ಹುಡುಗಿಯರನ್ನು ಗುತ್ತಿಗೆಗೆ ನೀಡ್ತಾರೆ ಪಾಲಕರು, ದಿನದಲ್ಲಿ ನಡೆಯುತ್ತೆ ಹತ್ತಾರು ಬಾರಿ ಬಲಾತ್ಕಾರ

By Roopa Hegde  |  First Published Oct 28, 2024, 5:36 PM IST

ಮಕ್ಕಳಿಗೆ ಸಣ್ಣ ಗಾಯವಾದ್ರೂ ಸಹಿಸೋದು ಕಷ್ಟ. ಆದ್ರೆ ಈ ರಾಜ್ಯದಲ್ಲಿ ಪಾಲಕರೇ ತಮ್ಮ ಮಕ್ಕಳನ್ನು ಕಟುಕರ ಕೈಗೆ ನೀಡ್ತಿದ್ದಾರೆ. ಹಣದ ಆಸೆಗೆ ಅವರು ಮಾಡ್ತಿರುವ ಕೆಲಸ ಆಘಾತಕಾರಿಯಾಗಿದೆ. 
 


ಮಹಿಳಾ ಸುರಕ್ಷತೆಗೆ (women safety) ಸರ್ಕಾರ ಏನೆಲ್ಲ ಕ್ರಮಕೈಗೊಂಡರೂ ಮಹಿಳೆಯರ ಮೇಲೆ ನಡೆಯುತ್ತಿರುವ ಬಲಾತ್ಕಾರ, ದೌರ್ಜನ್ಯ ನಿಲ್ಲುತ್ತಿಲ್ಲ. ದೇಶದಲ್ಲಿ ಬಲಾತ್ಕಾರ ಪ್ರಕರಣಗಳು ದಿನ ದಿನಕ್ಕೂ ಹೆಚ್ಚಾಗುತ್ತಿವೆ. ಈ ಮಧ್ಯೆ ಇಡೀ ದೇಶವೇ ಬೆಚ್ಚಿ ಬೀಳುವಂತಹ ಸುದ್ದಿಯೊಂದು ಹೊರಬಿದ್ದಿದೆ. ತಂದೆ- ತಾಯಿಯೇ ತಮ್ಮ ಮಕ್ಕಳನ್ನು ಲೀಸ್ (Lease) ಗೆ ನೀಡ್ತಿದ್ದಾರೆ. ಹೆಣ್ಣು ಮಕ್ಕಳನ್ನು ವರ್ಷದ ಲೆಕ್ಕದಲ್ಲಿ ಲೀಸ್ ಗೆ ನೀಡಿ ಹಣಪಡೆಯುತ್ತಿದ್ದಾರೆ ಪಾಪಿ ಪಾಲಕರು. ಹೊತ್ತು ಹೆತ್ತವರೇ ರಾಕ್ಷಸರ ಕೈಗೆ ಮಕ್ಕಳನ್ನು ಕೊಡುವಾಗ, ಅದನ್ನು ಪಡೆದವರು ಬಿಡ್ತಾರಾ? ದಿನಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಬಲಾತ್ಕಾರವೆಸಗುತ್ತಿದ್ದಾರೆ. 

ಕರುಳು ಚುರಕ್ ಎನ್ನುವ ಘಟನೆ ನಡೆಯುತ್ತಿರೋದು ಬೇರೆ ಯಾವುದೋ ದೇಶದಲ್ಲಿ ಅಲ್ಲ. ನಮ್ಮ ದೇಶದ ರಾಜಸ್ಥಾನದಲ್ಲಿ. ಇಲ್ಲಿನ 10 ಜಿಲ್ಲೆಗಳಲ್ಲಿ ಇಂಥ ಅನೇಕ ಪ್ರಕರಣ ಬೆಳಕಿಗೆ ಬಂದಿದೆ. ಪಾಲಕರು ತಮ್ಮ ಮಕ್ಕಳನ್ನು ಐದು ವರ್ಷಗಳಿಗೆ ಗುತ್ತಿಗೆ ನೀಡ್ತಿದ್ದಾರೆ. ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ದಲ್ಲಾಳಿಗಳು ಹುಡುಗಿಯರ ಖರೀದಿ- ಮಾರಾಟದಲ್ಲಿ ನಿರತರಾಗಿದ್ದಾರೆ. 

