ಈ ಮುಸ್ಲಿಂ ಪರಮ ಸುಂದರಿ ರಾಜಕುಮಾರಿಗೆ ಹಿಂದೂ ಧರ್ಮವೆಂದ್ರೆ ಇಷ್ಟವಂತೆ!

By Suvarna News  |  First Published Mar 14, 2023, 2:50 PM IST

ನೀವು ಲಂಡನ್‌ ರಾಜಕುಮಾರಿ ಡಯಾನಾ ಬಗ್ಗೆ ಕೇಳಿರಬಹುದು. ಹೆಚ್ಚು ಕಮ್ಮಿ ಸ್ವತಂತ್ರ ಮನಸ್ಥಿತಿಯ ಮತ್ತೊಬ್ಬ ರಾಜಕುಮಾರಿ ಅರಬ್ ದೇಶದಲ್ಲಿದ್ದಾಳೆ. ಮಹಾನ್ ಚೆಲುವೆಯಾದ ಈಕೆಗೆ ಹಿಂದೂ ಧರ್ಮದ ಬಗ್ಗೆ ಅಗಾಧ ಪ್ರೀತಿ.


ನೋಡೋದಕ್ಕೆ ಎರಡು ಕಣ್ಣು ಸಾಲದು ಅನ್ನುವಷ್ಟು ಸುಂದರಿ. ಮಹಾನ್‌ ಬುದ್ಧಿವಂತೆ. ಅಷ್ಟೇ ಅಲ್ಲ, ಚಿನ್ನದ ಸ್ಪೂನನ್ನು ಬಾಯಲಿಟ್ಟುಕೊಂಡೇ ಹುಟ್ಟಿದವಳು. ಈ ಸುಂದರಿ ಹೆಸರು ಅಮೀರಾ ಅಲ್ ತವೀಲ್‌ ಅಂತ. ಈಕೆ ಈಗ ಸುದ್ದಿಯಲ್ಲಿರೋದಕ್ಕೆ ಅನೇಕ ಕಾರಣ ಇದೆ. ಮುಖ್ಯವಾಗಿ ಮುಸ್ಲಿಂ ರಾಷ್ಟ್ರದಲ್ಲಿದ್ದೂ ಹಿಂದೂ ಧರ್ಮದ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾಳೆ. ಜೊತೆಗೆ ಈಕೆ ಜಗತ್ತಿನ ಸಲವು ಧರ್ಮಗಳ ಅಧ್ಯಯನವನ್ನೂ ಮಾಡಿದ್ದಾಳೆ. ಅಮೀರ ಯುನಿವರ್ಸಿಟಿ ಆಫ್ ಹೆವನ್ ಮತ್ತು ಕಿಂಗ್ಸ್ ಕಾಲೇಜ್ ಲಂಡನ್, ಯುಕೆ ನಲ್ಲಿ ತುಲನಾತ್ಮಕ ಧರ್ಮವನ್ನು ಅಧ್ಯಯನ ಮಾಡಿದಳು. ಅವರು ಕ್ರಿಶ್ಚಿಯನ್ ಧರ್ಮ, ಜುದಾಯಿಸಂ ಮತ್ತು ಹಿಂದೂ ಧರ್ಮವನ್ನು ಅಧ್ಯಯನ ಮಾಡಿದ್ದಾರೆ. ಹಿಂದೂ ಧರ್ಮದ ಅಧ್ಯಯನ ತನ್ನ ಕಣ್ಣುಗಳನ್ನು ತೆರೆಸಿತು ಎಂದು ಈಕೆ ಹೇಳಿಕೊಂಡಿದ್ದಾರೆ.

ಆ ಅಧ್ಯಯನವೇ ಇತರ ಧರ್ಮಗಳ ಬಗ್ಗೆ ಅವಳ ಗೌರವವನ್ನು ಹೆಚ್ಚಿಸಿತು ಎಂದು ಅವರು ಹೇಳುತ್ತಾಳೆ.

