತೂ ಆ ಜಾಗದಲ್ಲಿಯೇ ಇರೋದು ಸುಳ್ಳು. ಉಸಿರಾಡಲೂ ಕಷ್ಟವಾಗುವಂತಾಗಿ ಆ ಜಾಗದಿಂದ ದೌಡಾಯಿಸದಿದ್ದರೆ ಕೇಳಿ. ಅವು ಓಡಾಡುವ ಜಾಗದಲ್ಲಿ ಕೆಂಪು ಮೆಣಸಿನಕಾಯಿಯನ್ನು ಇಡಿ. ಅಥವಾ ಅದರ ಪುಡಿಯನ್ನಿಟ್ಟರೂ ಇಲಿ ಓಡಿಸುವುದು ಸುಲಭ. ಸಾಮಾನ್ಯವಾಗಿ ಇಲಿ ಓಡಾಡುವ ಜಾಗದಲ್ಲಿಟ್ಟರೆ ಸಾಕು. ಇವು ಬರೋಲ್ಲ.

ಇಲಿ ಕಾಟಕ್ಕೆ ಹೀಗೆ ಹಾಡಬಹುದು ಮುಕ್ತಿ

ಈರುಳ್ಳಿ  (onion): 
ಇಲಿಗಳನ್ನು ಓಡಿಸಲು ಈರುಳ್ಳಿ ಮತ್ತೊಂದು ನೈಸರ್ಗಿಕ ಮಾರ್ಗ. ಸಾಮಾನ್ಯವಾಗಿ ಇಲಿಗಳಿಗೆ ಘಮ್ಮೆನ್ನುವ ಮಸಾಲೆ ವಾಸನೆ ಸಹಿಸುವುದು ಕಷ್ಟ. ಹಾಗೆಯೇ ಈರುಳ್ಳಿ ಗಮವೂ ಮೂಷಿಕನಿಗೆ ಆಗಿ ಬರೋಲ್ಲ. ಇದರ ವಾಸನೆಗೆ ಬಿಲಿದಿಂದಲೇ ಹೊರಗೇ ಬರೋಲ್ಲ. ಅವು ಓಡಾಡುವ ಸ್ಥಳಗಲ್ಲಿ ಈರುಳ್ಳಿ ತುಂಡಿಟ್ಟರೆ ಸಾಕು. ಮತ್ತೆ ಆ ಜಾಗಕ್ಕೆ ಬರುವುದೇ ಇಲ್ಲ. 

ಮಾನವನ ಕೂದಲು (Human Hair): 
ಅಯ್ಯೋ ಇಲಿಯನ್ನು ಕೊಲ್ಲಲು ಮನಸ್ಸು ಬರೋಲ್ಲಪ್ಪ ಎನ್ನೋರಿಗೆ ಇನ್ನೊಂದು ಸುಲಭ ಮಾರ್ಗವೆಂದರೆ ಮಾನವನ ಕೂದಲು. ಇದೊಂದು ಅತ್ಯುತ್ತಮ ಮಾರ್ಗ. ಕಪ್ಪಿರುವ ವಸ್ತುಗಳ ಬಳಿ ಇಲಿಗಳು ಬರೋಲ್ಲ. ಆದರೆ, ಹಾಗೆ ಕೂದಲಿನ ಮುದ್ದೆ ಇಡೋದ ಅಶುಭ ಅಂತ ಯೋಚಿಸುವುದಾದರೆ ಕೂದಲಿನ ರೀತಿಯ ಬೇರೆ ವಸ್ತುಗಳನ್ನು ಇಟ್ಟರೂ ಆಗುತ್ತೆ. ಯಾವುದೇ ಅಪಾಯ ಇರೋಲ್ಲ. ಟ್ರೈ ಮಾಡಿ ನೋಡಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ಮಾಡೆಲ್ ಮಗಳ ಯಶಸ್ಸು: ಮಾಲ್‌ನಲ್ಲಿ ಬಿಲ್‌ಬೋರ್ಡ್ ಮೇಲೆ ಮಗಳ ಫೋಟೋ ನೋಡಿ ಭಾವುಕರಾದ ಪೋಷಕರು