
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ದೇಶದ ಮಹಿಳೆಯರು ಮತ್ತು ಪುರುಷರ ಬಗ್ಗೆ ಆಘಾತಕಾರಿ ಅಂಕಿ ಅಂಶಗಳು ಹೊರಬಿದ್ದಿವೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿರುವುದು ಕಂಡುಬಂದಿದೆ. ಸಮೀಕ್ಷೆಯ ವರದಿಯ ಪ್ರಕಾರ, ಶೇಕಡಾ 4 ರಷ್ಟು ಪುರುಷರು, ಪತ್ನಿಯೂ ಅಲ್ಲದ ಗರ್ಲ್ ಫ್ರೆಂಡ್ ಕೂಡ ಅಲ್ಲದ ಮಹಿಳೆ ಜೊತೆ ಸಂಬಂಧ ಬೆಳೆಸಿದ್ದರಂತೆ. ಪತಿ, ಬಾಯ್ ಫ್ರೆಂಡ್ ಅಲ್ಲದ ಮಹಿಳೆಯರ ಸಂಖ್ಯೆ ಇದ್ರಲ್ಲಿ ಶೇಕಡಾ 0.5 ಎಂದು ಸಮೀಕ್ಷೆ ವರದಿ ಹೇಳಿದೆ.ರಾಷ್ಟ್ರೀಯ ಕುಟುಂಬ ಆರೋಗ್ಯ (National Family Health) ಸಮೀಕ್ಷೆಯ ವರದಿಯನ್ನು 1.1 ಲಕ್ಷ ಮಹಿಳೆ (Woman) ಯರು ಮತ್ತು ಒಂದು ಲಕ್ಷ ಪುರುಷರ ಅಂಕಿಅಂಶಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ರಾಜಸ್ಥಾನ, ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ವರದಿಯ ಪ್ರಕಾರ, ಒಂದಕ್ಕಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿರುವ ಮಹಿಳೆಯರ ವಿಷಯಕ್ಕೆ ಬಂದ್ರೆ ರಾಜಸ್ಥಾನ (Rajasthan ) ಅಗ್ರಸ್ಥಾನದಲ್ಲಿದೆ. ಆದರೆ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿರುವ ಪುರುಷರ ಸಂಖ್ಯೆ ಶೇಕಡಾ 1.8 ರಷ್ಟು ಎಂದು ಸಮೀಕ್ಷೆ (Survey) ಯಲ್ಲಿ ಹೇಳಲಾಗಿದೆ.
ನಗರ ಪ್ರದೇಶದ ಮಹಿಳೆಯರಿಗಿಂತ ಗ್ರಾಮೀಣ ಮಹಿಳೆಯರು ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ನಗರ ಪ್ರದೇಶದ ಶೇಕಡಾ 1.5ರಷ್ಟು ಮಹಿಳೆಯರು ಒಂದಕ್ಕಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿರುವ ಮಹಿಳೆಯರ ಸಂಖ್ಯೆ ಶೇಕಡಾ 1.8 ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮದುವೆಗೂ ಮೊದಲು ಸೆಕ್ಸ್, ಹುಡುಗಿಯರ ಏನಂತಾರೆ ?
ದೇಶದ ಹಲವು ಭಾಗಗಳಲ್ಲಿ ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಮಂಕಿಪಾಕ್ಸ್ ಪ್ರಕರಣ ಹೆಚ್ಚಾಗ್ತಿದೆ. ಸಮೀಕ್ಷೆಯಲ್ಲಿ ಇದ್ರ ಬಗೆಗೂ ಬೆಳಕು ಚೆಲ್ಲಲಾಗಿದೆ. ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಶಾರೀರಿಕ ಸಂಬಂಧ ಬೆಳೆಸುವುದ್ರಿಂದ ಮಂಕಿಪಾಕ್ಸ್ ಸೋಂಕು ಹರಡುವ ಅಪಾಯ ಹೆಚ್ಚು ಎಂದು ಅಧ್ಯಯನಗಳು ವರದಿ ಮಾಡಿವೆ. ಸೆಕ್ಸ್ ನಿಂದ ಮಾತ್ರ ಮಂಕಿಪಾಕ್ಸ್ ಹರಡಲು ಸಾಧ್ಯವಿಲ್ಲ. ಆದ್ರೆ ಮಂಕಿಪಾಕ್ಸ್ ಹರಡಲು ಸೆಕ್ಸ್ ಕೂಡ ಒಂದು ಕಾರಣ ಎಂದು ತಜ್ಞರು ಹೇಳಿದ್ದಾರೆ.
ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ, ವಿಜ್ಞಾನಿಗಳು ಬಹು ಲೈಂಗಿಕ ಪಾಲುದಾರರು ಮತ್ತು ಮಂಕಿಪಾಕ್ಸ್ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ. 528 ಮಂಕಿಪಾಕ್ಸ್ ಸೋಂಕಿತರ ಈ ಅಧ್ಯಯನವು ಶೇಕಡಾ 95 ರಷ್ಟು ಪ್ರಕರಣಗಳು ಲೈಂಗಿಕ ಪ್ರಸರಣದ ಮೂಲಕ ಹರಡುತ್ತವೆ ಎಂದು ಕಂಡುಹಿಡಿದಿದೆ. ಆದಾಗ್ಯೂ ಸೋಂಕಿತರಲ್ಲಿ ಶೇಕಡಾ 98ರಷ್ಟು ಜನರು ಸಲಿಂಗಕಾಮಿ ಅಥವಾ ದ್ವಿಲಿಂಗಿ ಪುರುಷರು ಎಂಬುದು ಗೊತ್ತಾಗಿದೆ. ಪುರುಷರೊಂದಿಗೆ ಸಂಭೋಗಿಸುವ ಇತರ ಪುರುಷ ಪಾಲುದಾರರಿಗೆ ಸೋಂಕು ಹೆಚ್ಚು ವೇಗವಾಗಿ ಹರಡುವುದು ಕಂಡುಬಂದಿದೆ.
ಮದುವೆಗೂ ಮೊದಲು ಸೆಕ್ಸ್, ಹುಡುಗಿಯರ ಏನಂತಾರೆ ?
ಬಹು ಲೈಂಗಿಕ ಪಾಲುದಾರರನ್ನು ಹೊಂದುವ ಅನಾನುಕೂಲಗಳು : ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳು ಅನೇಕ ವಿಧಗಳಲ್ಲಿ ಹಾನಿಕಾರಕ ಎಂದು ಅಧ್ಯಯನಗಳು ತೋರಿಸಿವೆ. ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದ್ರಿಂದ ಪ್ರಾಸ್ಟೇಟ್ ಮತ್ತು ಗರ್ಭಕಂಠದ ಕ್ಯಾನ್ಸರ್ನ ಹೆಚ್ಚಿನ ಅಪಾಯವನ್ನು ಹೊಂದಿರಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದಲ್ಲದೆ ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದ್ರಿಂದ ಎಚ್‌ಐವಿ ಸೋಂಕು ಮತ್ತು ಲೈಂಗಿಕವಾಗಿ ಹರಡುವ ರೋಗಗಳ ಅಪಾಯ ಸಾಮಾನ್ಯವಾಗಿಯೇ ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.