Tap to resize

Latest Videos

undefined

20 ಮದುವೆಗೆ ಅವಕಾಶವಿದ್ರೂ ಮುಸ್ಲಿಂ ಹುಡುಗಿಯರಿಗೆ ನೋವು ತಪ್ಪಿಲ್ಲ! ಏನಿದು ಮುತಾಹ್

ಗಳಿಸಿದ ಹಣವನ್ನು ಮನೆಗೆ ಕಳಿಸ್ತಾರೆ ಹುಡುಗಿಯರು..! : ರಾಜಸ್ತಾನದ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಗುತ್ತಿಗೆಗೆ ನೀಡುವ ಪ್ರಕರಣ ಹೆಚ್ಚಾಗಿದೆ. ಜಲವಾಡಾದಲ್ಲಿ ತನ್ನ ಮಗಳನ್ನು ಪಾಲಕರು ಕೇವಲ 3 ಲಕ್ಷಕ್ಕೆ ಲೀಸ್ ಗೆ ನೀಡಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಹುಡುಗಿಯನ್ನು ಪಡೆದಿದ್ದ ವ್ಯಕ್ತಿ, ಹುಡುಗಿಗೆ ಡ್ರಗ್ಸ್ ನೀಡ್ತಿದ್ದ. ನಂತ್ರ ಬಲಾತ್ಕಾರವೆಸಗುತ್ತಿದ್ದ. ಸಾಲ ತೀರಿಸಲು ತನ್ನ 15 ವರ್ಷದ ಮಗಳನ್ನು 18 ಲಕ್ಷಕ್ಕೆ ಮಾರಾಟ ಮಾಡಿದ ಪ್ರಕರಣವೂ ಬೆಳಕಿಗೆ ಬಂದಿದೆ. ದಲ್ಲಾಳಿ ಆಕೆ ಜೊತೆ ಒಪ್ಪಂದವನ್ನು ಮಾಡ್ಕೊಂಡಿದ್ದ. ಪ್ರತಿ ದಿನ ಆಕೆ ಮೇಲೆ ಬಲಾತ್ಕಾರ ನಡೆಯುತ್ತಿತ್ತು. ಅದ್ರಿಂದ ಬಂದ ಹಣದಲ್ಲಿ ಅರ್ಧವನ್ನು ಹುಡುಗಿ ದಲ್ಲಾಳಿಗೆ ನೀಡಿದ್ರೆ ಉಳಿದ ಅರ್ಧವನ್ನು ತನ್ನ ಮನೆಗೆ ಕಳುಹಿಸುತ್ತಿದ್ದಳು. 

ಪ್ರತಿ ದಿನ 5 -10 ಬಾರಿ ಬಲಾತ್ಕಾರ : ಲೀಸ್ ಮೇಲೆ ಹೋದ ಹುಡುಗಿಯರ ಗೋಳನ್ನು ಕೇಳುವವರಿಲ್ಲ. ದಿನವೊಂದಕ್ಕೆ ಐದರಿಂದ 10 ಬಾರಿ ಬಲಾತ್ಕಾರವೆಸಗಲಾಗುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳಲಾಗದೆ, ಇರಲೂ ಆಗದೆ ಹುಡುಗಿಯರು ನರಕ ಅನುಭವಿಸುತ್ತಿದ್ದಾರೆ. ಪಾಲಕರು ಮಾತ್ರ ಹಣಪಡೆದು ತಮ್ಮ ಜೀವನ ನೋಡಿಕೊಳ್ತಿದ್ದಾರೆ. ಬಡ ಕುಟುಂಬವನ್ನೇ ದಲ್ಲಾಳಿಗಳು ಗುರಿಯಾಗಿಸಿಕೊಂಡಿದ್ದಾರೆ. 

