
ಮೈಸೂರು: ಭಾರತದಲ್ಲಿ ಪ್ರತಿ ವರ್ಷ 1.32 ಲಕ್ಷ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ಇವರಲ್ಲಿ 74 ಸಾವಿರಕ್ಕೂ ಹೆಚ್ಚು ಮಂದಿ ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಹಿರಿಯ ವಿಕಿರಣ ಆಂಕೊಲಾಜಿಸ್ವ್ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್.ಮಾಧವಿ ಹೇಳಿದರು.
ವಿಶ್ವ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ತಿಂಗಳ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಅತ್ಯಂತ ಆಕ್ರಮಣಕಾರಿ ರೂಪಗಳಲ್ಲಿ ಗರ್ಭಕಂಠದ ಕ್ಯಾನ್ಸರ್ (Cervical cancer) ಕಂಡುಬರುತ್ತಿದೆ. ಈ ಕಾಯಿಲೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳ (Symptoms) ಬಗ್ಗೆ ಹಾಗೂ ಇದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ (Awareness) ಮೂಡಿಸುವ ಅಗತ್ಯವಿದೆ ಎಂದರು.
ಗರ್ಭಕಂಠದ ಕ್ಯಾನ್ಸರ್: ಗಂಭೀರ ಅನಾರೋಗ್ಯವನ್ನು ತಡೆಗಟ್ಟುವುದು ಹೇಗೆ?
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಪ್ರಸ್ತುತ ಎರಡು ಲಸಿಕೆಗಳು ಲಭ್ಯ
ಗರ್ಭಕಂಠದ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಹಚ್ಚಲು ಎರಡು ಸ್ಕ್ರೀನಿಂಗ್ ಪರೀಕ್ಷೆಗಳು ಪರಿಣಾಮಕಾರಿಯಾಗಿದೆ. ಈ ಕಾಯಿಲೆ (Disease)ಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಮಾಡಲು ಪ್ಯಾಪ್ ಮತ್ತು ವಿಪಿಎಚ್ ಪರೀಕ್ಷೆ ನಡೆಸಬೇಕಾಗಿದೆ. ಕೆಲವು ಬಗೆಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಪ್ರಸ್ತುತ ಎರಡು ಲಸಿಕೆಗಳು (Vaccine) ಲಭ್ಯವಿವೆ. ಗಾರ್ಡಸಿಲ್ ಮತ್ತು ಸೆರ್ವಾರಿಕ್ಸ್. ಮಾನವ ಪ್ಯಾಪಿಲೋಮವೈರಸ್ ಅಥವಾ ವಿಪಿಎಚ್ ಸೋಂಕುಗಳಿಗೆ ಲಸಿಕೆಗಳ ಪ್ರಾಮುಖ್ಯತೆ ಬಗ್ಗೆ ಅವರು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದು ಹಂತದಲ್ಲಿ ವಿಪಿಎಚ್ ಸೋಂಕಿಗೆ ಒಳಗಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 2050ರ ವೇಳೆಗೆ ಭಾರತದಲ್ಲಿ 50 ಸಾವಿರ ಗರ್ಭಕಂಠದ ಕ್ಯಾನ್ಸರ್ ಪ್ರಕರಣ ತಡೆಗಟ್ಟುವ ಗುರಿ ಹೊಂದಿದೆ. ಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗುವ ನೇರ ಅಂಶಗಳು ಹಾರ್ಮೋನ್, ಗರ್ಭನಿರೋಧಕಗಳ ದೀರ್ಘಾವಧಿಯ ಬಳಕೆ, ಹೆಚ್ಚಿನ ಸಮಾನತೆ, ತಂಬಾಕು ಮತ್ತು ವಿಪಿಎಚ್ ಬರುವ ಸೋಂಕುಗಳು ಕಾರಣವಾಗಿದೆ. ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವ ಮತ್ತು ಚಿಕಿತ್ಸೆಗಾಗಿ (Treatment) ಆರಂಭದಲ್ಲೇ ಪತ್ತೆ ಮಾಡುವುದು ಅತಿ ಮುಖ್ಯ. ನಿಯಮಿತ ಸ್ಕ್ರೀನಿಂಗ್ ಪರೀಕ್ಷೆಗಳೊಂದಿಗೆ ತಡೆಗಟ್ಟಲು ಗರ್ಭಕಂಠದ ಕ್ಯಾನ್ಸರ್ ಸುಲಭವಾದ ಸ್ತ್ರೀರೋಗ ಕ್ಯಾನ್ಸರ್ ಆಗಿದೆ ಎಂದು ಡಾ.ಮಾಧವಿ ತಿಳಿಸಿದರು.
ಗರ್ಭಕಂಠ ಕ್ಯಾನ್ಸರ್‌ಗೆ ಸಿದ್ಧವಾಗಿದೆ ಮೊದಲ ದೇಸೀ ಲಸಿಕೆ
ಆಂಕೊಲಾಜಿಸ್ವ್ ಸಲಹೆಗಾರ ಡಾ. ವಿನಯ್ ಮುತ್ತಗಿ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ಸಮಸ್ಯೆಯಿಂದ ಪಾರಾಗಲು 9-12 ವರ್ಷ ವಯಸ್ಸಿನ ಹುಡುಗಿಯರಿಗೆ ವಿಪಿಎಚ್ ಲಸಿಕೆ ನೀಡಬೇಕು. ಅಲ್ಲದೆ ಗರ್ಭಕಂಠದ ಕ್ಯಾನ್ಸರ್ ಅನ್ನು ಪಿಎಪಿ ಸ್ಮೀಯರ್ ಬಳಕೆಯಿಂದ ಆರಂಭಿಕ ಹಂತಗಳಲ್ಲಿ ಪತ್ತೆ ಮಾಡಬಹುದು. ವಿಪಿಎಚ್ ಸೋಂಕು 10 ವರ್ಷಗಳ ಅವಧಿಯಲ್ಲಿ ಇಂಟ್ರಾ ಎಪಿತೀಲಿಯಲ್ ನಿಯೋಪ್ಲಾಸಿಯಾದಿಂದ ಪೂರ್ಣ ಪ್ರಮಾಣದ ಕ್ಯಾನ್ಸರ್‌ಗೆ ವಿಕಸನಗೊಳ್ಳುತ್ತದೆ. ಹೀಗಾಗಿ ಇದನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಇದಕ್ಕೆ ಚಿಕಿತ್ಸೆ ನೀಡಲು ನಮಗೆ ಉತ್ತಮ ಸಮಯ ದೊರೆಯಲಿದೆ ಎಂದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.