20 ಮದುವೆಗೆ ಅವಕಾಶವಿದ್ರೂ ಮುಸ್ಲಿಂ ಹುಡುಗಿಯರಿಗೆ ನೋವು ತಪ್ಪಿಲ್ಲ! ಏನಿದು ಮುತಾಹ್

By Roopa Hegde  |  First Published Oct 28, 2024, 4:13 PM IST

ಇಸ್ಲಾಂ ಧರ್ಮದಲ್ಲಿ ಮದುವೆ ವಿಧಾನಗಳಲ್ಲಿ ಭಿನ್ನತೆ ಇದೆ. ಅದ್ರಲ್ಲಿ ಮುಹಾತ್ ಕೂಡ ಒಂದು. ಈ ಮ್ಯಾರೇಜ್ ನಲ್ಲಿ ಹುಡುಗಿಯರಿಗೆ ಎಷ್ಟು ಸ್ವಾತಂತ್ರ್ಯವಿದ್ಯೋ ಅಷ್ಟೇ ಕಠಿಣ ನಿಯಮಗಳಿವೆ.
 


ಪ್ರಪಂಚದಲ್ಲಿ ವಿವಿಧ ಧರ್ಮ (religion)ಗಳಲ್ಲಿ ಮದುವೆಗೆ ವಿವಿಧ ರೀತಿಯ ನಿಯಮ, ನಿಬಂಧನೆಗಳಿವೆ. ಪ್ರತಿಯೊಂದು ಧರ್ಮವು ತಮ್ಮದೇ ಆದ ಪದ್ಧತಿಯನ್ನು ಅನುಸರಿಸುತ್ತದೆ. ಅದ್ರಲ್ಲಿ ಮುಸ್ಲಿಂ (Muslim) ಧರ್ಮ ಕೂಡ ಸೇರಿದೆ. ಇಸ್ಲಾಂ ಧರ್ಮದಲ್ಲಿ ಮುತಾಹ್   ಮದುವೆ (Mutah Marriage) ಆಚರಣೆಯೊಂದಿದೆ. ಅದನ್ನು ಆನಂದದ ಮದುವೆ ಎಂದೂ ಕರೆಯಲಾಗುತ್ತದೆ. ಇದೊಂದು ತಾತ್ಕಾಲಿಕ ಮದುವೆ. ಹುಡುಗ- ಹುಡುಗಿ ಒಪ್ಪಿದ ಮೇಲೆ ಮದುವೆ ನಡೆಯುತ್ತದೆ. ಆದ್ರೆ ಮದುವೆ ಸಮಯದಲ್ಲಿಯೇ ಬೇರ್ಪಡುವ ಸಮಯ ನಿಗದಿಯಾಗಿರುತ್ತದೆ. ಸಮಯ ಮುಗಿದ ಮೇಲೆ ಪತಿ – ಪತ್ನಿ ದೂರವಾಗ್ತಾರೆ. ಆ ಸಮಯದಲ್ಲಿ ಮಹಿಳೆಗೆ, ಪತಿಯಾದವನು ಸ್ವಲ್ಪ ಮಟ್ಟಿನ ಹಣವನ್ನು ನೀಡ್ತಾನೆ.  

ಈ ಪದ್ಧತಿ ಇಸ್ಲಾಂನ ಎರಡೂ ಪಂಗಡದಲ್ಲಿ ಜಾರಿಯಲ್ಲಿ ಇಲ್ಲ. ನಿಮಗೆ ತಿಳಿದಿರುವಂತೆ ಶಿಯಾ ಮತ್ತು ಸುನ್ನಿ ಇಸ್ಲಾಂನಲ್ಲಿ ಎರಡು ಪ್ರಮುಖ ಪಂಗಡಗಳಾಗಿವೆ. ಅವುಗಳು ವಿಭಿನ್ನ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಹೊಂದಿವೆ. ಇವುಗಳಲ್ಲಿ ವಿವಾಹ ಸಂಪ್ರದಾಯಗಳೂ ಸೇರಿವೆ. ಮುತಾಹ್ ಮದುವೆ ಸಂಪ್ರದಾಯವನ್ನು ಶಿಯಾ ಮುಸ್ಲಿಂಮರು ಮಾತ್ರ ಆಚರಣೆ ಮಾಡ್ತಾರೆ. ಇದರಲ್ಲಿ ಹುಡುಗಿಯರು ಎಷ್ಟು ಮದುವೆ ಬೇಕಾದರೂ ಮಾಡಿಕೊಳ್ಳಬಹುದು.   