ಹಣಕ್ಕಾಗಿ ಪಾಲಕರು ಅತ್ಯಂತ ಕ್ರೂರ ಕೆಲಸ ಮಾಡ್ತಿದ್ದಾರೆ. 8 ವರ್ಷದ ಬಾಲಕಿಯನ್ನು ಪಾಲಕರು ಮಾರಾಟ ಮಾಡಿದ್ದರು. ಆಕೆ ಮೇಲೆ ನಿರಂತರ ಬಲಾತ್ಕಾರ ನಡೆದಿತ್ತು. ಘಟನೆ ನಂತ್ರ ಬಾಲಕಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಳು. ಎಂಟು ವರ್ಷದ ಬಾಲಕಿಯನ್ನು ಪಾಲಕರು ಮೂರು ವರ್ಷದ ಗುತ್ತಿಗೆಗೆ ನೀಡಿದ್ದರು. ಈ ಪ್ರಕರಣ ಹೊರಗೆ ಬರ್ತಿದ್ದಂತೆ ಜನರು ಬೆಚ್ಚಿಬಿದ್ದಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಆದ್ರೆ ದಂದೆಯ ಬಗ್ಗೆ ಸರಿಯಾದ ಸುಳಿವು ಸಿಗ್ತಿಲ್ಲ. ಅಲ್ಲಿ ಇಲ್ಲಿ ಒಂದೆರಡು ಪ್ರಕರಣ ಬಯಲಿಗೆ ಬರ್ತಿದೆಯೇ ವಿನಃ ಉಳಿದೆಲ್ಲವೂ ಅತ್ಯಂತ ಗೌಪ್ಯವಾಗಿ ನಡೆಯುತ್ತಿದೆ.

ಪ್ರೀತಿಸಿ ಅನ್ಯಧರ್ಮೀಯ ಮದುವೆ: ಹುಡುಗಿಯರು ತಿಳಿದುಕೊಳ್ಳಲೇಬೇಕಾದ 9 ವಿಷಯಗಳು

ಭಾರತದ ಇನ್ನೂ ಅನೇಕ ರಾಜ್ಯಗಳ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಪ್ರತಿ ಒಂದು ಗಂಟೆಗೆ ಭಾರತದಲ್ಲಿ ಮೂರು ಮಹಿಳೆಯರ ಮೇಲೆ ಬಲಾತ್ಕಾರ ನಡೆಯುತ್ತಿದೆ. ಅಂದ್ರೆ ಪ್ರತಿ 20 ನಿಮಿಷಕ್ಕೆ ಒಬ್ಬರಂತೆ ಬಲಾತ್ಕಾರಕ್ಕೆ ಒಳಗಾಗ್ತಿದ್ದಾರೆ. ಶೇಕಡಾ 98 ಪ್ರಕರಣಗಳಲ್ಲಿ ಮಹಿಳೆ ಮೇಲೆ ಬಲಾತ್ಕಾರ ನಡೆಸುವವರು ಮಹಿಳೆ ಪರಿಚಯಸ್ತರು. ಅನೇಕ ಮಹಿಳೆಯರು ಮಾನ- ಮರ್ಯಾದೆ ಹೆಸರಿನಲ್ಲಿ ಪೊಲೀಸ್ ಮುಂದೆ ಬರೋದಿಲ್ಲ. ಕೋರ್ಟ್ ಮೆಟ್ಟಿಲೇರಿದ ಶೇಕಡಾ 100 ಪ್ರಕರಣದಲ್ಲಿ ಶೇಕಡಾ 27 ಪ್ರಕರಣದಲ್ಲಿ ಮಾತ್ರ ಆರೋಪಿಗೆ ಶಿಕ್ಷೆಯಾಗುತ್ತಿರೋದು ವಿಪರ್ಯಾಸ.  

click me!