ಉದ್ಯಮಿ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಸುಳ್ಳು ಆರೋಪ; ಪ್ರೂವ್‌ ಮಾಡಲು ಕೋಳಿ ರಕ್ತ ಬಳಸಿದ ಮಹಿಳೆ!

Published : Jul 19, 2023, 09:43 AM ISTUpdated : Jul 19, 2023, 10:01 AM IST
 ಉದ್ಯಮಿ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಸುಳ್ಳು ಆರೋಪ; ಪ್ರೂವ್‌ ಮಾಡಲು ಕೋಳಿ ರಕ್ತ ಬಳಸಿದ ಮಹಿಳೆ!

ಸಾರಾಂಶ

ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಜೊತೆಗೆ ದೌರ್ಜನ್ಯದ ಸುಳ್ಳು ಆರೋಪವನ್ನೊಡ್ಡಿ ಪರಿಹಾರ ಕೇಳ್ತಿರೋರ ಸಂಖ್ಯೆಯೂ ಅಧಿಕವಾಗಿದೆ. ಹಾಗೆಯೇ ಉದ್ಯಮಿ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಸಾಬೀತುಪಡಿಸಲು ಮಹಿಳೆಯರು ಕೋಳಿ ರಕ್ತವನ್ನು ಬಳಸಿರೋ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ತಿದೆ. ಮಹಿಳೆಯರಿಗೆ ನ್ಯಾಯ ಕೊಡಿಸಲೆಂದೇ ಹಲವು ಸಂಘಟನೆಗಳು ತಲೆಯೆತ್ತಿವೆ. ಮಹಿಳೆಯರಿಗಾಗುತ್ತಿರುವ ಅನ್ಯಾಯವನ್ನು ದಾಳವಾಗಿ ಬಳಸಿಕೊಂಡು ಕೆಲ ಮಹಿಳೆಯರು ಇದರಲ್ಲೂ ವಂಚನೆಯನ್ನು ಮಾಡ್ತಿದ್ದಾರೆ. ಸುಳ್ಳು ಸಾಕ್ಷಿಗಳನ್ನು ಸಿದ್ಧಪಡಿಸುತ್ತಾರೆ. ಹೀಗಾಗಿಯೇ ಹನಿಟ್ರ್ಯಾಪ್ ಅನ್ನೋದು ಇತ್ತೀಚಿಗೆ ತುಂಬಾ ಸಾಮಾನ್ಯವಾಗುತ್ತಿದೆ. ಹಾಗೆಯೇ ಉದ್ಯಮಿ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಸಾಬೀತುಪಡಿಸಲು ಮಹಿಳೆಯರು ಕೋಳಿ ರಕ್ತವನ್ನು ಬಳಸಿರೋ ಘಟನೆ ಮುಂಬೈನಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಮಹಿಳೆ ಮೋನಿಕಾ ಭಗವಾನ್ ಅಲಿಯಾಸ್ ದೇವ್ ಚೌಧರಿ ಎಂದು ಗುರುತಿಸಲಾಗಿದ್ದು, ಉದ್ಯಮಿಯನ್ನು (Businessman) ಬಂಧಿಸಲು ಹನಿ ಟ್ರ್ಯಾಪ್ ರೂಪಿಸಿದ್ದಳು. ನಂತರ ಮೂವರು ಸಹಚರರ ಸಹಾಯದಿಂದ ಆತನಿಂದ 3 ಕೋಟಿ ರೂ. ಪೀಕಿಸಲು ಯತ್ನಿಸಿದ್ದಳು. 64 ವರ್ಷದ ಉದ್ಯಮಿಯೊಬ್ಬರು ನಗರದ ಹೋಟೆಲ್‌ವೊಂದರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ (Sexual assalut) ಯತ್ನಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಮಹಿಳೆಯೊಬ್ಬರು ಗಾಯಗಳಿಗೆ ಕೋಳಿ ರಕ್ತವನ್ನು ಬಳಸಿದ್ದಾರೆ. ಆರೋಪಿ ಆಕೆಯ ಕೈಗಳಿಗೆ ಕೋಳಿಯ ರಕ್ತವನ್ನು ಹಚ್ಚಿಕೊಂಡಿದ್ದಾಳೆ ಮತ್ತು ವ್ಯಕ್ತಿ ತನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಈ ಗಾಯ (Injury)ವಾಗಿದ್ದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

ಗಂಡನ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಫೇಸ್‌ಬುಕ್‌ ಲೈವ್‌ ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ!