Tap to resize

Latest Videos

undefined

ಅಂಬಾನಿ ಕುಟುಂಬದ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ಅಸಲಿ ಮುಖ ಇದೇ ನೋಡಿ; ವೈರಲ್

ಮೊದಲೇ ಹೇಳಿದಂತೆ ಮುತಾಹ್ ಮದುವೆ ಮುಸ್ಲಿಮರ ನಡುವಿನ ತಾತ್ಕಾಲಿಕ ವಿವಾಹವಾಗಿದೆ. ಮುತಾಹ್ ಎಂಬ ಅರೇಬಿಕ್ ಪದವಾಗಿದೆ. ಇದರರ್ಥ ಸಂತೋಷ ಅಥವಾ ವಿನೋದ.  ದೀರ್ಘಕಾಲ ಒಟ್ಟಿಗೆ ಬದುಕಲು ಇಷ್ಟಪಡದ ಇಬ್ಬರು ಮುತಾಹ್ ಮದುವೆಯಾಗ್ತಾರೆ. ದುಬೈ, ಅಬುಧಾಬಿ ಮುಂತಾದ ಸ್ಥಳಗಳಲ್ಲಿ ಶಿಯಾ ಪಂಗಡದ ಅನೇಕ ಮುಸ್ಲಿಮರು ವಾಸಿಸುತ್ತಿದ್ದಾರೆ. ವ್ಯಾಪಾರದ ಕಾರಣದಿಂದ ಅವರು ದೂರದ ಊರಿಗೆ ಹೋಗ್ಬೇಕಾಗುತ್ತದೆ. ಆದ್ರೆ ಅಲ್ಲಿ ಹೆಚ್ಚು ಕಾಲ ಉಳಿಯೋದಿಲ್ಲ. ಅಲ್ಲಿ ಉಳಿದಷ್ಟು ದಿನ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವರು ಮದುವೆ ಆಗ್ತಾರೆ. 

ಮುತಾಹ್ ಮದುವೆ ಸಮಯದ ಮಿತಿ ಹೊಂದಿದೆ. ಒಂದು ಅವಧಿ ನಂತ್ರ ಇಬ್ಬರೂ ವಿಚ್ಛೇದನ ಪಡೆಯುತ್ತಾರೆ. ಪತಿ ಪತ್ನಿಗೆ ವರದಕ್ಷಿಣೆ ನೀಡಬೇಕಾಗುತ್ತದೆ. ಇದನ್ನು ಶಿಯಾ ಪಂಗಡದ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಹೇಳಲಾಗಿದೆ. ಆದ್ರೆ ವಿಚ್ಛೇದನ ನಂತ್ರ ಪತಿಯಾದವನು ಜೀವನಾಂಶ ನೀಡಬೇಕಾಗಿಲ್ಲ. 
 
