ಹೆಣ್ಣಿಗೆ ಮರುಜನ್ಮ ನೀಡೋ ತಾಯ್ತನವೇ ಒಂದು ಅಚ್ಚರಿ. ಅದರಲ್ಲೂ ಮಹಿಳೆಯ ಗರ್ಭಧಾರಣೆ, ಹೆರಿಗೆಯ ಸಂದರ್ಭ ಹಲವು ಅಚ್ಚರಿಗಳು ನಡೆಯುತ್ತವೆ. ಅವಳಿ, ತ್ರಿವಳಿ, ಆರು ಮಕ್ಕಳು ಒಂದೇ ಸಾರಿ ಹುಟ್ಟಿರೋದು ಇದೆ. ಆದ್ರೆ ಇಲ್ಲಿ ನಡೆದಿರೋದು ಅದೆಲ್ಲವನ್ನೂ ಮೀರಿಸಿದಂಥದ್ದು. ಅದೇನೂಂತ ತಿಳ್ಕೊಳ್ಳೋ ಕುತೂಹಲ ನಿಮ್ಗೂ ಇದೆಯಲ್ವಾ ?
ತಾಯ್ತನವೆಂಬುದು ಒಂದು ಅಚ್ಚರಿ.ತಾಯಿಯಾಗುವುದು ಯಾವುದೇ ಮಹಿಳೆಗೆ ತುಂಬಾ ಸಂತೋಷ ನೀಡೋ ವಿಷಯ. ಗರ್ಭಧಾರಣೆಯಿಂದ ತೊಡಗಿ ಹೆರಿಗೆಯಾಗುವ ವರೆಗೆ ಮಹಿಳೆ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಾಳೆ. ದೇಹದಲ್ಲಾಗುವ ಬದಲಾವಣೆ ಮಾತ್ರವಲ್ಲ ಜೊತೆಗೆ ಮಾನಸಿಕ ತಲ್ಲಣವನ್ನು ಎದುರಿಸುತ್ತಾಳೆ. ಹೆರಿಗೆಯ ಸಂದರ್ಭದಲ್ಲೂ ಹಲವು ಬಾರಿ ಗರ್ಭಣಿಯರು ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಕೆಲವರು ಈ ಸಂದರ್ಭದಲ್ಲಿ ಸಾವನ್ನಪ್ಪುವುದೂ ಇದೆ. ಆದರೆ ಅದಲ್ಲದದೆಯೂ ಅವಳಿ, ತ್ರಿವಳಿ, ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿಯರೂ ಇದ್ದಾರೆ. ಆದ್ರೆ ಇಲ್ಲೊಬ್ಬ ಗರ್ಭಿಣಿ ಜನ್ಮ ನೀಡಿರುವ ಮಕ್ಕಳನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ.
ವಿಭಿನ್ನ ಚರ್ಮದ ಬಣ್ಣದ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
ಮಹಿಳೆ ಸಂಪೂರ್ಣವಾಗಿ ವಿಭಿನ್ನ ಚರ್ಮದ ಬಣ್ಣದ ಅವಳಿ ಮಕ್ಕಳಿಗೆ (Twins) ಜನ್ಮ ನೀಡಿದ್ದಾರೆ. ಇದು ಮಿಲಿಯನ್‌ನಲ್ಲಿ ಒಂದು ಅಪರೂಪದ ಪ್ರಕರಣವಾಗಿದೆ ಎಂದು ತಿಳಿದುಬಂದಿದೆ. 29 ವರ್ಷದ ಚಾಂಟೆಲ್ಲೆ ಬ್ರೌಟನ್ ಏಪ್ರಿಲ್‌ನಲ್ಲಿ ಅಯೋನ್ ಮತ್ತು ಅಜಿರಾ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆಯ ಮಗ ಅಯೋನ್ ತೆಳ್ಳಗಿನ ಚರ್ಮದ ಟೋನ್ ಮತ್ತು ಹಸಿರು ಕಣ್ಣುಗಳೊಂದಿಗೆ ಜನಿಸಿದರೆ, ಅವಳ ಮಗಳು ಅಜಿರಾ ಗಾಢವಾದ ಚರ್ಮದ ಮೈಬಣ್ಣ ಮತ್ತು ಕಂದು ಕಣ್ಣುಗಳನ್ನು ಹೊಂದಿದ್ದಾರೆ.
ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ ! ಅರೆ ಇದು ಹೇಗೆ ಸಾಧ್ಯ?
ಹುಟ್ಟಿದಾಗ ಅವಳಿಗಳು ಪರಸ್ಪರ ಭಿನ್ನವಾಗಿ ಕಾಣಲಿಲ್ಲ ಎಂದು ತಾಯಿ (Mother) ಚಾಂಟೆಲ್ಲೆ ಹೇಳಿದರು, ಆದರೆ, ಸಮಯ ಕಳೆದಂತೆ, ಅಜೀರಾ ಅವರ ಚರ್ಮದ ಬಣ್ಣವು ಕಪ್ಪು ಮತ್ತು ಗಾಢವಾಗಲು ಪ್ರಾರಂಭಿಸಿತು ಎಂದು ತಿಳಿಸಿದ್ದಾರೆ. ಮಗಳು ಬಿಳಿಯಾಗಿ ಕಾಣುತ್ತಾಳೆ. ಯಾಕೆಂದರೆ ಅಜ್ಜ ನೈಜೀರಿಯನ್ ಆಗಿದ್ದರಿಂದ ಮಿಶ್ರ ಜನಾಂಗದವಳು ಎಂದು ಚಾಂಟೆಲ್ಲೆ ಹೇಳಿದರು. ಅವಳ ಸಂಗಾತಿ ಆಶ್ಟನ್, 29, ಅರ್ಧ ಜಮೈಕಾ, ಅರ್ಧ ಸ್ಕಾಟಿಷ್ ಎಂದು ತಿಳಿದುಬಂದಿದೆ. ಸಂಪೂರ್ಣವಾಗಿ ವಿಭಿನ್ನ ಚರ್ಮದ ಬಣ್ಣಗಳನ್ನು ಹೊಂದಿರುವ ಅವಳಿಗಳ ಜನನವು ಮಿಲಿಯನ್‌ಗೆ ಒಂದು ಎಂದು ತಜ್ಞರು ಅಂದಾಜಿಸಿದ್ದಾರೆ.
3 ವರ್ಷದ ಸಯಾಮಿ ಬಾಲಕರ ಯಶಸ್ವಿಯಾಗಿ ಬೇರ್ಪಡಿಸಿದ ವೈದ್ಯರು: 27 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ
ಅವಳಿ ಮಕ್ಕಳಲ್ಲಿ ಪರಸ್ಪರ ಸಾಮ್ಯತೆಯೇ ಇಲ್ಲ !
ಅಯೋನ್ ಹೆಚ್ಚು ಗಮನವನ್ನು ಬಯಸುತ್ತಾನೆ ಮತ್ತು ನಿರಂತರವಾಗಿ ಮಾತನಾಡುತ್ತಾನೆ. ಅಜೀರಾ ಆಗಾಗ ಹಾಗೆ ಮಾಡುವುದಿಲ್ಲ. ಆದರೆ ಅವರು ಈಗ ನಿಜವಾಗಿಯೂ ಒಬ್ಬರನ್ನೊಬ್ಬರು ನೋಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಮತ್ತು ಹೆಚ್ಚು ನಗುತ್ತಿದ್ದಾರೆ. ಅವರು ಹೀಗೆಯೇ ಇರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಚಾಂಟೆಲ್ ಹೇಳಿದ್ದಾರೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಕ್ಕಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಎರಡೂ ಮಕ್ಕಳು ಅವಳವೇ ಎಂದು ಜನರು ಆಗಾಗ ಕೇಳುತ್ತಾರೆ ಎಂದು ಚಾಂಟೆಲ್ಲೆ ಹೇಳಿದರು.