Tap to resize

Latest Videos

ಅಂದಹಾಗೆ ಈ ರಾಜಕುಮಾರಿ ಇಲ್ಲೀವರೆಗೆ ಎಲ್ಲಿದ್ದಳು, ಅವಳ ಹಿನ್ನೆಲೆ ಏನು ಅನ್ನೋ ಕುತೂಹಲ ಬರಬಹುದು. ಈಕೆಗೆ ಈಗ ಮೂವತ್ತೊಂಭತ್ತು ವರ್ಷ. ಹುಟ್ಟಿದ್ದು ರಾಜ ಮನೆತನದಲ್ಲಲ್ಲ. ಆದರೆ ಮದುವೆ ಆದದ್ದು ರಾಜಕುಮಾರನನ್ನು. ಈಗ ಆತನನ್ನು ಬಿಟ್ಟು ಶ್ರೀಮಂತ ಉದ್ಯಮಿಯೊಬ್ಬರ ಮಡದಿಯಾಗಿದ್ದಾಳೆ. ಪ್ರಪಂಚದಾದ್ಯಂತದ ರಾಯಧನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಕೆ ಸಖತ್ ಬುದ್ಧಿವಂತೆ ಅಂತಲೂ ಫೇಮಸ್. ಈ ಅಮೀರಾ ಮದುವೆ ಆದದ್ದು ತನ್ನ 18 ನೇ ವಯಸ್ಸಿನಲ್ಲಿ. ಆಗಲೇ ಅವಳು ಬಿಲಿಯನ್ ಡಾಲರ್‌ಗಳ ಒಡತಿಯಾದಳು. ಮುಂದೆ ಅವರು 2013 ರಲ್ಲಿ ವಿಚ್ಛೇದನ ಪಡೆದಳು. ಇದಾದ ನಂತರ ಯುಎಇ ಉದ್ಯಮಿ ಖಲೀಫಾ ಬಿನ್ ಬುಟ್ಟಿ ಅಲ್ ಮುಹೈರಿ ಅವರನ್ನು ವಿವಾಹವಾದಳು. ರಾಜಕುಮಾರಿ ಅಮೀರಾ ಅಲ್ ತವೀಲ್ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾಳೆ. ಇವುಗಳಲ್ಲಿ ಒಂದು ಅವಳ ಧರ್ಮದ ಅಧ್ಯಯನ.. ಮುಸ್ಲಿಂ ಕುಟುಂಬದವರಾಗಿದ್ದರೂ, ಅವರು ಹಿಂದೂ ಧರ್ಮ ಸೇರಿದಂತೆ ಇತರ ಧರ್ಮಗಳನ್ನು ಅಧ್ಯಯನ ಮಾಡಿದ್ದಾಳೆ. ಅದರಲ್ಲೂ ಹಿಂದೂ ಧರ್ಮದ ಬಗೆಗಿನ ಆಕೆಯ ಗೌರವದ ಮಾತುಗಳಿಂದ ನಮ್ಮ ದೇಶದಲ್ಲೂ ಈಕೆ ಸುದ್ದಿಯಾಗ್ತಿದ್ದಾಳೆ.

ಯಾರೀಕೆ ಮಾಯಾ ಟಾಟಾ? ರತನ್ ಟಾಟಾ ಉತ್ತರಾಧಿಕಾರಿ ಇವರೇನಾ?

ಈಕೆ ಮಹಿಳೆಯರ ಪರವಾಗಿ ನಿಂತವರೂ ಹೌದು. ಮಹಿಳಾ ಹಕ್ಕುಗಳ(Women rights) ಬಗ್ಗೆ ದನಿ ಎತ್ತಿದ್ದಾರೆ. 2016 ರಲ್ಲಿ, ಅವರು ಹಿಜಾಬ್ ಧರಿಸದೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದರು. ಇದಾದ ಬಳಿಕ ಪೊಲೀಸರು ಆಕೆಯನ್ನು ಕೂಡ ಬಂಧಿಸಿದ್ದಾರೆ.