20-25 ಬಾರಿ ಹುಡುಗಿಯರಿಗೆ ಮದುವೆ : ಮುತಾಹ್ ಮದುವೆಯಲ್ಲಿ ಯಾವುದೇ ರೀತಿಯ ನಿರ್ಬಂಧವಿಲ್ಲ. ಹುಡುಗಿಯರು ಎಷ್ಟು ಬಾರಿ ಬೇಕಾದರೂ ಮದುವೆಯಾಗಬಹುದು. ಇದು ಒಂದು ತಿಂಗಳಿಗಿರಬಹುದು ಅಥವಾ ಒಂದು ವರ್ಷಕ್ಕಿರಬಹುದು. ಇಬ್ಬರ ನಡುವೆ ಒಪ್ಪಿಗೆ ಒಪ್ಪಂದ ಮುಖ್ಯ. ಅವಧಿಯ ನಂತರ ಬ್ಬರು ಬೇರೆಯಾಗ್ತಾರೆ. ಈ ವಿಚ್ಛೇದನದ ನಂತ್ರ ಹುಡುಗ ಮತ್ತು ಹುಡುಗಿ ಇಬ್ಬರೂ ಬೇರೆ ಮದುವೆಯಾಗಬಹುದು. ಮದುವೆ ಸಮಯದಲ್ಲಿ ಅವಧಿಯನ್ನು ನಮೂದಿಸಬೇಕು. ಒಂದ್ವೇಳೆ ಅವಧಿ ನಿಗಧಿಯಾಗಿಲ್ಲವೆಂದ್ರೆ ಅದನ್ನು ಶಾಶ್ವತ ಮದುವೆ ಎಂದು ಪರಿಗಣಿಸಲಾಗುತ್ತದೆ. ಸುನ್ನಿ ಪಂಗಡದಲ್ಲಿ ಈ ಮದುವೆ ಕಾನೂನುಬಾಹಿರ.  

ವಿಶೇಷ ಕಾರಣಕ್ಕಾಗಿ ಕರ್ನಾಟಕದ ಕೆಂಪು ಮಣ್ಣಿನಿಂದ ಮೈ ಮುಚ್ಚಿ ಪೋಸ್ ಕೊಟ್ಟ ಬಾಲಿವುಡ್ ನಟಿ ಸೋನಂ ಕಪೂರ್…

ಈ ಎಲ್ಲ ಸಮಸ್ಯೆ ಎದುರಿಸಬೇಕು ಮಹಿಳೆಯರು : ಈ ಮುತಾಹ್ ಮದುವೆ ಕೆಲವೊಮ್ಮೆ ರದ್ದಾಗುತ್ತದೆ. ಅದಕ್ಕೆ ಅನೇಕ ಕಾರಣವಿದೆ. ಮದುವೆಯಾದ ನಂತ್ರ ಸಂಗಾತಿಯಲ್ಲಿ ಒಬ್ಬರು ಸಾವನ್ನಪ್ಪಿದ್ರೆ ಅದನ್ನು ರದ್ದು ಮಾಡಲಾಗುತ್ತದೆ. ಆದ್ರೆ ಆ ತಕ್ಷಣ ಮಹಿಳೆ ಬೇರೆ ಮದುವೆ ಆಗುವಂತಿಲ್ಲ. ಕೆಲವೊಂದು ನಿಯಮಗಳನ್ನು ಅವರು ಪಾಲನೆ ಮಾಡ್ಬೇಕು. ಮುತಾಹ್ ಮದುವೆಯಾದ ಪತಿ ಸಾವನ್ನಪ್ಪಿರಲಿ ಇಲ್ಲ ಬೇರೆಯಾಗಿರಲಿ ಈ ಅವಧಿ ಮುಗಿದ ನಂತ್ರ ಮಹಿಳೆ ಇದ್ದತ್ ಆಚರಣೆ ಮಾಡಬೇಕು. ಇದ್ದತ್ ಎಂಬ ಆಚರಣೆ ನಾಲ್ಕು ತಿಂಗಳು ಹತ್ತು ದಿನಗಳ ಕಾಲ ಇರುತ್ತದೆ. ಈ ಸಮಯದಲ್ಲಿ ಮಹಿಳೆ ಮದುವೆ ಆಗ್ಬಾರದು. ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಹೊರಗೆ ಹೋಗಬಾರದು. ಪುರುಷನ ನೆರಳಿನಿಂದ ದೂರವಾಗಿ ಏಕಾಂತದಲ್ಲಿ ಇರಬೇಕಾಗುತ್ತದೆ. ಈ ಅವಧಿಯನ್ನು ಆಕೆ ಪೂರೈಸಿದರೆ ಮಾತ್ರ ಇನ್ನೊಂದು ಮದುವೆಗೆ ಆಕೆ ಅರ್ಹಳು ಎಂದು ಪರಿಗಣಿಸಲಾಗುತ್ತದೆ.   
 

click me!