ಕಳೆದ ವಾರ ಕ್ರೈಂ ಬ್ರಾಂಚ್ ಸಿಟಿ ಪೊಲೀಸರ ಘಟಕ 10, ಮೋನಿಕಾ ಚೌಧರಿ ವಿರುದ್ಧದ ಆರೋಪಪಟ್ಟಿಯಲ್ಲಿ ಮೋನಿಕಾ ಅವರ ಮೂವರು ಸಹಚರರನ್ನು ಅನಿಲ್ ಚೌಧರಿ ಅಲಿಯಾಸ್ ಆಕಾಶ್, ಲುಬ್ನಾ ವಜೀರ್ ಅಲಿಯಾಸ್ ಸಪ್ನಾ ಫ್ಯಾಶನ್ ಡಿಸೈನರ್ ಮತ್ತು ಆಭರಣ ವ್ಯಾಪಾರಿ ಮನೀಶ್ ಸೋಡಿ ಎಂದು ಗುರುತಿಸಿದೆ.

ನವೆಂಬರ್ 2021ರಲ್ಲಿ, ಕೊಲ್ಲಾಪುರದ ಉದ್ಯಮಿಯೊಬ್ಬರು ನಗರದ ಹೋಟೆಲ್‌ನಲ್ಲಿ ಹನಿ ಟ್ರ್ಯಾಪ್ ಮಾಡುವ ಮೂಲಕ ನಾಲ್ಕು ಜನರ ತಂಡವು ತನ್ನಿಂದ 3.25 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು (Complaint) ನೀಡಿದ್ದರು. ಆರೋಪಿಗಳು ವಿಡಿಯೋ ಮೂಲಕ ಬೆದರಿಕೆ ಹಾಕಿ ಇನ್ನೂ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. 2017ರಲ್ಲಿಯೂ ಇಂಥಹದ್ದೇ ಒಂದು ಘಟನೆ ನಡೆದಿದ್ದು, ಅನಿಲ್ ಮತ್ತು ಸಪ್ನಾ ಉದ್ಯಮಿಯೊಂದಿಗೆ ಸ್ನೇಹ ಬೆಳೆಸಿ, ಅವನ ಆಸ್ತಿಯ ಬಗ್ಗೆ ತಿಳಿದುಕೊಂಡರು. ನಂತರ ಆತನನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುವ ಸಂಚು ರೂಪಿಸಿದರು.

15 ವರ್ಷದ ಪ್ರೀತಿ ಕ್ಷಣದಲ್ಲೇ ಸಮಾಧಿ; ಅತ್ತಿಗೆ ಜೊತೆ ಗಂಡನ ಚಕ್ಕಂದ, ಆತ್ಮಹತ್ಯೆ ಮಾಡಿಕೊಂಡ ಯುವತಿ!

2019ರಲ್ಲಿ, ಉದ್ಯಮಿ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದಾಗ, ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದರು ಎಂದು ಮೋನಿಕಾ ಆರೋಪಿಸಿದ್ದರು. ಆಕೆಯ ಸಹಚರರಾದ ಸಪ್ನಾ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಂದಿಗೆ ಜಗಳವಾಡಿದ ವಿಡಿಯೋವನ್ನು ಕೂಡ ಚಿತ್ರೀಕರಿಸಿದ್ದರು. ಈ ಪ್ರಕರಣದಲ್ಲಿ ಮೋನಿಕಾಳನ್ನು ಜೂನ್ 2022 ರಲ್ಲಿ ಬಂಧಿಸಲಾಯಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?