ಆ ಬಳಿಕ ಅಮೀರಾ ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ಡ್ರೆಸ್ ಮತ್ತು ಗೌನ್‌ಗಳಲ್ಲಿ ಮಿಂಚತೊಡಗಿದರು. ಆಗ ಹೊರಜಗತ್ತು ಆಕೆಯ ಫ್ಯಾಶನ್ ಸೆನ್ಸ್(Fashion sense) ಕೂಡ ಅದ್ಭುತವಾಗಿದೆ ಎಂದು ಕೊಂಡಾಡಿತು.

ಹಾಗೆ ನೋಡಿದರೆ ಅಮೀರಾ ಹೊರಜಗತ್ತಿನ ಗಮನ ಸೆಳೆದದ್ದು ತನ್ನ ಎರಡನೇ ಪತಿ ಖಲೀಫಾ ಬಿನ್ ಬುಟ್ಟಿ ಅಲ್ ಮುಹೈರಿ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಾಗ. ಆಗ ಈಕೆಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತು. ಆಗ ಈಕೆ ತೊಟ್ಟ ಅವಳು ಕಪ್ಪು ಬಣ್ಣದ ಉಡುಗೆ, ಆಕರ್ಷಕ ನೋಟಗಳಿಂದ ಜನ ಅವಳಿಂದ ತಮ್ಮ ಕಣ್ಣುಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ ಎಂದು ಆಪ್ತರೊಬ್ಬರು ಹೇಳಿದ್ದರು. ಈಕೆ ತನ್ನ ಸೌಂದರ್ಯಕ್ಕೆ(Beauty) ಮಾತ್ರವಲ್ಲದೆ ಪ್ರೇಮ ಜೀವನಕ್ಕೂ ಪ್ರಸಿದ್ಧಳು. ಈಕೆ ತನ್ನ 18 ನೇ ವಯಸ್ಸಿನಲ್ಲಿ, ಸೌದಿ ರಾಜಕುಮಾರ ಅಲ್ ವಲೀದ್ ಬಿನ್ ತಲಾಲ್ ಅನ್ನು ಪ್ರೀತಿಸುತ್ತಿದ್ದಳು. ಆತ ಈಕೆಗಿಂತ 28 ವರ್ಷ ಹಿರಿಯ. ಆದರೂ ಮದುವೆ ನಡೆಯಿತು. ಅಲ್ ವಲೀದ್ ಅವರನ್ನು ಮದುವೆಯಾದ ನಂತರ, ಈಕೆ ಸೌದಿ ರಾಜಮನೆತನದ ರಾಜಕುಮಾರಿಯಾದಳು. ಆದರೆ 2013 ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ(Divorce) ಪಡೆದರು.

ಸದ್ಯಕ್ಕೀಗ ಈಕೆ ತನ್ನ ಮಹಿಳಾ ಪರ ಹೋರಾಟ, ಮಾನವೀಯ ನಿಲುವುಗಳಿಂದ ಸುದ್ದಿಯಲ್ಲಿದ್ದಾರೆ. ವಯಸ್ಸು ನಲವತ್ತು ಸಮೀಪಿಸುತ್ತಿದ್ದರೂ ಆಕೆಯ ಸೌಂದರ್ಯ ಕೊಂಚವೂ ಕಡಿಮೆ ಆಗಿಲ್ಲ. ಅಪ್ರತಿಮ ಸುಂದರಿ, ಬುದ್ಧಿವಂತೆ, ಮಾನವೀಯತೆಯ ಈ ಹೆಣ್ಣುಮಗಳ ಬಗ್ಗೆ ಜಗತ್ತು ಗೌರವದಿಂದ ನೋಡುತ್ತಿದೆ.

Beauty Tips : ಶಾಹೀದ್ ಪತ್ನಿ ಮೀರಾ ರಜಪೂತ್ ಇಷ್ಟು ಚೆಂದ ಕಾಣೋಕೆ ಕಾರಣ ಏನು ಗೊತ್ತಾ?

click me!